ಸೆಲೆಬ್ರಿಟಿ ಅಂದ್ಮೇಲೆ ಸೌಂದರ್ಯ ಬಹಳ ಮುಖ್ಯ. ದೀಪಿಕಾ ದಾಸ್ ಏನೆಲ್ಲಾ ಮಾಡ್ತಾರೆ ನೋಡಿ....
ಕನ್ನಡ ಕಿರುತೆರೆಯ ನಾಗಿಣಿ, ಬಿಗ್ ಬಾಸ್ ಸ್ಪರ್ಧಿ ದೀಪಿಕಾ ದಾಸ್ ಯುಟ್ಯೂಬ್ ಲೋಕದಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ಸದಾ ಫಿಟ್ ಆಂಡ್ ಫ್ಯಾಬುಲಸ್ ಅಗಿರುವ ದೀಪಿಕಾ ದಾಸ್ ಬ್ಯೂಟಿ ಸೀಕ್ರೆಟ್‌ನ ಅಭಿಮಾನಿಗಳು ಕೇಳುತ್ತಿರುತ್ತಾರೆ. ಹೀಗಾಗಿ ದೀಪಿಕಾ ಎಲ್ಲಿ ತಮ್ಮ ಟ್ರೀಟ್ಮೆಂಟ್ ತೆಗೆದುಕೊಳ್ಳುವುದು ಎಂದು ವಿಡಿಯೋ ಮಾಡಿದ್ದಾರೆ. ಸಾಮಾನ್ಯ ಪಾರ್ಲರ್‌ಗೆ ಹೋಗದೆ ಡಾಕ್ಟರ್‌ನ ಸಂಪರ್ಕ ಮಾಡಲು ಕಾರಣ ಎನು? ಸ್ವತಃ ವೈದ್ಯರ ಜೊತೆ ಮಾತನಾಡಿದ್ದಾರೆ ದೀಪಿಕಾ...
'ನನ್ನ ತ್ವಚ್ಛೆ ಮೇಲೆ ನಾನು ಸಂಪೂರ್ಣ ಹಕ್ಕು ಕಳೆದುಕೊಂಡಿರುವೆ. ನನ್ನ ಸ್ನೇಹಿತೆ ನನ್ನ ಡಾಕ್ಟರ್ ಅಂಜಲಿ ಸಂಪೂರ್ಣ ಜವಾಬ್ದಾರಿ ವಹಿಸುತ್ತಾರೆ. ನನ್ನ ತ್ವಚ್ಛೆಯಲ್ಲಿ ಸಣ್ಣ ಪುಟ್ಟ ಬದಲಾವಣೆ ಆದ್ರೂ ಬೈಯುತ್ತಾರೆ. ತ್ವಚ್ಛೆ ವಿಚಾರವಾಗಿ ಪದೇ ಪದೇ ಫೋನ್ ಮಾಡಿ ವಿಚಾರಿಸುತ್ತಾರೆ..ನೀರು ಎಷ್ಟು ಕುಡುದ್ರಿ? ಯಾಕೆ ಲೇಜರ್ ಟ್ರೀಟ್‌ಮೆಂಟ್‌ಗೆ ಬಂದಿಲ್ಲ ಅಂತ ಕೇಳುತ್ತಾರೆ. ಡಾಕ್ಟರ್ ಕಾಲ್‌ನಿಂದ ಎಸ್ಕೇಪ್ ಅಗುವುದೇ ಕಷ್ಟ. ಪೋನ್ ಪಿಕ್ ಮಾಡಿಲ್ಲ ಅಂದ್ರೆ ಮೆಸೇಜ್ ಮಾಡುತ್ತಾರೆ ನಾನು ಪ್ರತಿಕ್ರಿಯೆ ನೀಡಲ್ಲ ಅಂದ್ರೆ ನನ್ನ ತಾಯಿಗೆ ಕಾಲ್ ಮಾಡುತ್ತಾರೆ' ಎಂದು ದೀಪಿಕಾ ದಾಸ್ ತಮ್ಮ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.
ತಾಯಿ ಬರ್ತಡೇ ದಿನ ರೆಸಾರ್ಟ್‌ನಲ್ಲಿ ಕುಣಿದು ಕುಪ್ಪಳಿಸಿದ ದೀಪಿಕಾ ದಾಸ್!
