ಬಿಗ್ ಬಾಸ್ ಮನೆಯಲ್ಲಿ ಜಗಳ ಶುರು ಮಾಡಿದ್ದೇ ಉಗ್ರಂ ಮಂಜು; ಶಕುನಿ ಪಟ್ಟ ಕೊಟ್ಟ ವೀಕ್ಷಕರು

By Vaishnavi Chandrashekar  |  First Published Oct 16, 2024, 2:17 PM IST

ಬಿಗ್ ಬಾಸ್ ಮನೆಯಲ್ಲಿ ಜಗಳ ಕ್ರಿಯೇಟ್ ಮಾಡುತ್ತಿರುವುದೇ ಉಗ್ರಂ ಮಂಜು. ವೀಕ್ಷಕರಿಂದ ನೆಗೆಟಿವ್ ಕಾಮೆಂಟ್.....


ಉಗ್ರಂ ಚಿತ್ರದ ಮೂಲಕ ಖಳ ನಾಯಕನಾಗಿ ಖ್ಯಾತಿ ಪಡೆದ ಮಂಜುನಾಥ್, ಉಗ್ರಂ ಮಂಜು ಎಂದೇ ಹೆಸರು ಪಡೆದರು. ಕನ್ನಡ ಚಿತ್ರರಂಗದ ಸ್ಟಾರ್ ನಟನರ ಸಿನಿಮಾದಲ್ಲಿ ಕೆಲಸ ಮಾಡಿರುವ ಮಂಜು ಇದೀಗ ಬಿಗ್ ಬಾಸ್ ಸೀಸನ್ 11ರಂದು ಸ್ಪರ್ಧಿಸುತ್ತಿದ್ದಾರೆ. ಮೊದಲ ವೀಕ್ ತುಂಬಾ ಕೂಲ್ ಆಗಿ ಹ್ಯಾಂಡಲ್ ಮಾಡಿದ ಮಂಜು ಎರಡನೇ ವಾರ ಸಖತ್ ಡಿಫರೆಂಟ್ ಆಗಿ ವರ್ತಿಸುತ್ತಿದ್ದಾರೆ. ಟಾಸ್ಕ್‌ ವಿಚಾರದಲ್ಲಿ ಪರ್ಫೆಕ್ಟ್‌ ಅನ್ನೋ ಪಟ್ಟ ಪಡೆದಿರುವ ಮಂಜು ಈಗ ಕಿರಿಕ್ ಮಂಜು ಅನ್ನೋ ಕಿರೀಟ ಪಡೆಯುತ್ತಿದ್ದಾರೆ. 

ಬಿಗ್ ಬಾಸ್ ಮನೆಯಲ್ಲಿ ಆರಂಭದಿಂದಲೂ ಕಿರಿಕ್ ಕ್ರಿಯೇಟ್ ಮಾಡುತ್ತಿದ್ದವರು ಲಾಯರ್ ಜಗದೀಶ್. ರಾತ್ರಿ ಪೂರ್ತಿ ಜಗಳ ಮಾಡಿ ಬೆಳಗ್ಗೆ ಕೂಲ್ ಆಗಿ ವರ್ತಿಸುತ್ತಿದ್ದ ಜಗದೀಶ್ ವ್ಯಕ್ತಿತ್ವವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ಮನೆ ಮಂದಿ ವಿಫಲವಾಗಿದ್ದಾರೆ. ಆದರೆ ಜಗದೀಶ್‌ಗೆ ಬುದ್ಧಿ ಕಲಿಸಬೇಕು ಎಂದು ಉಗ್ರಂ ಮಂಜು ಸಣ್ಣ ಪುಟ್ಟ ವಿಚಾರಕ್ಕೂ ಜಗಳ ಮಾಡಲು ಮುಂದಾಗಿದ್ದಾರೆ. ಅಲ್ಲದೆ ಕಳೆದ ಎರಡು ಮೂರು ಪ್ರೋಮೋಗಳನ್ನು ಗಮಿನಿಸಿದರೆ ಜಗದೀಶ್ ವಿರುದ್ಧ ತೊಡೆ ತಟ್ಟಿ ನಿಂತಿರುವುದು ಉಗ್ರಂ ಮಂಜು. ಮಂಜು ಮಾತುಗಳನ್ನು ಕೇಳಿ ಪ್ರವೋಕ್ ಆಗುತ್ತಿರುವುದು ತ್ರಿವಿಕ್ರಮ್ ಮತ್ತು ರಂಜಿತ್.

Tap to resize

Latest Videos

undefined

ಲಾಯರ್ ಜಗದೀಶ್- ನಟ ರಂಜಿತ್ ಹೊಡೆದಾಟ; ಬಿಗ್‌ಬಾಸ್‌ ಮನೆಯಿಂದ ಹೊರ ಬಂದ ಫೋಟೋ ವೈರಲ್?

ಅಲ್ಲದೆ ನಟಿ ಐಶ್ವರ್ಯ ಮತ್ತು ಅನುಷಾ ನಡುವೆ ಮಸ್ಥಾಪ ಕ್ರಿಯೇಟ್ ಮಾಡಿದ್ದು ಉಗ್ರಂ ಮಂಜು ಅನ್ನೋದು ಸ್ಪಷ್ಟವಾಗಿದೆ.  ಹೀಗಾಗಿ ಪಾಸಿಟವ್ ಆಗಿರುವ ಮನೆಯಲ್ಲಿ ನೆಗೆಟಿವ್ ವೈಬ್ಸ್‌ ಕ್ರಿಯೇಟ್ ಮಾಡುತ್ತಿರುವುದು ಉಗ್ರಂ ಮಂಜು ಎಂದು ನೆಟ್ಟಿಗರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಅಲ್ಲದೆ ಉಗ್ರಂ ಮಂಜು ಅನ್ನೋ ಪಟ್ಟ ತೆಗೆದು ಶಕುನಿ ಮಂಜು ಅನ್ನೋ ಹೆಸರಿನಿಂದ ಟ್ರೋಲ್ ಮಾಡುತ್ತಿದ್ದಾರೆ. ಕಳೆದ ವೀಕೆಂಡ್‌ನಲ್ಲಿ ಸುದೀಪ್ ಟಾಸ್ಕ್ ನೀಡುತ್ತಾರೆ, ಯಾರು ಟಾಪ್ 1 ಮತ್ತು 2 ಸ್ಥಾನ ಪಡೆಯುತ್ತಾರೆ, ಯಾರು ಎಲಿಮಿನೇಟ್ ಆಗುತ್ತಾರೆ ಮತ್ತು ಯಾರು ಗೆಸ್ಟ್‌ ರೀತಿ ಇದ್ದಾರೆ ಎಂದು. ಹಲವರು ಟಾಪ್ 1 ಮತ್ತು 2 ಸ್ಥಾನವನ್ನು ಶಿಶರ್ ಮತ್ತು ಉಗ್ರಂ ಮಂಜುಗೆ ನೀಡಿದ್ದರು. ಈಗ ಮಂಜು ಕ್ರಿಯೇಟ್ ಮಾಡುತ್ತಿರುವ ಜಗಳವನ್ನು ನೋಡಿ ಟಾಪ್ ಸ್ಥಾನಕ್ಕೆ ಬರುವ ಯಾವ ಯೋಗ್ಯತೆ ಇಲ್ಲ ಎಂದು ತೀರಾ ನೆಗೆಟಿವ್ ಆಗಿ ಟ್ರೋಲ್ ಆಗುತ್ತಿದ್ದಾರೆ ಮಂಜು. 

 

click me!