10 ಲಕ್ಷ ಪಡೆದುಕೊಂಡು ಕೊನೆಯಲ್ಲಿ Bigg Boss ಬಿಟ್ಟಿದಕ್ಕೆ ಯಾವುದೇ ಪಶ್ಚತಾಪವಿಲ್ಲ ಎಂದ ನಟ!

Contributor Asianet   | Asianet News
Published : Feb 03, 2022, 02:02 PM IST
10 ಲಕ್ಷ ಪಡೆದುಕೊಂಡು ಕೊನೆಯಲ್ಲಿ Bigg Boss ಬಿಟ್ಟಿದಕ್ಕೆ ಯಾವುದೇ ಪಶ್ಚತಾಪವಿಲ್ಲ ಎಂದ ನಟ!

ಸಾರಾಂಶ

ಗೆಲ್ಲುವ ಸಾಮರ್ಥ್ಯವಿದ್ದರೂ ಹಣ ಪಡೆದುಕೊಂಡು ಫಿನಾಲೆಯಿಂದ ಹೊರ ಬಂದ ನೃತ್ಯ ನಿರ್ದೇಶನ ಮಾತುಗಳಿದು...

ಹಿಂದಿ ಜನಪ್ರಿಯ ಬಿಗ್ ಬಾಸ್ ಸೀಸನ್ 15 (Bigg boss 15) ಕೆಲವು ದಿನಗಳ ಹಿಂದೆ ಮುಕ್ತಾಯವಾಗಿದೆ. ವಿನ್ನರ್ ಟ್ರೋಫಿಯನ್ನು ನಾಗಿಣಿ ನಟಿ ತೇಜಸ್ವಿ ಪ್ರಕಾಶ್ (Tejawsi Prakash) ಪಡುಕೊಂಡಿದ್ದಾರೆ, ಜೊತೆ ಕೈಯಲ್ಲಿ  40 ಲಕ್ಷ ರೂಪಾಯಿ ಹಣ ಮತ್ತು ಹ್ಯಾಂಡ್ಸಮ್ ಬಾಯ್‌ಫ್ರೆಂಡ್. ಪ್ರತಿ ಸೀಸನ್‌ನಲ್ಲೂ ಫಿನಾಲೆ ವಾರಕ್ಕೆ 5 ಮಂದಿ ಸೆಲೆಕ್ಟ್ ಆಗುತ್ತಾರೆ, ಐವರೂ ಕೂಡ ಟ್ರೋಫಿ ಮತ್ತು ಜನರ ವೋಟಿಂಗ್ ಪಡೆದುಕೊಂಡಿರುವವರೇ. ಆದರೆ ಈ ಹಂತದಲ್ಲಿ ನೃತ್ಯ ನಿರ್ದೇಶಕ ಬೇಕೆಂದು ಅರ್ಧಕ್ಕೆ ಬಿಟ್ಟಿದ್ದು ಅನೇಕರಲ್ಲಿ ಗೊಂದಲ ಸೃಷ್ಟಿಯಾಗಿದೆ. 

ನಿಶಾಂತ್ ಭಟ್ ಮಾತು:

'ಎಂದೂ ನಾನು ಇಷ್ಟು ದೂರ ಬರುವೆ ಎಂದುಕೊಂಡಿರಲಿಲ್ಲ ಹೀಗಾಗಿ ಬ್ಯಾಗ್ ತುಂಬಾ ಹಣ (Money) ಹಿಡಿದುಕೊಂಡು ಹೋಗುವುದಕ್ಕೆ ನನಗೆ ತುಂಬಾನೇ ಸಂತೋಷವಿದೆ. ಕಳೆದ ವರ್ಷ ಬಿಗ್ ಬಾಸ್ ಓಟಿಟಿ (BB OTT) ಸಮಯದಲ್ಲೂ ನಾನು ಎರಡನೇ ಸ್ಥಾನ ಪಡೆಯುವೆ ಎಂದುಕೊಂಡಿರಲಿಲ್ಲ.ನಾನು ನನ್ನ ಬೆಸ್ಟ್‌ ಹಾಕುವೆ ಬೇರೆ ಎಲ್ಲವೂ ಅದರ ಹಿಂದಿರುವ ಶಕ್ತಿ' ಎಂದು ಖಾಸಗಿ ಸಂದರ್ಶನದಲ್ಲಿ ನಿಶಾಂತ್ ಭಟ್ ಮಾತನಾಡಿದ್ದಾರೆ

Bigg Boss: ಈ ಕಂಡೀಷನ್‌ಗೆ ಒಪ್ಪಿದ್ದರೆ ಸೀಸನ್ 16 ಹೋಸ್ಟ್‌ ಮಾಡುತ್ತಾರಂತೆ ಸಲ್ಮಾನ್‌!

'ಎಲ್ಲರಿಗೂ ಡಿಫರೆಂಟ್ ಜರ್ನಿ ಇದೆ ನನ್ನ ವೀಕ್ಷಕರು ತೇಜಸ್ವಿಯನ್ನು ಆಯ್ಕೆ ಮಾಡಿದ್ದಾರೆ. ಆದರೆ ನನ್ನ ವೈಯಕ್ತಿಕ ಅನಿಸಿಕೆ ಏನೆಂದರೆ ಪ್ರತೀಕ್ ಸೆಹಜ್ಪಾಲ್ (Pratik Sehajpal ) ಗೆಲ್ಲಬೇಕಿತ್ತು ಆದರೆ ಇರ್ಲಿ ಬಿಡಿ ಪರ್ವಾಗಿಲ್ಲ ತೇಜಸ್ವಿ ಕೂಡ ನನ್ನ ಸ್ನೇಹಿತೆ' ಎಂದು ಟ್ರೋಫಿ ಯಾರು ಗೆಲ್ಲಬೇಕಿತ್ತು ಎಂದು ಹೇಳಿದ್ದಾರೆ. 

