ಬಿಗ್​ಬಾಸ್​ನಲ್ಲಿ ವಿನ್ನರ್​ ಕೂಡ ಮೊದ್ಲೇ ಫಿಕ್ಸ್​ ಆಗ್ತಿರ್ತಾರಾ? ಟ್ರೋಫಿ ವಿಜೇತ ಹೇಳಿದ್ದೇನು ಕೇಳಿ...

By Suvarna News  |  First Published Jan 29, 2024, 6:05 PM IST

ಬಿಗ್​ಬಾಸ್​ನಲ್ಲಿ ನಡೆಯುವುದು ಎಲ್ಲವೂ ಪೂರ್ವ ನಿಗದಿತ ಎಂಬ ಆರೋಪದ ನಡುವೆಯೇ ವಿನ್ನರ್​ ಕೂಡ ಮೊದ್ಲೇ ಫಿಕ್ಸ್​ ಆಗಿರುತ್ತೆ ಎಂಬ ಆರೋಪ ಬಂದಿದೆ. ಟ್ರೋಫಿ ವಿಜೇತ ಹೇಳಿದ್ದೇನು ಕೇಳಿ...
 


ಇತರ ಕೆಲವು ರಿಯಾಲಿಟಿ ಷೋಗಳಂತೆಯೇ ಬಿಗ್​ಬಾಸ್​ನಲ್ಲಿ ನಡೆಯುವುದೆಲ್ಲವೂ ಬಹುತೇಕ ಸ್ಕ್ರಿಪ್ಟೆಡ್​ ಅಂದರೆ ಮೊದಲೇ ನಿಗದಿಯಾಗಿರುತ್ತದೆ ಎಂದು ಈ ಹಿಂದೆ ಬಿಗ್​ಬಾಸ್​ ಮನೆಯಿಂದ ಹೊರಬಂದಿರುವ ಸ್ಪರ್ಧಿಗಳು ಹೇಳಿದ್ದುಂಟು. ಪ್ರೀತಿ ಪ್ರೇಮ ಎಲ್ಲಾ ಇಲ್ಲದೇ ಹೋದರೆ ಬಿಗ್​ಬಾಸ್​ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವುದು ಸಹಜ ಎನ್ನುವ ಕಾರಣಕ್ಕೆ ಲವ್​, ಜಗಳ, ಒಂದಿಷ್ಟು ವಿವಾದ, ಮನೆಯವರನ್ನು ನೆನೆದು ಕಣ್ಣೀರು ಹಾಕುವುದು... ಎಲ್ಲವನ್ನೂ ಮೊದಲೇ ಸ್ಕ್ರಿಪ್ಟ್​ ಮಾಡಿಕೊಡಲಾಗುತ್ತದೆ. ಅಲ್ಲಿರುವ ಸ್ಪರ್ಧಿಗಳು ಏನಿದ್ದರೂ ಸೂತ್ರಧಾರರು ಅಷ್ಟೇ ಎಂಬ ಆರೋಪವೂ ಇದೆ.  ಆರೋಪಗಳು ಏನೇ ಇರಲಿ, ಅಲ್ಲಿ ನಡೆಯುವುದೆಲ್ಲವೂ ನಿಜ ಎಂದುಕೊಂಡು ನೋಡುವ ಪ್ರೇಕ್ಷಕರು ಒಂದೆಡೆಯಾದರೆ,  ಬೈದುಕೊಳ್ಳುತ್ತಲೇ ಇವುಗಳನ್ನು ಎಂಜಾಯ್​ ಮಾಡುವ ದೊಡ್ಡ ವರ್ಗವೇ ಇದೆ.  ಸಾಮಾಜಿಕ ಜಾಲತಾಣದಲ್ಲಿ ಈ ರಿಯಾಲಿಟಿ ಷೋ ಬಗ್ಗೆ ಅಸಹ್ಯ ಎಂದು ಕಮೆಂಟ್​  ಮಾಡುವವರಿಗೇನೂ ಕಮ್ಮಿ ಇಲ್ಲ. ಇದರ ವಿರುದ್ಧ ದಿನವೂ ಸಾಕಷ್ಟು ಪೋಸ್ಟ್​ಗಳು ಶೇರ್​ ಆಗುತ್ತಲೇ ಇರುತ್ತವೆ. ಇದೊಂದು ಅತ್ಯಂತ ಕಳಪೆ ಷೋ ಎಂದು ಬೈಯುವ ದೊಡ್ಡ ವರ್ಗವೇ ಇದೆ. ಆದರೆ ಅಸಲಿಯತ್ತು ಏನೆಂದರೆ ಖುಷಿಪಡುತ್ತಲೋ, ಬೈದುಕೊಳ್ಳುತ್ತಲೋ, ಹಳಿಯುತ್ತಲೋ ಒಟ್ಟಿನಲ್ಲಿ ಈ ಷೋ ನೋಡುವ ಕಾರಣದಿಂದಲೇ ಎಲ್ಲಾ ಭಾಷೆಗಳ ಬಿಗ್​ಬಾಸ್​ ಸದಾ ಟಿಆರ್​ಪಿ ಕಾಯ್ದುಕೊಳ್ಳುತ್ತಲೇ ಇದೆ.

