ಬಿಗ್ ಬಾಸ್ ಮಾಜಿ ಸ್ಪರ್ಧಿ ಶಿಶಿರ್ ಶಾಸ್ತ್ರಿಯೊಂದಿನ ಒಡನಾಟ ಬಿಚ್ಚಿಟ್ಟ ಕಾವ್ಯಾ ಶೈವ! ಗಿಲ್ಲಿ ನಟ ಫುಲ್ ಸೈಲೆಂಟ್!

Published : Jan 09, 2026, 04:39 PM IST
Kavya Shaiva and Shishir Shastry

ಸಾರಾಂಶ

ಬಿಗ್ ಬಾಸ್ ಸೀಸನ್ 12ರ ಅಂತಿಮ ಹಂತದಲ್ಲಿ, ಸ್ಪರ್ಧಿ ಕಾವ್ಯಾ ಮಾಜಿ ಸ್ಪರ್ಧಿ ಶಿಶಿರ್ ಶಾಸ್ತ್ರಿಯೊಂದಿನ ಒಡನಾಟ ರಿವೀಲ್ ಮಾಡಿದ್ದಾರೆ. ಬಿಗ್ ಬಾಸ್ ಮನೆ ಜೀವನದ ಸಮಸ್ಯೆಗಳನ್ನು ಎದುರಿಸಲು ಧೈರ್ಯ ನೀಡುತ್ತದೆ ಎಂಬ ಶಿಶಿರ್ ಮಾತನ್ನು ಕಾವ್ಯಾ ನೆನಪಿಸಿಕೊಂಡಾಗ ಗಿಲ್ಲಿ ನಟ ಕೂಡ ಅಲ್ಲಿಯೇ ಇದ್ದರು.

ಬಿಗ್ ಬಾಸ್ ಸೀಸನ್ 12 ಇನ್ನೇನು ಮುಗಿಯೋದಕ್ಕೆ 10 ದಿನಗಳು ಮಾತ್ರ ಬಾಕಿಯಿವೆ. ಇದೀಗ ಬಿಗ್ ಬಾಸ್ ಮನೆಯಲ್ಲಿ ಕೇವಲ 8 ಸದಸ್ಯರಿದ್ದಾರೆ. ಹೀಗಿರುವಾಗ ಕೇವಲ ಟಾಸ್ಕ್‌ಗಳನ್ನು ಆಟವಾಡಿ ಸುಮ್ಮನೆ ಕುಳಿತುಕೊಂಡು ಮಾತನಾಡುವಾಗ ಕಾವ್ಯಾ ಬಿಗ್ ಬಾಸ್ ಮನೆಯೊಳಗೆ ಬರುವ ಮುನ್ನ ಶಿಶಿರ್ ಅವರೊಂದಿಗೆ ನಡೆಸಿದ್ದ ಚರ್ಚೆಯನ್ನು ಮನೆಯೊಳಗೆ ರಿವೀಲ್ ಮಾಡಿದ್ದಾರೆ.

ಬಿಗ್ ಬಾಸ್ ಕನ್ನಡ ರಿಯಾಲಿಟಿ ಶೋ ಸೀಸನ್ 1 ರಿಂದ 12ನೇ ಸೀಸನ್‌ವರೆಗೆ 200 ಜನ ಸ್ಪರ್ಧಾಳುಗಳನ್ನು ಕಂಡಿದೆ. ಇನ್ನು ನಾನು ಈ ಸೀಸನ್‌ಗೆ ಬರುವ ಮುನ್ನ ಶಿಶಿರ್ ಅವರು ಒಂದು ಮಾತನ್ನು ಹೇಳುತ್ತಿದ್ದರು. ಈ ಬಿಗ್ ಬಾಸ್ ಮನೆಯೊಳಗೆ ಒಮ್ಮೆ ಬಂದು ಹೋದರೆ, ನಾವು ಹೊರಗಡೆ ಎಂತಹ ಸಮಸ್ಯೆ ಬೇಕಾದರೂ ಎದುರಿಸಬಹುದು ಎಂದು ಧೈರ್ಯ ಹೇಳಿದ್ದರು. ಎಲ್ಲಾ ತರಹದ ಸಮಸ್ಯೆಗಳನ್ನು ಎದುರಿಸೋದನ್ನು ನಾವು ಬಿಗ್ ಬಾಸ್ ಮನೆಯೊಳಗೆ ಕಲಿಯುತ್ತೇವೆ ಎಂಬುದನ್ನು ಸ್ವತಃ ಹೇಳಿಕೊಂಡಿದ್ದರು ಎಂಬುದನ್ನು ಕಾವ್ಯಾ ಎಲ್ಲರೆದುರು ಹಂಚಿಕೊಳ್ಳುತ್ತಾರೆ.

