ಬಿಗ್​ಬಾಸ್​ ಮನೆಯಲ್ಲೇ ಗರ್ಭಿಣಿ ಸುದ್ದಿ ಬೆನ್ನಲ್ಲೇ ದಂಪತಿ ಮಾರಾಮಾರಿ: ಪತಿ ಕುತ್ತಿಗೆ ಹಿಡಿದ್ರೆ, ಪತ್ನಿ ಚಪ್ಪಲಿ ಎಸೆದಳು!

By Suvarna News  |  First Published Nov 22, 2023, 12:44 PM IST

ನಟಿ ಅಂಕಿತಾ ಲೋಖಂಡೆ ಬಿಗ್​ಬಾಸ್​ ಮನೆಯಲ್ಲೇ ತಾವು ಗರ್ಭಿಣಿಯಾಗಿರುವ ಸುದ್ದಿ ಹೇಳಿದ್ದರು. ಇದರ ಬೆನ್ನಲ್ಲೇ ದಂಪತಿ ನಡುವೆ ಮಾರಾಮಾರಿ ನಡೆದಿದೆ. 
 


 ನಟ ಸಲ್ಮಾನ್​ ಖಾನ್​ ನಡೆಸಿಕೊಡುವ ಹಿಂದಿ ಬಿಗ್​ಬಾಸ್​ ಸಕತ್​ ಸುದ್ದಿ ಮಾಡುತ್ತಿದೆ. ಇದಕ್ಕೆ  ಕಾರಣ, ಇದರ ಸ್ಪರ್ಧಿ  ಟಿವಿ ತಾರೆ ಮತ್ತು ನಟಿ ಅಂಕಿತಾ ಲೋಖಂಡೆ ಗರ್ಭಿಣಿಯಾಗಿದ್ದಾರೆ ಎನ್ನುವ ಸುದ್ದಿ. ಅಷ್ಟಕ್ಕೂ ಅಂಕಿತಾ ಮತ್ತು ಅವರ ಪತಿ ವಿಕ್ಕಿ ಜೈನ್  ಸಲ್ಮಾನ್ ಖಾನ್ ಅವರ ರಿಯಾಲಿಟಿ ಶೋ ಬಿಗ್ ಬಾಸ್ 17ನಿಂದ ಸಕತ್​ ಸುದ್ದಿಯಲ್ಲಿದ್ದಾರೆ. ಈ ಸಲದ  ಬಿಗ್ ಬಾಸ್‌  ಉಳಿದ ಸೀಸನ್​ಗಿಂತ ವಿಭಿನ್ನವಾಗಿದ್ದು, ಇತರ ಸ್ಪರ್ಧಿಗಳ ಜೊತೆಗೆ ಗಂಡ ಹೆಂಡತಿ ಕೂಡ ಸ್ಪರ್ಧಿಗಳಾಗಿ ಮನೆಗೆ ಕಾಲಿರಿಸಿದ್ದಾರೆ. ಅದರಲ್ಲಿ ಈ ಬಾರಿ ಹೆಚ್ಚು ಸುದ್ದಿಯಾಗುತ್ತಿರುವುದು ಈ ಜೋಡಿ. ಇದಕ್ಕೆ  ಕಾರಣ ಇವರಿಬ್ಬರ ಕಚ್ಚಾಟ.   ಕಾರ್ಯಕ್ರಮದ ಮೊದಲು ಅವರು ಇನ್ಸ್ಟಾಗ್ರಾಮ್​ ಪರ್ಫೆಕ್ಟ್ ಜೋಡಿಯಾಗಿದ್ದರೂ, ಅವರು ಬಿಗ್ ಬಾಸ್ 17 ನಲ್ಲಿ ಜಗಳವಾಡಿ ಎಲ್ಲರ ಅಸಮಾಧಾನಕ್ಕೆ ಕಾರಣರಾಗಿದ್ದರು. ವಿಕ್ಕಿ ಸಾಮಾನ್ಯವಾಗಿ ಅಂಕಿತಾ ಅವರನ್ನು ಇತರ ಸ್ಪರ್ಧಿಗಳ ಮುಂದೆ ಕೀಳಾಗಿ ಕಾಣುತ್ತಿರುವುದನ್ನು ವಿಡಿಯೋ ವೈರಲ್​ ಆಗಿತ್ತು.   

