Star Suvarna ವಾಹಿನಿಯಲ್ಲಿ ಹೊಸ ಧಾರಾವಾಹಿ 'ಬೆಟ್ಟದ ಹೂ'

Suvarna News   | Asianet News
Published : Feb 03, 2022, 09:34 AM ISTUpdated : Feb 03, 2022, 09:35 AM IST
Star Suvarna ವಾಹಿನಿಯಲ್ಲಿ ಹೊಸ ಧಾರಾವಾಹಿ 'ಬೆಟ್ಟದ ಹೂ'

ಸಾರಾಂಶ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಬೆಟ್ಟದ ಹೂ’ ಶುರುವಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ಎಂಟು ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ.

ಸ್ಯಾಂಡಲ್‌ವುಡ್‌ನ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) ಬಾಲನಟನಾಗಿ ಅಭಿನಯಿಸಿದ ಚಿತ್ರ ‘ಬೆಟ್ಟದ ಹೂ’ (Bettada Hoovu). ಈ ಸಿನಿಮಾದ ನಟನೆಗಾಗಿ ಅವರು ನ್ಯಾಷನಲ್ ಫಿಲ್ಮ್ ಆವಾರ್ಡ್ ಕೂಡಾ ಪಡೆದಿದ್ದರು. ಇದೇ ಸಿನಿಮಾದ ಟೈಟಲ್‌ನಲ್ಲಿ ಧಾರಾವಾಹಿ ಮೂಡಿ ಬರಲಿದೆ. ಹೌದು! ಸ್ಟಾರ್‌ ಸುವರ್ಣ (Star Suvarna) ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಬೆಟ್ಟದ ಹೂ’ ಶುರುವಾಗಿದೆ. ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ಎಂಟು ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. 

ಬಡ ಪ್ರತಿಭಾವಂತ ಹಳ್ಳಿ ಹುಡುಗಿ ಹೂವಿ ಮತ್ತು ಹಳ್ಳಿಗೆ ಆಗಮಿಸಿ ವಿಚಿತ್ರ ಸಂಕಟಗಳಿಗೆ ಸಿಲುಕಿಕೊಳ್ಳುವ ಪತ್ರಕರ್ತ ರಾಹುಲ್‌ ಎಂಬ ಪಾತ್ರಗಳ ಕತೆ ಹೊಂದಿರುವ ಧಾರಾವಾಹಿ ಇದು.  ವಿಶೇಷ ಎಂದರೆ ಈ ಸಿನಿಮಾವನ್ನು ನಿರ್ಮಿಸುತ್ತಿರುವುದು 'ಬಾಹುಬಲಿ' (Bahubali) ಸಿನಿಮಾ ಖ್ಯಾತಿಯ ನಿರ್ಮಾಪಕರಾದ ಶೋಭು ಯಾರ್ಲಗಡ್ಡ (Shobu Yarlagadda) ಮತ್ತು ಪ್ರಸಾದ್‌ ದೇವಿನೇನಿ (Prasad Devineni). ಅವರ ಅರ್ಕ ಮೀಡಿಯಾ ಸಂಸ್ಥೆ (Arka Media) ಈ ಧಾರಾವಾಹಿ ನಿರ್ಮಾಣದ ಹೊಣೆ ಹೊತ್ತಿದೆ. 

ಅಂತ್ಯವಾಗುತ್ತಿದೆ ಕಾವ್ಯಾಂಜಲಿ ಧಾರಾವಾಹಿ; ನಟ Darshan ತಿಳಿಸಿದ ಕಾರಣವಿದು!

ಸತೀಶ್‌ ಕೃಷ್ಣ (Sathish Krishna) ಧಾರಾವಾಹಿ ನಿರ್ದೇಶಿಸಲಿದ್ದಾರೆ. ಡಾ. ನಾಗೇಂದ್ರ ಪ್ರಸಾದ್‌ (Nagendra Prasad) ಸಾಹಿತ್ಯದ ಟೈಟಲ್‌ ಸಾಂಗ್‌ಗೆ ಪ್ರವೀಣ್‌.ಡಿ.ರಾವ್‌ (Praveen D Rao) ಸಂಗೀತ ನೀಡಿದ್ದಾರೆ. ಶ್ರೀವಿದ್ಯಾ, ದರ್ಶಕ್‌, ಪ್ರಕೃತಿ ಪ್ರಸಾದ್‌, ಶ್ರೀನಿವಾಸ್‌ ಪ್ರಭು, ಪದ್ಮಜಾ ರಾವ್‌, ಪ್ರವೀಣ್‌.ಡಿ.ರಾವ್‌, ಸ್ವಾತಿ, ಸುನೇತ್ರ ಪಂಡಿತ್‌, ಅಂಬರೀಷ್‌ ಸಾರಂಗಿ, ನಾರಾಯಣ ಸ್ವಾಮಿ ನಟಿಸುತ್ತಿದ್ದಾರೆ. ಬೆಟ್ಟದ ಹೂ ಧಾರಾವಾಹಿಯಲ್ಲಿ ಪ್ರಕೃತಿ (Prakruti) ನಟಿಸುತ್ತಿದ್ದು, ನಟ ದರ್ಶಕ್​ ಗೌಡ (Darshak Gowda) ಅವರಿಗೆ ಜೋಡಿಯಾಗಲಿದ್ದಾರೆ. 