ಬಿಗ್ ಬಾಸ್ ರಿಯಾಲಿಟಿ ಶೋ ಸ್ಪರ್ಧಿಗಳ ಜೀವನವನ್ನು ಬದಲಾಯಿಸುತ್ತದೆ. 'ನಾನು ಈಗಾಗಲೆ ತುಂಬಾ ರಿಯಾಲಿಟಿ ಶೋಗಳನ್ನು ಗೆದ್ದಿರುವೆ ಆದರೆ ಎಲ್ಲವೂ ಡ್ಯಾನ್ಸ್‌ ಆಗಿತ್ತು ಅದು ಮಕ್ಕಳ ಜೊತೆಗೆ. ನಾನು ಹಲವು ವರ್ಷಗಳಿಂದ ಚಿತ್ರರಂಗದಲ್ಲಿರುವ ದೊಡ್ಡ ಜರ್ನಿ ಇದು ನನ್ನ ಕೆಲಸದಿಂದ ಜನರು ನನ್ನ ಗುರುತಿಸುತ್ತಾರೆ. ಈಗ ಅವರಿಗ ನನ್ನ ಬಗ್ಗೆ ಪರ್ಸನಲ್ ಅಗಿ ಗೊತ್ತಿದೆ' ಎಂದು ನಿಶಾಂತ್ (Nishanth bhat) ಹೇಳಿದ್ದಾರೆ. 

Bigg Boss 15: ಶಿಲ್ಪಾ ತಂಗಿಗೆ ಆಂಟಿ ಅಂದಾಕೆ ಬಿಗ್‌ಬಾಸ್‌ ವಿನ್ನರ್‌! ಅಷ್ಟಕ್ಕೂ ಈ ತೇಜಸ್ವಿ ಪ್ರಕಾಶ್‌ ಯಾರು?

ನಿಶಾಂತ್ ತುಂಬಾನೇ ಭಾವನಾತ್ಮಕ ವ್ಯಕ್ತಿ (Emotional person) ಆಗಿರುವ ಕಾರಣ ಬಿಬಿ ಮನೆಯಲ್ಲಿ ತಮ್ಮನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಲು ಅವಕಾಶ ಸಿಗ್ತು ಎಂದಿದ್ದಾರೆ. 'ನನ್ನ ಜೀವನದಲ್ಲಿ ನಡೆದ ಒಂದು ಘಟನೆಯಿಂದ ನಾನು ಭಾವನೆಗಳಿಲ್ಲದ ವ್ಯಕ್ತಿ ಆಗಿರುವೆ ಎಂದುಕೊಂಡಿದ್ದೆ ಆದರೆ ಬಿಗ್ ಬಾಸ್ ಮನೆಯಲ್ಲಿ ನಾನು ತುಂಬಾನೇ ಎಮೋಷನಲ್ ವ್ಯಕ್ತಿ ಎಂದು ಅರ್ಥ ಮಾಡಿಕೊಂಡಿರುವೆ. ನನ್ನಲ್ಲಿ ಅಡಗಿಕೊಂಡಿರುವ ಟ್ಯಾಲೆಂಟ್‌ ಬಗ್ಗೆ ತಿಳಿದುಕೊಂಡೆ ಅದರಲ್ಲೂ ಒಂದು ಹೊತ್ತಿಗೆ 15 ಮಂದಿಗೆ ಅಡುಗೆ ಮಾಡುವುದು ಸುಲಭವಲ್ಲ. ಈಗ ನನಗೆ ಸೆಲ್ಫ್‌ ಕಂಟ್ರೋಲ್‌ ಇದೆ ಯಾವುದೇ ಸಂದರ್ಭ ಎದುರಾದರೂ ತಾಳ್ಮೆಯಿಂದ ಎದರಿಸುವೆ' ಎಂದಿದ್ದಾರೆ. 

ಗೀತಾ ಕಪೂರ್ ಸಪೋರ್ಟ್: 

'ನಾನು ಗೀತಾ ಕಪೂರ್‌ (Geetha Kapur) ಅವರನ್ನು ಸದಾ ಮೇಡಂ ಎಂದು ಕರೆಯುವೆ ಕಾರಣ ಆಕೆ ನನ್ನ ಗುರು ನನ್ನ ಮೆಂಟರ್.  ನಾನು ಅವರ ಜೊತೆ ಬ್ಯಾಗ್ರೌಂಡ್ ಡ್ಯಾನ್ಸರ್ ಅಗಿ ಕೆಲಸ ಮಾಡಿರುವೆ. ನಾನು ಸ್ಪರ್ಧಿಸಿ ಡ್ಯಾನ್ಸ್‌ನಲ್ಲಿ ಅವರು ನನ್ನ ತೀರ್ಪುಗಾರರಾಗಿದ್ದರು. ಅವು ಸದಾ ನನ್ನ ಕೆಲಸ ಹೊಗಳುತ್ತಿದ್ದರು ನಮ್ಮ ನಡುವೆ ಸ್ಪೆಷಲ್ ಬಾಂಡ್' ಎಂದು ಮಾತನಾಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!