BBK9 ಅರೇ! ಪಾತ್ರೆ ತೊಳಿತಿದ್ದೀರಾ ಗಾಡಿ ತೊಳಿತಿದ್ದೀರಾ? ರಾಕೇಶ್‌- ಅಮೂಲ್ಯ ನಡುವೆ ಸ್ಪಾರ್ಕ್!

By Vaishnavi Chandrashekar  |  First Published Sep 26, 2022, 2:41 PM IST

ಅಡುಗೆ ಮನೆಯಲ್ಲಿ ಅರಳಿತು ಲವ್ ಸ್ಪಾರ್ಕ್. ರಾಕೇಶ್ - ಅಮೂಲ್ಯ ಕಾಂಬಿನೇಷನ್‌ ಮೆಚ್ಚಿಕೊಂಡ ವೀಕ್ಷಕರು.... 


ಬಿಗ್ ಬಾಸ್ ಸೀಸನ್ 9ರಲ್ಲಿ 9 ಪ್ರವೀಣರ ಜೊತೆ 9 ನವೀನರು ಫಟ್‌ ಫೈಟ್ ಕೊಡಲು ರೆಡಿಯಾಗಿದ್ದಾರೆ. ಬಿಗ್ ಬಾಸ್ ಓಟಿಟಿಯಿಂದ ಮನೆ ಪ್ರವೇಶ ಪಡೆದಿರುವ ರಾಕೇಶ್ ಅಡಿಗ ಮತ್ತು ಕಮಲಿ ಧಾರಾವಾಹಿ ಖ್ಯಾತಿಯ ಅಮೂಲ್ಯ ಗೌಡ ನಡುವೆ ಸಣ್ಣದೊಂದು ಸ್ಪಾರ್ಕ್ ಶುರುವಾಗಿದೆ. ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವ ವಿಚಾರ ಮಾತನಾಡುತ್ತಿದ್ದರೂ ನೆಟ್ಟಿಗರು.. ಪೇರ್ ಸೂಪರ್ ಎಂದು ಹೇಳುತ್ತಿದ್ದಾರೆ. 

ನವಾಜ್ ಜೊತೆ ಅಡುಗೆ ಮನೆಯಲ್ಲಿ ನಗುವಿನ ಬಗ್ಗೆ ಮಾತನಾಡುತ್ತಿದ್ದ ರಾಕೇಶ್ ಪಾತ್ರ ತೊಳೆಯಬೇಕು ಎಂದು ಸೀರಿಯಸ್ ಆಗುತ್ತಾರೆ. ಆಗ ಅಮೂಲ್ಯ ಕೂಡ ಸೇರಿಕೊಳ್ಳುತ್ತಾರೆ.

