ಬಿಗ್​ಬಾಸ್​ ಸೀಸನ್​ 7 ಸ್ಪರ್ಧಿಗಳ ಸಮ್ಮಿಲನ ಮಾಡಿದ್ದಾರೆ ನಟಿ ಚೈತ್ರಾ ವಾಸುದೇವನ್!

Published : Jan 24, 2024, 10:01 PM IST
ಬಿಗ್​ಬಾಸ್​ ಸೀಸನ್​ 7 ಸ್ಪರ್ಧಿಗಳ ಸಮ್ಮಿಲನ ಮಾಡಿದ್ದಾರೆ ನಟಿ ಚೈತ್ರಾ ವಾಸುದೇವನ್!

ಸಾರಾಂಶ

ಬಿಗ್​ಬಾಸ್​ ಸೀಸನ್​ 7 ಸ್ಪರ್ಧಿಗಳ ಜೊತೆ ನಟಿ ಚೈತ್ರಾ ವಾಸುದೇವನ್​ ಚಿಟ್​ಚಾಟ್​ ಮಾಡಿದ್ದು, ಅದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ.   

ಚೈತ್ರಾ ವಾಸುದೇವನ್​ ಬಿಗ್​ಬಾಸ್​ ಪ್ರೇಮಿಗಳಿಗೆ ಚಿರಪರಿಚಿತ ಹೆಸರು. ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಿರೂಪಕಿ ಕೂಡ ಇವರು. ಇವರು ಆಗ್ಗಾಗ್ಗೆ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಜೊತೆ ಸಂಪರ್ಕದಲ್ಲಿರುತ್ತಾರೆ. ಆಗಾಗ್ಗೆ ಹಲವಾರು ಅಪ್​ಡೇಟ್ಸ್​ಗಳನ್ನು ನೀಡುತ್ತಲೇ ಇರುತ್ತಾರೆ. ಕೆಲ ದಿನಗಳ ಹಿಂದೆ Emirates ಫ್ಲೈಟ್​ನ ಬೋಯಿಂಗ್​ ಕ್ಲಾಸ್​-2 ನ ಬಿಜಿನೆಸ್​ ಕ್ಲಾಸ್​ನಲ್ಲಿ ದುಬೈ ಪ್ರಯಾಣಿಸಿದ ಚೈತ್ರಾ (Chaitra Vasudevan) ಅವರು ಇಲ್ಲಿಯ ಲುಕ್​ ಹೇಗಿದೆ ಎಂದು ವಿವರಿಸಿದ್ದರು. ಇದಕ್ಕೂ ಮುನ್ನ ಡಿಪ್ರೆಷನ್​ ಬಗ್ಗೆಯೂ ನಟಿ ಮಾತನಾಡಿದ್ದರು. 
 
ಬಿಗ್​ಬಾಸ್​ ಸೀಸನ್​ 7ರಲ್ಲಿ ಕೆಲ ದಿನಗಳವರೆಗೆ ಬಿಗ್​ಬಾಸ್​ನಲ್ಲಿ ಇದ್ದ ಚೈತ್ರಾ ಈಗ ತಮ್ಮ ಯೂಟ್ಯೂಬ್​ನಲ್ಲಿ ಬಹುತೇಕ ಸ್ಪರ್ಧಿಗಳ ಜೊತೆ ಸಮ್ಮಿಲನ ಆಗಿರುವ ವಿಡಿಯೋ  ಶೇರ್​ ಮಾಡಿಕೊಂಡಿದ್ದಾರೆ. ಇದೇ ವೇಳೆ, ಶೂಟಿಂಗ್ ಸೆಟ್​, ವ್ಯಾನೆಟಿ ವ್ಯಾನ್​, ಅದರಲ್ಲಿ ಇರುವ ಸೌಕರ್ಯಗಳ ಬಗ್ಗೆಯೂ ನಟಿ ವಿಡಿಯೋದಲ್ಲಿ ತೋರಿಸಿದ್ದಾರೆ. 2019ರಲ್ಲಿ ನಡೆದ ಈ ರಿಯಾಲಿಟಿ ಷೋ ಎಂದಿನಂತೆ ಕಿಚ್ಚ ಸುದೀಪ್​ ನಡೆಸಿಕೊಟ್ಟಿದ್ದರು. ಇದರಲ್ಲಿ ಚೈತ್ರಾ ವಾಸುದೇವ್​ ಜೊತೆ ಕುರಿ ಪ್ರತಾಪ್​,  ಪ್ರಿಯಾಂಕಾ (ಕಿರುತೆರೆ ನಟಿ), ರವಿ ಬೆಳಗೆರೆ, ಚಂದನಾ ಅನಂತಕೃಷ್ಣ, ವಾಸುಕಿ ವೈಭವ್, ದೀಪಿಕಾ ದಾಸ್, ಜೈ ಜಗದೀಶ್, ಹಾವೇರಿಯ ಅಗಡಿ ಅಕ್ಕಿ ಮಠದ ಗುರುಲಿಂಗ ಸ್ವಾಮಿ, ಭೂಮಿ ಶೆಟ್ಟಿ, ಡ್ಯಾನ್ಸರ್ ಕಿಶನ್,  ದುನಿಯಾ ರಶ್ಮಿ, ಸುಜಾತಾ ಸತ್ಯನಾರಾಯಣ, ಹಾಸ್ಯ ನಟ ರಾಜು ತಾಳಿಕೋಟೆ, ಚೈತ್ರಾ ಕೋಟೂರ್, ಶೈನ್ ಶೆಟ್ಟಿ ಇದ್ದರು. ಇದರಲ್ಲಿ ಶೈನ್​ ಶೆಟ್ಟಿ ವಿಜೇತರಾಗಿ ಹೊರಹೊಮ್ಮಿದ್ದರು.

