ನೀನೇ ವಿನ್ನರು, ಸಂಗೀತಾನೇ ರನ್ನರು ಕಣ್ಲಾ... ಹೋಮ್​ ಟೂರ್​ ಮಾಡಿಸಿದ ಡ್ರೋನ್​ ಪ್ರತಾಪ್​! ಹಬ್ಬ ಬಲು ಜೋರು

By Suchethana D  |  First Published Nov 18, 2024, 6:23 PM IST

ಬಿಗ್​ಬಾಸ್​ ಖ್ಯಾತಿಯ ಡ್ರೋನ್​ ಪ್ರತಾಪ್​ ಊರ ಮನೆಯಲ್ಲಿ ಹಬ್ಬದ ಸಡಗರ. ಬಗೆ ಬಗೆ ಖಾದ್ಯದ ವಿಡಿಯೋ ಜೊತೆ ಕೂಡು ಕುಟುಂಬವನ್ನು ಪರಿಚಯಿಸಿದ ಡ್ರೋನ್​.
 


ವಿವಿಧ ಕ್ಷೇತ್ರಗಳ ಗಣ್ಯಾತಿಗಣ್ಯರನ್ನು ಮಾತಿನ ಮೋಡಿಯಲ್ಲಿ ಸಿಲುಕಿಸಿ ಮೋಸ, ವಂಚನೆ ಮಾಡಿರುವ ಗಂಭೀರ ಆರೋಪ ಎದುರಿಸುತ್ತಿದ್ದ ಡ್ರೋನ್​ ಪ್ರತಾಪ್ ಬಿಗ್​ಬಾಸ್​ನಲ್ಲಿ ರನ್ನರ್​ ಅಪ್​ ಆಗುವ ಮೂಲಕ ಅಸಂಖ್ಯೆ ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ. ಇವರ ಫ್ಯಾನ್ಸ್​ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಬಿಗ್​ಬಾಸ್​ನಲ್ಲಿ ರನ್ನರ್​ ಅಪ್​ ಆದ ಬಳಿಕ ಡ್ರೋನ್​ ಹೀರೋ ಆಗಿಬಿಟ್ಟಿದ್ದಾರೆ. ಯಾವುದೇ ಸ್ಟಾರ್​ ನಟರಿಗೂ ಕಡಿಮೆ ಇಲ್ಲದಂತೆ ಅದ್ಧೂರಿ ಸ್ವಾಗತ ಇವರಿಗೆ ಸಿಗುತ್ತಿದೆ. ಕೊನೆಯವರೆಗೂ ಬಿಗ್​ಬಾಸ್​ನಲ್ಲಿ ಇರುತ್ತೇನೆ. ಫಿನಾಲೆಯಲ್ಲಿ ಸುದೀಪ್​ ಅವರು ಎತ್ತಲು ಹಿಡಿಯುವ ಕೈಯಲ್ಲಿ ನನ್ನದೂ ಒಂದಾಗಿರುತ್ತದೆ ಎಂದು ಅಂದುಕೊಂಡಿರಲೇ ಇಲ್ಲ. ಮೊದಲ ವಾರದಲ್ಲಿಯೇ ಅಲ್ಲಿ ನಡೆದ ಕೆಲವು ಘಟನೆಗಳನ್ನು ನೋಡಿ ಶೀಘ್ರವೇ ಬಿಗ್​ಬಾಸ್​ನಿಂದ ಹೊರಕ್ಕೆ ಹೋಗುತ್ತೇನೆ ಅಂದುಕೊಂಡಿದ್ದೆ. ಆದರೆ ಎಲ್ಲರ ಆಶೀರ್ವಾದದಿಂದ ರನ್ನರ್​ ಅಪ್​ ಆದೆ ಎಂದು ಹೇಳಿಕೊಂಡಿರುವ ಡ್ರೋನ್​ ಪ್ರತಾಪ್​ ಅವರಿಗೆ ಬಿಗ್​ಬಾಸ್​ ಹೊಸದೊಂದೇ ಜೀವನ ಕೊಟ್ಟಿದೆ. 
 

