ನನಗೆ ಮತ್ತು ಪತ್ನಿಗೆ ನಾವು ಸಾಯುವ ದಿನ ಗೊತ್ತು: ಆರ್ಯವರ್ಧನ್‌ ಗುರೂಜಿ ಶಾಕಿಂಗ್‌ ರಹಸ್ಯ!

By Suchethana D  |  First Published Nov 30, 2024, 2:53 PM IST

ನನಗೆ ಮತ್ತು ಪತ್ನಿಗೆ ನಾವು ಸಾಯುವ ದಿನ ಗೊತ್ತು ಎಂದ ಆರ್ಯವರ್ಧನ್‌ ಗುರೂಜಿ ಬಿಚ್ಚಿಟ್ಟ ರಹಸ್ಯ ಏನು? 
 


ಸಂಖ್ಯಾಶಾಸ್ತ್ರದ ಮೂಲಕ ನಂಬರ್‌ನಿಂದಲೇ ಭವಿಷ್ಯ ನುಡಿಯುವಲ್ಲಿ ಫೇಮಸ್‌ ಆದವರು ಆರ್ಯವರ್ಧನ್‌ ಗುರೂಜಿ. ನಂಬರ್‌ ಎಂದ್ರೆ ನಾನು, ನಾನೆಂದ್ರೆ ನಂಬರ್‌ ಎನ್ನುತ್ತಲೇ ಇರುವ ಆರ್ಯವರ್ಧನ್‌ ಗುರೂಜಿ ಅವರು ಈಗ ಶಾಕಿಂಗ್‌ ವಿಷಯವೊಂದನ್ನು ಬಿಚ್ಚಿಟ್ಟಿದ್ದಾರೆ. ಅದೇನೆಂದರೆ, ಅವರಿಗೆ ಮತ್ತು ಅವರ ಪತ್ನಿಗೆ ಇಬ್ಬರಿಗೂ ಸಾಯುವ ದಿನ ಗೊತ್ತಿದೆಯಂತೆ! ಈ ವಿಷಯವನ್ನು ಅವರು, ಕೀರ್ತಿ ನಾರಾಯಣ ಶೋನಲ್ಲಿ ಹೇಳಿದ್ದಾರೆ. ನನಗೆ ಮತ್ತು ಪತ್ನಿ ಇಬ್ಬರಿಗೂ ಸಾಯುವ ದಿನ ಗೊತ್ತಿದೆ ಎಂದಿದ್ದಾರೆ. ಅದಕ್ಕೆ ಕೀರ್ತಿ ಅವರು, ಆ ದಿನವನ್ನು ಹೇಳಿ ಎಂದಾಗ, ಅದೆಲ್ಲಾ ಹೇಳಲು ಆಗುವುದಿಲ್ಲ ಎಂದಿದ್ದಾರೆ ಗುರೂಜಿ. ಪತ್ನಿಗೂ ಸಾಯುವ ದಿನವನ್ನು ಹೇಳಿದ್ದೇನೆ ಎಂದಿದ್ದಾರೆ. ಹೋಗ್ಲಿ ಕೊನೆ ಪಕ್ಷ ಇನ್ನು ಎಷ್ಟು ವರ್ಷ ಅಂತಾದ್ರೂ ಹೇಳಿ ಎಂದಾಗ ಇಲ್ಲ, ಅದನ್ನೆಲ್ಲಾ ಹೇಳಲು ಆಗಲ್ಲ ಎಂದಿದ್ದಾರೆ.

ಇನ್ನು ಆರ್ಯವರ್ಧನ್‌ ಗುರೂಜಿ ಕುರಿತು ಹೇಳುವುದಾದರೆ, ಇವರು ಟಿವಿ ವೀಕ್ಷಕರಿಗೆ ಇನ್ನಷ್ಟು ಹತ್ತರ ಆದದ್ದು,  ‘ಬಿಗ್ ಬಾಸ್‌ ಕನ್ನಡ ಓಟಿಟಿ 1’ ಹಾಗೂ ‘ಬಿಗ್ ಬಾಸ್ ಕನ್ನಡ 9’ ಕಾರ್ಯಕ್ರಮಗಳ ಮೂಲಕ. ಅದರಲ್ಲಿಯೂ 9ನೇ ಸೀಸನ್‌ನಲ್ಲಿ ಸಕತ್‌ ಸದ್ದು ಮಾಡಿದ್ದರು.  ‘ನಾನು ಅಂದ್ರೆ ನಂಬರ್.. ನಂಬರ್‌ ಅಂದ್ರೆ ನಾನು’ ಎನ್ನುತ್ತಲೇ ಆಡಿದ್ದರು. ಅಲ್ಲಿಯೂ ಪ್ರತಿ ಸಲ ನಂಬರ್‌ ನೋಡುತ್ತಲೇ ಭವಿಷ್ಯ ನುಡಿಯುತ್ತಿದ್ದರು. ಬಿ‌ಗ್‌ಬಾಸ್‌ಗೆ ಹೋಗಿ ಬಂದ ಮೇಲೆ ಸಹಜವಾಗಿ ಇವರ ವರ್ಚಸ್ಸು ಹೆಚ್ಚಾಗಿದೆ. ಸಂಖ್ಯಾಶಾಸ್ತ್ರ ಹೇಳಿ ಫೇಮಸ್‌ ಆಗಿರುವುದಕ್ಕಿಂತಲೂ ಹೆಚ್ಚಾಗಿ, ಬಿಗ್‌ಬಾಸ್ ಇವರಿಗೆ ಹೆಸರು ತಂದುಕೊಟ್ಟಿದೆ. ಬಿಗ್ ಮನೆಯಲ್ಲಿದ್ದಾಗಲೇ ಇವರು ತಮಗೆ ತೋಚಿದ್ದನ್ನೆಲ್ಲಾ ಹೇಳಿ,  ಹೇಗೆ ಬೇಕೋ ಹಾಗೆ ಡೈಲಾಗ್ ಹೊಡೆದು ಎಡವಟ್ಟು ಮಾಡಿಕೊಳ್ಳುತ್ತಿರುವುದೂ ಇದೆ.

