ಕಿಚ್ಚ ಮಾತಿನಂತೆಯೇ ಆಯ್ತು, ಅನಿರೀಕ್ಷಿತ ತಿರುವಿನಲ್ಲಿ ಬಿಗ್‌ಬಾಸ್‌ ಮನೆಯಿಂದ ಇಬ್ಬರು ಔಟ್‌! ಹೋಗಿದ್ದೆಲ್ಲಿಗೆ?

By Gowthami K  |  First Published Oct 18, 2024, 10:54 PM IST

ಬಿಗ್ ಬಾಸ್ ಸೀಸನ್ 11ರಲ್ಲಿ ಜಗದೀಶ್ ಮತ್ತು ರಂಜಿತ್ ಅವರನ್ನು ಮನೆಯಿಂದ ಹೊರ ಕಳುಹಿಸಲಾಗಿದೆ. ಜಗದೀಶ್ ಅವರನ್ನು ಹೊರ ಕಳುಹಿಸುವಾಗ ಮನೆಯವರೆಲ್ಲ ಚಪ್ಪಾಳೆ ತಟ್ಟಿದರೆ, ರಂಜಿತ್ ಹೊರ ಹೋಗುವಾಗ ಕಣ್ಣೀರು ಹಾಕಿದರು. ಇಬ್ಬರೂ  ಸದ್ಯ ಎಲ್ಲಿದ್ದಾರೆ ಗೊತ್ತಿಲ್ಲ.


ಬಿಗ್ ಬಾಸ್ ಸೀಸನ್ 11ರಲ್ಲಿ ಸ್ಪರ್ಧಿಗಳ ನಡುವೆ ಮಾತಿಗೆ ಮಾತು ಬೆಳೆದು ಕೆಟ್ಟ ಪದಗಳ ಬಳಕೆ ಮಾಡಿ ಜಗದೀಶ್ ಮತ್ತು ರಂಜಿತ್ ನಡುವೆ ನೂಕಾಟ ತಳ್ಳಾಟವಾಗಿ ಇಬ್ಬರನ್ನೂ ಮನೆಯಿಂದ ಹೊರ ಕಳುಹಿಸಲಾಗಿದೆ. ಮೊದಲು ಹೆಣ್ಣು ಮಕ್ಕಳ ಬಗ್ಗೆ ಕೆಟ್ಟ ಪದ ಬಳಸಿದ ಖಂಡನೀಯವೆಂದಯ ಬಿಗ್‌ಬಾಸ್‌ ಜಗದೀಶ್ ಅವರನ್ನು ಮನೆಯಿಂದ ಹೊರ ಕಳಿಸಿತು. ಬಳಿಕ ಶೋ ನಿಯಮವನ್ನು ಉಲ್ಲಂಘಿಸಿದ್ದೇರೆಂದು ರಂಜಿತ್ ಅವರನ್ನು ಹೊರ ಕಳಿಸಿತು.

ಜಗದೀಶ್ ಅವರನ್ನು ಹೊರ ಕಳುಹಿಸುವಾಗ ಇಡೀ ಮನೆ ಚಪ್ಪಾಳೆ ತಟ್ಟಿ ಬಿಗ್‌ಬಾಸ್‌ ಗೆ ಧನ್ಯವಾದ ಹೇಳಿತು. ಸ್ಪಲ್ಪ ಹೊತ್ತಿನ ಬಳಿಕ ರಂಜಿತ್ ಅವರನ್ನು ಹೊರ ಹೋಗುವಂತೆ ಹೇಳಿದಾಗ ಇಡೀ ಮನೆ ಕಳುಹಿಸದಂತೆ ಬಿಗ್‌ಬಾಸ್‌ ಬಳಿ ಮನವಿ ಮಾಡಿಕೊಂಡಿತು. ಜೊತೆಗೆ ರಂಜಿತ್ ಅವರನ್ನು ಕಳುಹಿಸಬೇಡಿ ಎಂದು ಕಣ್ಣೀರು ಹಾಕಿತು.

