ಹೇಳಿಕೆ ತಿರುಚಲಾಗುತ್ತಿದೆ ಎನ್ನುತ್ತಲೇ ಗುಡ್‌ ನ್ಯೂಸ್‌ ಕೊಟ್ಟ ಬಿಗ್‌ಬಾಸ್‌ ಬುಲೆಟ್‌ ರಕ್ಷಕ್‌

By Suvarna News  |  First Published Jan 25, 2024, 1:29 PM IST

ಬಿಗ್‌ಬಾಸ್‌ ಬುಲೆಟ್‌ ರಕ್ಷಕ್‌ ಅವರು ಸೋಷಿಯಲ್‌ ಮೀಡಿಯಾದಲ್ಲಿ ಪತ್ರ ಬರೆದಿದ್ದು, ನೋವಿನ ಜೊತೆ ಗುಡ್‌ ನ್ಯೂಸ್‌ ಕೊಟ್ಟಿದ್ದಾರೆ. ಅವರು ಹೇಳಿದ್ದೇನು?
 


ಬಿಗ್‌ಬಾಸ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಯಲ್ಲಿ ಹೆಚ್ಚು ಸದ್ದು ಮಾಡುತ್ತಿದ್ದರೆ, ಬಿಗ್‌ಬಾಸ್‌ನಿಂದ ಹೊರಕ್ಕೆ ಬಂದಿರುವ ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಅವರು ಸಕತ್‌ ಸುದ್ದಿಯಲ್ಲಿದ್ದಾರೆ. ಕೆಲ ದಿನಗಳವರೆಗೆ ಬಿಗ್‌ಬಾಸ್‌ ಮನೆಯಲ್ಲಿದ್ದ ರಕ್ಷಕ್‌ ಅವರು ಕೆಲವೇ ದಿನಗಳಲ್ಲಿ ಹೊರ ಬಂದಿದ್ದರು.  ವಾರ ಬಿಗ್‌ಬಾಸ್ ಮನೆಯಿಂದ ಹೊರಬಂದಿದ್ದಕ್ಕೆ ನನಗೆ ಯಾವ ಬೇಸರವೂ ಇಲ್ಲ. ನಾನೇನೂ ಇಲ್ಲಿ ಕೇಳಿಕೊಂಡು ಬಂದವನಲ್ಲ. ಅವರಾಗೇ ನನ್ನ ಅಪ್ರೋಚ್ ಮಾಡಿದರು. ಒಪ್ಪಿಗೆ ಆಯ್ತು. ಒಳಗಡೆ ಬಂದೆ. ಒಂದು ತಿಂಗಳ ಇರಬೇಕು ಎಂಬ ಆಸೆ ಇತ್ತು. ಆದರೆ ಆ ದೇವರು ಬೇಗ ಹೊರಗೆ ಕಳುಹಿಸಿದ ಎಂದಿದ್ದ ರಕ್ಷಕ್‌ ಆಮೇಲೆ ಒಂದಾದ ಮೇಲೊಂದರಂತೆ ಹೇಳಿಕೆ ನೀಡುವ ಮೂಲಕ ಸಕತ್‌ ಸುದ್ದಿಯಲ್ಲಿದ್ದು, ಸದ್ದು ಮಾಡುತ್ತಿದ್ದಾರೆ. 