ಶಿಶಿರ್ ಶಾಸ್ತ್ರಿ ಬಳಿ ಸಲಹೆ ಪಡೆದಿದ್ದ ಕಾವ್ಯಾ

ಬಿಗ್ ಬಾಸ್ ಮಾಜಿ ಸ್ಪರ್ಧಿಯಾಗಿರುವ ಶಿಶಿರ್ ಶಾಸ್ತ್ರಿ ಅವರು ಧಾರಾವಾಹಿ ನಟನಾಗಿದ್ದು, ಕಾವ್ಯಾ ಶೈವ ಕೂಡ ಧಾರಾವಾಹಿ ನಟಿಯಾಗಿದ್ದಾರೆ. ಇಬ್ಬರೂ ಕಲರ್ಸ್ ಕನ್ನಡದಲ್ಲಿ ಕೆಲಸ ಮಾಡುವಾಗ ಶಿಶಿರ್ ಶಾಸ್ತ್ರಿ ಅವರ ಬಳಿ ಬಿಗ್ ಬಾಸ್ ಮನೆಗೆ ಹೋಗುವ ಬಗ್ಗೆ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಈ ವೇಳೆ ಶಿಶಿರ್ ಶಾಸ್ತ್ರಿ ಅವರು ಹೇಳಿದ್ದ ಮಾತುಗಳನ್ನು ಇದೀಗ ಕಾವ್ಯಾ ನೆನಪಿಗೆ ತಂದುಕೊಂಡು ರಘು, ರಕ್ಷಿತಾ ಶೆಟ್ಟಿ, ಗಿಲ್ಲಿನಟ ಹಾಗೂ ರಾಶಿಕಾ ಅವರೊಂದಿಗೆ ಹೇಳಿಕೊಳ್ಳುತ್ತಾರೆ.

ಬಿಗ್ ಬಾಸ್ ಮನೆಗೆ ಬಂದು ನನ್ನ ಜೀವನದ ಎಲ್ಲ ವ್ಯಾಲ್ಯೂವ್ಸ್ ನನಗೆ ಗೊತ್ತಾಯಿತು. ನನ್ನ ಲೈಫಲ್ಲಿ ಈವರೆಗೆ ಏನೇನು ತಪ್ಪು ಮಾಡಿದ್ದೆ ಎನ್ನುವುದು ಎಲ್ಲವೂ ಈ ಮನೆಯಲ್ಲಿ ನನಗೆ ಅರ್ಥವಾಗಿದೆ. ನಾವು ಈ ಮನೆಯಿಂದ ಹೊರಗೆ ಹೋದ ಮೇಲೆ ನಮ್ಮ ತಪ್ಪುಗಳನ್ನು ಸರಿ ಮಾಡಿಕೊಂಡಿಲ್ಲ ಅಂದರೆ ನಮ್ಮಷ್ಟು ಮೂರ್ಖರು ಬೇರೆ ಯಾರೂ ಇರಲ್ಲ. ಒಂದು ವೇಳೆ ತಪ್ಪುಗಳನ್ನು ಸರಿಪಡಿಸಿಕೊಳ್ಳದಿದ್ದರೆ ನಾವು ಮತ್ತೆ ವಾಪಾಸ್ ಮೊದಲಿನಂತೆ ಆಗಿಬಿಡುತ್ತೇವೆ ಎಂದು ಮ್ಯೂಟಂಟ್ ರಘು ಅವರು ಹೇಳುತ್ತಾರೆ.

