
ಫೈರ್ ಬ್ರ್ಯಾಂಡ್ ಭಾಷಣಗಾರ್ತಿ ಚೈತ್ರಾ ಕುಂದಾಪುರ, ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ದೊಡ್ಡ ಸೆಲೆಬ್ರಿಟಿ ಆಗಿದ್ದಾರೆ. ಇವರು ತಮ್ಮ ಭಾಷಣದ ಮೂಲಕವಷ್ಟೇ ಖ್ಯಾತಿ ಪಡೆದವರು ಅಲ್ಲದೇ, ಹಾಕುವ ಬಟ್ಟೆಯಿಂದಲೂ ಗೌರವ ಉಳಿಸಿಕೊಂಡವರು. ಸದಾ ಮೈತುಂಬಾ ಬಟ್ಟೆ ತೊಡುವ ಚೈತ್ರಾ ಕುಂದಾಪುರ ಬಿಗ್ಬಾಸ್ನಲ್ಲಿ ಕೂಡ ಸೀರೆಯಲ್ಲಿಯೇ ಮಿಂಚಿದವರು. ಕೆಲವೊಮ್ಮೆ ಬಿಗ್ಬಾಸ್ನಲ್ಲಿ ಬೇರೆ ಬಟ್ಟೆ ಹಾಕಿಕೊಳ್ಳಿ ಎಂದು ಹೇಳಿದರೂ ಅದನ್ನು ತಾವು ಕೇಳಲಿಲ್ಲ. ನನಗೆ ಮೈತುಂಬಾ ಬಟ್ಟೆ ಹಾಕುವುದೇ ಕನ್ಫರ್ಟ್ ಎನ್ನಿಸುತ್ತದೆ. ಅದಕ್ಕಾಗಿ ನಾನು ಯಾರೋ ಹೇಳಿದರು ಎಂದು ನನ್ನತನವನ್ನು ಬಿಟ್ಟುಕೊಡುವುದಿಲ್ಲ ಎಂದಿದ್ದಾರೆ ಚೈತ್ರಾ . ಇವರ ಬಟ್ಟೆಯ ಬಗ್ಗೆಯೂ ಬಿಗ್ಬಾಸ್ನಲ್ಲಿ ಇದಾಗಲೇ ಸಾಕಷ್ಟು ಚರ್ಚೆಯಾಗಿದೆ.
ಇದೀಗ ಬಟ್ಟೆ, ಫ್ಯಾಷನ್, ಅರೆಬರೆ ಡ್ರೆಸ್ ಇತ್ಯಾದಿಗಳ ಕುರಿತು ಯೂಟ್ಯೂಬ್ ಒಂದರಲ್ಲಿ ಚೈತ್ರಾ ಕುಂದಾಪುರ ಮಾತನಾಡಿದ್ದಾರೆ. ಸದಾ ಯಾಕೆ ಇಂಥ ಬಟ್ಟೆ ಧರಿಸುತ್ತೀರಿ ಎನ್ನುವ ಪ್ರಶ್ನೆಗೆ ಉತ್ತರವಾಗಿ ಚೈತ್ರಾ ಕುಂದಾಪುರ ಅವರು, ಬಟ್ಟೆ, ಫ್ಯಾಷನ್ ಬಗ್ಗೆ ಬಹಳ ವರ್ಷಗಳಿಂದ ಮಾತನಾಡುತ್ತಾ ಬಂದವಳು ನಾನು. ಪರ-ವಿರೋಧ ಚರ್ಚೆಗಳು ಇದಾಗಲೇ ಸಾಕಷ್ಟು ಆಗಿವೆ. ಯಾರೇ ಧರಿಸುವ ಬಟ್ಟೆಗಳ ಬಗ್ಗೆ ನನಗೆ ತಕರಾರು ಇಲ್ಲ. ಬಟ್ಟೆ ಎನ್ನುವುದು ಅವರವರ ವೈಯಕ್ತಿಯ ವಿಷಯ. ವೈಯಕ್ತಿಯ ಸ್ವಾತಂತ್ರ್ಯದ ಬಗ್ಗೆ ಎಂದಿಗೂ ಅಡ್ಡಿ ಪಡಿಸುವ ಮಾತನಾಡುವವಳಲ್ಲ ನಾನು. ನಿಮ್ಮ ವ್ಯಕ್ತಿತ್ವವನ್ನು ಜನರು ನಿಮ್ಮ ಬಟ್ಟೆ ನೋಡಿ ಅಳೆಯಬೇಕು ಎನ್ನುವ ವಿಚಾರವನ್ನು ಕೂಡ ನಾನು ಖಂಡಿಸುತ್ತಲೇ ಬಂದವಳು ಎಂದಿರುವ ಚೈತ್ರಾ ಇದೇ ವೇಳೆ ಅರೆ ಬರೆ ಡ್ರೆಸ್ ಹಾಕುವವರ ಬಗ್ಗೆ ಮಾತನಾಡಿದ್ದಾರೆ.