ಬಿಗ್ ಬಾಸ್‌ನಿಂದ  ಬಂದ ಹಣದಲ್ಲಿ ಮನೆ ಕಟ್ಟುವುದು ದೂರದ ಮಾತು.  ಒಂದು ಟನ್ ಇಟ್ಟಿಗೆನೂ ಖರೀದಿ ಮಾಡೋಕೆ ಆಗಲ್ಲ ಎಂದು ಹೇಳಿದ್ದರು. ಬಿಗ್‌ಬಾಸ್‌ನಿಂದ ಪಡೆದ ದುಡ್ಡಿನಿಂದ ತಮಗೆ ಅನ್ಯಾಯ ಆಯಿತು ಎನ್ನುವ ರೀತಿಯಲ್ಲಿ ಮಾತನಾಡಿದ್ದ ರಕ್ಷಕ್‌ ಬಗ್ಗೆ ಸುದೀಪ್‌ ಕೂಡ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಆ ಬಳಿಕ ವಾದ- ಪ್ರತಿವಾದ-ವಿರೋಧ ಎಲ್ಲವೂ ನಡೆಯಿತು. ಇವುಗಳ ನಡುವೆಯೇ, ರಕ್ಷಕ್‌ ಅವರು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ಒಂದು ಪೋಸ್ಟ್‌ ಮಾಡುವ ಮೂಲಕ ಮಾನಸಿಕ ಹಿಂಸೆ ನೀಡಬೇಡಿ’ ಎನ್ನುತ್ತಲೇ ಒಂದು ಶುಭ ಸುದ್ದಿಯನ್ನೂ ಶೇರ್‌ ಮಾಡಿಕೊಂಡಿದ್ದಾರೆ. ಪತ್ರದಲ್ಲಿಯ ಅವರು ಕೆಲವೊಂದು ಮಾಹಿತಿಗಳು ಶೇರ್‌ ಮಾಡಿಕೊಂಡಿದ್ದು ಅವರ ಮಾತಿನಲ್ಲಿಯೇ ಇದನ್ನು ಕೇಳಿ.

Tap to resize

Latest Videos

ಉಪವಾಸ, ಡಯೆಟ್‌ ಮಾಡದೇ 17 ದಿನದಲ್ಲಿ 4ಕೆ.ಜಿ. ಕಳಕೊಂಡ ರ್‍ಯಾಪಿಡ್‌ ರಶ್ಮಿ ಟಿಪ್ಸ್‌ ಕೇಳಿ...

ಎಲ್ಲರಿಗೂ ನಮಸ್ಕಾರ. ನಿಮ್ಮ ಹತ್ತಿರ ನಾನು ನನ್ನ ಮನದಾಳದ ಮಾತು ಹಂಚಿಕೊಳ್ಳೋಣ ಅಂತ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ನಾನು ನಟ ಬುಲೆಟ್‌ ಪ್ರಕಾಶ್‌ ಅವರ ಮಗ. ನನ್ನ ತಂದೆ 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಇಡೀ ರಾಜ್ಯದ ಜನತೆ ಅವರನ್ನು ಹರಸಿ ಹಾರೈಸಿ ಅತ್ಯಂತ ಉನ್ನತ ಸ್ಥಾನಕ್ಕೆ ಬೆಳೆಸಿದ್ದಾರೆ. ಅವನ ಮಗನಾಗಿ ಜನಿಸಿರುವುದು ನನ್ನ ಜನ್ಮ ಜನ್ಮದ ಸುಕೃತ. ಇಂದು ಅವರು ನಮ್ಮೊಂದಿಗೆ ಇಲ್ಲದಿದ್ದರೂ. ನನಗೆ ನನ್ನ ತಂದೆ ಇಲ್ಲೇ ನನ್ನ ಜತೆಗೆ ಇದ್ದಾರೆಂದು ಈಗಲೂ ಅನಿಸುತ್ತದೆ. ಅವರಿದ್ದಾಗ ಎಂದೂ ಅವರನ್ನು ಬಿಟ್ಟು ನಾನು ಇರುತ್ತಿರಲಿಲ್ಲ. ಹಾಗಾಗಿ ಅವರಲ್ಲಿನ ನೇರ ನುಡಿಯ ಗುಣ ನನಗೂ ಬಂದಿದೆ. ಕರ್ನಾಟಕದ ಜನತೆ ನನ್ನ ತಂದೆ ಬುಲೆಟ್‌ ಪ್ರಕಾಶ್‌ಗೆ ಕೊಟ್ಟಿರುವ ಪ್ರೀತಿಯನ್ನು ನನಗೂ ಕೊಟ್ಟಿದ್ದಾರೆ. ಇದಕ್ಕೆ ನಾನು ಚಿರಋಣಿ ಎಂದಿದ್ದಾರೆ.
ತಮ್ಮ ಹೇಳಿಕೆಗಳನ್ನು ತಿರುಚಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ರಕ್ಷಕ್‌,  ಇತ್ತೀಚಿನ ದಿನಗಳಲ್ಲಿ ನನ್ನ ಹೇಳಿಕೆಗಳನ್ನು. ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಬಿಡುತ್ತಿದ್ದಾರೆ. ಹಾಗೆ ಮಾಡಿದ್ದರಿಂದ ನನಗೆ ಕೆಲವೊಮ್ಮೆ ಮಾನಸಿಕವಾಗಿ ಹಿಂಸೆಯಾಗುತ್ತಿದೆ. ನಾನು ಯಾರ ಭಾವನೆಗೂ ಧಕ್ಕೆ ತರುವ ಹೇಳಿಕೆಗಳನ್ನಾಗಲಿ ನೀಡಿಲ್ಲ. ಯಾರ ಮನಸ್ಸಿಗೆ ನೋವಾಗುವಂಥ ಹೇಳಿಕೆಗಳನ್ನಾಗಲಿ ನೀಡುವುದನ್ನು ಅಭ್ಯಾಸ ಸಹ ಮಾಡಿಕೊಂಡಿಲ್ಲ. ಎಲ್ಲಿಯೇ ಹೋದರು ರಾಜ್ಯದ ಜನ ನನ್ನನ್ನು ಗುರುತಿಸಿ ಪ್ರೀತಿಸುತ್ತಾರೆ ಎಂದಿದ್ದಾರೆ.  