ಇದೀಗ ತಮ್ಮದೇ ಆದ ಯೂಟ್ಯೂಬ್​ ಚಾನೆಲ್​ ಆರಂಭಿಸಿರುವ ಅವರು, ಅದರಲ್ಲಿ ಕೆಲವೊಂದು ವಿಷಯಗಳನ್ನು ಶೇರ್​ ಮಾಡಿಕೊಳ್ಳುತ್ತಾರೆ. ಬಿಗ್​ಬಾಸ್​ಗೂ ಹೋಗುವ ಮೊದಲು ಡ್ರೋನ್​ ಕುರಿತು ಕೆಲವೊಂದು ಮಾಹಿತಿ ನೀಡುತ್ತಿದ್ದರು. ಆದರೆ ಇದಕ್ಕಾಗಿ ಸಕತ್​ ಟ್ರೋಲ್​ ಆದ ಬಳಿಕ ಅದರ ಸಹವಾಸವನ್ನು ಸದ್ಯಕ್ಕೆ ಬಿಟ್ಟಿದ್ದಾರೆ. ಈಗ ಜನಸೇವೆಯಲ್ಲಿ ತೊಡಗಿಸಿಕೊಂಡಿರುವ ವಿಡಿಯೋಗಳನ್ನು ಶೇರ್​ ಮಾಡುತ್ತಿರುತ್ತಾರೆ. ತಮ್ಮ ಮಂಡ್ಯದಲ್ಲಿನ ಹಳ್ಳಿಗೆ ಹೋಗಿರುವ ಪ್ರತಾಪ್​, 12 ವರ್ಷಗಳ ಬಳಿಕ ಹಳ್ಳಿಯಲ್ಲಿ ನಡೆಯುತ್ತಿರುವ ಹಬ್ಬದ ಬಗ್ಗೆ ತಿಳಿಸಿಕೊಟ್ಟಿದ್ದಾರೆ. ಕೆಲವೊಂದು ಕಾರಣಗಳಿಂದ ಹಬ್ಬ ನಿಂತು ಹೋಗಿತ್ತು. ಈಗ ಮತ್ತೆ ಎಲ್ಲರೂ ಸೇರಿ ಹಬ್ಬ ಮಾಡುತ್ತಿರುವುದಾಗಿ ಹೇಳಿದ ಪ್ರತಾಪ್​ ತಮ್ಮ ಮನೆಯಲ್ಲಿ ಹಬ್ಬದ ಸಡಗರವನ್ನು ತೋರಿಸಿದ್ದಾರೆ.

Tap to resize

Latest Videos

undefined

ಬಿಗ್​ಬಾಸ್​ ಸಂಗೀತಾ ಶೃಂಗೇರಿ- ಡ್ರೋನ್​ ಮೂಗಿನ ಚರ್ಚೆ: ಆಂಟಿ ಮಾತಿಗೆ ಪ್ರತಾಪ್​ ಕೋಪ

ಇವರ ತುಂಬು ಕುಟುಂಬವನ್ನು ನೋಡುವುದೇ ಚೆಂದ. ಎಲ್ಲರನ್ನೂ ಪರಿಚಯ ಮಾಡಿರುವ ಡ್ರೋನ್​ ಪ್ರತಾಪ್​  ಮನೆಯಲ್ಲಿ ಭರ್ಜರಿ ಅಡುಗೆ ಸಿದ್ಧವಾಗಿರುವುದನ್ನು ನೋಡಬಹುದು. ವೈವಿಧ್ಯಮಯ ರಸಪಾಕಗಳನ್ನು ಮಾಡಲು ಮನೆಯ ಮಹಿಳೆಯರು ಸಿದ್ಧತೆ ಮಾಡಿಕೊಂಡಿದ್ದಾರೆ. ಡ್ರೋನ್​ ಪ್ರತಾಪ್​  ಕೂಡ ತಿನಿಸು ಮಾಡಲು ನೆರವಾಗುತ್ತಿದ್ದಾರೆ. ಇದೇ ವೇಳೆ ಅಲ್ಲಿಯ ಮಹಿಳೆಯರು ಬಿಗ್​ಬಾಸ್​ 10ನಲ್ಲಿ ನೀನೇ ಗೆಲ್ಲಬೇಕಿತ್ತು ಕಣ್ಲಾ. ಗೆಲ್ಲದಿದ್ರೂ ಪರವಾಗಿಲ್ಲ ವಿನ್ನರು ನೀನೇ, ಸಂಗೀತಾನೇ ನಮಗೆ ರನ್ನರು ಎಂದು ಹೇಳಿದ್ದಾರೆ. ಇದಕ್ಕೆ ಎಲ್ಲರೂ ಹೌದು ಹೌದು ಎಂದಿದ್ದರೆ, ಕಮೆಂಟ್​ ಸೆಕ್ಷನ್​ಗಳಲ್ಲಿ ಕೂಡ ಡ್ರೋನ್​ ಅಭಿಮಾನಿಗಳು ಇದು ಸರಿಯಾದ ಮಾತು ಎನ್ನುತ್ತಿದ್ದಾರೆ.

