ರಾಜು ತಾಳಿಕೋಟೆ ‘ಕೈ-ಚೇಷ್ಟೆಗೆ’ ಬುಸುಗುಟ್ಟಿದ ‘ನಾಗಿಣಿ’

By Web Desk  |  First Published Oct 16, 2019, 5:05 PM IST

ಬಿಗ್ ಬಾಸ್ ಮನೆಯಲ್ಲಿ ಹತ್ತಿಕೊಂಡ ಬೆಂಕಿ/   ರಾಜು ತಾಳಿಕೋಟೆ ಮೇಲೆ ಬುಸುಗುಟ್ಟಿದ ನಾಗಿಣಿ/ ಮೈ-ಕೈ ಮುಟ್ಟಿ ಮಾತನಾಡಿಸ್ತಾರೆ ಎಂ ಆರೋಪ/ ಇದು 2ನೇ ದಿನ ಅಷ್ಟೆ ಇನ್ನು ಟಾಸ್ಕ್ ಶುರು ಆಗಿಲ್ಲ!


ಬಿಗ್ ಬಾಸ್ ಮನೆಯಲ್ಲಿ ನಿಧಾನಗವಾಗಿ ಬೆಂಕಿ ಆವರಿಸಿಕೊಳ್ಳುತ್ತಿದೆ. ಹಿರಿಯ ಪತ್ರಕರ್ತ ರವಿ ಬೆಳಗೆರೆ ಕಂಟೆಸ್ಟಂಟ್ ಅಲ್ಲ, ಅವರು ಅತಿಥಿ.. ಈ ಶನಿವಾರದವರೆಗೆ ಮನೆಯಲ್ಲಿ ಇರುತ್ತಾರೆ ಎಂದು ಬಿಗ್ ಬಾಸ್  ಘೋಷಣೆ ಮಾಡಿಯೂ ಆಗಿದೆ. 

ನಾಗಿಣಿ ಧಾರಾವಾಹಿ ಮೂಲಕ ಮನೆ ಮಾತಾಗಿರುವ ಸುಂದರಿ ದೀಪಿಕಾ ದಾಸ್ ಎರಡನೇ ದಿನವೇ ಕಲಾವಿದ ರಾಜು ತಾಳಿಕೋಟೆ ಅವರ ಮೇಲೆ ಆರೋಪವೊಂದನ್ನು ಮಾಡಿದ್ದಾರೆ.

Tap to resize

Latest Videos

undefined

ರಾಜು ತಾಳಿಕೋಟೆ ಹೆಣ್ಣು ಮಕ್ಕಳನ್ನು ಮುಟ್ಟಿ ಮುಟ್ಟಿ, ಬೆನ್ನು ತಟ್ಟಿ ಮಾತನಾಡಿಸುತ್ತಾರೆ ಎಂಬ ಆರೋಪ ಮಾಡಿದ್ದು ಮನೆಯವರೊಂದಿಗೆ ಹಂಚಿಕೊಂಡಿದ್ದಾರೆ.

ಮನೆಗೆ ಹೋಗದ ಪಂಕಜ್; ಅಭಿಮಾನಿಗಳ ಆಕ್ರೋಶ

ಎಲ್ಲರೂ ಊಟಕ್ಕೆ ಹೋಗೋಣ ಬನ್ನಿ ಎಂದು ಮನೆಯ ಹೊರಗಿನ ಜಾಗದಿಂದ ಡೈನಿಂಗ್ ಟೇಬಲ್ ಕಡೆಗೆ ಕರೆದುಕೊಂಡು ಹೋಗುವಾಗ ತಾಳಿಕೋಟೆ ದೀಪಿಕಾ ಅವರ ಹೆಗಲ ಬಳಿ ಕೈ ಹಾಕಿ ಬನ್ನಿ ಹೋಗೋಣ ಎಂದು ಕರೆದಿದ್ದಾರೆ. ಈ ವೇಳೆ ನಾವು ಬರ್ತೆವೆ ಬಿಡಿ, ನೀವು ಮುಟ್ಟಿ ಮಾತನಾಡಿಸುವುದು ಯಾಕೆ ಎಂದು ದೀಪಿಕಾ ಪ್ರಶ್ನೆ ಮಾಡಿದ್ದಾರೆ.

ದಿನದ ಕೊನೆಯಲ್ಲಿ ಮತ್ತೆ ಮನೆಯೊಳಗೆ ಬಂದ ಬೆಳಗೆರೆ ಅವರ ಬಳಿಯೂ ಹೆಣ್ಣುಮಕ್ಕಳು ತಮ್ಮ ಗೋಳು ತೋಡಿಕೊಂಡಿದ್ದಾರೆ. ಕೆಲವರಿಗೆ ಇದೊಂದು ಚಟ ಎಂದು ಹೇಳಿರುವ ಬೆಳಗೆರೆ ಕರ್ನಾಟಕದ ಹಿರಿಯ ರಾಜಕಾರಣಿಯೊಬ್ಬರು, ಈಗಲೂ ಸಿನಿಮಾ ರಂಗದಲ್ಲಿರುವ ವೃದ್ಧರೊಬ್ಬರು ಹೀಗೆ ಮಾಡುತ್ತಾರೆ ಎಂದು ಹೇಳಿದ್ದು ಹೆಸರು ಹೇಳಿಲ್ಲ.

click me!