ರವಿ ಸ್ಥಾನವೇ ಬದಲು, ಬೆಳಗೆರೆ ಬಿಗ್ ಬಾಸ್ ಕಂಟೆಸ್ಟಂಟ್ ಅಲ್ಲವೇ ಅಲ್ಲ!

By Web Desk  |  First Published Oct 15, 2019, 10:45 PM IST

ಬಿಗ್ ಬಾಸ್ ಮನೆಯಿಂದ ಬ್ರೆಕಿಂಗ್/ ರವಿ ಬೆಳಗೆರೆ ಈಗ ಕಂಟೆಸ್ಟಂಟ್ ಅಲ್ಲವೇ ಅಲ್ಲ/ ಅನಾರೋಗ್ಯದ ಸಮಸ್ಯೆಯಿಂದ ರವಿ ಬೆಳಗೆರೆ ಇನ್ನು ಒಂದು ವಾರ ಮಾತ್ರ ಇರ್ತಾರೆ


ಬಿಗ್ ಬಾಸ್ ಮನೆಯಿಂದ ಬಿಗ್ ಸುದ್ದಿ ಹೊರಬಂದಿದೆ. ಅನಾರೋಗ್ಯದ ಕಾರಣಕ್ಕೆ ಮೊದಲ ದಿನವೇ ಮನೆಯಿಂದ ಹೊರಬಂದಿದ್ದ ಹಿರಿಯ ಪತ್ರಕರ್ತ ಕುರಿತಂತೆ ವಾಹಿನಿ ಸುದ್ದಿಯೊಂದನ್ನು ನೀಡಿದೆ. 

ರವಿ ಬೆಳಗರೆ ಆರೋಗ್ಯದ ಪರಿಶೀಲನೆ ಮಾಡಲಾಗಿದ್ದು ಟಾಸ್ಕ್ ಗಳಲ್ಲಿ ಅವರು ಭಾಗವಹಿಸಲು ಸಾಧ್ಯವಿಲ್ಲ ಹಾಗಾಗಿ ರವಿ ಬೆಳಗೆರೆ ಈ ಶನಿವಾರದವರೆಗೆ ಮನೆಯಲ್ಲಿ ಅತಿಥಿಯಾಗಿ ಮುಂದುವರಿಯಲಿದ್ದಾರೆ ಎಂದು ಬಿಗ್ ಬಾಸ್ ಹೇಳಿದ್ದಾರೆ. ಅಲ್ಲಿಗೆ ರವಿ ಬೆಳಗೆರೆ   ಅವರ ವೋಟಿಂಗ್ ಸಹ ಬಂದ್ ಆಗಲಿದೆ.

Tap to resize

Latest Videos

undefined

ಅಲ್ಲಿಗೆ ಸ್ಪರ್ಧಿಯಾಗಿ ಮನೆ ಒಳ ಪ್ರವೇಶ ಮಾಡಿದ್ದ ರವಿ ಬೆಳಗೆರೆ ಅತಿಥಿಯಾಗಿ ಬದಲಾಗಿದ್ದಾರೆ. ಮೊದಲನೆ ದಿನವೇ ಮಧ್ಯರಾತ್ರಿ ಆ್ಯಂಬುಲೆನ್ಸ್ ಕರೆಸಿ ಮನೆಯಿಂದ ಹೊರಹೋಗಿದ್ದ ಬೆಳಗೆರೆ ಮಧ್ಯಾಹ್ನ ಮತ್ತೆ ಮನೆಗೆ ವಾಪಸಾದರು. ಈ ವೇಳೆ ಮನೆಯವರು ಬೆಳೆಗೆರೆಯವರನ್ನು ಮತ್ತಷ್ಟು ಆತ್ಮೀಯತೆಯಿಂದ ಬರಮಾಡಿಕೊಂಡರು.

ಚೈತ್ರಾ ವಾಸುದೇವನ್ ಮದುವೆಯ ಗುಟ್ಟು

ಏಲ್ರೋ  ಇದ್ರಿ ನೀವೆಲ್ಲಾ.. ನೀವೆಲ್ಲಾ ಯಾರ್ರೋ... ನನನಗೆ ಗೊತ್ತಿಲ್ಲದಂತೆಯೇ ನಮ್ಮ ನಡುವೆ ಒಂದು ಬಾಂಧವ್ಯ ಬೆಳೆದು ಬಿಟ್ಟಿದೆ. ನನಗೆ ಶುಗರ್ ಮತ್ತು ಬಿಪಿ ಇದೆ. ಶುಗರ್ ಲೆವಲ್ ಕಡಿಮೆಯಾಗಿತ್ತು. ಅದನ್ನು ಸರಿ ಮಾಡಿಸಿಕೊಂಡು ಬಂದೆ.. ನೌ.. ಆಯಾಮ್ ಫಿಟ್ ಆ್ಯಂಡ್ ಫೈನ್ ಎಂದು ಬೆಳಗೆರೆ ಹೇಳುತ್ತಿರುವಾಗಲೇ ಆ ಕಡೆಯಿಂದ ಬಿಗ್ ಬಾಸ್ ಧ್ವನಿ ಬಂತು. ಬೆಳಗೆರೆ ಇನ್ನು ಮುಂದೆ ಕಂಟೆಸ್ಟಂಟ್ ಆಗಿ ಅಲ್ಲ ಅತಿಥಿಯಾಗಿ ಮುಂದಿನ ಶನಿವಾರದ ವರೆಗೆ ಇರಲಿದ್ದಾರೆ ಎಂದು ತಿಳಿಸಲಾಯಿತು.

ಕನ್ನಡದ ಬಿಗ್ ಬಾಸ್ ಸೀಸನ್ 7  ಗೆ ಅದ್ದೂರಿ ಚಾಲನೆ ಸಿಕ್ಕಿದ್ದು ರವಿ ಬೆಳಗೆರೆ ಸೇರಿ 18 ಜನ ಸ್ಪರ್ಧಿಗಳು ಮನೆ ಪ್ರವೇಶ ಮಾಡಿದ್ದರು. ಇದೀಗ ಬೆಳಗೆರೆ ಒಂದು ವಾರದ ಮಟ್ಟಿಗೆ ಮನೆಯಲ್ಲಿ ಮುಂದುವರಿಯುತ್ತಾರೆ ಎಂಬುದು ಸದ್ಯದ ವಾರ್ತೆ.

click me!