ರಕ್ತದಲ್ಲಿ ಲವ್ ಲೆಟರ್​ ಕೊಟ್ಟ ಟೀಚರ್: ಮದ್ವೆ ಬೇಡ ಅಂದಿದ್ದಕ್ಕೆ ಆ್ಯಸಿಡ್​ ಪ್ಲ್ಯಾನ್​! ಲಕ್ಷ್ಮೀ ಬಾರಮ್ಮ ನಟಿ ಕಥೆ ಕೇಳಿ

By Suchethana D  |  First Published Jan 13, 2025, 2:57 PM IST

ಹೈಸ್ಕೂಲ್​ನಲ್ಲಿದ್ದಾಗ ಟೀಚರ್​ ಲವ್​ ಮಾಡಿದ್ದು, ಕೊನೆಗೆ ಜೀವನದಲದಲ್ಲಿ ನಡೆದ ಕರಾಳ ಘಟನೆಗಳ ಬಗ್ಗೆ ವಿವರಿಸಿದ್ದಾರೆ ಲಕ್ಷ್ಮೀ ಬಾರಮ್ಮ ವಿಲನ್​ ಕುಮುದಾ
 


ಲಕ್ಷ್ಮೀ ಬಾರಮ್ಮ ಸೇರಿದಂತೆ 50ಕ್ಕೂ ಅಧಿಕ ಸೀರಿಯಲ್​ಗಳಲ್ಲಿ ನಟಿಸಿ, ಸುಮಾರು ಎಂಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರೊ ನಟಿ ಅನಿಕಾ ಸಿಂಧ್ಯ. ಯಾಹೂ, ಜೊತೆಜೊತೆಯಲಿ, ನೆನಪಿರಲಿ ಮುಂತಾದ ಹಿಟ್​ ಸಿನಿಮಾಗಳನ್ನು ನೀಡಿದ್ದರೂ, ನನ್ನಂಥವಳಿಗೆ ಸಿನಿಮಾ ಇಂಡಸ್ಟ್ರಿ ಉಸಾಬರಿಯೇ ಬೇಡ ಎಂದುಕೊಂಡು ಸಿನಿಮಾದಿಂದ ಹೊರಕ್ಕೆ ಬಂದು ಸೀರಿಯಲ್​ಗಳಲ್ಲಿಯೇ ಮಿಂಚುತ್ತಿರುವ ಅನಿಕಾ ಅವರು ಸೀರಿಯಲ್​ ಪ್ರೇಮಿಗಳ ಫೆವರೆಟ್​ ವಿಲನ್​ ಕೂಡ ಹೌದು. ಏಕೆಂದರೆ ಈಗ ನಟಿಸಿರುವ ಹಲವಾರು ಸೀರಿಯಲ್​ಗಳಲ್ಲಿ ಇವರದ್ದು ನೆಗೆಟಿವ್​ ರೋಲ್​ಗಳೇ. ಒಂದು ನೆಗೆಟಿವ್​ ರೋಲ್​ ಹಿಟ್​ ಆಯಿತು ಎಂದಾಕ್ಷಣ ಸಹಜವಾಗಿ ಅದೇ ರೋಲ್​ಗಳು ನಟ-ನಟಿಯರನ್ನು ಹುಡುಕಿ ಬರುವುದು ಇದೆ. ಅವರಿಗೆ ಇಷ್ಟ ಇರಲಿ, ಇಲ್ಲದೇ ಇರಲಿ, ಇಂಥ ರೋಲ್​ ಮಾಡುವುದು ಅನಿವಾರ್ಯ ಎನ್ನುವ ಸನ್ನಿವೇಶವೂ ಎದುರಾಗಿಬಿಡುತ್ತದೆ. ಅಂಥವರಲ್ಲಿ ಒಬ್ಬರು ಅನಿಕಾ.

