ಬಿಗ್​ಬಾಸ್​ಗೆ ಕಾಂಟ್ರವರ್ಸಿ ಜೋಡಿ ರಾಖಿ- ಆದಿಲ್​ ಖಾನ್​ ಎಂಟ್ರಿ? ನಟಿ ಹೇಳಿದ್ದೇನು ನೋಡಿ...

By Suvarna News  |  First Published Nov 22, 2023, 12:12 PM IST

ಬಿಗ್​ಬಾಸ್​ 17ಗೆ ಕಾಂಟ್ರವರ್ಸಿ ಜೋಡಿ ಎಂದೇ ಖ್ಯಾತಿ ಪಡೆದಿರುವ ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಜೋಡಿ ಎಂಟ್ರಿ ಕೊಡಲಿದ್ದಾರಂತೆ. ನಟಿ ಹೇಳಿದ್ದೇನು ನೋಡಿ...
 


ರಾಖಿ ಸಾವಂತ್​ ಮತ್ತು ಆದಿಲ್​ ಖಾನ್​ ಜೋಡಿಯ ವಿಷಯ ಕಳೆದೊಂದು ವರ್ಷದಿಂದ ಸಿಕ್ಕಾಪಟ್ಟೆ ಸದ್ದು ಮಾಡುತ್ತಲೇ ಇದೆ. ಒಂದಾದ ಮೇಲೊಂದರಂತೆ ನಾಟಕೀಯ ಬೆಳವಣಿಗೆಗಳು ಈ ಜೋಡಿಯ ನಡುವೆ ನಡೆಯುತ್ತಲೇ ಇದೆ.  ಡ್ರಾಮಾ ಕ್ವೀನ್​ ಎಂದೇ ಫೇಮಸ್​ ಆಗಿರುವ ನಟಿ ರಾಖಿ ಸಾವಂತ್​ (Rakhi Sawant) ಮತ್ತು ಆದಿಲ್​ ಖಾನ್​ ದುರ್ರಾನಿ ಅವರ  ಮದುವೆಯ ಕಥೆ ಸಿನಿಮಾಕ್ಕಿಂತಲೂ ಕುತೂಹಲವಾಗಿದೆ. ಮೈಸೂರಿನ ಯುವಕ ಆದಿಲ್​ ಖಾನ್​ ಮದುವೆಯನ್ನು ನಿರಾಕರಿಸಿದ್ದು, ರಾಖಿ ರಂಪಾಟ ಮಾಡಿದ್ದು, ಕೊನೆಗೂ ಆದಿಲ್​  ಮದುವೆಯನ್ನು ಒಪ್ಪಿಕೊಂಡಿದ್ದು ಎಲ್ಲವೂ ಯಾವ ಸಿನಿಮಾ ಕಥೆಗಿಂತಲೂ ಭಿನ್ನವಾಗಿರಲಿಲ್ಲ. ಎಲ್ಲವೂ ಸುಖಾಂತ್ಯಗೊಂಡಿತು ಎನ್ನುವಾಗಲೇ  ಆದಿಲ್ ತಮಗೆ ಮೋಸ ಮಾಡುತ್ತಿದ್ದಾರೆ, ಹಲ್ಲೆ ಮಾಡಿದ್ದಾರೆ, ಇನ್ನೊಬ್ಬಳ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ,  ಆದಿಲ್‌ಗಾಗಿ   ಇಸ್ಲಾಂಗೆ ಮತಾಂತರ ಮಾಡಿಕೊಂಡಿರುವೆ. ನಾನು ಇಸ್ಲಾಂ ಧರ್ಮವನ್ನು ಒಪ್ಪಿಕೊಂಡು ಆದಿಲ್‌ನ ಮದುವೆ ಆಗಿದ್ದೇನೆ ಎಂದೆಲ್ಲಾ ಆರೋಪಿಸಿದ್ದ ರಾಖಿ ಕೊನೆಗೆ ದೂರು ಕೊಟ್ಟರು. ಇದರಿಂದ ಆದಿಲ್​ (Adil Khan Durrani) ವಿರುದ್ಧ ಎಫ್​ಐಆರ್​ ದಾಖಲಾಗಿದ್ದು ಸದ್ಯ ಅವರು ಜೈಲಿಗೆ ಹೋದದ್ದು, ನಂತರ ಅವರು ಬಿಡುಗಡೆಗೊಂಡ ಬಳಿಕ ಪರಸ್ಪರ ದೋಷಾರೋಪ ಮಾಡುತ್ತಾ ಪತ್ರಿಕಾಗೋಷ್ಠಿ ಮಾಡಿರುವುದು ಎಲ್ಲರಿಗೂ ಗೊತ್ತಿರುವ ವಿಷ್ಯ.