Tap to resize

Latest Videos

undefined

ಬಿಗ್‌ಬಾಸ್‌ನಲ್ಲಿ ಕೈಕೈ ಮಿಲಾಯಿಸಿಕೊಂಡ ಸ್ಪರ್ಧಿಗಳು! ಜಗಳದ ಕಿಚ್ಚು ಹೊತ್ತಿಕೊಳ್ಳಲು ಕ್ಯಾಪ್ಟನ್ ಫೇವರಿಸಂ ಕಾರಣನಾ?

ಹೊರ ಹೋಗಿರುವ ಜಗದೀಶ್ ಆಗಲಿ ರಂಜಿತ್‌ ಆಗಲಿ ಇಬ್ಬರೂ ಕೂಡ ಮನೆಗೆ ಹೋಗಿಲ್ಲವಂತೆ. ಮನೆ ಹತ್ತಿರ ಹೋದ ಕೆಲ ಮಾಧ್ಯಮಗಳಿಗೆ ಇದೇ ರೀತಿಯ ಪ್ರತಿಕ್ರಿಯೆ ಮನೆಯವರಿಂದ ಬಂದಿದೆ ಎನ್ನಲಾಗಿದೆ. ಇಬ್ಬರನ್ನೂ ಮನೆಯಿಂದ ಹೊರ ಹಾಕಿ ಇಂದಿಗೆ ಮೂರು ದಿನವಾಗಿದೆ. ಇಷ್ಟು ದಿನದಲ್ಲಿ ಅವರ ಅಧಿಕೃತ ಸೋಷಿಯಲ್‌ ಮೀಡಿಯಾದಲ್ಲಿ ಕೂಡ ಯಾವುದೇ ಪೋಸ್ಟ್ ಆಗಲಿ ಸಂದೇಶವಾಗಲಿ ಹಾಕಿಕೊಂಡಿಲ್ಲ. ಈ ಬಗ್ಗೆ ಹೊರ ಜಗತ್ತಿಗೆ ಸ್ಪಷ್ಟತೆಯನ್ನೂ ಕೊಟ್ಟಿಲ್ಲ.

ಇದೆಲ್ಲದರ ನಡುವೆ ಅವರಿಬ್ಬರನ್ನೂ ಕಲರ್ಸ್ ಕನ್ನಡದವರೇ ಇಟ್ಟುಕೊಂಡು ವೀಕೆಂಡ್‌ ಸುದೀಪ್ ಅವರ ಜೊತೆಗೆ ಮಾತನಾಡಿಸಿ, ಸತ್ಯಾಸತ್ಯತೆಯ ಬಗ್ಗೆ ತಿಳಿದು ಬಳಿಕ ಕಳುಹಿಸುತ್ತಾರೆಂದು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿ ಹಬ್ಬಿದೆ.

ಆದರೆ ಇದೆಲ್ಲದರ ನಡುವೆ ನಾವು ಗಮನಿಸಬೇಕಾದ ಅಂಶವೆಂದರೆ ಕಳೆದ ವಾರದ ವೀಕೆಂಡ್‌ ನಲ್ಲಿ ನಿರೂಪಕ ಕಿಚ್ಚ ಸುದೀಪ್ ಅವರು expect the unexpected (ಅನಿರೀಕ್ಷಿತವಾಗಿ ನಿರೀಕ್ಷಿಸಿ) ಎಂದು ಹೇಳಿ ಶೋ ಮುಗಿಸಿದ್ದರು. ಆಗ ಬಹುತೇಕರು ಮಿಡ್‌ ವೀಕ್‌ ಎಲಿಮಿನೇಶನ್  ಇರಬಹುದು ಎಂದು ಊಹಿಸಿದ್ದರು. ಆದರೆ ಬಿಗ್‌ಬಾಸ್‌ ಮನೆಯಲ್ಲಿ ನಡೆದ ಗಲಾಟೆ ಎಲ್ಲಾ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿತು. ಅನಿರೀಕ್ಷಿತವಾಗಿ ನಡೆದ ಘಟನೆಯಿಂದ ನಿರೀಕ್ಷೆಯೇ ಇಲ್ಲದೆ ಜಗದೀಶ್ ಮತ್ತು ರಂಜಿತ್ ಅವರನ್ನು ಹೊರಕಳಿಸಲಾಯ್ತು.

