ಬಿಗ್ ಬಾಸ್ ಸೀಸನ್ 11ರಲ್ಲಿ ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ರಾತ್ರಿಯಿಡೀ ಮಾತನಾಡಿ, ಮರುದಿನ ಜಗಳವಾಡಿದ್ದಾರೆ. ಒಂದು ಟಾಸ್ಕ್‌ನಲ್ಲಿ ತ್ರಿವಿಕ್ರಮ್ ಸೋತು ಭವ್ಯಾ ಗೆದ್ದ ನಂತರ, ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ.
ಬೆಂಗಳೂರು (ಜ.13): ಬಿಗ್ ಬಾಸ್ ಸೀಸನ್ 11ರ ಕ್ಯೂಟ್ ಜೋಡಿಗಳಲ್ಲಿ ಒಂದಾಗಿರುವ ನಟ ತ್ರಿವಿಕ್ರಮ್ ಹಾಗೂ ನಟಿ ಭವ್ಯಾ ಗೌಡ ಅವರು 105 ದಿನಗಳ ಕಾಲ ಒಟ್ಟಿಗೆ ಕಳೆದಿದ್ದಾರೆ. ಇದೀಗ ಫಿನಾಲೆಗೆ ಎರಡು ವಾರಗಳು ಮಾತ್ರ ಬಾಕಿ ಇರುವಾಗ ತಮ್ಮ ವರಸೆಯನ್ನು ಬದಲಿಸಿಕೊಂಡಿದ್ದಾರೆ. ಪದೇ ಪದೆ ಭವ್ಯಾಳನ್ನು ಹೀಗಳೆಯುತ್ತಿದ್ದ ತ್ರಿವಿಕ್ರಮ್ ವಿರುದ್ಧ ಕೋಪ ಮಾಡಿಕೊಂಡಿದ್ದಾರೆ. ಮುಂದುವರೆರು ಭವ್ಯಾಳ ಬಳಿ ತ್ರವಿಕ್ರಮ್ ಬಂದಾ 'ಮೈಂಡ್ ಯುವರ್ ಓನ್ ಲಾಂಗ್ವೇಜ್' (mind your own Language) ಎಂದು ಖಡಕ್ ಆಗಿ ತಿರುಗೇಟು ಕೊಟ್ಟಿದ್ದಾಳೆ. ಹೂವು-ದುಂಬಿಯ ಹಾಗೆ ಅಂಟಿಕೊಡಿದ್ದ ಇಬ್ಬರ ನಡುವೆ ಜಗಳ ಆರಂಭವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಕಿಚ್ಚ ಸುದೀಪ ಶನಿವಾರದ ಪಂಚಾಯಿತಿಯ ಹಿಂದಿನ ದಿನ ಟಾಸ್ಕ್ ಮುಗಿಸಿ ರಾತ್ರಿ ಎಲ್ಲರೂ ಮಲಗಿದ್ದಾರೆ. ಆದರೆ, ತ್ರಿವಿಕ್ರಮ್ ಮತ್ತು ಭವ್ಯಾಗೌಡ ರಾತ್ರಿಯಿಡೀ ಮಲಗದೇ ಒಟ್ಟಿಗೆ ಕುಳಿತುಕೊಂಡು ಬೆಳಗ್ಗೆ 4.40ರವರೆಗೆ ಮಾತನಾಡಿದ್ದಾರೆ. ಇದಾದ ನಂತರ ಮರುದಿನ ಕಿಚ್ಚನ ಪಂಚಾಯಿತಿ ವೇಳೆ ಇಬ್ಬರಿಗೊಬ್ಬರು ಹಾವು-ಮುಂಗುಸಿ ತರಹ ಕಿತ್ತಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಆರೋಪ, ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಇದಾದ ನಂತರ ನಡೆಸಲಾದ ಒಂದು ಟಾಸ್ಕ್‌ನಲ್ಲಿ ಇಬ್ಬರೂ ತೊಡೆ ತಟ್ಟಿ ಸವಾಲನ್ನು ಎಸೆದುಕೊಂಡಿದ್ದರು.