ಇದರ ಜೊತೆ ಶುಭ ಸುದ್ದಿಯನ್ನೂ ಹಂಚಿಕೊಂಡಿದ್ದಾರೆ ರಕ್ಷಕ್‌. ಇದನ್ನು ಬೋಲ್ಡ್‌ ಲೆಟರ್‌ನಲ್ಲಿ ಬರೆದಿರುವ ಅವರು, ಇದೀಗ ಒಂದು ಶುಭ ಸುದ್ದಿಯೆಂದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಚಿತ್ರಗಳಲ್ಲಿ ನಟಿಸುವ ಅವಕಾಶ ಒದಗಿ ಬಂದಿದೆ. ಈಗಾಗಲೇ ಅದೇ ಕೆಲಸಗಳಲ್ಲಿ ಬಿಜಿಯಾಗಿದ್ದೇನೆ. ಮುಂದಿನ ದಿನಗಳಲ್ಲಿ ನನ್ನ ಪರಿಶ್ರಮದಿಂದ ಚಿತ್ರಗಳ ಮೂಲಕ ರಂಜಿಸಿ ನಿಮ್ಮ ಮನಸ್ಸಿನಲ್ಲಿ ಮನೆ ಮಾಡುತ್ತೇನೆ. ಎಲ್ಲ ಚಿತ್ರರಂಗದ ಹಿರಿಯರು, ನಮ್ಮ ಮಾರ್ಗದರ್ಶಕರು, ಟ್ರೋಲರ್ಸ್‌, ಬ್ಲಾಗರ್ಸ್‌, ಯೂಟ್ಯೂಬರ್‌ಗಳು ನನಗೆ ಸಹಕಾರ ನೀಡಿದ್ದಾರೆ. ಆ ಬೆಂಬಲ ಮುಂದೆಯೂ ಹೀಗೆ ಇರಲಿ. ಆದಷ್ಟು ಬೇಗ ಹೊಸ ಬದಲಾವಣೆಗಳೊಂದಿಗೆ ಹೊಸ ರೀತಿಯಲ್ಲಿ ನಿಮ್ಮ ಮುಂದೆ ಬರಲಿದ್ದೇನೆ. ಹರಸಿ ಹಾರೈಸಿ ಎಂದು ಹೇಳಿದ್ದಾರೆ.  

ಬಿಗ್​ಬಾಸ್​ ಸೀಸನ್​ 7 ಸ್ಪರ್ಧಿಗಳ ಸಮ್ಮಿಲನ ಮಾಡಿದ್ದಾರೆ ನಟಿ ಚೈತ್ರಾ ವಾಸುದೇವನ್!

click me!