'ದೀಪಿಕಾ ದಾಸ್ ಸ್ಕಿನ್ ತುಂಬಾ ಚೆನ್ನಾಗಿದೆ. ಸದಾ ಮೇನ್ಟೈನ್ ಮಾಡ್ಬೇಕು ಅಂತಾ ಏನಿಲ್ಲ..ಮುಖದಲ್ಲಿ ಪ್ರತಿಯೊಬ್ಬರಿಗೂ ಕೂದಲು ಇರುತ್ತದೆ. ಮಹಿಳೆಯರಿಗೆ ಹೆಚ್ಚಿಗೆ ಸಮಸ್ಯೆ ಆಗುತ್ತೆ ಏಕೆಂದರೆ ಹಾರ್ಮೋನ್ ಬ್ಯಾಲೆನ್ಸ್‌ನಿಂದ. ಟ್ರೀಟ್ಮೆಂಟ್ ತೆಗೆದುಕೊಂಡರೆ ಇರೋ ತ್ವಚ್ಛೆ ಕಾಪಾಡಿಕೊಳ್ಳಲು. ದೀಪಿಕಾ ದಾಸ್ ಸುಲಭವಾಗಿ ನಂಬುವುದಿಲ್ಲ ಫಾಲೋ ಮಾಡುವುದಿಲ್ಲ ...ಈಗ ತಪ್ಪದೆ ಫಾಲೋ ಮಾಡುತ್ತಿದ್ದಾರೆ ಅಂದ್ಮೇಲೆ ನಿಜ ಒಳ್ಳೆಯದು. ದೀಪಿಕಾ ದಾಸ್ ಜಾಸ್ತಿ ಪ್ರಯಾಣ ಮಾಡುತ್ತಾರೆ ಹೀಗಾಗಿ ಜಾಸ್ತಿ ಟ್ಯಾನ್ ಅಗುತ್ತಾರೆ' ಎಂದು ಡಾಕ್ಟರ್ ಮಾತನಾಡಿದ್ದಾರೆ.
ಮಂಗಳೂರಿನಲ್ಲಿ ದೀಪಿಕಾ ದಾಸ್ ಬೆಕ್ಕು ಪತ್ತೆ; 15 ಸಾವಿರ ಬಹುಮಾನ ಯಾರ ಕೈ ಸೇರಿತ್ತು?
'ಚಿಕ್ಕವಯಸ್ಸಿನಿಂದಲೂ ನಾನು ಹೆಚ್ಚಿಗೆ ಕೇರ್ ಮಾಡುತ್ತಿರಲಿಲ್ಲ ಕ್ರೀಮ್ ಏನೂ ಹಾಕುತ್ತಿರಲಿಲ್ಲ. ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟ ಮೇಲೆ ಸ್ವಲ್ಪ ಜಾಗೃತೆ ವಹಿಸಲು ಶುರು ಮಾಡಿದೆ. ಜನರ ಮುಂದೆ ಬರುವಾಗ ಸ್ಕಿನ್ ಕೇರ್ ಮತ್ತು ಫಿಟ್ನೆಸ್ ಮುಖ್ಯವಾಗುತ್ತದೆ. ಜಾಸ್ತಿ ಪ್ರಯಾಣ ಮಾಡುತ್ತಿರುವ ಕಾರಣ ಟೈಮ್ ಸಿಗುತ್ತಿರಲಿಲ್ಲ. ಬಾಡಿ ಟ್ಯಾನ್ ಆದರೂ ಕೇರ್ ಮಾಡುತ್ತಿರಲಿಲ್ಲ ಹೀಗಾಗಿ 1 ವರ್ಷ ತೆಗೆದುಕೊಳ್ಳುತ್ತಿತ್ತು...ವೈದ್ಯರ ಸಲಹೆ ಪಡೆದ ಮೇಲೆ ಮಾತ್ರ ನನಗೆ ಬೇಗ ಸರಿಯಾಗುತ್ತಿರುವುದು. ತಿಂಗಳಲ್ಲಿ ಎರಡು ಮೂರು ಸಲ ನಾನು ಟ್ರೀಟ್ಮೆಂಟ್ ತೆಗೆದುಕೊಳ್ಳುತ್ತೀನಿ' ಎಂದು ದೀಪಿಕಾ ದಾಸ್ ಹೇಳಿದ್ದಾರೆ.