
ಬಿಗ್ ಬಾಸ್ ಸೀಸನ್ 6ರ ವಿಜೇತ ಶಶಿ ಕುಮಾರ್ ಲೈಮ್ ಲೈಟಿಂದ ದೂರ ಉಳಿದು, ಕೃಷಿ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಸಚಿವ ಮುನಿರತ್ನ ಅವರನ್ನು ಭೇಟಿ ಮಾಡಿ ಮಾತನಾಡಿರುವ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಕೋಲಾರದಲ್ಲಿ ಸಂಸ್ಕರಣಾ ಘಟಕವನ್ನು ತರುವಲ್ಲಿ ತೋಟಗಾರಿಕಾ ಸಚಿವರನ್ನು ಅವರ ವಿಧಾನ ಸೌಧ ಕಚೇರಿಯಲ್ಲಿ ಭೇಟಿ ಮಾಡಿ ವಿನಂತಿಸಿದೆವು. ಕೃಷಿ ಬೆಳೆಗಳಿಗೆ ಸಂಸ್ಕರಣಾ ಘಟಕವನ್ನು ಒಂದು ಜಿಲ್ಲೆ, ಒಂದು ಬೆಳೆ ಯೋಜನೆಯಡಿ ತರಲು ಚರ್ಚೆ ಮಾಡಿದೆವು. ಇದು ಭವಿಷ್ಯದ ಹೊಸ ಪೀಳಿಗೆಯ ರೈತರಿಗೆ ತಮ್ಮ ಉತ್ಪನ್ನಗಳನ್ನು ರಸ್ತೆಗಳಲ್ಲಿ ಎಸೆಯುವ ಬದಲು ಮಾರ್ಕೆಟಿಂಗ್ ಮಾಡಲು ಸಹಾಯ ಮಾಡುತ್ತದೆ,' ಎಂದು ಬರೆದುಕೊಂಡಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಶಶಿ ಅವರಿಗೆ ಆಧುನಿಕ ರೈತ ಎಂದೇ ಕರೆಯಲಾಗುತ್ತದೆ. ತಮ್ಮ ಫಾಲೋವರ್ಸ್‌ಗೂ ವಿಡಿಯೋ ಮೂಲಕ ಕೃಷಿ ಬಗ್ಗೆ ಜ್ಞಾನ ಹೆಚ್ಚಿಸುತ್ತಿದ್ದಾರೆ. 'ಲಾಕ್‌ಡೌನ್ ನಂತರ ಯುವಕರಿಗೆ ಕೃಷಿ ಬಗ್ಗೆ ಆಸಕ್ತಿ ಹೆಚ್ಚಾಗಿದೆ. ಎಲ್ಲರೂ ತಮ್ಮ ಊರಿಗೆ ಹೋಗಿ ಕೃಷಿ ಮಾಡುತ್ತಿದ್ದಾರೆ. ಒಂದು ಜಿಲ್ಲೆಗೆ ಒಂದು ಯುನಿಟ್ ಮಾಡಿದರೆ, ಯಾವ ರೈತರಿಗೂ ಲಾಸ್ ಆಗುವುದಿಲ್ಲ, ತಮ್ಮೆ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ,' ಎಂಬುವುದು ಈ ಆಧುನಿಕ ಕೃಷಿಕನ ಅಭಿಪ್ರಾಯ.
ಮೆಹಬೂಬ ಚಿತ್ರದ ಮೂಲಕ ಶಶಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಶೀಘ್ರದಲ್ಲಿ ಮೈಸೂರಿನಲ್ಲಿ ಈ ಚಿತ್ರದ ಚಿತ್ರೀಕರಣವನ್ನು ತಂಡ ಆರಂಭಿಸಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.