BB7: ರಾತ್ರಿಯೆಲ್ಲಾ ಎಕ್ಸಾಮ್ ಗೆ ಓದಿ ಮಾರನೇ ದಿನ ಬಸ್ ನಲ್ಲಿ ನಿದ್ದೆ ಮಾಡಿದ ಕಿಲಾಡಿ!

Published : Oct 20, 2019, 11:43 AM IST
BB7: ರಾತ್ರಿಯೆಲ್ಲಾ ಎಕ್ಸಾಮ್ ಗೆ ಓದಿ ಮಾರನೇ ದಿನ ಬಸ್ ನಲ್ಲಿ ನಿದ್ದೆ ಮಾಡಿದ ಕಿಲಾಡಿ!

ಸಾರಾಂಶ

ಬಿಗ್ ಬಾಸ್ ಸ್ಪರ್ಧಿಗಳ ಜೊತೆ ಕಿಚ್ಚ ಸುದೀಪ್ ಮಾತುಕತೆ | ಒಬ್ಬೊಬ್ಬರದ್ದು ಒಂದೊಂದು ಇಂಟರೆಸ್ಟಿಂಗ್ ಕತೆ | ಚಾಕಲೇಟ್ ಬಾಯ್ ವಾಸುಕಿ ವೈಭವ್ ಎಕ್ಸಾಮ್ ಸ್ಟೋರಿ ಬಹಳ ಮಜವಾಗಿದೆ 

ವೀಕೆಂಡ್ ಬಂತು, ಕಿಚ್ಚ ಸುದೀಪ್ ಬಂದರೂ ಅಂದ್ರೆ ಸಾಕು ಬಿಗ್ ಬಾಸ್ ಗೆ ಕಳೆಯೇರುತ್ತದೆ. ಸ್ಪರ್ಧಿಗಳ ಸುದೀಪ್ ಬರುತ್ತಾರೆ. ಮಾತನಾಡುತ್ತಾರೆ. ಒಬ್ಬೊಬ್ಬರ ಬಗ್ಗೆ ಇಂಟರೆಸ್ಟಿಂಗ್ ವಿಚಾರವನ್ನು ಹೇಳುತ್ತಾರೆ. 

ಬಿಗ್ ಬಾಸ್ ಮನೆಮಂದಿಗೆ ಒಂದು ಟಾಸ್ಕ್ ಕೊಟ್ಟಿದ್ದರು. ಒಬ್ಬೊಬ್ಬರ ಬಗ್ಗೆ ಒಂದೊಂದು ವಿಚಾರವನ್ನು ಎನ್ವಲಪ್ ಮೇಲೆ ಬರೆದು ಅದು ಯಾರಿಗೆ ಸಂಬಂಧಪಟ್ಟಿದ್ದು ಎಂದು ಹೇಳಬೇಕಾಗಿತ್ತು. ಅದರಲ್ಲಿ ರಾತ್ರಿಯೆಲ್ಲಾ ಚೆನ್ನಾಗಿ ಓದಿ ಬೆಳಿಗ್ಗೆ ನಿದ್ದೆ ಮಾಡಿ ಎಕ್ಸಾಮ್ ಹಾಲ್ ಗೆ ಲೇಟಾಗಿ ಹೋಗಿದ್ಯಾರು? ಎಂದು ಕೇಳಲಾಗಿತ್ತು.  ಅದಕ್ಕೆ ಸರಿ ಉತ್ತರ ವಾಸುಕಿ ವೈಭವ್. 

BB7: ಕಿರುತೆರೆ ನಟ ರಸ್ತೆಯಲ್ಲಿ ದೋಸೆ ಮಾರಿ ಜೀವನ ಮಾಡುತ್ತಿದ್ದಾರೆ!

ವಾಸುಕಿ ಡಿಗ್ರಿಯಲ್ಲಿ ಓದುತ್ತಿರುವಾಗ ಮಾರನೇ ದಿನ ಬ್ಯಸಿನೆಸ್ ಸ್ಟಡಿ ಎಕ್ಸಾಮ್ ಇತ್ತು. ರಾತ್ರಿಯೆಲ್ಲಾ ನಿದ್ದೆಗಟ್ಟು ಓದಿದ್ದರಂತೆ. ಬೆಳಿಗ್ಗೆ ಎದ್ದು ಕಾಲೇಜಿಗೆ ಬಸ್ ನಲ್ಲಿ ಹೊರಟಿದ್ದರು. ಬಸ್ ಖಾಲಿ ಇದ್ದುದ್ದರಿಂದ ಕಿಟಕಿ ಪಕ್ಕದ ಸೀಟಿನಲ್ಲಿ ಕೂತರು. ಸ್ವಲ್ಪ ಸಮಯದಲ್ಲೇ ನಿದ್ದೆಗೆ ಜಾರಿದರು. ಬಸ್ ಮೆಜೆಸ್ಟಿಕ್ ಗೆ ಹೋದಮೇಲೆ ಎಚ್ಚರವಾಗಿದ್ದಂತೆ! ಅಷ್ಟೊತ್ತಿಗಾಗಲೇ 10-15 ಆಗೊಗಿತ್ತು. ಅಂತೂ ಇಂತೂ ಎಕ್ಸಾಮ್ ಹಾಲ್ ಗೆ ಹೋದರೆ ಕೆಲವರು ಪರೀಕ್ಷೆ ಬರೆದು ಆಚೆ ಹೋಗುತ್ತಿದ್ದರಂತೆ. ಕೊನೆಗೆ ರಿಕ್ವೆಸ್ಟ್ ಮಾಡಿ ಎಕ್ಸಾಮ್ ಬರೆದ್ರೆ ಬಂದದ್ದು 10 ಅಂಕಗಳಂತೆ! 

ಹೀಗಂತ ತಮ್ಮ ಕಾಲೇಜು ದಿನಗಳನ್ನು ನೆನೆಸಿಕೊಂಡಿದ್ದಾರೆ ವಾಸುಕಿ ವೈಭವ್. ಇವರು ರಂಗಭೂಮಿ ಕಲಾವಿದ. ಹಾಡುಗಾರ. ಬಿಗ್ ಬಾಸ್ ಮನೆಯಲ್ಲಿ ಹಾಡನ್ನು ಹೇಳುತ್ತಾ ಮನೆಮಂದಿಯನ್ನೆಲ್ಲಾ ಖುಷಿಪಡಿಸುತ್ತಿರುತ್ತಾರೆ. 
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

2 ಸತ್ಯ ಬಯಲು ಮಾಡಿದ 'ಲಕ್ಷ್ಮೀ ನಿವಾಸ' ನಿರ್ದೇಶಕರು, ವೀಕ್ಷಕರು ಫುಲ್ ಹ್ಯಾಪಿ
BBK 12: ಟಾಸ್ಕ್ ಆಡದೇ ಈ ವಾರದ ‘ಕ್ಯಾಪ್ಟನ್’ ಆದ ಸ್ಪಂದನಾ.. ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್!