ನಾನು ಇನ್ಮೇಲೆ ವಿಡಿಯೋ ಮಾಡೋಕೆ ಆರಂಭಿಸ್ತೇನೆ

ಮುಂದುವರೆದು, ನಾನು ಒಬ್ಬನೇ ಇರೋದು, ನನಗೆ ಬ್ಯಾಕ್‌ಅಪ್ ಏನೂ ಇಲ್ಲ. ಹೀಗಾಗಿ, ನನ್ನ ಜೀವನದಲ್ಲಿ ಎಂತೆಂಥಾ ದೊಡ್ಡ ಸಮಸ್ಯೆಗಳು ಬಂದಾಗಲೂ ಎದುರಿಸಿದ್ದೇನೆ. ಈಗ ಇಲ್ಲಿಗೆ ಬಂದು ಇನ್ನೂ ಸ್ಟ್ರಾಂಗ್ ಆಗಿದ್ದೇನೆ. ನಾನು ಇನ್ನುಮುಂದೆ ವಿಡಿಯೋಗಳನ್ನ ಮಾಡುವುದಕ್ಕೆ ಆರಂಭಿಸುತ್ತೇನೆ. ನನ್ನ ಜೀವನದ ಮತ್ತು ಬಿಗ್ ಬಾಸ್ ಮನೆಯೊಳಗೆ ಕಳೆದ ಕ್ಷಣಗಳನ್ನು ನಾನು ಜನರ ಮುಂದೆ ವಿಡಿಯೋಗಳ ಮೂಲಕ ಹಂಚಿಕೊಳ್ಳುತ್ತೇನೆ ಎಂದು ರಘು ಅವರು ಹೇಳಿದ್ದಾರೆ.

ಗಿಲ್ಲಿ ನಟ ಫುಲ್ ಸೈಲೆಂಟ್:

ಇನ್ನು ಈ ಮಾತಿನ ವೇಳೆ ಗಿಲ್ಲಿ ನಟ ಅಲ್ಲಿಯೇ ಕುಳಿತುಕೊಂಡು ಮುಖ ನೋಡುತ್ತಿದ್ದರೂ ಯಾವುದೇ ಮಾತನಾಡದೇ ಸುಮ್ಮನೇ ಕುಳಿತಿದ್ದನು. ಮುಖದಲ್ಲಿ ಮಂದಹಾಸನ ನಗುವನ್ನು ಬೀರುತ್ತಾ ಮೂರ್ನಾಲ್ಕು ಜನರು ತಮ್ಮ ಅನುಭವ ಹಂಚಿಕೊಳ್ಳುತ್ತಿದ್ದರೂ ಸೈಲೆಂಟ್ ಆಗಿ ಕುಳಿತಿದ್ದನು. ಒಟ್ಟಾರೆಯಾಗಿ, ಗಿಲ್ಲಿ ನಟ ಫಿನಾಲೆ ಟಾಪ್ 6 ಕಂಟೆಸ್ಟೆಂಟ್‌ಗಳಲ್ಲಿ ಸ್ಥಾನ ಪಡೆಯಲು ವಿಫಲನಾಗಿದ್ದರೂ, ಇದರಲ್ಲಿ ಸ್ಪರ್ಧಿಸಿದ್ದ ಕಾವ್ಯಾ ಅವರಿಗೆ ಟಾಸ್ಕ್‌ನಲ್ಲಿ ಹೆಚ್ಚಾಗಿ ನೆರವಾಗಿದ್ದಾನೆ. ಈ ಮೂಲಕ ಗಿಲ್ಲಿ ನಟ ಕಾವ್ಯಾ ಅವರನ್ನು ಬಿಟ್ಟುಕೊಡದೇ ಆಟವಾಡಿದ್ದಕ್ಕೆ ವೀಕ್ಷಕರ ಮೆಚ್ಚುಗೆ ಗಳಿಸಿದ್ದಾನೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟನೆ ಜೊತೆ MNC ಕಂಪೆನಿಯಲ್ಲಿ ಕೆಲಸ ಮಾಡ್ತಿರುವ ಕನ್ನಡ ಕಿರುತೆರೆ ಸೆಲೆಬ್ರಿಟಿಗಳು
ಸೀರಿಯಲ್'ನಲ್ಲಿ ಸಾಯುತ್ತಿದ್ದಂತೆ ಸ್ವರ್ಗಕ್ಕೆ ಹೋಗದೇ, ಮಲೇಷ್ಯಾಕ್ಕೆ ಹಾರಿದ ‘Lakshmi Nivasa’ ಲಲಿತಾ