ಇದೀಗ ಕಿಚ್ಚನ ವಾರದ ಪಂಚಾಯಿತಿ ಮುಕ್ತಾಯಗೊಂಡು ಟಾಸ್ಕ್ ಆರಂಬವಾಗುವ ಮುನ್ನವೇ ಇಬ್ಬರ ಜಗಳ ತಾರಕಕ್ಕೇರುವ ಲಕ್ಷಣಗಳು ಕಂಡುಬರುತ್ತಿವೆ. ತ್ರಿವಿಕ್ರಮ್ ಮತ್ತು ಭವ್ಯಾ ಗೌಡ ಅವರಿಗೆ ಒಂದು ಟಾಸ್ಕ್ ಕೊಟ್ಟಿರುತ್ತಾರೆ. ಅದರಲ್ಲಿ ತ್ರಿವಿಕ್ರಮ್ ಸೋತು ಭವ್ಯಾ ಗೆಲುವು ಸಾಧಿಸುತ್ತಾರೆ. ಇದರ ಬಗ್ಗೆ ಭವ್ಯಾ ಜೊತೆಗೆ ಮಾತನಾಡಿದ ತ್ರಿವಿಕ್ರಮ್ ನಾನು ಸೋತಿದ್ದಕ್ಕೆ ನಿನ್ನ ಮುಖ ಹೇಗಾಗಿತ್ತು ನಾನು ನೋಡಿದೆ ಎಂದಿದ್ದಾರೆ. ಆಗ ನಿಮ್ಮ ಕಾರಣ ಇಟ್ಟುಕೊಂಡು ನಾನ್ಯಾಕೆ ಬೇಜಾರು ಮಾಡಿಕೊಳ್ಳಬೇಕು ಎಂದು ಭವ್ಯಾ ಜೋರು ಧ್ವನಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ. ನೀವು ಸ್ಪೋರ್ಟಿವ್ ಎಂದು ಹೇಳುತ್ತೀರಲ್ಲ, ಅದು ಈಗ ಕಾಣಿಸುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಬಿಗ್ಬಾಸ್ 11ರ ವಿನ್ನರ್ ಘೋಷಿಸಿದ ವಿಕಿಪಿಡಿಯಾ: ಅಭಿಮಾನಿಗಳ ಸಂಭ್ರಮಾಚರಣೆ- ಆದದ್ದೇನು?
ಅಲ್ಲಿಂದ ಹೊರಟು ರಜತ್ ಬಳಿಗೆ ಹೋಗುವ ತ್ರಿವಿಕ್ರಮ್ ಭವ್ಯಾಳ ಬಗ್ಗೆ ಮಾತನಾಡುತ್ತಾ ಏನ್ ಆಟ ಆಡ್ತಾರೆ ಜನಾ... ಎಂದು ಮಾತನಾಡಿಕೊಳ್ಳುತ್ತಾ ಹೋಗುತ್ತಿರುತ್ತಾರೆ. ಆಗ ಅದನ್ನು ಕೇಳಿಸಿಕೊಂಡ ಭವ್ಯಾ ಗೌಡ ನೇರವಾಗಿ ತ್ರಿವಿಕ್ರಮ್‌ಗೆ ಮೈಂಡ್ ಯುವರ್ ಲಾಂಗ್ವೇಜ್ ತ್ರಿವಿಕ್ರಮ್ ಎಂದು ಖಡಕ್ ಆಗಿ ಹೇಳಿದ್ದಾರೆ. ಆಗ ಒಂದು ಹುಡುಗಿಯ ಬಳಿ ಬೈಸಿಕೊಂಡಿದ್ದಕ್ಕೆ ಕೋಪಗೊಂಡ ತ್ರಿವಿಕ್ರಮ್ ನಾನು ನಿನ್ನ ಬಗ್ಗೆ ಮಾತನಾಡುತ್ತಿಲ್ಲ ಭವ್ಯಾ ಎಂದು ಬೆರಳು ತೋರಿಸಿ ಜೋರು ಧ್ವನಿಯಲ್ಲಿ ಹೇಳುತ್ತಾರೆ. ಆಗ ಇಬ್ಬರೂ ಒಬ್ಬರಿಗೊಬ್ಬರು ಮುಖ ಸಿಂಡರಿಸಿಕೊಂಡು ದೂರ ದೂರ ಹೋಗುತ್ತಾರೆ.