ಕಾದಂಬರಿ ಸೀಡಿಯಲ್​ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದ ನಟಿ, ಹೆಚ್ಚಾಗಿ ಕಾಣಿಸಿಕೊಂಡದ್ದು  ನೆಗೆಟಿವ್ ಪಾತ್ರಗಳಲ್ಲಿ.  ಡಾಕ್ಟರ್ ಆಗಬೇಕೆಂದುಕೊಂಡಿದ್ದ ಅನಿಕಾ ಅವರಿಗೆ ಬಣ್ಣದ ಲೋಕ ಒಲಿದಿದ್ದೂ ಅಚಾನಕ್​ ಆಗಿಯೇ. ಖಳನಾಯಕಿಯಾಗಿಯೇ ಗುರುತಿಸಿಕೊಂಡಿರುವ ಅನಿಕಾ ತಾವು ಯಾವ ರೋಲ್​ಗೂ ಇದುವರೆಗೆ  ಆಡಿಶನ್ ಕೊಟ್ಟಿಲ್ಲ ಎಂದು ಈ ಹಿಂದೆ ಹೇಳಿದ್ದರು.  ಮೊದಲೆಲ್ಲಾ ಡೈಲಾಗ್ ಡೆಲಿವರಿ ಬಗ್ಗೆ ನಿರ್ದೇಶಕರು ಗಮನ ಕೊಡುತ್ತಿದ್ದರು. ಈಗ ಆಡಿಷನ್​ ಹೆಚ್ಚಾಗಿ ಮಾಡ್ತಾರೆ ಜೊತೆಗೆ  ಲುಕ್ ಟೆಸ್ಟಿಗೆ ಪ್ರಾಮುಖ್ಯತೆ ಇದೆ. ಆದರೆ ನಾನು ಶುರು ಮಾಡಿದಾಗ ಹೀಗೆಲ್ಲಾ ಇರಲಿಲ್ಲ ಎಂದು ನಟಿ ಹೇಳಿದ್ದಾರೆ.  ಆಕಾಶದೀಪ, ಗುಪ್ತಗಾಮಿನಿ, ಕುಂಕುಮಭಾಗ್ಯ, ಕಂಕಣ, ನನ್ನವಳು,  ಆಕಾಶದೀಪ, ಸುಕನ್ಯಾ, ಮನೆಮಗಳು, ಶುಭಮಂಗಳ, ಮಂದಾರ, ಸೂರ್ಯಕಾಂತಿ, ಲಕ್ಷ್ಮಿ ಬಾರಮ್ಮ ಹೀಗೆ ಮೂವತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.ಲಕ್ಷ್ಮಿ ಬಾರಮ್ಮ ಸೀರಿಯಲ್​ನಲ್ಲಿ ವಿಲನ್​ ಕುಮುದಾ ರೋಲ್​ ಸಕತ್​ ಹೆಸರು ತಂದುಕೊಟ್ಟಿತು.