ನೋಡಿ, ಯಾರು, ಯಾವುದೇ ರೀತಿಯ ಬಟ್ಟೆ ಹಾಕಬಹುದು. ಅದು ಅವರ ವೈಯಕ್ತಿಯ ವಿಷಯ. ಆದರೆ ನಾನು ಹೇಳುವುದು ಏನೆಂದರೆ, ನೀವು ಹಾಕುವ ಬಟ್ಟೆ ನಿಮಗೆ ಹಾಕಿದ ಮೇಲೆ ಕನ್ಫರ್ಟ್ ಎನ್ನಿಸಬೇಕು ಅಷ್ಟೆ. ನನಗೆ ಮೈತುಂಬಾ ಬಟ್ಟೆ ಇದ್ದರೆ ಕನ್ಫರ್ಟ್ ಎನ್ನಿಸುತ್ತದೆ, ಎಲ್ಲಿಯೂ ಮುಜುಗರ ಎನ್ನಿಸುವುದಿಲ್ಲ. ಆದರೆ ನಾನು ಹಲವರನ್ನು ನೋಡಿದ್ದೇನೆ. ಅರೆಬರೆ ಡ್ರೆಸ್ ಹಾಕಿಕೊಳ್ತಾರೆ, ಅದು ಅನ್ಕಫರ್ಟ್ ಎನಿಸಿ ಮುಚ್ಚಿಕೊಳ್ಳಲು ಏನೇನೋ ಸರ್ಕಸ್ ಮಾಡ್ತಾರೆ. ಮಿಡಿ, ಮಿನಿ ಹಾಕಿಕೊಳ್ತಾರೆ, ಹಾಕಿಕೊಂಡ ಮೇಲೆ ದಿಂಬಿನಿಂದ ಮುಚ್ಚಿಕೊಳ್ತಾರೆ. ಅದೆಲ್ಲಾ ಯಾಕೆ, ನಿಮಗೆ ಯಾವ ಡ್ರೆಸ್ ಮುಜುಗರ ಎನ್ನಿಸ್ತದೆಯೋ ಅದನ್ನು ಹಾಕಿಕೊಳ್ಳಬೇಡಿ ಎನ್ನುವುದು ನನ್ನ ಅನಿಸಿಕೆ. ಯಾವುದೇ ಡ್ರೆಸ್ ಹಾಕಿ, ಅದು ಹಾಕಿದ ಮೇಲೆ ನಿಮಗೇ ಮುಜುಗರ ಅನ್ನಿಸಬಾರದು ಎಂದಿದ್ದಾರೆ.
ಇನ್ನು ಬಟ್ಟೆ ಧರಿಸುವುದು ಅವರು ಬೆಳೆದು ಬಂದಿರುವ ವಾತಾವರಣದ ಮೇಲೆ ಹೋಗುತ್ತದೆ. ಜನರು ನಿಮ್ಮನ್ನು ಹೇಗೆ ನೋಡಬೇಕು ಎಂದು ನೀವು ಬಯಸುತ್ತೀರೋ, ಅಂಥ ಬಟ್ಟೆ ಹಾಕಬೇಕು ಅಷ್ಟೇ. ನಾನು ಬೆಳೆದ ವಾತಾವರಣ ನನ್ನನ್ನು ಈ ರೀತಿಯ ಬಟ್ಟೆ ಹಾಕಲು ಪ್ರೇರೇಪಿಸಿದೆ. ಈ ನೆಲದ ಸಂಸ್ಕೃತಿ, ಮುಂದಿನ ಪೀಳಿಗೆಗೂ ಇದರ ಬಗ್ಗೆ ಹೇಳುತ್ತಲೇ ಇರುವ ನಾನು, ಅದನ್ನು ಗೌರವಿಸುತ್ತೇನೆ, ಆದ್ದರಿಂದ ಇಂಥ ಉಡುಗೆ ತೊಡುತ್ತಿದ್ದೇನೆ ಅಷ್ಟೇ ಎಂದಿದ್ದಾರೆ ಚೈತ್ರಾ ಕುಂದಾಪುರ. ಇದೇ ಕಾರಣಕ್ಕೆ, ನನಗಿಂತ ವಯಸ್ಸಿನಲ್ಲಿ ದೊಡ್ಡವರು ಕೂಡ ನನ್ನನ್ನು ಅಕ್ಕ ಎಂದು ಪ್ರೀತಿಯಿಂದ ಕರೆಯುತ್ತಾರೆ. ಅಷ್ಟು ಗೌರವ, ಮರ್ಯಾದೆ ಉಳಿಸಿಕೊಂಡಿದ್ದೇನೆ ಎಂದಿದ್ದಾರೆ. ಫ್ಯಾಷನ್ ಎನ್ನುವುದು ನೀವು ಕನ್ನಡ ಮುಂದೆ ನಿಂತಾಗ ನಿಮಗೆ ನೀವು ಹೇಗೆ ಕಾಣಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಉಳಿದವರ ಕಣ್ಣಿಗೆ ಹೇಗೆ ಕಾಣಬೇಕು ಎನ್ನುವುದಕ್ಕಾಗಿ ಫ್ಯಾಷನ್ ಮಾಡುವುದಿಲ್ಲ. ಕೆಲವರಿಗೆ ದೊಡ್ಡ ಕುಂಕುಮ ಚೆನ್ನಾಗಿ ಕಾಣಿಸಬಹುದು, ಕೆಲವರಿಗೆ ಕುಂಕುಮ ಇಡದೇ ಚೆನ್ನಾಗಿ ಕಾಣಿಸಬಹುದು. ಅದು ಅವರವರ ವೈಯಕ್ತಿಕ ವಿಷಯ ಅಷ್ಟೇ. ಹೀಗೆಯೇ ಎಂದು ಹೇಳಲಾಗದು. ನಿಮಗೆ ಅದು ಮುಜುಗರ ತರದಿದ್ದರೆ ಸಾಕು ಎಂದಿದ್ದಾರೆ.
ಸಿನಿಮಾಕ್ಕೆ ಚೈತ್ರಾ ಕುಂದಾಪುರ ಎಂಟ್ರಿ? ಶಿವಣ್ಣ ಜೊತೆ ಫಿಲ್ಮ್ ಹೆಸರೂ ಘೋಷಣೆ! ಇಲ್ಲಿದೆ ನೋಡಿ ಡಿಟೇಲ್ಸ್
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.