ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗೋಕೆ ದಿನಗಣನೆ ಶುರುವಾಗಿದೆ. ಕಿಚ್ಚ ಸುದೀಪ್ ಪ್ರೆಸ್ ಮೀಟ್ ಮಾಡಿ ಸಾಕಷ್ಟು ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ವೇಳೆ ರಿಪೋರ್ಟರ್ ಹಾಗೂ ಸುದೀಪ್ ಮಧ್ಯೆ ನಡೆದ ಬಾಳೆ ಎಲೆ ಮಾತೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಿಗ್ ಬಾಸ್ ಸೀಸನ್ 11ರ (Bigg Boss Kannada 11 ) ಬಿಗ್ ಓಪನಿಂಗ್ ಗೆ ಸಿದ್ಧತೆ ಜೋರಾಗಿ ನಡೆದಿದೆ. ಅಭಿನಯ ಚಕ್ರವರ್ತಿ ಸುದೀಪ್ (abhinaya chakravarthy Sudeep) ನಿರೂಪಣೆಯಲ್ಲಿ ನಡೆಯುವ ಬಿಗ್ ಬಾಸ್ ಈ ಬಾರಿ ಸಂಪೂರ್ಣ ಡೆಫರೆಂಟ್ ಆಗಿ ಬರ್ತಿದೆ. ನಿನ್ನೆ ಕಿಚ್ಚ ಸುದೀಪ್ ಆಂಡ್ ಟೀಂ ಪ್ರೆಸ್ ಮೀಟ್ (press meet) ಮಾಡಿ, ಬಿಗ್ ಬಾಸ್ ಗೆ ಸಂಬಂಧಿಸಿದ ಕೆಲ ವಿಷ್ಯಗಳನ್ನು ಬಹಿರಂಗಪಡಿಸಿದೆ. ರಿಪೋರ್ಟರ್ಸ್ ಅನೇಕ ಪ್ರಶ್ನೆಗಳಿಗೆ ಉತ್ತರ ನೀಡಿದ ಸುದೀಪ್, ಡ್ರೆಸ್ ಬಗ್ಗೆ ರಿಪೋರ್ಟರ್ ಕೇಳಿದ ಪ್ರಶ್ನೆಗೆ ಫನ್ನಿಯಾಗಿ ಉತ್ತರ ನೀಡಿದ್ದಾರೆ. ಆದ್ರೆ ಅದಕ್ಕೆ ರಿಪೋರ್ಟರ್ ನೀಡಿದ ಕೌಂಟರ್, ಸುದೀಪ್ ಮುಖದಲ್ಲಿ ನಗುತರಿಸಿದೆ.
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋವನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕೀರ್ತಿ ಸುದೀಪ್ ಗೆ ಸಲ್ಲುತ್ತದೆ. ಸುದೀಪ್ ನಿರೂಪಣೆ ಇಲ್ಲ ಅಂದ್ರೆ ಬಿಗ್ ಬಾಸ್ ಇಲ್ವೇ ಇಲ್ಲ ಎನ್ನುವ ಫ್ಯಾನ್ಸ್, ಕಿಚ್ಚನ ಪಂಚಾಯ್ತಿಯಲ್ಲಿ ಬರೀ ಸುದೀಪ್ ಮಾತು, ಬಿಗ್ ಬಾಸ್ ಸ್ಪರ್ಧಿಗಳಿಗೆ ನೀಡುವ ಎಚ್ಚರಿಕೆ ಕೇಳೋಕೆ ಬರೋದಿಲ್ಲ. ಸುದೀಪ್ ಸ್ಟೈಲ್ ನೋಡಲು ಬಿಗ್ ಬಾಸ್ ವೀಕ್ಷಣೆ ಮಾಡೋರ ಸಂಖ್ಯೆ ಕೂಡ ಹೆಚ್ಚಿದೆ. ಬಿಗ್ ಬಾಸ್ ಶೋನಲ್ಲಿ ಶನಿವಾರ ಮತ್ತು ಭಾನುವಾರ ತೆರೆ ಮೇಲೆ ಬರುವ ಸುದೀಪ್ ಧರಿಸುವ ಬಟ್ಟೆ, ಶೂ ವೀಕ್ಷಕರನ್ನು ಆಕರ್ಷಿಸುತ್ತದೆ. ಬಿಗ್ ಬಾಸ್ ಸೀಸನ್ 10ರಲ್ಲಿ ಸುದೀಪ್ ಧರಿಸಿದ್ದ ಬಿಳಿ ಬಣ್ಣದ ಡ್ರೆಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಅಡಿಯಿಂದ ಮುಡಿಯವರೆಗೆ ಸ್ಟೈಲಿಶ್ ಆಗಿ ಬರುವ ಸುದೀಪ್, 2 ಲಕ್ಷ ಬೆಲೆಯ ಸ್ನಿಕರ್ಸ್ ಧರಿಸಿ ಗಮನ ಸೆಳೆದಿದ್ದರು.
ನನ್ನ ಮನಸ್ಸಿನಲ್ಲಿದ್ದೀರಿ ನೀವು, ನಟಿ ಅಮೂಲ್ಯ ಮಾತಿಗೆ ಅನುಪಮಾ ಶಾಕ್!
