ಬಿಗ್‌ಬಾಸ್ ಸೀಸನ್ 8; ವಿಶೇಷ ಏನೇನು ಉಂಟು!

By Kannadaprabha News  |  First Published Feb 26, 2021, 3:13 PM IST

ಬಿಗ್‌ಬಾಸ್ ಎಂಟನೇ ಸೀಸನ್‌ನನ್ನು ವಿವರಗಳನ್ನು ಕಲರ್ಸ್ ಕನ್ನಡ ಚಾನಲ್ಲಿನ ಕ್ಲಸ್ಟರ್ ಹೆಡ್ ಪರಮೇಶ್ವರ ಗುಂಡ್ಕಲ್ ತೆರೆದಿಟ್ಟರು. ಈ ಸಲದ ಬಿಗ್‌ಬಾಸ್ ಹೇಗಿರುತ್ತದೆ ಅನ್ನುವುದನ್ನು ಅವರು ನೇರ ನುಡಿಗಳಲ್ಲಿ ವಿವರಿಸಿದರು. ಆ ವಿವರಗಳು ಇಲ್ಲಿವೆ.
 


- ಬಿಗ್‌ಬಾಸ್ ಸೀಸನ್ 8 , ಫೆ.28ರ ಭಾನುವಾರದಿಂದ. ಕಿಚ್ಚ ಸುದೀಪ್ ಸಾರಥ್ಯದಲ್ಲಿ  17 ಸ್ಪರ್ಧಿಗಳ ಆಟ.
- ಈ ಬಾರಿ ಸಿನಿಮಾ, ರಾಜಕೀಯ, ಕ್ರೀಡೆ, ಕಿರುತೆರೆ ಹೀಗೆ ವೈವಿಧ್ಯಮಯ ಕ್ಷೇತ್ರಗಳ ಸೆಲೆಬ್ರಿಟಿಗಳಿದ್ದಾರೆ. ಇದು ಪಕ್ಕಾ ಸೆಲೆಬ್ರಿಟಿ ಶೋ.

"
- ಕೊರೋನಾ ಮುನ್ನೆಚ್ಚರಿಕೆಯಾಗಿ ಅಷ್ಟೂ ಜನ ಸ್ಪರ್ಧಿಗಳನ್ನು ಕ್ವಾರೆಂಟೇನ್ ಮಾಡಲಾಗಿದೆ. ಎಲ್ಲ ಸುರಕ್ಷತಾ ಕ್ರಮಗಳೊಂದಿಗೆ ಬಿಗ್‌ಬಾಸ್ ಮನೆಯೊಳಗೆ ಬಿಡಲಾಗುತ್ತದೆ.
- ಮೊದಲ ದಿನದ ಗ್ರ್ಯಾಂಡ್ ಓಪನಿಂಗ್ ಭಾನುವಾರ ಸಂಜೆ ಆರಂಭ. ಉಳಿದ ದಿನಗಳಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 8.30ಕ್ಕೆ ಕಲರ್ಸ್‌ ಕನ್ನಡದಲ್ಲಿ ಬಿಗ್‌ಬಾಸ್ ಶೋ.

Tap to resize

Latest Videos

ಕಾಮಿಡಿ ಮಾಡೋರಿಗೂ ಬಿಗ್‌ಬಾಸ್‌ ಮನೆಯಲ್ಲಿದೆ ಜಾಗ; ನಯನಾ ಹೋಗೋದು ಗ್ಯಾರಂಟಿ? 

- ಪ್ರತೀ ಸಲದಂತೆ ಈ ಬಾರಿಯೂ ಬಿಗ್‌ಬಾಸ್ ಸ್ಪರ್ಧಿಗಳ ಆಯ್ಕೆಗೆ ಸಂಬಂಧಿಸಿದಂತೆ ಸಾಕಷ್ಟು ಒತ್ತಡಗಳಿದ್ದವು. ನಾವು ಈ ವಿಚಾರದಲ್ಲಿ ಸಡಿಲ ನಿಲುವು ತಾಳಿಲ್ಲ.


- ಬಿಗ್‌ಬಾಸ್‌ನ ಆಯ್ಕೆಯಲ್ಲಿ ಭಿನ್ನತೆ ಮುಖ್ಯ ಪಾತ್ರ ವಹಿಸುತ್ತದೆ. ಜೊತೆಗೆ ಫಿಸಿಕಲ್ ಫಿಟ್‌ನೆಸ್‌ಅನ್ನೂ ನಾವು ಕಡೆಗಣಿಸೋ ಹಾಗಿಲ್ಲ.
- ಈ ಬಾರಿ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ಹ್ಯಾಶ್‌ಟ್ಯಾಗ್‌ಗಳನ್ನು ಪರಿಚಯಿಸುತ್ತಿದ್ದೇವೆ. ಈ ಹ್ಯಾಶ್‌ಟ್ಯಾಗ್ ಬಳಸಿ ಜನ ಬಿಗ್‌ಬಾಸ್ ಜೊತೆಗೆ ಕನೆಕ್ಟ್ ಆಗಬಹುದು.

ಬಿಗ್ ಬಾಸ್‌ ಮನೆಗೆ ಸನ್ನಿಧಿ; ಆಫರ್ ಬಂದ ವಿಚಾರ ಒಪ್ಪಿಕೊಂಡ ಅಗ್ನಿಸಾಕ್ಷಿ ನಟಿ!

- ನಾವು ಪ್ರತೀ ಸ್ಪರ್ಧಿಯನ್ನು ಗೆಲ್ಲಲಿ ಅಂತಲೇ ಮನೆಯೊಳಗೆ ಕಳುಹಿಸುತ್ತೇವೆ. ಹದಿನೇಳು ಜನರ ಬಗ್ಗೆಯೂ ನಮಗೆ ಗೆಲ್ಲುವ ಭರವಸೆ ಇರುತ್ತದೆ.
- ಇದು ಎಂಟನೇ ಸೀಸನ್ ಆದರೂ ಆರಂಭದ ಎಕ್ಟೈಟ್‌ಮೆಂಟ್, ನರ್ವಸ್ ಇದ್ದೇ ಇದೆ. 

click me!