'ಮಕ್ಕಳು ಸಾಕೋಕೆ ಅವರಷ್ಟು ಗಾತ್ರದ ಹೇಲು ತಿನ್ನಬೇಕು..ಮಕ್ಳು ಏನ್ ಮಾಡಿದ್ರು ಚಂದನೇ ಅಲ್ವಾ

Published : Feb 26, 2021, 07:16 PM IST
'ಮಕ್ಕಳು ಸಾಕೋಕೆ ಅವರಷ್ಟು ಗಾತ್ರದ ಹೇಲು ತಿನ್ನಬೇಕು..ಮಕ್ಳು ಏನ್ ಮಾಡಿದ್ರು ಚಂದನೇ ಅಲ್ವಾ

ಸಾರಾಂಶ

ತಾಯಿಯಾಗಿರುವ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ/ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಅನುಭವ ಹಂಚಿಕೊಂಡ ನಟಿ/ ಮಗುವಿನ ಆರೈಕೆ ಹೇಗೆ ಮಾಡಬೇಕು? ತಮಾಷೆಯಾಗಿ ಸತ್ಯ ಹೇಳಿದ ಕಲಾವಿದೆ

ಮೈಸೂರು(ಫೆ. 26) ತಾಯಿಯಾಗಿರುವ ಬಿಗ್ ಬಾಸ್ ಖ್ಯಾತಿಯ ಅಕ್ಷತಾ ಪಾಂಡವಪುರ/ ಸೋಶಿಯಲ್ ಮೀಡಿಯಾದಲ್ಲಿ ವಿಶೇಷ ಅನುಭವ ಹಂಚಿಕೊಂಡ ನಟಿ/ ಮಗುವಿನ ಆರೈಕೆ ಹೇಗೆ ಮಾಡಬೇಕು? ತಮಾಷೆಯಾಗಿ ಸತ್ಯ ಹೇಳಿದ ಕಲಾವಿದೆ

ಮಗುವನ್ನು  ಒಂದು ಮೂರು ವರ್ಷದ ತನಕ ದೊಡ್ಡ ಮಾಡವುದು ತಾಯಿಗೆ-ತಂದೆಗೆ ಒಂದು ಸವಾಲೆ. ಸರ್ಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಂಡು ಮಾದರಿಯಾಗಿದ್ದ ಅಕ್ಷತಾ ತಮ್ಮ ಸೋಶಿಯಲ್ ಮೀಡಿಯಾ ಮುಖೇನ ಮಗು ಮತ್ತು ಉಳಿದವರು ಮಾತನಾಡುವುದನ್ನು ತೆರೆದು ಇರಿಸಿದ್ದಾರೆ.

ತಾಯಿ ಮಗು ನೋಡಿಕೊಂಡು ಬಂದ ಸಂಚಾರಿ ವಿಜಯ್ 

ಬಿಗ್ ಬಾಸ್ ಖ್ಯಾತಿಯ ನಟಿ,  ರಂಗ ಕಲಾವಿದೆ ಅಕ್ಷತಾ  ಪಾಂಡವಪುರ ತಾಯಿಯಾಗಿದ್ದು ಈಗ ಮಗುವಿನೊಂದಿಗಿನ ಬಾಂಧವ್ಯವನ್ನು  ವಿಶೇಷ ರೀತಿಯಲ್ಲಿ ಹಂಚಿಕೊಂಡಿದ್ದಾರೆ.  ಅವರ ಫೇಸ್ ಬುಕ್ ಕೋಟ್ ಗಳನ್ನು  ನಿಮ್ಮ ಮುಂದೆ ಯಥಾವತ್ತಾಗಿ ಇಡುತ್ತಿದ್ದೇವೆ. 

ತಾವು  ಹೇಳುವ ಮಾತು ಜನರು ಆಡುವ ಮಾತುಗಳನ್ನು ಒಂದೊಂದಾಗಿ ಇಟ್ಟಿದ್ದಾರೆ. ಎಲ್ಲದಕ್ಕೂ ಉತ್ತರ ಮಕ್ಕಳೇ ಹಿಂಗೆ. ಕೊಂಚ ತಮಾಷೆಯಾಗಿದ್ದರೂ ಸತ್ಯ ಅಡಗಿದೆ ಅಲ್ಲವೇ?

