
ಬಿಗ್ಬಾಸ್ನಿಂದ ಖ್ಯಾತಿ ಪಡೆದಿರುವ ಡಾಗ್ ಸತೀಶ್, ಬಾಯಿ ಬಿಟ್ಟರೆ ಕೋಟಿಯಲ್ಲಿ ಮಾತನಾಡುವವರು. ಇವರೊಬ್ಬ ಪುಂಗಿದಾಸ ಎಂದು ಹೇಳಿಕೊಂಡೇ ಅದೆಷ್ಟೋ ಯುಟ್ಯೂಬ್ ಚಾನೆಲ್ನವರು ಇವರನ್ನು ಕರೆಸಿ ಟಿಆರ್ಪಿ ಏರಿಸಿಕೊಂಡರು. ಗೊತ್ತೇ ಇರಲ್ಲ, ಹೆಸರೇ ಇಲ್ಲದ ಕೆಲವು ಇನ್ಸ್ಟಾಗ್ರಾಮ್ನಲ್ಲಿಯೂ ಇವರ ಹವಾ ಜೋರಾಗಿಯೇ ನಡೆದಿತ್ತು. ಬಿಗ್‌ಬಾಸ್ ಅನ್ನು ರಾತ್ರೋರಾತ್ರಿ ಇಂಟರ್ನ್ಯಾಷನಲ್ ಲೆವೆಲ್ಗೆ ಕರೆದುಕೊಂಡು ಹೋಗಬಲ್ಲೆ ಎಂದೆಲ್ಲಾ ಹೇಳುತ್ತಿದ್ದ ಡಾಗ್ ಸತೀಶ್ ಅವರ ಮರ್ಯಾದೆಯನ್ನು ಬಿಗ್‌ಬಾಸ್ ಫಿನಾಲೆಯಲ್ಲಿ ಸಂಪೂರ್ಣವಾಗಿ ತೆಗೆದಿದ್ದರು ಕಿಚ್ಚ ಸುದೀಪ್. ಡಾಗ್ ಸತೀಶ್ ಅವರನ್ನು ಮಾತಿನಲ್ಲಿಯೇ ಕಟ್ಟಿ ಹಾಕಿ, ನೀವು ಕುಡಿದು ಬಂದಿದ್ದೀರೋ, ನಾನು ಕುಡಿದಿದ್ದೇನೋ ಗೊತ್ತಾಗ್ತಿಲ್ಲ ಎಂದು ಹೇಳುವ ಮೂಲಕ ಎಲ್ಲರ ಎದುರೇ ಡಾಗ್ ಸತೀಶ್ ಬಾಯಿ ಮುಚ್ಚಿಸಿದ್ದರು.
ಅದೇನೇ ಇದ್ದರೂ, ನೆಗೆಟಿವ್ ಟ್ರೋಳ್ ಮೂಲಕವೇ, ಡಾಗ್ ಸತೀಶ್ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಪ್ರಸಿದ್ಧಿ ಹೊಂದುತ್ತಿದ್ದಾರೆ. ಧರ್ಮಸ್ಥಳ ಪಾರ್ಕ್‌ಲ್ಲಿ ಬಿರಿಯಾನಿ ಕಬಾಬ್ ತಿಂದಿದ್ದೇನೆ, ದೇವ್ರ ದಿಂಡ್ರೂ ನಾನು ನಂಬಲ್ಲ ಎನ್ನುವ ಮೂಲಕ ಹೇಗಾದ್ರೂ ಸರಿ, ಸುದ್ದಿಯಲ್ಲಿ ಇರಬೇಕು ಎಂದು ಮಾತನಾಡುತ್ತಿದ್ದಾರೆ. ಬಿಗ್‌ಬಾಸ್ ಫಿನಾಲೆಗೆ ಕರೆದು ಕಿಚ್ಚ ಸುದೀಪ್ ಅವರು ಅವಮಾನ ಮಾಡಿದ್ರೂ ಅದನ್ನು ಕೂಡ ಪಾಸಿಟಿವ್ ಆಗಿ ತೆಗೆದುಕೊಂಡಿರುವ ಖ್ಯಾತಿ ಡಾಗ್ ಸತೀಶ್ ಅವರದ್ದು. ಬಾಯಿ ಬಿಟ್ಟರೆ ಲಕ್ಷ, ಕೋಟಿಯಲ್ಲಿಯೇ ಮಾತನಾಡುವ ಡಾಗ್ ಸತೀಶ್ ಅವರಿಗೆ ತಮ್ಮ ಸೌಂದರ್ಯದ ಬಗ್ಗೆ ಎಲ್ಲಿಲ್ಲದ ಪ್ರೀತಿ. ತಾವೊಬ್ಬ ಸುರಸುಂದರಾಂಗ, ನೂರಾರು ಹೆಣ್ಣುಮಕ್ಕಳು ಈ ವಯಸ್ಸಿನಲ್ಲಿಯೂ ಹಿಂದೆ ಬೀಳ್ತಾರೆ, ಸೆಲೆಬ್ರಿಟಿಗಳೂ ತಮ್ಮ ಜೊತೆ ಬರಲು ತುದಿಗಾಲಿನಲ್ಲಿ ನಿಂತಿದ್ದಾರೆ ಎಂದೆಲ್ಲಾ ಹೇಳ್ತಿರೋ ಡಾಗ್ ಸತೀಶ್ ಅವರ ಹಳೆಯ ಚಿತ್ರದ ತುಣುಕೊಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಸದ್ದು ಮಾಡುತ್ತಿದೆ.
ನಾನು ಈಗಲೇ ಇಷ್ಟು ಸ್ಮಾರ್ಟ್ ಇದ್ದೇನೆ. ಇನ್ನು ಚಿಕ್ಕ ವಯಸ್ಸಿನಲ್ಲಿ ನನ್ನನ್ನು ಆಮೀರ್ ಖಾನ್ ಎಂದೇ ಹೇಳುತ್ತಿದ್ದರು. ನನ್ನನ್ನು ನೋಡಿ ಸ್ಟಾರ್ ಸೆಲೆಬ್ರಿಟಿಗಳು ಹೊಟ್ಟೆಕಿಚ್ಚು ಪಟ್ಟುಕೊಳ್ಳುತ್ತಿದ್ದರು. ಹೆಣ್ಣುಮಕ್ಕಳು ನನ್ನ ಹಿಂದೆ ಬೀಳ್ತಾ ಇದ್ದರು. ಈಗಲೂ ನಾನು ಸ್ಮಾರ್ಟ್ ಇರುವ ಕಾರಣದಿಂದ ಪತ್ನಿ ಡಿವೋರ್ಸ್ ಕೊಡ್ತಿಲ್ಲ. ನಾನು ಬೇರೆ ಮದುವೆಯಾಗ್ತೇನೆ ಎಂದರೆ, ಹೆಣ್ಣುಮಕ್ಕಳು ಕ್ಯೂ ನಿಲ್ಲುತ್ತಾರೆ ಎಂದು ಅವಳು ಡಿವೋರ್ಸ ಕೊಡ್ತಿಲ್ಲ. ನಾನು ಅಷ್ಟು ಸ್ಮಾರ್ಟ್ ಇದ್ದೇನೆ ಎಂದೆಲ್ಲಾ ಹೇಳುವ ಡಾಗ್ ಸತೀಶ್, ಹಿಂದೆ ಹೇಗೆ ಇದ್ದರು ಎನ್ನುವ ಸಿನಿಮಾ ತುಣುಕು ಇದಾಗಿದೆ.
ಈಗ ಈ ತುಣುಕನ್ನು ಇಟ್ಟುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಸಕತ್ ಟ್ರೋಲ್ ಮಾಡಲಾಗುತ್ತಿದೆ. ಕನ್ನಡದ ಆಮೀರ್ ಖಾನ್ ನೋಡ್ರಪ್ಪಾ, ಹೀಗಿದ್ರು ಎಂದೆಲ್ಲಾ ಹೇಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.