ಹೆಣ್ಣು ಮಗುವಿಗೆ ಜನ್ಮ ನೀಡಿದ ನಯನಾ; ನವೆಂಬರ್‌ನಲ್ಲಿ ಹುಟ್ಟಿದ ಕನ್ನಡಾಂಬೆ ಎಂದ ನೆಟ್ಟಿಗರು!

By Vaishnavi Chandrashekar  |  First Published Nov 2, 2023, 11:11 AM IST

ಮನೆ ಮಹಾಲಕ್ಷ್ಮಿ ಬರ ಮಾಡಿಕೊಂಡ ಕಾಮಿಡಿ ಕಿಲಾಡಿಗಳು ನಯನಾ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಹಂಚಿಕೊಂಡ ನಟಿ....


ಜೀ ಕನ್ನಡ ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಮೂಲಕ ಜನಪ್ರಿಯತೆ ಪಡೆದು ಸಾಕಷ್ಟು ಕಾರ್ಯಕ್ರಮಗಳನ್ನು ನೀಡಿ, ಸಿನಿಮಾಗಳಲ್ಲಿ ನಟಿಸಿರುವ ನಯನಾ ನವೆಂಬರ್ 1ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿರುವ ನಟಿ ಪತಿ ಮಗು ಎತ್ತಿಕೊಂಡು ಮುದ್ದಾಡುತ್ತಿರುವ ಫೋಟೋ ಅಪ್ಲೋಡ್ ಮಾಡಿದ್ದಾರೆ. ಕಾಮೆಂಟ್ಸ್‌ನಲ್ಲಿ ನೆಟ್ಟಿಗರು ಮತ್ತು ಸಿನಿ ಸ್ನೇಹಿತರ ಶುಭ ಕೋರುತ್ತಿದ್ದಾರೆ.

'ನನ್ನ ಜೀವನದ ಮುಖ್ಯವಾದ ವ್ಯಕ್ತಿಗಳು ಒಂದೇ ಫ್ರೇಮ್‌ನಲ್ಲಿದ್ದಾರೆ. ಮನೆಗೆ ಸ್ವಾಗತ ನಮ್ಮ ಮುದ್ದಾ ಲಕ್ಷ್ಮಿ' ಎಂದು ನಯನಾ ಬರೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ನಯನಾ ಅವರ ಪತಿ ಮಗುವನ್ನು ಮುದ್ದಾಡುತ್ತಿದ್ದಾರೆ. ಕೈಯಲ್ಲಿ ಕಂದಮ್ಮಾಳನ್ನು ಹಿಡಿದು ನಗುತ್ತಿರುವ ಫೋಟೋ ನೆಟ್ಟಿಗರಿಗೆ ಇಷ್ಟವಾಗಿದೆ. 'ನವೆಂಬರ್‌ನಲ್ಲಿ ಹುಟ್ಟಿದ ಕನ್ನಡಾಂಬೆಗೆ ಶುಭವಾಗಲಿ' ಹಾಗೂ 'ಹೆಣ್ಣು ಮಗು ಬೇಕು ಅನ್ನೋದು ಎಲ್ಲರ ಆಸೆ ಅದರಂತೆ ಲಕ್ಷ್ಮಿ ಬಂದಿದ್ದಾಳೆ' ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Tap to resize

Latest Videos

ನಿಮ್ಮ ತೆವಲಿಗೋಸ್ಕರ ನ್ಯೂಸ್ ಹಾಕ್ಬೇಡಿ; ಆ ಸುದ್ದಿ ಓದಿ ಕಾಮಿಡಿ ಕಿಲಾಡಿಗಳು ನಯನಾ ಗರಂ!

ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ನಿರೂಪಕಿ ಶಾಲಿನಿ ನಯನಾ ಅವರಿಗೆ ಸೀಮಂತ ಮಾಡಿದ್ದರು. ಆಗ ''8 ತಿಂಗಳು ನಡೆಯುತ್ತಿದೆ. ನಮ್ಮ ಫ್ಯಾಮಿಲಿಗೆ ಹೊಸ ವ್ಯಕ್ತಿ ಬರಲಿದ್ದಾರೆ. ನಮ್ಮ ಯಜಮಾನರಿಗೆ ಹೆಣ್ಣು ಮಕ್ಕಳು ತುಂಬಾನೇ ಇಷ್ಟ ಹೀಗಾಗಿ ಮೊದಲು ಮನೆಗೆ ಲಕ್ಷ್ಮಿ ಸರಸ್ವತಿ ಬರಲಿ ಎನ್ನುತ್ತಿದ್ದಾರೆ. ಹೆಣ್ಣು ಮಗು ಹುಟ್ಟರೆ ಕಲಾ ಸರಸ್ವತಿ ಬರಲಿ ಗಂಡು ಹುಟ್ಟಿದರೆ ದೇಶಕ್ಕೊಬ್ಬ ಸೈನಿಕ ಬರಲಿ. ಪ್ರೆಗ್ನೆನ್ಸಿ ಸಮಯದಲ್ಲಿ ಹಾಡುಗಳು ಮತ್ತು ಕವನಗಳ ಮೇಲೆ ಒಲವು ಹೆಚ್ಚಾಗಿದೆ.ಅಚ್ಯುತಮ್ ಕೇಶವಂ ಕೃಷ್ಣ ದಾಮೋದರಂ ಹಾಡು ಹೇಳಿ ಮಗುವನ್ನು ಮಲಗಿಸಬೇಕು ಅಂದುಕೊಂಡಿರುವೆ' ಕಾಮಿಡಿ ಕಿಲಾಡಿಗಳು ನಯನಾ ಹೇಳಿದ್ದರು.

 

click me!