ಇಂಥವರನ್ನೇ ಹೆಕ್ಕಿ ಹೆಕ್ಕಿ ಬಿಗ್​ಬಾಸ್​ಗೆ ಕಳುಹಿಸುವುದು ಬಹಳ ಹಿಂದಿನಿಂದಲೂ ನಡೆದು ಬಂದಿದ್ದೇ. ಇಂಥ ಕಾಂಟ್ರವರ್ಸಿ ಸ್ಪರ್ಧಿಗಳು ಇದ್ದರೇನೇ ಬಿಗ್​ಬಾಸ್​ಗೆ ಟಿಆರ್​ಪಿ ಹೆಚ್ಚಿಗೆ ಬರುವುದು. ಎಲ್ಲರೂ ಕಾಂಟ್ರವರ್ಸಿ ಇದ್ದರೆ ಸಂದೇಹ ಬರುತ್ತದೆ ಎನ್ನುವ ಕಾರಣಕ್ಕೆ ಬೇರೆ ಬೇರೆ ಕ್ಷೇತ್ರಗಳ ಒಂದಿಬ್ಬರು ಸ್ಪರ್ಧಿಗಳನ್ನು ಬಿಗ್​ಬಾಸ್​ ಆಯ್ಕೆ ಮಾಡುವುದು ಉಂಟು. ಆದರೆ ಅವರು ಒಂದು, ಎರಡನೇ ರೌಂಡ್​ನಲ್ಲಿಯೇ ಎಲಿಮಿನೇಟ್​ ಆಗಿ ಹೊರಕ್ಕೆ ಬರುವುದು ಬಿಗ್​ಬಾಸ್​ ಪ್ರೇಮಿಗಳಿಗೆ ಹೊಸ ವಿಷಯವೇನಲ್ಲ. ಒಳಗೆ ಇದ್ದವರು ಸಾಚಾ ಆಗಿದ್ದರೆ ಜನರಿಗೂ ಷೋ ನೋಡಲು ಇಂಟರೆಸ್ಟ್​ ಬರುವುದಿಲ್ಲ ಎನ್ನುವುದು ಎಷ್ಟು ಸತ್ಯವೋ, ಸ್ಪರ್ಧಿಗಳನ್ನು ಹಾಗೂ ಬಿಗ್​ಬಾಸ್​​ ಅನ್ನು ಬೈಯುತ್ತಲೇ ಅದರ ಮಜಾ ತೆಗೆದುಕೊಳ್ಳುವ ದೊಡ್ಡ ವರ್ಗವೇ ಇರುವುದು ಟಿಆರ್​ಪಿ ರೇಟ್​ನಿಂದಲೇ ತಿಳಿದುಬರುತ್ತದೆ.

Tap to resize

Latest Videos

ರಾಖಿ ಪತಿ ಆದಿಲ್‌ ಜೊತೆ ಶೆರ್ಲಿನ್‌ ಚೋಪ್ರಾ ಮತ್ತೆ ರೊಮ್ಯಾನ್ಸ್‌: ವಿಡಿಯೋ ನೋಡಿ ದಂಗಾದ ಫ್ಯಾನ್ಸ್‌!