ಇದೀಗ ಹಿಂದಿ ಮತ್ತು ಕನ್ನಡ ಬಿಗ್​ಬಾಸ್​ನ ಗ್ರ್ಯಾಂಡ್​​ ಫಿನಾಲೆ ಮುಗಿದಿದೆ. ಕನ್ನಡದಲ್ಲಿ ಕಾರ್ತಿಕ್​ ವಿನ್ನರ್​ ಆಗಿದ್ದರೆ, ಬಿಗ್​ಬಾಸ್​ ಹಿಂದಿ ಸೀಸನ್​ 17ನಲ್ಲಿ ಮುನಾವರ್​ ಫಾರೂಖಿ ವಿಜೇತ ಎಂದು ಘೋಷಿಸಿಯಾಗಿದೆ. ಇವರಿಬ್ಬರೂ ಒಂದೇ ದಿನ ನಿನ್ನೆ ಟ್ರೋಫಿಯ ಜೊತೆಗೆ ಬೃಹತ್​ ಮೊತ್ತವನ್ನೂ ಪಡೆದುಕೊಂಡರು. ಇದರ ನಡುವೆಯೇ ಹಿಂದಿ ಬಿಗ್​ಬಾಸ್​ನಲ್ಲಿ ಮುನಾವರ್​ ಫಾರೂಖಿ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ಅದೇನೆಂದರೆ ಇವರ ಆಯ್ಕೆ ಕೂಡ ಪೂರ್ವ ನಿಯೋಜಿತವೆಂದು. ಇಂಥವರನ್ನೇ ಆಯ್ಕೆ ಮಾಡಬೇಕು ಎಂದು ಮೊದಲೇ ಬಿಗ್​ಬಾಸ್​ ಷೋನಲ್ಲಿ ನಿಗದಿ ಮಾಡಿರಲಾಗುತ್ತದೆ. ಉಳಿದದ್ದೆಲ್ಲವೂ ಡ್ರಾಮಾ ಅಷ್ಟೇ ಎಂದು ಸೋಷಿಯಲ್​ ಮೀಡಿಯಾದಲ್ಲಿ ಗಂಭೀರ ಆರೋಪ ಮಾಡಲಾಗುತ್ತಿದ್ದು, ಮುನಾವರ್​ ಆಯ್ಕೆ ಕುರಿತು ಭಾರಿ ಅಸಮಾಧಾನ ಉಂಟಾಗಿದೆ.

Tap to resize

Latest Videos

ಅಂದು ವರುಣ್​, ಇಂದು ರಣಬೀರ್​: ರಶ್ಮಿಕಾಗೂ ಚಪ್ಪಲಿ ತೆಗೆಸಿದ ನಟ- ಸಂಸ್ಕಾರವಂತ ಪುರುಷರು ಎಂದ ಫ್ಯಾನ್ಸ್​!