Feeling ಒಂಥರಾ 😃😜 experience  
ಮಕ್ಕಳು ಸಾಕೋಕೆ ಅವರಷ್ಟುಗಾತ್ರದ ಹೇಲು ತಿನ್ನಬೇಕು ಅನ್ನೋ ಮಾತು ಕೇಳಿ ಕೇಳಿ 🙆‍♀️🙆‍♀️ 
ಇರ್ಲಿ ವಿಷಯಕ್ಕೆ ಬರ್ತೀನಿ ನಾನು & ಅವರು 🤦‍♀️ 
ನಾನು                                  ಅವರು 
# ಮಗು ಜಾಸ್ತಿ ಅಳ್ತಾ ಇರುತ್ತೆ /           ಮಕ್ಕಳೇ ಹಂಗೆ 
# ಜಾಸ್ತಿ ನಿದ್ದೇನೆ ಮಾಡಲ್ಲ /                            " 
# ಬರೀ ನಿದ್ದೆ ಮಾಡ್ತಾ ಇರುತ್ತೆ /                       " 
# ಎದ್ದಾಗೆಲ್ಲ ಹಾಲು ಕುಡಿಸ್ತನೇಇರ್ಬೇಕು /          " 
# ಜಾಸ್ತಿ ಕಕ್ಕ ಮಾಡುತ್ತೆ /                                 " 
# ವರೆಕ್ಕೆರಡೇ ಬಾರಿ ಕಕ್ಕ ಮಾಡೋದು /            " 
# ತುಂಬಾ ಬೆಚ್ಚಿಬೀಳುತ್ತೆ /                                       "   
# ವಾಂತಿ ಮಾಡುತ್ತಲ್ಲಾ /                                  " 
# ಚಳಿಸೋದೇ ಜಾಸ್ತಿ /                                     " 
# ಕೈ ಬಿಡೋದೇ ಇಲ್ಲಾ ಎತ್ಕೊಂಡೆ ಇರ್ಬೇಕು/      " 
# ಊಟ ನಿದ್ದೆ ಮಾಡೋಕೆ ಬಿಡಲ್ಲಾ /                  " 
ಒಟ್ನಲ್ಲಿ ಇಳಿ, ರಂಜು, ದೃಷ್ಟಿ, ಪಥ್ಯ, ನೀರು & ಊಟದ ಆರೈಕೆ ಅಂತೆಲ್ಲಾ ಮಾಡಿ ಅವರಿಗೆ ತಿಳಿದ ಹಾಗೆ ಬಾಣಂತನ ಮಾಡಿ ನಾಮಕರಣ ಮಾಡಿ ಕಳಿಸೋತನಕ ಈ ಡೈಲಾಗ್ ಕೇಳ್ತಾ ಇರ್ಬೇಕು "ಮಕ್ಕಳು ಸಾಕೋಕೆ ಅವರಷ್ಟು ಗಾತ್ರದ ಹೇಲು ತಿನ್ನಬೇಕು" 😉😃 ( ಆದ್ರೂ ಮಕ್ಳು ಏನ್ ಮಾಡಿದ್ರು ಚಂದನೇ ಅಲ್ವಾ 😘)

ತಮ್ಮೂರಿನ ಸರ್ಕಾರಿ ಆಸ್ಪತ್ರೆಯಲ್ಲೆ ಹೆರಿಗೆ ಮಾಡಿಸಿಕೊಂಡಿದ್ದ ಅಕ್ಷತಾ ಮಾದರಿ ಕೆಲಸವೊಂದಕ್ಕೆ ನಾಂದಿ ಹಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಕಂದಮ್ಮನ ಪೋಟೋ ಶೇರ್ ಮಾಡಿಕೊಳ್ಳುತ್ತಾರೆ. ಜತೆಗೆ ಅಷ್ಟೇ ಸುಂದರ ಶೀರ್ಷಿಕೆ ಸಹ ನೀಡುತ್ತಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನು ಹೋಗ್ತಿದೀನಿ, ಇಲ್ಲಿಗೆ ಮತ್ತೆ ಬರೋಕಾಗಲ್ಲ-Bigg Boss ಶೋನಿಂದ ರಕ್ಷಿತಾ ಶೆಟ್ಟಿ, ಧ್ರುವಂತ್‌ ಔಟ್!; ಅಧಿಕೃತ
ದೇವರು ಒಂದು ಕೇಳಿದ್ರೆ, ಎರಡು ಕೊಟ್ಟು ಆಶೀರ್ವದಿಸಿದ: Ramachari Serial ನಟಿ ಐಶ್ವರ್ಯಾ ಮನೆಯಲ್ಲಿ ಡಬಲ್‌ ಸಂಭ್ರಮ