ಅದೇ ರೀತಿ ಹಿಂದಿ ಬಿಗ್​ಬಾಸ್​ನಲ್ಲಿ ರಾಖಿ ಸಾವಂತ್​ ಈ ಹಿಂದಿನ ಸೀಸನ್​ನಲ್ಲಿಯೇ ಹೋಗಿ ಬಂದಿದ್ದಾರೆ. ಸಹಜವಾಗಿ ಅಲ್ಲಿ ಅವರು ದೊಡ್ಡ ಹಂಗಾಮಾ ಸೃಷ್ಟಿಸಿದ್ದರು. ಸಲ್ಮಾನ್​ ಖಾನ್​ ಅವರು ನಡೆಸಿಕೊಡುತ್ತಿರುವ ಬಿಗ್​ಬಾಸ್​ ಹಿಂದಿ ಇದೀಗ 17ನೇ ಸೀಸನ್​ ನಡೆಯುತ್ತಿದ್ದು, ಇದರಲ್ಲಿಯೂ ಮತ್ತೊಮ್ಮೆ ರಾಖಿ ಸಾವಂತ್​ ಎಂಟ್ರಿ ಕೊಡಲಿದ್ದಾರೆ ಎನ್ನುವ ಸುದ್ದಿ ಹರಡಿದೆ. ಒಬ್ಬರೇ ಅಲ್ಲದೇ ಪತಿ ಆದಿಲ್​ ಖಾನ್​ ಜೊತೆ ಹೋಗುತ್ತಿರುವುದಾಗಿ ಸಕತ್​ ಸದ್ದು ಮಾಡುತ್ತಿದೆ. ಇವರಿಬ್ಬರೂ ಬಿಗ್​ಬಾಸ್​ಗೆ ಹೋದರೂ ಅದೇನು ದೊಡ್ಡ ವಿಷಯವೇ ಅಲ್ಲ. ಇವರಿಬ್ಬರ ಕಿತ್ತಾಟ ನೋಡಿ ಮಜಾ ತೆಗೆದುಕೊಳ್ಳುವವರು ಹಲವರು ಇರುವಾಗ, ಇದೇನು ಮಹಾ ವಿಷಯವೇ ಅಲ್ಲ. ಇದರ ಸುದ್ದಿ ವೈರಲ್​ ಆಗುತ್ತಿದ್ದಂತೆಯೇ ಕೆಲವರು ಈಗ ಬಿಗ್​ಬಾಸ್​ಗೆ  ಮಜಾ ಬರುತ್ತದೆ ಎಂದಿದ್ದರೆ, ಇನ್ನು ಕೆಲವರು ತಾವು ಷೋ ನೋಡುವುದನ್ನು ಬಿಡುವುದಾಗಿ ಹೇಳುತ್ತಿದ್ದಾರೆ.

ಆದರೆ ಇನ್​ಸ್ಟಾಗ್ರಾಮ್​ನಲ್ಲಿ ಈ ಸುದ್ದಿ ವೈರಲ್​ ಆಗುತ್ತಿದ್ದಂತೆಯೇ ನಟಿ ರಾಖಿ ಅವರು ಖುದ್ದು ಸ್ಪಷ್ಟನೆ ಕೊಟ್ಟಿದ್ದಾರೆ. ಇದು ಸುಳ್ಳು ಸುದ್ದಿ. ನಾನು ದುಬೈನಲ್ಲಿ ಇದ್ದೇನೆ. ನನ್ನ ಹೆಸರು ಹೇಳಿಕೊಂಡು ಆದಿಲ್​ ಖಾನ್​ ಪ್ರಚಾರ ಗಿಟ್ಟಿಸಿಕೊಳ್ಳಲು ಬಯಸುತ್ತಿದ್ದಾನೆ. ನಾನು ಯಾವುದೇ ಕಾರಣಕ್ಕೂ ಬಿಗ್​ಬಾಸ್​ಗೆ ಹೋಗುತ್ತಿಲ್ಲ. ಈ ಗಾಳಿ ಸುದ್ದಿಯನ್ನು ನಂಬಬೇಡಿ ಎಂದು ಕಮೆಂಟ್​ ಸೆಕ್ಷನ್​ನಲ್ಲಿ ಹೇಳಿದ್ದಾರೆ. ಅದೇ ಇನ್ನೊಂದೆಡೆ, ನಟಿ ನಾನು ಬಿಗ್​ಬಾಸ್​ಗೆ ಬರಲು ರೆಡಿ ಆದರೆ ಆದಿಲ್​ ಖಾನ್​ ನನ್ನ ಸುತ್ತಲೂ ಇರಬಾರದು ಎಂದಿದ್ದಾರೆ. ಆದ್ದರಿಂದ ರಾಖಿ ಹೇಳಿಕೆಯಲ್ಲಿ ಗೊಂದಲವಿದ್ದು, ಏನಾಗುತ್ತದೆ ಎಂದು ಬಿಗ್​ಬಾಸ್​ ಪ್ರೇಮಿಗಳು ಕಾತರದಿಂದ ಕಾಯ್ತಿದ್ದಾರೆ. ಇದೇ ವೇಳೆ ಇನ್ನೋರ್ವ ಸೆಕ್ಸಿ ನಟಿ ಪೂನಂ ಪಾಂಡೆ ಕೂಡ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. 

ಅದೆಷ್ಟು ನಟಿಯರ ಜೊತೆ ಬೆಡ್​ರೂಂ​, ರೇಪ್​ ಸೀನ್​ ಮಾಡಿರುವೆ, ನಟಿ ತ್ರಿಷಾಗೆ ಕ್ಷಮೆ ಕೇಳಲು ನಂಗೇನು ಹುಚ್ಚಾ?

 

click me!