ಇದಕ್ಕೆ ಈಗ ಖುದ್ದು ಮುನಾವರ್​ ಫಾರೂಖಿ ಉತ್ತರ ನೀಡಿದ್ದಾರೆ. ‘ಇ-ಟೈಮ್ಸ್​’ಗೆ ನೀಡಿದ ಸಂದರ್ಶನದಲ್ಲಿ ಅವರು ಆರೋಪದ ಕುರಿತು ಮಾತನಾಡಿದ್ದಾರೆ. ನನ್ನ ವಿರುದ್ಧ ಗಂಭೀರ ಆರೋಪಗಳು ಕೇಳಿಬಂದಿದೆ. ಬಿಗ್​ಬಾಸ್​ನಲ್ಲಿ ವಿನ್ನರ್​ ಮೊದಲೇ ಫಿಕ್ಸ್​ ಮಾಡಲಾಗುತ್ತದೆ ಎಂಬ ಆರೋಪವಿದೆ. ವೀಕ್ಷಕರ ವೋಟಿಂಗ್​ ಬಗ್ಗೆ ಹೇಳುವುದೂ ಸುಳ್ಳು, ಎಲ್ಲವೂ ಫಿಕ್ಸ್​ ಆಗಿರುತ್ತದೆ ಎಂದೂ ಹಲವರು ಆರೋಪ ಮಾಡುತ್ತಾರೆ. ಇಂಥ ಆರೋಪ ಸಾಮಾನ್ಯ ಎಂದಿರುವ ಮುನಾವರ್​,  ‘ನಾನು ಫಿಕ್ಸಿಂಗ್​ ವಿನ್ನರ್​ ಆಗಿದ್ದಿದ್ದರೆ ಫಿನಾಲೆಯವರೆಗೆ ಬಂದು ಕಪ್​ ಗೆಲ್ಲಲು ಇಷ್ಟೆಲ್ಲ ಕಷ್ಟ ಅನುಭವಿಸಬೇಕಿರಲಿಲ್ಲ. ಎಲ್ಲವೂ  ಸುಲಭವಾಗಿ ಸಿಗುತ್ತಿತ್ತಲ್ಲವೇ ಎಂದು ಪ್ರಶ್ನಿಸಿದ್ದಾರೆ.  ಇಡೀ ಸೀಸನ್​ನಲ್ಲಿ ನಾನು ಕಷ್ಟಪಟ್ಟಿದ್ದೇನೆ. ನನ್ನನ್ನು ಫಿಕ್ಸ್ಡ್​ ವಿನ್ನರ್​ ಎಂದು ಕರೆಯುವವರು ಕುಳಿತುಕೊಂಡು ಪೂರ್ತಿ ಸೀಸನ್​ನ ಸಂಚಿಕೆಗಳನ್ನು ನೋಡಲಿ. ಫಿಕ್ಸಿಂಗ್​ ಅಲ್ಲ ಎಂಬುದು ಆಗ ಗೊತ್ತಾಗುತ್ತದೆ’ ಎಂದು ಮುನಾವರ್ ಸವಾಲು ಹಾಕಿದ್ದಾರೆ. 

​ ಜನರು ನನಗೆ ತುಂಬಾ ಪ್ರೀತಿ ಕೊಟ್ಟಿದ್ದಾರೆ. ಜನರ ಪ್ರೀತಿಯನ್ನು ನಾನು ಬದಲಾಯಿಸಲು ಸಾಧ್ಯವಿಲ್ಲ.  ಯಾರಿಗೆ ನಾನು ಫಿಕ್ಸ್ಡ್​ ವಿನ್ನರ್​ ಎಂದು ಅನ್ನಿಸುತ್ತದೆಯೋ ಅವರು ಜನರು ನನ್ನ ಮೇಲಿಟ್ಟಿರುವ ಪ್ರೀತಿ ನೋಡಲಿ.  ಬಿಗ್​ ಬಾಸ್​ಗೆ ಹೋಗುವುದಕ್ಕೂ ಮುನ್ನ ನಾನು ಜನರ ಅಭಿಪ್ರಾಯ ಬದಲಾಯಿಸಲು ಪ್ರಯತ್ನಿಸುತ್ತಿದ್ದೆ. ಆದರೆ ಈಗ ಎಲ್ಲರನ್ನೂ ಬದಲಾಯಿಸಲು ಆಗಲ್ಲ ಎಂಬುದು ನನಗೆ ಗೊತ್ತಾಗಿದೆ ಎಂದು ಮುನಾವರ್​ ಫಾರೂಖಿ ಹೇಳಿದ್ದಾರೆ. ಅಷ್ಟಕ್ಕೂ ವಿಶೇಷ ಎಂದರೆ ಮುನಾವರ್​ ಅವರು  ಸ್ಟ್ಯಾಂಡಪ್​ ಕಾಮಿಡಿನ್ ಆಗಿದ್ದಾರೆ. ಅವರು ಈ ಹಿಂದೆ ಒಮ್ಮೆ  ಸಲ್ಮಾನ್​ ಖಾನ್​ ಅವರನ್ನು  ಟ್ರೋಲ್ ಮಾಡಿದ್ದರು. ಹಾಗಿದ್ದರೂ ಮುನಾವರ್​  ಗೆದ್ದಿರುವ ಬಗ್ಗೆ ಚರ್ಚೆಯೂ ಶುರುವಾಗಿದೆ. 

30ನೇ ವಯಸ್ಸಲ್ಲೇ ಇಬ್ಬರು ಮಕ್ಕಳ ಅಮ್ಮ ಆಗಬಯಸಿದ್ದ ಸಾಯಿ ಪಲ್ಲವಿ ಇನ್ನೂ ಮದ್ವೆ ಯಾಕಾಗಿಲ್ಲ? ಇಲ್ಲಿದೆ ಕಾರಣ...

click me!