ಈ ಬಾರಿ ಬಿಗ್ ಬಾಸ್ 11ರ ಸೀಸನ್ ನರಕ ಮತ್ತು ಸ್ವರ್ಗದ ಥೀಮ್ ನಲ್ಲಿ ಬರ್ತಿದೆ. ಹೌದು ಸ್ವಾಮಿ ಬದಲು ಛಾನ್ಸೆ ಇಲ್ಲ ಎನ್ನುತ್ತ ಬರ್ತಿರುವ ಬಿಗ್ ಬಾಸ್ ನಲ್ಲಿ ಸುದೀಪ್ ಲುಕ್ ಹೇಗಿರುತ್ತೆ ಎಂಬ ಕುತೂಹಲ ಫ್ಯಾನ್ಸ್ ಗಿದೆ. ಸ್ವರ್ಗ ಮತ್ತು ನರಕದ ಪ್ರೋಮೋ ಬಿಡುಗಡೆ ಮಾಡಿ, ಲೈವ್ ಗೆ ಬಂದ ಸುದೀಪ್ ಗೆ, ವರದಿಗಾರರು ಈ ಪ್ರಶ್ನೆ ಕೇಳಿದ್ದಾರೆ. ಯಾವಾಗ್ಲೂ ಜನರಿಗೆ ನಿಮ್ಮ ಡ್ರೆಸ್ ಮೇಲೆ ಕಣ್ಣಿರುತ್ತೆ. ಈ ಬಾರಿ ನೀವು ಡಿಸೈನರ್ ಗೆ ಯಾವ ರೀತಿ ಡ್ರೆಸ್ ಡಿಸೈನ್ ಮಾಡೋಕೆ ಹೇಳಿದ್ದೀರಿ ಎಂದು ಕೇಳ್ದಾಗ, ಸುದೀಪ್, ಬಾಳೆ ಎಲೆ ಅಂತ ಆನ್ಸರ್ ಕೊಡ್ತಾರೆ. ಇದನ್ನು ಹೇಳ್ತಾ ಸುದೀಪ್ ನಗ್ತಿದ್ದರೆ, ರಿಪೋರ್ಟರ್, ಬಾಳೆ ಎಲೆಯಲ್ಲಿ ನಿಮ್ಮನ್ನು ನೋಡೋಕೆ ನಮಗೆ ಓಕೆ ಎನ್ನುತ್ತಾರೆ. ವರದಿಗಾರ್ತಿ ಈ ಮಾತು ಕೇಳಿ ಮತ್ತಷ್ಟು ನಗ್ತಾರೆ ಸುದೀಪ್. ಬಿಗ್ ಬಾಸ್ ಸ್ವರ್ಗ, ನರಕ ಕಾನ್ಸೆಪ್ಟ್ ಬಗ್ಗೆ ಮಾತನಾಡಿದ ಸುದೀಪ್, ಬಿಗ್ ಬಾಸ್ ಶುರುವಾಗಿ ಎರಡು, ಮೂರು ವಾರದ ಮೇಲೆ ಎರಡು ತಂಡವಾಗ್ತಿತ್ತು. ಈ ಬಾರಿ ನಾವೇ ಮಾಡಿ ಕಳಿಸ್ತಿದ್ದೇವೆ ಎಂದಿದ್ದಾರೆ. ಅಷ್ಟೇ ಅಲ್ಲ ಬಿಗ್ ಬಾಸ್ ನಿರೂಪಣೆ ಬಗ್ಗೆಯೂ ಮಾತನಾಡಿದ ಅವರು ಒಂದು ಬ್ರೇಕ್ ಬೇಕು ಎನ್ನುವ ಕಾರಣಕ್ಕೆ ಹಿಂದೆ ಸರಿಯುವ ನಿರ್ಧಾರ ಮಾಡಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರಿಂಗ್ ತೋರಿಸಿ ಕಣ್ಣು ಹೊಡೆದ ಐಶ್, ಟ್ರೋಲ್ ಆಯ್ತು ಹೇರ್ ಸ್ಟೈಲ್
ಪ್ರತಿ ಬಾರಿ ಬಿಗ್ ಬಾಸ್ ಆರಂಭದ ದಿನ ಸ್ಪರ್ಧಿಗಳು ಯಾರು ಎಂಬುದು ಘೋಷಣೆಯಾಗ್ತಿತ್ತು. ಆದ್ರೆ ಈ ಬಾರಿ ಆರಂಬಕ್ಕೂ ಮುನ್ನವೇ ಕೆಲ ಸ್ಪರ್ಧಿಗಳ ಬಗ್ಗೆ ಮಾಹಿತಿ ಸಿಗಲಿದೆ. ಸೆಪ್ಟೆಂಬರ್ 29ಕ್ಕೆ ಬಿಗ್ ಬಾಸ್ ಶುರುವಾದ್ರೆ ಸೆಪ್ಟೆಂಬರ್ 28ಕ್ಕೆ ರಾಜಾ ರಾಣಿ ಶೋ ಫಿನಾಲೆಯಲ್ಲಿ ಕೆಲ ಸ್ಪರ್ಧಿಗಳ ಹೆಸರು ಬಹಿರಂಗವಾಗಲಿದೆ.