
ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಕಾಲ ಇದ್ದು ಬಂದ ಹಿರಿಯ ಪತ್ರಕರ್ತ ರವಿ ಬೆಳಗೆರೆ ಪಡೆದುಕೊಂಡ ಸಂಭಾವನೆ ಎಷ್ಟು ಎಂಬ ಚರ್ಚೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿಯೇ ನಡೆಯುತ್ತಿದೆ.
ಒಂದು ವಾರ ಕಾಲ ಒಂದು ರೂಪಾಯಿಯನ್ನು ಪಡೆದುಕೊಳ್ಳದೇ ರವಿ ಬೆಳಗೆರೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು ಎಂದು ಸೋಶಿಯಲ್ ಮೀಡಿಯಾದಲ್ಲಿ ಬೆಳಗೆರೆ ಚಿತ್ರದೊಂದಿಗೆ ಅವರ ಅಭಿಮಾನಿಗಳು ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ.
ಮನೆಯಿಂದ ಹೊರಬಂದ ಮೇಲೆ ಬೆಳಗೆರೆ ಮಾಡುವ ಮೊದಲ ಕೆಲಸ
ಅವರ ಆಪ್ತ ವಲಯದಲ್ಲಿಯೂ ಈ ಬಗ್ಗೆ ಸುವರ್ಣ ನ್ಯೂಸ್. ಕಾಂ ವಿಚಾರಿಸಿತು. ರವಿ ಬೆಳಗೆರೆ ಒಂದೇ ಒಂದು ರೂಪಾಯಿ ಪಡೆದುಕೊಂಡಿಲ್ಲ. ಸದ್ಯ ಅವರು ದಾಂಡೇಲಿಯಲ್ಲಿ ಇದ್ದಾರೆ ಎಂಬ ಉತ್ತರ ಸಿಕ್ಕಿದೆ.
ಹಲವು ಸಂದರ್ಭಗಳಲ್ಲಿ ಮಾತನಾಡುತ್ತ ಬೆಳಗೆರೆ ನಾನು ಎಲ್ಲವನ್ನು ಹಣದಿಂದ ಅಳೆಯುವುದಿಲ್ಲ. ಪ್ರೀತಿ-ಪ್ರೇಮ, ವಿಶ್ವಾಸ, ನಂಬಿಕೆ ಹಣಕ್ಕಿಂತ ಮಿಗಿಲಾದದ್ದು ಎಂದು ಅನೇಕ ಸಲ ಹೇಳಿದ್ದರು.
ತಮ್ಮ ಅಮ್ಮನ ಬಗ್ಗೆ ಮಾತನಾಡಿದ ಬೆಳಗೆರೆ ಹೇಳಿದ್ದಿಷ್ಟು
ಆದರೆ ಇನ್ನೊಂದು ವಲಯ ಮಾತ್ರ ಇದಕ್ಕೆ ಭಿನ್ನವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಬೆಳಗೆರೆ ಗೌರವ ಧನ ಪಡೆದುಕೊಳ್ಳಲಿದ್ದಾರೆ ಎಂದು ಕಲರ್ಸ್ ಮೂಲಗಳು ಅಧಿಕೃತಮಾಡಿವೆ. ವಿಚಾರಗಳು ಏನೇ ಇದ್ದರೂ ಇಲ್ಲಿಯವರೆಗೆ ಬೆಳಗೆರೆ ಯಾವುದೇ ಗೌರವ ಧನ ಪಡೆದುಕೊಂಡಿಲ್ಲ.
ಈ ವಿಚಾರಗಳು ಏನೇ ಇರಲಿ , ಬೆಳಗೆರೆ ಇದ್ದ ಒಂದು ವಾರ ಕಾಲ ಮನೆಯಲ್ಲಿ ಲವಲವಿಕೆ ಇತ್ತು. ಯಾರಿಗೂ ಗೊತ್ತಿರದ ಅನೇಕ ವಿಚಾರಗಳನ್ನು ಬೆಳಗೆರೆ ಹಂಚಿಕೊಂಡರು. ಅಪ್ಪನಾಗಿ, ಅಣ್ಣನಾಗಿ, ತಮ್ಮನಾಗಿ ಈ ಮನೆ ನನ್ನನ್ನು ನೋಡಿದೆ. ಈ ಮನೆ ನೀಡಿದ ಪ್ರೀತಿಗೆ ಧನ್ಯವಾದ ಎಂದು ಹೇಳಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.