ಬೆಟ್ಟದ ಹೂ ಕತೆ ಟೈಟಲ್​ಗೆ ತಕ್ಕ ಹಾಗೆ ತುಂಬಾ ವಿಭಿನ್ನವಾಗಿದೆ. ಕಥಾ ನಾಯಕ ರಾಹುಲ್​ ಒಬ್ಬ ​ಮಿಡಲ್​ ಕ್ಲಾಸ್​ ಫ್ಯಾಮಿಲಿಯ ಹುಡುಗ. 7 ವರ್ಷಗಳಿಂದ ಮಾಲಿನಿ ಎಂಬ ಹುಡುಗಿಯನ್ನು ಇಷ್ಟಪಡುತ್ತಿರುತ್ತಾನೆ. ಆ ಹುಡುಗಿ ತುಂಬಾನೆ ಶ್ರೀಮಂತ ಕುಟುಂಬಕ್ಕೆ ಸೇರಿದವಳಾಗಿದ್ದು, ಇಬ್ಬರ ಮನ್ನೆಯಲ್ಲಿಯೂ ಇವರ ಪ್ರೀತಿಯನ್ನು ಒಪ್ಪಿಕೊಂಡಿರುತ್ತಾರೆ ಆದರೆ ರಾಹುಲ್​ ಒಬ್ಬ ಜರ್ನಲಿಸ್ಟ್ (Journalist). ನಕ್ಸಲೆಟ್‌ (Naxalite) ಒಬ್ಬನನ್ನು ಇಂಟರ್​ವ್ಯೂ ಮಾಡಬೇಕು ಅನ್ನೋದು ಅವನ ಬಹಳ ವರ್ಷದ ಕನಸು. ಆ ಒಂದು ಚಾನ್ಸ್​ ಸಿಕ್ಕಿದಾಗ ರಾಹುಲ್​ ಕಾಡಿಗೆ ಹೋಗುತ್ತಾನೆ. 

ಆಕಾಶದೀಪ ಧಾರವಾಹಿಯಿಂದ ಹೊರ ಬಂದ ನಟಿ Shiny Pereira

ಸಮಯದ ಕೈಗೊಂಬೆಯಾಗಿ ಹೂವಿ ಎಂಬ ​ಹುಡುಗಿಯನ್ನ ಮದುವೆಯಾಗುತ್ತಾನೆ. ಹಾಗಾದರೆ ರಾಹುಲ್​ನ ಮುಂದಿನ ಬದುಕು ಹೇಗೆ? ಆ ಕಾಡಿನ ಹುಡುಗಿ ಭವಿಷ್ಯ ಏನಾಗುತ್ತೇ ಅನ್ನೋದೇ ಬೆಟ್ಟದ ಹೂ ಕಥೆಯ ಸಾರಾಂಶ. ಈ ಧಾರಾವಾಹಿಯಲ್ಲಿ ನಾನು ತುಂಬ ಶ್ರೀಮಂತ ಮನೆಯ ಹುಡುಗಿ ಆದರೆ ಅಹಂ ಅನ್ನೋದು ಇರುವುದಿಲ್ಲ. ನನಗೆ ರಾಹುಲ್ ಅಂದರೆ ತುಂಬ ಇಷ್ಟ. ನಾನು ತುಂಬ ಸೈಲೆಂಟ್, ಸಮಾಧಾನ ಇರೋ ಹುಡುಗಿ ತಾಳ್ಮೆ ಇರೋ ಹುಡುಗಿ. ಆದರೆ ರಾಹುಲ್ ವಿಷಯಕ್ಕೆ ಬಂದರೆ ತುಂಬ ವೈಲೆಂಟ್ ಆಗ್ತೀನಿ ಎಂದು ಅವರ ಪಾತ್ರದ ಬಗ್ಗೆ ಪ್ರಕೃತಿ ಅವರು ತಿಳಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?
Naa Ninna Bidalaare: ಗಂಡ ಬೇರೊಬ್ಬಳನ್ನು ಅಪ್ಪಿಕೊಂಡ್ರೆ ಖುಷಿ ಪಡುವ ಜಗತ್ತಿನ ಏಕೈಕ ಹೆಂಡ್ತಿ ಈಕೆ!