ಇವೆಲ್ಲಾ ಡ್ರಾಮಾಗಳ ನಡುವೆಯೇ ಅಂಕಿತಾ ತಾವು ಗರ್ಭಿಣಿ ಇರಬಹುದು ಎಂದು ಸುದ್ದಿ ಮಾಡಿ ವಾರ ಕಳೆಯುತ್ತಾ ಬಂದಿದೆ.  ತಾವು  ಬಹುಶಃ  ಗರ್ಭಿಣಿ ಇರಬಹುದು ಎಂದು ಅಂಕಿತಾ ಹೇಳಿದ್ದ ವಿಡಿಯೋ ವೈರಲ್​ ಆಗಿತ್ತು.  ತಮಗೆ  ಹುಳಿ ತಿನಬೇಕೆಂದು ಅನಿಸುತ್ತಿದೆ, ತಮಗೆ  ಪಿರಿಯಡ್ಸ್ ಮಿಸ್ ಆಗಿದೆ ಎಂದು ಹೇಳಿದ್ದು, ಬಹುಶಃ ಆಕೆ ಗರ್ಭಿಣಿ ಎಂದು ಈ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿತ್ತು. ಆದರೆ ವೈದ್ಯಕೀಯ ವರದಿಗೆ ಮೂತ್ರವನ್ನು ಕಳುಹಿಸಿರುವುದಾಗಿ ಹೇಳಿ ಹಲವು ದಿನಗಳು ಕಳೆದರೂ ಈ ಬಗ್ಗೆ ಬಿಗ್​ಬಾಸ್​ ಮತ್ತು ನಟಿ ಇಬ್ಬರೂ ಮೌನವಾಗಿದ್ದಾರೆ. ಇವೆಲ್ಲವೂ ಪ್ರಚಾರದ ಗಿಮಿಕ್​ ಎಂದು  ಪ್ರೇಕ್ಷಕರು ಸಕತ್​ ಟ್ರೋಲ್​ ಮಾಡುತ್ತಿದ್ದಾರೆ. 

Tap to resize

Latest Videos

ಬಿಗ್​ಬಾಸ್​ ಮನೆಯಲ್ಲೇ ಗರ್ಭಿಣಿಯಾದೆಯೆಂದ ನಟಿ ಅಂಕಿತಾ, ಮಾಜಿ ಪ್ರೇಮಿ ಸುಶಾಂತ್​ ಸಿಂಗ್​ ಕುರಿತು ಹೇಳಿದ್ದೇನು?

ಈಕೆ ಗರ್ಭಿಣಿಯಾಗಿದ್ದು, ಸುಳ್ಳೋ, ನಿಜವೋ ಗೊತ್ತಿಲ್ಲ. ಆದರೆ ಪತಿ-ಪತ್ನಿಯ ನಡುವೆ ಬಿಗ್​ಬಾಸ್​​ ಮನೆಯಲ್ಲಿ ವಿಚಿತ್ರ ಸನ್ನಿವೇಶಗಳು ಸೃಷ್ಟಿಯಾಗುತ್ತಿವೆ. ಇದೀಗ ವಿಕ್ಕಿ ಅವರು ಪತ್ನಿಯ ಕುತ್ತಿಗೆ ಹಿಡಿದಿದ್ದರೆ, ಪತಿ ಅಂಕಿತಾ ತಮ್ಮ ಎರಡೂ ಚಪ್ಪಲಿಗಳನ್ನು ಪತಿಯತ್ತ ಬೀಸಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಬಿಗ್​ಬಾಸ್​ನ ಇತರ ಸ್ಪರ್ಧಿಗಳಾಗಿರುವ ಇಶಾ ಮಾಳವಿಯಾ, ಖಾಂಜಾದಿ, ಅನುರಾಗ್ ದೋವಲ್, ವಿಕ್ಕಿ ಜೈನ್ ಮತ್ತು ಮುನಾವರ್ ಫರುಕಿ ನಡುವೆ ಆಹಾರದ ಬಗ್ಗೆ ತೀವ್ರ ವಾಗ್ವಾದ ಮತ್ತು ಜಗಳ ನಡೆದಿದೆ.  ವಿಕ್ಕಿ ಜೈನ್ ಅವರ ರೂಮ್‌ಮೇಟ್‌ಗಳು ಬೇಯಿಸಿದ ಆಹಾರವನ್ನು ಬೇಯಿಸಿದ ಆಹಾರವನ್ನು ಖಾಂಜಾದಿಯವರು ತಿನ್ನುವಂತೆ  ವಿಕ್ಕಿ ಮನವೊಲಿಸಿದರು, ಇದರೊಂದಿಗೆ ಅಂಕಿತಾ ಲೋಖಂಡೆ ತಾಳ್ಮೆ ಕಳೆದುಕೊಂಡು ಪತಿ ವಿಕ್ಕಿ ಜೈನ್ ಮೇಲೆ ಹಲ್ಲೆ ನಡೆಸಿದ್ದಾರೆ. 

