
ಫೆ.24ರಿಂದ ಸೋಮವಾರದಿಂದ ಶುಕ್ರವಾರದ ವರೆಗೆ ಪ್ರತಿ ರಾತ್ರಿ 8 ಗಂಟೆಗೆ ಪರದೆ ಮೇಲೆ ಮೂಡಲಿದೆ. ವಿಶೇಷ ಅಂದರೆ ಎರಡನೇ ಸಂಚಿಕೆಯ ನಿರೂಪಣೆಯನ್ನು ಬಿಗ್ಬಾಸ್ ಶೋನ ಸ್ಪರ್ಧಿ ಆಗಿದ್ದ ಚೈತ್ರಾ ಕೊಟ್ಟೂರು ನಿರ್ವಹಿಸಲಿದ್ದಾರೆ.
ಕೊಳಲೇನು ಪುಣ್ಯವ ಮಾಡಿತೋ 'ಹಾಡು ಕರ್ನಾಟಕ'ದ ವಾರಿಜಾಶ್ರೀ ಕೈ ಸೇರಿ!
ಜಗದೀಶ್ ಭಾವೆ ಕಥಾ ಸಂಶೋಧನೆ, ವಿನೋದ್ ದೊಡ್ಡಹಾಳೆ ನಿರ್ದೇಶನ ಹಾಗೂ ಡಾವೆಂಕಿ ಪರಿಕಲ್ಪನೆಯ ಈ ಧಾರಾವಾಹಿಗೆ ರಘು ಸಮರ್ಥ, ಸುಜಯ್ ಹುಣಸೂರು, ನಿತ್ಯಾ ಲಕ್ಷ್ಮೀ ಪ್ರಹ್ಲಾದ. ಪವನ್ ಭಟ್, ಪ್ರಮೋದ್ ಮರವಂತೆ ಚಿತ್ರಕಥೆ ಇದೆ.
ಆರ್ಯವರ್ಧನ್ ಹುಟ್ಟುಹಬ್ಬ; ಪಬ್‌ನಲ್ಲಿ ಗಣ್ಯರ 'ಜೊತೆ ಜೊತೆಯಲಿ'!
ಕುಟುಂಬ ಸಮೇತ ಕುಳಿತು ನೋಡುವಂತಹ ಸತ್ಯಘಟನೆಗಳಿಂದ ಪ್ರೇರಿತ ಕತೆಗಳನ್ನು ಹೇಳುವ ಪ್ರಯತ್ನ ಈ ಧಾರಾವಾಹಿಯದ್ದು. ಒಂದೊಂದು ಎಪಿಸೋಡ್ಗೂ ಕಲಾವಿದರು ಬದಲಾಗಲಿದ್ದು, ಪ್ರತಿ ಕಂತಿನಲ್ಲೂ ಹೊಸ ಹೊಸ ತಾರೆಗಳನ್ನು ನೋಡಬಹುದು. ಮೊದಲ ಕತೆ ‘ಮಗಳು ಶಾರದೆ’. ಮನ ಕಲಕುವ ಕತೆಯಾಗಿದ್ದು, ಮಹಿಳಾ ಹೋರಾಟಗಾರ್ತಿ ಆವಂತಿಕಾ ತನ್ನ ಕಾರಿನ ಚಾಲಕನ ಮಗಳನ್ನು ಮನೆ ಕೆಲಸಕ್ಕೆ ಇಟ್ಟುಕೊಂಡಿರುತ್ತಾಳೆ. ಆಕೆ ಆಕಸ್ಮಿಕವಾಗಿ ಸಾವು ಕಾಣುತ್ತಾಳೆ. ಇದು ಯಾಕೆ ಎಂಬುದರೊಂದಿಗೆ ಮೊದಲ ಎಪಿಸೋಡ್ ಶುರುವಾಗಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.