ವಿಮಾನದ ಬ್ಯುಸಿನೆಸ್‌​ ಕ್ಲಾಸ್​ ಐಷಾರಾಮಿ ಸೌಲಭ್ಯ ಹೇಗಿರತ್ತೆ ಗೊತ್ತಾ? ಬಿಗ್​ಬಾಸ್​ ಚೈತ್ರಾ ವಾಸುದೇವನ್ ತೋರಿಸಿದ್ದಾರೆ ನೋಡಿ!

ಚೈತ್ರಾ ಅವರು ಕೆಲವೇ ದಿನಗಳು ಇದ್ದರು. ಈ ಎಲ್ಲಾ ಸ್ಪರ್ಧಿಗಳ ಜೊತೆ ಕೆಲವೇ ದಿನಗಳಲ್ಲಿನ ತಮ್ಮ ಒಡನಾಟವನ್ನು ನೆನಪು ಮಾಡಿಕೊಂಡಿರುವ ನಟಿ ಈ ಸ್ಪರ್ಧಿಗಳ ಪೈಕಿ ಕೆಲವರನ್ನು ಭೇಟಿಯಾಗಿ, ಅವರ ಜೊತೆ  ಮಾತುಕತೆ  ನಡೆಸಿದ್ದಾರೆ. ಅದರ ವಿಡಿಯೋ ಶೇರ್​ಮಾಡಿಕೊಂಡಿದ್ದಾರೆ.

ಅಂದಹಾಗೆ ಚೈತ್ರಾ ಅವರು, ಕೆಲ ತಿಂಗಳ ಹಿಂದೆ ಪತಿ ಸತ್ಯ ನಾಯ್ಡು ಅವರಿಂದ ವಿಚ್ಛೇದನ ಪಡೆದಿರುವುದಾಗಿ ಮಾಹಿತಿ ನೀಡಿ ಫ್ಯಾನ್ಸ್​ಗೆ ಶಾಕ್​ ನೀಡಿದ್ದರು.  ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಅವರು ತಿಳಿಸಿರಲಿಲ್ಲ.  ಸಾರ್ವಜನಿಕವಾಗಿ ಒಬ್ಬರನ್ನೊಬ್ಬರು ದೂರಿಕೊಳ್ಳದೇ  ಯಾವುದೇ ವಿವಾದ ಸೃಷ್ಟಿಸಿಕೊಳ್ಳದೇ  ಸೈಲೆಂಟ್ ಆಗಿ ವಿಚ್ಛೇದನ ಘೋಷಿಸಿದ್ದರು. ಅದರ ಬಗ್ಗೆ  ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿದ್ದರು.  ‘ಸತ್ಯ ಮತ್ತು ನಾನು ಬೇರೆಯಾಗಿದ್ದೇವೆ.  ನನ್ನ ಈ ಸ್ಥಿತಿಯಿಂದ ಹೊರಬರಲು ಕಷ್ಟ ಪಡುತ್ತಿದ್ದೇನೆ. ಕೆಲಸ ಮಾತ್ರ ಜೀವನದಲ್ಲಿ ಮುನ್ನಡೆಯಲು ಸಹಾಯ ಮಾಡುತ್ತದೆ.  ನಿಮ್ಮಿಂದ ಹೆಚ್ಚಿನ ಪ್ರೀತಿ ಮತ್ತು ಬೆಂಬಲಕ್ಕಾಗಿ ಎದುರು ನೋಡುತ್ತಿದ್ದೇನೆ’ ಎಂದು ಚೈತ್ರಾ ಬರೆದುಕೊಂಡಿದ್ದರು. 

ಬೆತ್ತಲಾಗಲು ಪೈಪೋಟಿಗೆ ಬಿದ್ದ ನಟಿ ದೀಪಿಕಾಗೆ 'ಫೈಟರ್'​ ಶಾಕ್- ದೇಶಭಕ್ತಿ ಚಿತ್ರಕ್ಕೆ UA ಪ್ರಮಾಣಪತ್ರ!
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಖ್ಯಾತ ಸ್ಟಾರ್ ನಟನಿಗೆ ಬಿಷ್ಟೋಯ್ ಗ್ಯಾಂಗ್ ಬೆದರಿಕೆ! ಆತಂಕದಲ್ಲಿರುವ ಫ್ಯಾನ್ಸ್, ಏನಾಗ್ತಿದೆ ಅಲ್ಲೀಗ?
Bigg Boss: ನಂಗೆ ಮದ್ವೆಯಾದ್ಮೇಲೆ ಮಕ್ಕಳಾಗತ್ತಲ್ವಾ ಎಂದ ರಕ್ಷಿತಾ ಶೆಟ್ಟಿ, ಸೂರಜ್​ ಬಳಿ ಇಂಥ ಪ್ರಶ್ನೆ ಕೇಳೋದಾ?