ಸೀರಿಯಲ್ ಒಂದೇ ಅನ್ನ ಹಾಕಿಲ್ಲ; ವಿನಯ್ ಗೌಡ ದುರಹಂಕಾರಕ್ಕೆ ಬ್ರೇಕ್ ಹಾಕುವಂತೆ ನೆಟ್ಟಿಗರಿಂದ ಒತ್ತಾಯ!

By Vaishnavi Chandrashekar  |  First Published Nov 2, 2023, 10:21 AM IST

ದಿನದಿಂದ ದಿನಕ್ಕೆ ಹೆಚ್ಚಗುತ್ತಿದೆ ವಿನಯ್ ಗೌಡ ಕೋಪ. ದುರಹಂಕಾರಕ್ಕೆ ಬ್ರೇಕ್ ಹಾಕುವಂತೆ ಸುದೀಪ್‌ಗೆ ಒತ್ತಾಯಿಸುತ್ತಿದ್ದಾರೆ ಟ್ರೋಲ್ ಪೇಜ್‌ಗಳು... 
 


ಹರಹರ ಮಹಾದೇವ್ ಪಾತ್ರದ ಮೂಲಕ ನಿರೀಕ್ಷೆಗೂ ಮೀರಿದ ಜನಪ್ರಿಯತೆ ಪಡೆದ ವಿನಯ್ ಗೌಡ ಬಿಗ್ ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಸುತ್ತಿದ್ದಾರೆ. ವಿನಯ್ ಇದ್ದ ಟೀಂ ಗೆದ್ದೇ ಗೆಲ್ಲುತ್ತದೆ ಎಂದು ಆರಂಭದಲ್ಲಿ ಲೆಕ್ಕ ಮಾಡುತ್ತಿದ್ದ ಮನೆ ಮಂದಿಯ ಲೆಕ್ಕಚಾರ ಈಗ ಬದಲಾಗಿದೆ. ವಿನಯ್ ಸುಮ್ಮನೆ ಮಾತನಾಡುವುದು ಕಿರಿಕಿರಿ ಮಾಡುವುದು ಆದರೆ ಆಟ ಮಾತ್ರ ಆಡುವುದಿಲ್ಲ ಎಂದು ಅವರವರಿಗೆ ಅರ್ಥವಾಗುತ್ತಿದೆ. ಯಾಕೆ ನೆಟ್ಟಿಗರು ಗರಂ ಆಗಿದ್ದಾರೆ.

ತುಕಾಲಿ ಸಂತು ಪದೇ ಪದೇ ಡ್ರೋನ್ ಪ್ರತಾಪ್‌ರನ್ನು ಹೀಯಾಳಿಸಿ ಮಾತನಾಡುತ್ತಿದ್ದದು ತಪ್ಪು ಎಂದು ಜನರಿಂದ ಅಭಿಪ್ರಾಯ ಬರುತ್ತಿದ್ದಂತೆ ಕಿಚ್ಚ ಸುದೀಪ್ ಅದಕ್ಕೆ ಬ್ರೇಕ್ ಹಾಕುತ್ತಾರೆ. ಆದರೆ ವಿನಯ್ ಗೌಡ ಪದೇ ಪದೇ ಕೆಟ್ಟ ರೀತಿಯಲ್ಲಿ ಪ್ರತಾಪ್‌ನ ಟಾರ್ಗೆಟ್ ಮಾಡುತ್ತಿರುವುದಕ್ಕೆ ಯಾಕೆ ಯಾರೂ ಏನೂ ಹೇಳುತ್ತಿಲ್ಲ? ಅಲ್ಲದೆ ಮನೆಯಲ್ಲಿರುವ ಸದಸ್ಯರು ಸರಿಯಾಗಿದ್ದರೂ ಸುಮ್ಮನೆ ಜಗಳ ಮಾಡುತ್ತಿರುವುದು ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಇನ್ನು ಹೆಣ್ಣು ಮಕ್ಕಳ ಜೊತೆ ವಿನಯ್ ವರ್ತಿಸುತ್ತಿರುವ ರೀತಿ ಸರಿ ಅಲ್ಲ ಮನೆಯಲ್ಲಿ ನಮ್ಮ ಮಕ್ಕಳು ಟಿವಿ ನೋಡುತ್ತಾರೆ ಮನಸ್ಥಿತಿ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ. 