ಕಿಯಾರಾ ಆಡ್ವಾಣಿ ಹೊಳೆಯುವ ತ್ವಚೆಯ ರಹಸ್ಯ ಮನೆಮದ್ದು!

ಮೊದಲವಾರ ಮನೆಯಿಂದ ಯಮುನಾ ಶ್ರೀನಿಧಿ ಅವರು ಎಲಿಮಿನೀಟ್‌ ಆಗಿದ್ದರು. ಎರಡನೇ ವಾರ ಮನೆಯಿಂದ ಯಾರನ್ನೂ ಕಳುಹಿಸಲಾಗಲಿಲ್ಲ. ಮೂರನೇ ವಾರದಲ್ಲಿ ಈಗಾಗಲೇ ಇಬ್ಬರು ಹೊರ ಹೋಗಿದ್ದಾರೆ. ಹೀಗಾಗಿ ಈ ವಾರ ಎಲಿಮಿನೇಶನ್ ಇರುವುದು ಅನುಮಾನವಾಗಿದೆ. ಈಗಾಗಲೇ ಮೂರು ವಾರಕ್ಕೆ ಮೂರು ಜನ ಮನೆಯಿಂದ ಹೊರ ನಡೆದಿದ್ದಾರೆ.

ವಿವಾದ ಮತ್ತು ಕೇಸ್‌ಗಳಿಂದ ತುಂಬಿದ ಬಿಬಿಕೆ11:
ಕಳೆದ ವಾರ ಬಿಗ್ ಬಾಸ್' ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದೆ ಅಂತ ಮಹಿಳಾ ಆಯೋಗಕ್ಕೆ ಪತ್ರದ ಮೂಲಕ ವಕೀಲೆ ದೂರು ನೀಡಿದ್ದರು. ಜೊತೆಗೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪವಿತ್ತು. ಹೀಗಾಗಿ ಸ್ವರ್ಗ-ನರಕ  ಎಂಬ ಪರಿಕಲ್ಪನೆಯನ್ನು ತೆಗೆದು ಒಂದೇ ಮನೆ ಮಾಡಲಾಗಿತ್ತು.

ಇದಾಗ ನಂತರ ಈಗ ಶೋಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಗ್ ಬಾಸ್ 11 ನೇ ಸೀಸನ್ ಪ್ರಸಾರವನ್ನು ಖಾಯಂ ಅಗಿ ರದ್ದುಪಡಿಸುವಂತೆ ಸಾಗರದ ವಕೀಲರಿಂದ ಶಿವಮೊಗ್ಗ ಜಿಲ್ಲೆಯ ಸಾಗರದ ಪ್ರಧಾನ ವ್ಯವಹಾರ ನ್ಯಾಯಾಧೀಶರ ನ್ಯಾಯಾಲಯದಲ್ಲಿ  ದೂರು ಕೊಡಲಾಗಿದೆ. ವಿಚಾರಣೆ ನಡೆಸಿದ ನ್ಯಾಯಾಲಯ  ಕಲರ್ಸ್ ಕನ್ನಡ ವಾಹಿನಿಗೆ  ನೋಟಿಸ್ ಜಾರಿ ಮಾಡಿ ಮುಂದಿನ ವಿಚಾರಣೆಯನ್ನು  ಅಕ್ಟೋಬರ್ 28 ಕ್ಕೆ ಮುಂದೂಡಿದೆ.

click me!