Tap to resize

Latest Videos

ಹೆಂಡತಿ- ಅಸ್ಟ್ರಾಲಾಜಿ ಇಬ್ರಲ್ಲಿ ಹೆಚ್ಚು ಪ್ರೀತಿಸೋದು ಯಾರನ್ನು ಅಂತ ಕೇಳಿದ್ರೆ ಹೀಗೆ ಹೇಳೋದಾ ಗುರೂಜಿ?

ಇಂತಿಪ್ಪ ಗುರೂಜಿ, ಡಾನ್ಸ್‌ ಕರ್ನಾಟಕ ಡಾನ್ಸ್‌ ವೇದಿಕೆಯಲ್ಲಿ, ಡಿಸ್ಕೋ ಡಾನ್ಸ್‌ ಸೇರಿದಂತೆ ಭರ್ಜರಿ ಸ್ಟೆಪ್‌ ಹಾಕಿ ಎಲ್ಲರನ್ನೂ ರಂಜಿಸಿದ್ದರು. ಆ ಸಮಯದಲ್ಲಿ ಅವರ ಪತ್ನಿ ಕೂಡ ಅಲ್ಲಿ ಹಾಜರು ಇದ್ದರು. ಆಗ ಪತ್ನಿ ಕಣ್ಣೀರು ಹಾಕುತ್ತಾ,  ಆರ್ಯವರ್ಧನ್​ ಅವರು ತುಂಬಾ ಶ್ರದ್ಧೆಯಿಂದ ಡಾನ್ಸ್​ ಕಲಿಯುತ್ತಿದ್ದಾರೆ. ಬೆಳಿಗ್ಗೆ 5 ಗಂಟೆಗೆಲ್ಲಾ ಮನೆ ಬಿಟ್ಟು ಹೋಗಿಬಿಟ್ಟಿದ್ದರು.  15 ದಿನಗಳಿಂದ ನನ್ನನ್ನು ಮಾತನಾಡಿಸಲಿಲ್ಲ, ಮಕ್ಕಳನ್ನೂ ಮಾತನಾಡಿಸಲಿಲ್ಲ, ಶೂಟಿಂಗ್‌ ಸೆಟ್‌ನಲ್ಲಿಯೇ ಇದ್ದರು ಎಂದು ಕಣ್ಣೀರಿಟ್ಟಿದ್ದರು. ಆಗ ಆರ್ಯವರ್ಧನ್ ಅವರು, ನನಗೆ ಡಾನ್ಸ್​ ಎಂದರೆ ತುಂಬಾ ಇಷ್ಟ. ಇದಕ್ಕಾಗಿ ಏನು ಬೇಕಾದರೂ ಮಾಡಲು ಸಾಧ್ಯ ಎಂದಿದ್ದರು. 

ಕೀರ್ತಿ ಅವರು ಇದೇ ವೇಳೆ ಇನ್ನೊಂದು ಪ್ರಶ್ನೆಯನ್ನು ಗುರೂಜಿ ಮುಂದೆ ಇಟ್ಟಿದ್ದರು.  ಅದೇನೆಂದರೆ, ನಿಮಗೆ ಪತ್ನಿ ತುಂಬಾ ಇಷ್ಟನೋ, ಅಸ್ಟ್ರಾಲಾಜಿನೋ, ಎರಡಲ್ಲಿ ಒಂದು ಸೆಲೆಕ್ಟ್‌ ಮಾಡೋದಾದ್ರೆ ಯಾವುದನ್ನು ಮಾಡುವಿರಿ ಎಂದು. ಈ ಪ್ರಶ್ನೆಗೆ ಆರ್ಯನ್‌ ಗುರೂಜಿ ತುಂಬಾ ತಲೆ ಕೆಡಿಸಿಕೊಂಡರು. ಎಲ್ಲಿಂದ ಹುಡುಕಿಕೊಂಡು ಬಂದ್ರಿ ಈ ಪ್ರಶ್ನೆ ಎಂದರು. ಕೂಡಲೇ, ಪತ್ನಿಗಿಂತಲೂ ಹೆಚ್ಚಾಗಿ ಆಸ್ಟ್ರಾಲಾಜಿಯನ್ನು ಪ್ರೀತಿಸುತ್ತೇನೆ ಎಂದು ಹೇಳಿದರು. ಮನೆ  ಸುಮ್ಮನೇ, ಹೆಂಡತಿನೂ ಸುಮ್ಮನೇ ಅಷ್ಟೇ ಎಂದಿದ್ದರು. 

ವಿಡಿಯೋ ಮಾಡಲು ಹೋದ್ರೆ ಡಾ.ಬ್ರೋ ಕೈಕಟ್ಟಿ ಬಾಕ್ಸಿಂಗ್‌ ಗ್ರೌಂಡ್‌ಗೆ ಇಳಿಸೋದಾ ನೈಜೇರಿಯನ್‌ಗಳು?

 
 
 
 
 
 
 
 
 
 
 
 
 
 
 

A post shared by @keerthientclinic

click me!