Tap to resize

Latest Videos

ರಾಕೇಶ್: ಪಾತ್ರೆ ತೊಳ್ದು ತೊಳ್ದು ತೊಳ್ದು...ದೇವರೆ
ಅಮೂಲ್ಯ: ಇದಕ್ಕಿಂತ ಮುನ್ನ ಪಾತ್ರ ತೊಳ್ದಿದೀರಾ ಮನೆಯಲ್ಲಿ?
ರಾಕೇಶ್: ಮನೆಯಲ್ಲಿ ಪಾತ್ರ ತೊಳೆದಿರುವೆ ಆದರೆ ಬಾತ್‌ರೂಮ್‌ ತೊಳೆಯುವುದು ಎಲ್ಲಾ ಹೊಸದು. ಹಾಸ್ಟ್‌ನಲ್ಲಿ ಇದ್ದಾಗ ಮಾಡಿದ್ದು. ನೀವು
ಅಮೂಲ್ಯ: ಹಾ ಮನೆಯಲ್ಲಿ ಮಾಡಿದ್ದೀನಿ. ನಾನು ಓದಿದ್ದು ನಾಮರ್ಲ್ ಸ್ಕೂಲ್‌ನಲ್ಲಿ ಹಾಸ್ಟಲ್‌ನಲ್ಲಿ ಅಲ್ಲ ಪಾತ್ರೆ ತೊಳೆದಿರುವೆ. 
ರಾಕೇಶ್: ಸುಳ್ಳು ಹೇಳಬೇಡಿ
ಅಮೂಲ್ಯ: ನಿಜ ಪಾತ್ರೆ ತೊಳಿದಿರುವೆ...ರೀಸೆಂಟ್ ಆಗಿ ಶೂಟಿಂಗ್ ಅಂತ ಬ್ಯುಸಿ ಇದ್ದ ಕಾರಣ ಮಾಡಿರಲಿಲ್ಲ...
ರಾಕೇಶ್: ಹಾಗಿದ್ರೆ 15 ವರ್ಷಗಳ ಹಿಂದಿನ ಕಥೆ ಹೇಳುತ್ತಿದ್ದೀರಾ...
ಅಮೂಲ್ಯ: ಕಾಲೇಜ್ ಸಮಯದಲ್ಲಿ ಮನೆಯಲ್ಲಿ ಸಹಾಯ ಮಾಡುತ್ತಿದ್ದೆ. 
ರಾಕೇಶ್: ಸಹಾಯ ಅಂದ್ರೆ ಹಬ್ಬ ಹರಿದಿನಕ್ಕೆ 
ಅಮೂಲ್ಯ: ಪ್ರಾಮಿಸ್ ಎಲ್ಲಾ ಕೆಲಸ ಮಾಡಿದ್ದೀನಿ. ರಜೆ ದಿನ ಕೆಲಸ ಮಾಡಿದ್ದೀನಿ.
ರಾಕೇಶ್: ಈಗ ನೀವು ಪಾತ್ರೆ ತೊಳೆಯುವ ಸ್ಟೈಲ್ ನೋಡಿದರೆ ಗೊತ್ತಾಗುತ್ತದೆ...
ಅಮೂಲ್ಯ: ಎಷ್ಟು ಸಖತ್ ಆಗಿ ಪಾತ್ರ ತೊಳೆಯುತ್ತೀನಿ ನೋಡಿ ನೀವು..

ರಾಕೇಶ್‌ಗೆ ತೋರಿಸಲು ಪಾತ್ರಯನ್ನು ರಭಸವಾಗಿ ತೊಳೆಯುಲು ಮುಂದಾಗುತ್ತಾರೆ. 'ಅರೇ! ಪಾತ್ರೆ ತೊಳಿತಿದ್ದೀರಾ ಗಾಡಿ ತೊಳಿತಿದ್ದೀರಾ?' ಎಂದು ರಾಕೇಶ್ ಮತ್ತೆ ಕಾಲೆಳೆದಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಬಾತ್‌ರೂಮ್‌ನ ಸಪರೇಟ್ ಮಾಡಬೇಕು ಗಂಡರಿಗೆ ಒಂದು ಹೆಂಗಸರಿಗೆ ಒಂದು ಮಾಡಬೇಕು ಎಂದು ಅಮೂಲ್ಯ ಇಡೀ ಮನೆ ಸದಸ್ಯರ ಜೊತೆ ಕುಳಿತು ಚರ್ಚೆ ಮಾಡುತ್ತಾರೆ. ಎಲ್ಲಾ ಹೆಣ್ಣುಮಕ್ಕಳು ಒಪ್ಪಿಗೆ ಕೊಟ್ಟ ನಂತರ ಲಿಪ್‌ಸ್ಟಿಕ್‌ನಿಂದ ಬಾಗಿಲಿನ ಮೇಲೆ ಹೆಸರು ಬರೆಯುತ್ತಾರೆ. ಅದನ್ನು ನೋಡಿ ರೂಪೇಶ್ ಈ ಗೊಂಬೆಗಳು ಸರಿಯಾಗಿಲ್ಲ ಎಂದು ವಾದ ಮಾಡುತ್ತಾರೆ. 

BBK9 ಎರಡೇ ದಿನಕ್ಕೆ 12 ಮಂದಿ ನಾಮಿನೇಟ್; ಕಾರಣ ಕೇಳಿ ಹಾಸ್ಯ ಮಾಡಿದ ನೆಟ್ಟಿಗರು!