ಈ ಮುಂಚೆ, ಬಿಗ್​ಬಾಸ್​ನಿಂದ ಹೊರಬಂದ ಮೇಲೆ ಈ ದುಡ್ಡನ್ನು ಬಡವರಿಗೆ ಹಂಚುತ್ತೇನೆ ಎಂದು ಪ್ರತಾಪ್​ ಹೇಳಿದ್ರು. ಇದೇ ವೇಳೆ ನೂರಾರು ಮಂದಿಗೆ ಕಣ್ಣಿನ ಆಪರೇಷನ್​ ಮಾಡಿಸುವುದಾಗಿ ಹೇಳಿದ್ದ ಪ್ರತಾಪ್​, ಸೋಷಿಯಲ್​  ಮೀಡಿಯಾದಲ್ಲಿ ಕಣ್ಣಿನ ಆಪರೇಷನ್​ ಅಗತ್ಯ ಇರುವವರು ಮೆಸೇಜ್​ ಮಾಡಿ ಎಂದಿದ್ದರು. ಇದಕ್ಕೆ ನೂರಾರು ಮಂದಿ ಆಸೆಯಿಂದ ಮೆಸೇಜ್​ ಮಾಡಿದ್ದರು. ಕೊನೆಗೆ ವೃದ್ಧೆಯೊಬ್ಬರ ಕಣ್ಣಿನ ಆಪರೇಷನ್​ ಮಾಡಿಸಿದ್ದಾರೆ ಪ್ರತಾಪ್​.   ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಕಣ್ಣಿನ ಆರಪರೇಷನ್  ಆಗಿರುವ ಅಜ್ಜಿ ಜೊತೆ ಕಾಣಿಸಿಕೊಂಡಿರುವ ಪ್ರತಾಪ್​,  ಹುಟ್ಟು ಹಬ್ಬದ ದಿನ ದುಡ್ಡನ್ನು ಎಲ್ಲೆಲ್ಲೋ ಖರ್ಚು ಮಾಡೋದಕ್ಕಿಂತ, ಕಣ್ಣು ಆಪರೇಷನ್‌ ಮಾಡಿಸ್ತೀನಿ ಅಂತ ಹೇಳಿದ್ದೆ. ಅದೇ ರೀತಿ ಈಗ ಮೊದಲ ಹೆಜ್ಜೆ ಇಟ್ಟಿದ್ದೇನೆ. ಅಜ್ಜಿಯ ಆಪರೇಷನ್​ ಆಗಿದೆ. ಅವರ ಆಸೆಯಂತೆ ಅವರ ಮನೆಗೆ ಬಂದಿದ್ದೇನೆ ಎಂದಿದ್ದರು. ಈ ವೇಳೆ ಅಜ್ಜಿ ಕೂಡ ಮಾತನಾಡಿದ್ದಾರೆ. ಮೊದಲಿಗೆ ಪ್ರತಾಪ್​ಗೆ ಜ್ಯೂಸ್​  ಕೊಟ್ಟ ಅಜ್ಜಿ, ತುಂಬಾ ಖುಷಿಯಿಂದ ನಲಿದಾಡಿದ್ದರು. 

"ಅಜ್ಜಿ ಈಗ ಕಣ್ಣು ಕಾಣಿಸ್ತಿದೆಯಾ ಎಂದು ಪ್ರತಾಪ್​  ಕೇಳಿದಾಗ ಓಹೋ ‌ ತುಂಬ ಚೆನ್ನಾಗಿ ಕಾಣಿಸ್ತಿದೆ. ಕ್ಲೀನಾಗಿ ಕಾಣಿಸ್ತಿದೆ. ಇದೇ ನನಗೆ ಸಿಕ್ಕ ದೊಡ್ಡ ಐಶ್ವರ್ಯ. ಇವತ್ತು ನಾನು ಕೋಟ್ಯಾಧಿಪತಿಯಾಗಿದ್ದೇನೆ. ನಾನು ಹೇಳಿದ್ನಲ್ಲ, ನನಗೆ ಒಬ್ಬ ಮೊಮ್ಮಗ ಇದ್ದಾನೆ. ಇದೀಗ ದೇವರು ಇನ್ನೊಬ್ಬ ಮೊಮ್ಮಗನನ್ನು ಕರುಣಿಸಿದ್ದಾನೆ ಎಂದು ಅಜ್ಜಿ ನಲಿದಾಡಿದ್ದರು. ಇಷ್ಟಕ್ಕೆ ಸುಮ್ಮನಾಗದ ಡ್ರೋನ್​,  ನನಗೆ ಸಾಧ್ಯ ಆದ್ರೆ ಒಂದು ಮನೆ ಮಾಡಿಕೊಡಿಸುತ್ತೇನೆ.  ಈ ಪರಿಸ್ಥಿತಿಯಲ್ಲಿ, ಇಷ್ಟು ಚಿಕ್ಕ ಮನೆಯಲ್ಲಿ ನೀವಿರುವುದನ್ನು ನೋಡಲು ಆಗುತ್ತಿಲ್ಲ ಎನ್ನುತ್ತಿದ್ದಂತೆಯೇ ವೃದ್ಧೆ,  ದೇವರ ಮೇಲಿನ ಹೂವಿನ ಹಾರ ತೆಗೆದು ಪ್ರತಾಪ್‌ ಕೊರಳಿಗೆ ಹಾಕಿ, ದೇವರು ನಿನ್ನನ್ನು ಚೆನ್ನಾಗಿ ಇಟ್ಟಿರಲಿ ಎಂದು ಆಶೀರ್ವಾದ ಮಾಡಿದ್ದರು. 

ಡ್ರೋನ್​ ಪ್ರತಾಪ್​ನಿಂದ ನಾನು ಕೋಟ್ಯಧೀಶ್ವರೆ ಆದೆ: ಭಾವುಕರಾಗಿ ಕಣ್ಣೀರಾದ ಅಜ್ಜಿಯ ವಿಡಿಯೋ ವೈರಲ್​

click me!