ಮೊದಲ ಹೆಂಡತಿ ಮಗಳ ನೆನೆದು ಕಣ್ಣೀರಿಟ್ಟ ಜೈಜಗದೀಶ್, 'ವಿಷ್ಣು ಮನೆಯಲ್ಲೇ ಇದ್ದೆ'

By Web Desk  |  First Published Oct 23, 2019, 11:43 PM IST

ಬಿಗ್ ಬಾಸ್ ಮನೆಯಲ್ಲಿ ಮಗಳ ನೆನೆದು ಕಣ್ಣೀರಿಟ್ಟ ಜೈಜಗದೀಶ್/ ಮಗಳ ಜೀವನವ ನೆನೆದು ಭಾವುಕನಾದ ನಟ/ 1980ನೇ ದಶಕದ ಕತೆ ಹೇಳಿದ ಹಿರಿಯ ಕಲಾವಿದ


ಬಿಗ್ ಬಾಸ್ ಮನೆಯಲ್ಲಿ  ಜೈಜಗದೀಶ್ ತಮ್ಮ ಮಾತುಗಳಲ್ಲೇ ತಮ್ಮ ಜೀವನದ ನೋವಿನ ಕತೆಯನ್ನು ಹೇಳುತ್ತಾ ಹೋದರು. ಯಾರಿಗೆ ಸಾರಿ ಹೇಳುತ್ತಿರಿ? ಎಂಬುದರ ಮುಂದುವರಿದ ಭಾಗದಲ್ಲಿ ಜೈಜಗದೀಶ್ ನಿರಂತರವಾಗಿ ಮಾತನಾಡುತ್ತಲೇ ಹೋದರು. 

ನಾನು  ಸಿನಿಮಾ ರಂಗಕ್ಕೆ ಬಂದಾಗ 1976, ಅಲ್ಲಿಂದ ಮುಂದೆ ಸಿನಿಮಾ ಮಾಡುತ್ತ ಮಾಡುತ್ತಾ ತುಂಬಾ ಸಕ್ಸಸ್ ನೋಡಿದೆ. ಸಾಕಷ್ಟು ಹಣ ಸಂಪಾದನೆ ಮಾಡಿದೆ. ಅದರ ನಶೆಯೋ, ಅಹಂಕಾರವೋ ಏನೋ.. ಕ್ಲಬ್ ಗಳಿಗೆ ಹೋಗುವುದು.. ಫ್ರೆಂಡ್ಸ್.. ಕಾರು ಹೀಗೆ ಜೀವನ ನಡೆದುಕೊಂಡು ಹೋಗ್ತಾ ಇತ್ತು. 

Tap to resize

Latest Videos

ಒಂದು ಸಣ್ಣ ಅಹಂ ಇತ್ತು. 1980ನೇ ಇಸವಿಯಲ್ಲಿ ಸಿನಿಮಾ ಮಾಡುತ್ತಿರುವಾಗಲೇ ರೂಪಾ ಏನ್ನುವರ ಪರಿಚಯವಾಯ್ತು. ಪರಿಚಯ ಪ್ರೀತಿಗೆ ತಿರುಗಿತು. ಇದನ್ನು ಯಾರಿಗಾದರೂ ಹೇಳಿದರೆ ಕಟ್ ಆಫ್ ಮಾಡುತ್ತಾರೆನೋ ಅಂದುಕೊಂಡೆವು. ರೂಪಾ ಅವರ ಮಾವ ಸಹ ಬಹಳ ಕಟ್ಟುನಿಟ್ಟಾಗಿದ್ದರು.