ಬೆಳಗ್ಗೆ ಅರ್ಜೆಂಟ್ ಇದ್ದಾಗ ಗಂಡರಿಗೆ ಕಷ್ಟ ಆಗುತ್ತದೆ. ಆಗ ಮಾತ್ರ ಹೆಂಗಸರ ಬಾತ್‌ ರೂಮ್‌ ಬಳಸಬಹುದು ನೀವೂ ಕೂಡ ಅವಸರದಲ್ಲಿ ಇದ್ದರೆ ಮಾತ್ರ ನಮ್ಮ ಬಾತ್‌ರೂಮ್ ಬಳಸಬೇಕು ಎಂದು ಡೈನಿಂಗ್ ಏರಿಯಾದಲ್ಲಿ ದೊಡ್ಡದಾಗಿ ಚರ್ಚೆ ಮಾಡುತ್ತಾರೆ.

'ನನಗೆ ಯಾವುದೇ ರೀತಿ ಟೆನ್ಶನ್ ಇರಲಿಲ್ಲ ಈಗ ಭಯ ಶುರುವಾಗಿದೆ. ಖುಷಿ ಇದೆ. ಫ್ಯಾಮಿಲಿನ ನೋಡಿದಾಗ ಬಿಟ್ಟು ಹೋಗಬೇಕು ಅನ್ನೋ ಭಯ ಶುರುವಾಗಿದೆ. ಬಿಗ್ ಬಾಸ್ ಮನೆಯೋಳಗೆ ಹೋಗಿ ಹೇಗಿರುತ್ತೀನಿ, ಯಾವ ರೀತಿ ಆಟವಾಡುತ್ತೀನಿ ಅನ್ನೋ ಭಯ ಇದೆ. ಈ ಸಲ ಬಂದಿರುವ ಸ್ಪರ್ಧಿಗಳು ಹೇಗಿರುತ್ತಾರೆ ಅನ್ನೋ ಯೋಚನೆ ಇದೆ. Numerologyನ ನಾನು ನಂಬುವುದಿಲ್ಲ ಅದನ್ನು ಹೇಳುವವರನ್ನು ಮೊದಲು ನಂಬುವುದಿಲ್ಲ. ಬಣ್ಣ ಇಷ್ಟ ಪಡ್ತೀನಿ ಆದ್ರೆ ನಂಬಲ್ಲ' ಎನ್ನುತ್ತಾ ಕಿಚ್ಚ ಸುದೀಪ್ ಜೊತೆ ಮೊದಲ ಸಲ ವೇದಿಕೆ ಹಂಚಿಕೊಂಡಿದ್ದಾರೆ ಅಮೂಲ್ಯ. 

BBK9 100 ಚಡ್ಡಿ ಕೊಡ್ಸು ಅಂದ್ರೆ ಬರೀ 6 ಚಡ್ಡಿ ಕೊಡ್ಸಿದ್ದಾರೆ ನಮ್ಮಪ್ಪ: ಸೈಕ್ ನವಾಜ್

ಪ್ರವೀಣರು:
ಅರುಣ್ ಸಾಗರ್
ದೀಪಿಕಾ ದಾಸ್
ದಿವ್ಯಾ ಉರುಡುಗ
ಪ್ರಶಾಂತ್ ಸಂಬರ್ಗಿ
ರೂಪೇಶ್ ಶೇಟ್ಟಿ
ಸಾನ್ಯಾ ಅಯ್ಯರ್
ಅನುಪಮಾ ಗೌಡ
ಆರ್ಯವರ್ಧನ್ ಗುರೂಜಿ
ರಾಕೇಶ್ ಅಡಿಗ

ನವೀನರು:
ನಟಿ ಮಯೂರಿ
ನವಾಜ್
ದರ್ಶ್ ಚಂದ್ರಪ್ಪ
ನಟಿ ಅಮೂಲ್ಯ ಗೌಡ
ವಿನೋದ್ ಗೊಬ್ರಗಾಲ 
ನಟಿ ನೇಹಾ ಗೌಡ
ಬೈಕರ್ ಐಶ್ವರ್ಯ ಪಿಸೆ
ರೂಪೇಶ್ ರಾಜಣ್ಣ
ನಟಿ ಕಾವ್ಯಶ್ರೀ ಗೌಡ

click me!