ಸೆಮಿ-ಫಿನಾಲೆ ಅಖಾಡದಲ್ಲಿ ದೋಸ್ತಿಗಳು ದೂರ ದೂರ!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 pic.twitter.com/AyGItuMrd2
ತ್ರಿವಿಕ್ರಮ್-ಭವ್ಯಾ ಜೋಡಿಗೆ ಬೆಂಕಿ ಹಚ್ಚಿದ ಟಾಸ್ಕ್ ಯಾವುದು?
ಸೂಪರ್ ಸಂಡೇ ವಿತ್ ಕಿಚ್ಚ ಸುದೀಪ್ ಕಾರ್ಯಕ್ರಮದಲ್ಲಿ ಟಾಸ್ಕ್ ನೀಡಿದ ಸುದೀಪ ಅವರು ಎಲ್ಲರಿಗೂ 'ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಗೆಲುವಿಗೆ ಯಾರು ಅಡ್ಡಿಯಾಗಿದ್ದಾರೆ ಅವರನ್ನು ತೋರಿಸಿ ಅವರ ಮುಖಕ್ಕೆ ಬಣ್ಣ ಎರಚಿ' ಎಂದು ಹೇಳುತ್ತಾರೆ. ಆಗ ಭವ್ಯಾ ಗೌಡ ನನಗೆ ತ್ರಿವಿಕ್ರಮ್ ಗೆಲ್ಲುವುದಕ್ಕೆ ಅಡ್ಡಿ ಆಗಿದ್ದಾನೆ ಎಂದು ಹೇಳುತ್ತಾರೆ. ತ್ರಿವಿಕ್ರಮ್‌ನ ಸ್ಟ್ರಾಟರ್ಜಿ ಹಾಗೂ ಅವರು ಮಾತನಾಡುವ ಮಾತುಗಳು ನನ್ನ ಆಟಕ್ಕೆ ತೊಂದರೆ ಉಂಟಾಗಿ ಅವರು ಮುಂದಕ್ಕೆ ಹೋಗುತ್ತಿದ್ದಾರೆ ಎಂಬಂತೆ ಕಾಣುತ್ತಿದೆ ಎಂದು ಭವ್ಯಾ ಹೇಳುತ್ತಾರೆ. ಇದಕ್ಕೆ ತಿರುಗೇಟು ನೀಡುವ ತ್ರಿವಿಕ್ರಮ್ ಈಗ ಮಾರಿ ಹಬ್ಬ ಶುರುವಾಗಿದೆ ಅಣ್ಣಾ.. ಅದರ ಬಣ್ಣ ನನ್ನ ಮುಖದಲ್ಲಿ ಕಾಣುತ್ತಿದೆ ಎಂದು ಹೇಳುತ್ತಾರೆ.
ಇದನ್ನೂ ಓದಿ: ಕಿಚ್ಚ ಸುದೀಪ್, ಬಿಗ್ ಬಾಸ್ ವೀಕ್ಷಕರನ್ನು ಬಕ್ರಾ ಮಾಡ್ತಿದ್ದಾರಾ ಭವ್ಯಾ ಗೌಡ ಮತ್ತು ತ್ರಿವಿಕ್ರಮ್ ಜೋಡಿ?