ರವಿ ಬೆಳಗೆರೆ ಮನೆಯಿಂದ ಹೊರಬಂದ ನಂತರ ಮಾಡುವ ಮೊದಲ ಕೆಲಸ

ಈ ನಡುವೆ ಸಾಹಸಸಿಂಹ ವಿಷ್ಣುವರ್ಧನ್ ಸಹಾಯ ತೆಗೆದುಕೊಂಡು ಮದುವೆಯಾದೆವು. ಈಗ ವಿಷ್ಣುವರ್ಧನ್ ಸಮಾಧಿ ಏನಿದೆ ಅಭಿಮಾನ್ ಸ್ಟುಡಿಯೋ.. ಅಲ್ಲಿ ಒಂದು ದೇವಾಲಯವಿತ್ತು. ಅಲ್ಲಿಯೇ ಮದುವೆಯಾದೆವು. ಮದುವೆ ವೇಳೆ ವಿಇದ್ದರು..ಭಾರತಿ ಇದ್ದರು.. ಅಜಂತಾ ಮೂವಿಸ್ ನ ಕೆಲವು ಸ್ನೇಹಿತರು ಇದ್ದರು. ಆ ಸಂದರ್ಭ ಎರಡು ಮೂರು ದಿನ ವಿಷ್ಣು ಮನೆಯಲ್ಲೇ ಇದ್ದೆವು.

ಇದಾದ ನಂತರ 1982ರಲ್ಲಿ ನನಗೊಬ್ಬಳು ಮಗಳು ಹುಟ್ಟಿದಳು. ಹೆಸರು ಅರ್ಪಿತಾ.. ಜೀವನ ಹೀಗೆ ಸಾಗುತ್ತಿರಬೇಕಾದರೆ ಒಂದು ಆರು ವರ್ಷದ ನಂತರ ನನಗೂ-ರೂಪಾಗೂ ಒದು ಭಿನ್ನಾಭಿಪ್ರಾಯ ಬಂತು. ಅಲ್ಲಿಂದ ನಾವು ಭೇಟಿ ಆಗಲೇ ಇಲ್ಲ. ನಾನು ಹೊಟೆಲ್ ವೊಂದರಲ್ಲಿ 8 ವರ್ಷ ರೂಂ ಮಾಡಿಕೊಂಡು ಉಳಿದುಬಿಟ್ಟೆ.

ಈ ನಡುವೆ ನನ್ನ ಮಗಳು ಸಹ ದೊಡ್ಡವಳಾಗುತ್ತಿದ್ದಳು. ಒಂದು ದಿನ ರೂಪಾ ನನಗೆ ವಿಚ್ಛೇದನ ಕೊಡಿ ಎಂದು ಕೇಳಿದದಳು. ನಾನು ಸಹಿ ಮಾಡಿದೆ. ಇದಾಗಿ ಎಷ್ಟೋ ವರ್ಷಗಳ ನಂತರ ಮಗಳ ಭೇಟಿಯಾಯಿತು. ನಂತರ ಅವಳಿಗೊಂದು ಮದುವೆ ಮಾಡಿದೆವು. ಆರೇಳು ವರ್ಷ ಗಂಡನ ಜತೆ ನೆಮ್ಮದಿಯಿಂದ ಮಗಳು ಇದ್ದಳು. ಆದರೆ ಮಕ್ಕಳಾಗಲಿಲ್ಲ.

ನಾವೆಲ್ಲ ಕುಳಿತು ಯಾಕೆ ಮಕ್ಕಳಾಗಲಿಲ್ಲ ಎಂದು ಚರ್ಚೆ ಮಾಡಿದವು. ಆಗ ನನ್ನ ಮಗಳು ತನ್ನ ಗಂಡ ಮಗು ಬೇಡ ಎಂದು ಹಠ ಹಿಡಿದಿದ್ದಾರೆ. ಅದೇ ಕಾರಣ ಎಂದು ತಿಳಿಸಿದಳು.

ನನ್ನ ಮಗಳು ಬೆಂಬಲವಾಗಿರಬೇಕಿದ್ದ ಇಬ್ಬರನ್ನು ಕಳೆದುಕೊಂಡಿದ್ದಾಳೆ. ಒಂದು ಕಡೆ ಗಂಡ ಇಲ್ಲ. ತಂದೆ ಇಲ್ಲ.. ನಾನು ಬಹಳಷ್ಟು ಸಂದರ್ಭ ಅವಳಿಗೆ ಧೈರ್ಯ ಹೇಳುತ್ತೇನೆ. ನನ್ನ ಮತ್ತು ರೂಪಾಳ ಮಿಸ್ಟೇಕ್ ನಿಂದ ಆಕೆ ಪೋಷಕರ ಪ್ರೀತಿ ಕಳೆದುಕೊಂಡಳು.. ನನ್ನ ಮಗಳು ಸದಾ ಚೆನ್ನಾಗಿರಲಿ ಎಂದು ಬಯಸುತ್ತೇನೆ.


 

click me!