ಇದೇ ವಿಷಯದಲ್ಲಿ ಇಶಾ ಮತ್ತು ಖಾಂಜಾದಿ ನಡುವೆ ತೀವ್ರ ವಾಗ್ವಾದ ನಡೆದಿದೆ. ಈ ಆಹಾರವನ್ನು ಯಾರು ಯಾರು  ತಿಂದರು ಎಂಬ ಬಗ್ಗೆ ಚರ್ಚೆ ನಡೆದಾಗ ಸ್ಪರ್ಧಿ ಇಶಾ ಮಾಳವಿಯಾ ಮತ್ತು ವಿಕ್ಕಿ ನಡುವೆ ಜಗಳ ನಡೆಯುತ್ತಿದ್ದ ಸಂದರ್ಭದಲ್ಲಿ  ಅಂಕಿತಾ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಅಂಕಿತಾ ಪತಿ  ವಿಕ್ಕಿ ಜೈನ್  ಅಂಕಿತಾಳ ಕತ್ತು ಹಿಡಿದು ಎಳೆದಿದ್ದಾರೆ. ಆಗ ಅಂಕಿತಾ ಅವರನ್ನು ತಳ್ಳಿದ್ದಾರೆ. ಆಗ ವಿಕ್ಕಿ  ಆಕೆಯನ್ನು  ಹಿಂದಿನಿಂದ ಹಿಡಿದಿದ್ದಾರೆ. ಈ ಸಂದರ್ಭದಲ್ಲಿ  ಅಂಕಿತಾ ವಿಕ್ಕಿಯನ್ನು ಹೊಡೆಯಲು ಪ್ರಾರಂಭಿಸಿದಾಗ ಅವರು ಓಡಿ ಹೋದರು. ಸುಮ್ಮನಿರದ ಅಂಕಿತಾ, ತಮ್ಮ ಎರಡೂ ಚಪ್ಪಲಿಗಳನ್ನು ತೆಗೆದು ವಿಕ್ಕಿಗೆ ಹೊಡೆದರು.

ಬಿಗ್​ಬಾಸ್​ಗೆ ಕಾಂಟ್ರವರ್ಸಿ ಜೋಡಿ ರಾಖಿ- ಆದಿಲ್​ ಖಾನ್​ ಎಂಟ್ರಿ? ನಟಿ ಹೇಳಿದ್ದೇನು ನೋಡಿ...

ಇದು ತಮಾಷೆಗಾಗಿ ಎಂದು ಹೇಳಲಾಗುತ್ತಿದೆ. ಆಹಾರದ ವಿಷಯದಲ್ಲಿ ಜಗಳ ವಿಕೋಪಕ್ಕೆ ಹೋಗಿದ್ದರಿಂದ ಪರಿಸ್ಥಿತಿಯನ್ನು ನಿಭಾಯಿಸಲು ಪತಿ-ಪತ್ನಿ ಜಗಳದ ನಾಟಕವಾಡಿದ್ದಾರೆ ಎನ್ನಲಾಗುತ್ತಿದೆ. ಆದರೆ ಸತ್ಯಾಸತ್ಯತೆ ಏನು ಎಂದು ಅವರೇ ಹೇಳಬೇಕು. 

click me!