Tap to resize

Latest Videos

ನನಗೂ ದರ್ಶನ್​ ಅಂಥ ಗಂಡನೇ ಸಿಗ್ಬೇಕು ಎನ್ನೋ ಆಸೆ ತುಂಬಾ ಇತ್ತು: ನಟಿ ಅನಿಕಾ

ಇದೀಗ ನಟಿ, ತಮ್ಮ ಜೀವನದ ಕರಾಳ ಘಟನೆಯನ್ನು ತೆರೆದಿಟ್ಟಿದ್ದಾರೆ. ರಾಜೇಶ್​ ಗೌಡ ಅವರ ಯುಟ್ಯೂಬ್​ ಚಾನೆಲ್​ಗೆ ನೀಡಿರುವ ಸಂದರ್ಶನದಲ್ಲಿ ಹೈಸ್ಕೂಲ್​ನಲ್ಲಿ ಇದ್ದಾಗಲೇ ಟೀಚರ್​ ಒಬ್ಬರು ತಮ್ಮನ್ನು ಪ್ರೀತಿಸಿ, ಲವ್​ ಪ್ರಪೋಸಲ್​ ಮಾಡಿರುವ ಘಟನೆಯನ್ನು ನೆನಪಿಸಿಕೊಂಡಿದ್ದಾರೆ. ರಕ್ತದಲ್ಲಿಯೇ ಲವ್​ ಲೆಟರ್​ ಕೊಟ್ಟು ಕೊಡಬಾರದ ತೊಂದರೆಯನ್ನು ಕೊಟ್ಟರು ಎಂದು ಹೇಳಿದ್ದಾರೆ. ಆಗ ನನಗೆ ಲವ್​-ಗಿವ್​ ಏನೂ ಗೊತ್ತಿರಲಿಲ್ಲ. ಪ್ರೀತಿ ಮಾಡಿದ್ದು ಅವರ ತಪ್ಪು ಅಂತ ಹೇಳಲ್ಲ. ಆದರೆ ಯಾರ ಜೊತೆ ಲವ್​  ಮಾಡ್ತೇನೆ ಎಂದು ನೋಡಬೇಕಿತ್ತು. ಇದು ದೊಡ್ಡ ಸುದ್ದಿಯಾಗಿ ಅವರನ್ನು ಶಾಲೆಯಿಂದ ಸಸ್ಪೆಂಡ್​  ಮಾಡಿದರು. ಬಳಿಕ ಅವರು ನನಗೆ ತುಂಬಾ ಟಾರ್ಚರ್​ ಕೊಟ್ಟರು. ಈ ವಿಷಯ ತಿಳಿಯುತ್ತಿದ್ದಂತೆಯೇ, ಕೆಲವು ಹುಡುಗರು ನನ್ನನ್ನು ಹಿಂಬಾಲಿಸಿ ಬಂದರು. ಒಬ್ಬ ಸಿಕ್ಕಾಪಟ್ಟೆ ತೊಂದರೆ ಕೊಟ್ಟ. ಅವನ ವಿರುದ್ಧ ಪೊಲೀಸ್​ ಕಂಪ್ಲೇಂಟ್​ ಕೊಟ್ಟಾಗ ಪೊಲೀಸರು ಆತನನ್ನು ವಿಪರೀತ ಹೊಡೆದು ಬಿಟ್ಟರು, ಬಾಯಲ್ಲೆಲ್ಲಾ  ರಕ್ತ ಬಂದಿತು. ನನಗೆ ತುಂಬಾ ಭಯ ಆಯಿತು ಎಂದಿದ್ದಾರೆ.

ಇದು ನಡೆಯುತ್ತಿರುವಾಗಲೇ ಪರಿಚಯದವರೊಬ್ಬರಿಂದ ಮದುವೆ ಪ್ರಪೋಸಲ್​ ಬಂದಿತು. ನನಗೆ ಆಗ ಇವೆಲ್ಲಾ ಘಟನೆಗಳಿಂದ ಲವ್​ ಪ್ರಪೋಸಲ್​ ಎಂದರೆ ಭಯ ಹುಟ್ಟಲು ಶುರುವಾಗಿತ್ತು. ಇಷ್ಟು ಬೇಗ ಮದುವೆ ಆಗಲ್ಲ ಎಂದುಬಿಟ್ಟೆ. ಕೊನೆಗೆ ಆತ ನನ್ನನ್ನು ಕಿಡ್​ನ್ಯಾಪ್​ ಮಾಡಿ ಆ್ಯಸಿಡ್​ ಹಾಕಲು ಪ್ಲ್ಯಾನ್​ ಮಾಡಿರುವ ವಿಷಯ ಅಜ್ಜಿಯಿಂದ ಗೊತ್ತಾಯ್ತು. ನನ್ನ ಬಾಲ್ಯ ಹೈಸ್ಕೂಲ್​ ಟೀಚರ್​ನಿಂದ ಭಯದಲ್ಲಿಯೇ ಕಳೆದ್ರೆ, ಕಾಲೇಜಿನಲ್ಲಿ ಇರುವಾಗ ಇವೆಲ್ಲಾ ಆಗಿ ಲೈಫ್​ ಹಾಳಾಗೋಯ್ತು. ಕೊನೆಗೆ ಅದೇ ಭಯದಲ್ಲಿ ಮನೆಯನ್ನೇ ಬಿಟ್ಟು ಬೇರೆ ಕಡೆ ಶಿಫ್ಟ್​ ಮಾಡಿಬಿಟ್ವಿ. ಅಲ್ಲಿ ಅಚಾನಕ್​ ಆಗಿ ಕಿರುತೆರೆಗೆ ಅವಕಾಶ ಸಿಕ್ಕಿತು ಎಂದು ನಟಿ ಹೇಳಿದ್ದಾರೆ.

ನಿವೇದಿತಾ ಜೊತೆ ಸಂಬಂಧ ಹೀಗಿತ್ತಾ? ದಾಂಪತ್ಯದ ನೋವು ತೋಡಿಕೊಂಡಿದ್ದ ಚಂದನ್‌ ಶೆಟ್ಟಿ ವಿಡಿಯೋ ವೈರಲ್‌!

click me!