Tap to resize

Latest Videos

ತುಕಾಲಿ ಸಂತು ಖಾತೆಯಲ್ಲಿ 2 ಲಕ್ಷ ಮಾಯಾ; ಬಿಗ್ ಬಾಸ್‌ಗೆ ಕಾಲಿಟ್ಟು ನಷ್ಟ?

ವೋಟಿಂಗ್ ಸಮಯದಲ್ಲಿ ಡ್ರೋನ್ ಪ್ರತಾಪ್ 'ನಾನು ಕಂಪನಿ ನಡೆಸುತ್ತಿರುವ ನೂರಾರು ಜನರಿಗೆ ಕೆಲಸ ಕೊಟ್ಟಿರುವೆ' ಎಂದು ಹೇಳಿದಾಗ 'ನಾನು ಹೊರಗಡೆ 35 ಕಂಪನಿ ನಡೆಸುತ್ತಿರುವೆ' ಎಂದು ವಿನಯ್ ಹೇಳಿದ ಮಾತು ಜನರಿಗೆ ಇಷ್ಟವಾಗಿಲ್ಲ. ಭಾಗ್ಯಶ್ರೀ ಸ್ನೇಹಿತ್‌ನ ನಾಮಿನೇಟ್ ಮಾಡಿದಕ್ಕೆ 'ದಸರ ಹಬ್ಬ ಅಂತ ಭಾಗ್ಯರನ್ನು ಉಳಿಸಿದ್ದಾರೆ' ಎಂದು ಟೀಕೆ ಮಾಡುತ್ತಾರೆ. ಇದರ ಪರಿಣಾಮ ಭಾಗ್ಯ ಬೇಸರ ಮಾಡಿಕೊಂಡು ಕಣ್ಣೀರಿಡುತ್ತಿದ್ದರು ಸುಮ್ಮನಿರದೆ ಮತ್ತೆ ಜಗಳ ಮಾಡುತ್ತಾರೆ. ನೀವು ಕಣ್ಣೀರಿಟ್ಟು ನಾಟಕ ಮಾಡಬೇಡಿ ನಿಮ್ಮ ಸೀರಿಯಲ್ ಡ್ರಾಮಾ ಇಲ್ಲ ನಡೆಯುವುದಿಲ್ಲ ಎನ್ನುತ್ತಾರೆ ವಿಜಯ್. ಸೀರಿಯಲ್‌ ನಾಟಕ ಡ್ರಾಮಾ ಎಂದು ಹೇಳಬೇಡಿ ನೀವು ಅದರಿಂದ ನಾನು ಅನ್ನ ತಿಂದಿದ್ದೀನಿ ಎನ್ನುತ್ತಾರೆ ಭಾಗ್ಯ. ಆಗ ಸೀರಿಯಲ್ ಒಂದೇ ನನಗೆ ಅನ್ನ ಹಾಕಿಲ್ಲ ಎಂದು ಹೇಳುವ ಮಾತು ಜನರಿಗೆ ದುರಹಂಕಾರ ಅನಿಸುತ್ತದೆ. ಸೀರಿಯಲ್‌ನಲ್ಲಿ ಜನಪ್ರಿಯತೆ ಪಡೆದುಕೊಂಡ ಕಾರಣ ಬಿಗ್ ಬಾಸ್‌ನಲ್ಲಿರುವುದು ಅದನ್ನು ಮರೆತು ಮಾತನಾಡುತ್ತಿರುವುದು ಯಾರಿಗೂ ಇಷ್ಟವಾಗುತ್ತಿಲ್ಲ. ಹಳ್ಳಿ ಟಾಸ್ಕ್‌ನಲ್ಲಿ ವಿನಯ್ ಗೌಡ ಹೆಣ್ಣು ಮಕ್ಕಳ ಜೊತೆ ಮಾತನಾಡುತ್ತಿರುವ ರೀತಿ ಕೂಡ ಸರಿ ಇಲ್ಲ..ಹೋಗೆ ಬಾರೆ ನೀನು ಯಾರೇ...ಹೀಗೆ ಮಾತನಾಡಿಸುತ್ತಿರುವುದು. ಇದೆಲ್ಲಾ ಗಮನಿಸಿರುವ ಜನರು ಸುದೀಪ್ ಯಾಕೆ ವಿನಯ್ ಮಾಡುತ್ತಿರುವ ತಪ್ಪುಗಳನ್ನು ತಪ್ಪು ಎಂದು ಹೇಳುತ್ತಿಲ್ಲ ಎಂದು ಕಾಮೆಂಟ್ಸ್‌ನಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.

 

click me!