ಎಂಥಾ ಮಗನನ್ನು ಹೆತ್ಬಿಟ್ರಿ ಮೀನಾಕ್ಷಿ; ಬಿಗ್ ಬಾಸ್‌ ಕಾರ್ತಿಕ್‌ ತಾಯಿನ ಮುದ್ದಾಡಿದ ಭಾಗ್ಯ!

Published : Feb 08, 2024, 11:16 AM ISTUpdated : Feb 08, 2024, 11:26 AM IST
ಎಂಥಾ ಮಗನನ್ನು ಹೆತ್ಬಿಟ್ರಿ ಮೀನಾಕ್ಷಿ; ಬಿಗ್ ಬಾಸ್‌ ಕಾರ್ತಿಕ್‌ ತಾಯಿನ ಮುದ್ದಾಡಿದ ಭಾಗ್ಯ!

ಸಾರಾಂಶ

ನನ್ನಮ್ಮ ಸೂಪರ್ ಸ್ಟಾರ್ ವೇದಿಕೆಯಲ್ಲಿ ಬಿಗ್ ಬಾಸ್ ಕಾರ್ತಿಕ್. ಟ್ರೋಫಿ ಇಲ್ಲದೆ ಬಂದಿದ್ದಕ್ಕೆ ಪ್ರಶ್ನೆ ಮಾಡಿದ ನಿರೂಪಕಿ. 

ಕಲರ್ಸ್‌ ಕನ್ನಡ ಜನಪ್ರಿಯ ರಿಯಾಲಿಟಿ ಶೋ ಆಗಿರುವ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3 ಆರಂಭವಾಗಿದೆ. ಸೃಜನ್ ಲೋಕೇಶ್, ತಾರಾ ಅನುರಾಧ ಮತ್ತು ಅನು ಪ್ರಭಾಕರ್ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಸುಶ್ಮಾ ನಿರೂಪಣೆ ಮಾಡಲಿದ್ದಾರೆ. ಪ್ರತಿ ಸೀಸನ್‌ನಲ್ಲಿ ಅನುಪಮಾ ಗೌಡರನ್ನು ನೋಡುತ್ತಿದ್ದವರಿಗೆ ಇದು ಕೊಂಚ ವಿಭಿನ್ನ ಅನಿಸುತ್ತಿದೆ. ಅಲ್ಲದೆ ಸುಶ್ಮಾ ಪಟಪಟ ಮಾತು ವೀಕ್ಷಕರಿಗೆ ಸಖತ್ ಇಷ್ಟವಾಗುತ್ತಿದೆ. 

ಇತ್ತೀಚಿಗೆ ನಡೆದ ಬಿಗ್ ಬಾಸ್ ಸೀಸನ್ 10ರ ವಿನ್ನರ್ ಕಾರ್ತಿಕ್ ಮಹೇಶ್‌ ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ದೇವಸ್ಥಾನಗಳಲ್ಲಿ, ಸಿನಿಮಾ ಕಾರ್ಯಕ್ರಮಗಳಲ್ಲಿ, ಸ್ಕೂಲ್-ಕಾಲೇಜ್‌ಗಳಲ್ಲಿ ಹಾಗೂ ಇನ್ನಿತ್ತರ ರಿಯಾಲಿಟಿ ಶೋಗಳಲ್ಲಿ. ಹೀಗಾಗಿ ಈ ಸಲ ತಮ್ಮ ತಾಯಿ ಜೊತೆ ನನ್ನಮ್ಮ ಸೂಪರ್ ಸ್ಟಾರ್ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಕಾರ್ತಿಕ್ ಎಂಟರ್ ಆಗುತ್ತಿದ್ದಂತೆ ನನ್ನಮುದ್ದು ತಾರೆ ನಗುತಲಿ ಬಾರೆ ಅಣ್ಣಾವ್ರ ಹಾಡು ಪ್ರಸಾರವಾಗಿತ್ತು. ಕಾರ್ತಿಕ್‌ ಅವರ ತಾಯಿ ಮೀನಾಕ್ಷಿ ವೇದಿಕೆ ಮೇಲೆ ಬರುತ್ತಿದ್ದಂತೆ ಸುಶ್ಮಿತಾ ತಬ್ಬಿಕೊಳ್ಳುತ್ತಾರೆ.

3 ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿಲ್ಲ, ಬಡವರ ಮಕ್ಕಳ ಬೆಳೀಬೇಕು: ಬಿಗ್ ಬಾಸ್ ಕಾರ್ತಿಕ್

ಅಣ್ಣಾವ್ರ 'ಮೀನಾಕ್ಷಿ ಮೀನಾಕ್ಷಿ ಎಂಥಾ ಮಗನನ್ನು ಎತ್ತುಬಿಟ್ಟೆ ಮೀನಾಕ್ಷಿ' ಎಂದು ಡೈಲಾಗ್ ಹೊಡೆಯುತ್ತಾರೆ ಸುಶ್ಮಾ. ಇದನ್ನು ವೇದಿಕೆಯಲ್ಲಿದ್ದ ಪ್ರತಿಯೊಬ್ಬರು ನಕ್ಕು ನಕ್ಕು ಸುಸ್ತಾಗಿದ್ದಾರೆ. ಅಲ್ಲದೆ 'ಎಲ್ಲಾ ನ್ಯೂಸ್ ಚಾನೆಲ್‌ಗಳಲ್ಲಿ ಕಪ್‌ ಎತ್ಕೊಂಡು ಓಡಾಡುತ್ತಿದ್ದೀರಾ ಆದರೆ ನಮ್ಮ ಶೋಗೆ ಕಪ್ ಯಾಕೆ ತಂದಿಲ್ಲ' ಎಂದು ಸುಶ್ಮಾ ಪ್ರಶ್ನೆ ಮಾಡುತ್ತಾರೆ. 'ನನ್ನ ಪಾಲಿಗೆ ನನ್ನ ಅಮ್ಮನೇ ಕಪ್' ಎಂದು ಕಾರ್ತಿಕ್ ಹೇಳುತ್ತಾರೆ. ಅದಕ್ಕೆ ತಾಯಿ ಮೀನಾಕ್ಷಿ ವೇದಿಕೆ ಮೇಲೆ ನಾಚಿಕೊಳ್ಳುತ್ತಾರೆ. 'ಏಳು ಏಳು ಜನ್ಮ ಅಂತಿದ್ದರೆ ಕಾರ್ತಿಕ್‌ ನನ್ನ ಮಗನಾಗಿ ಹುಟ್ಟಲಿ ಎಂದು ಆಸೆ ಪಡುತ್ತೀನಿ' ಎಂದು ಮೀನಾಕ್ಷಿ ಹೇಳಿದ್ದಾರೆ. 'ಅಮ್ಮ ಖುಷಿಯಾಗಿ ಇರಬೇಕು ನೆಮ್ಮದಿಯಾಗಿ ಇರಬೇಕು. ಅವರೇ ನನ್ನ ಸೂಪರ್ ಸ್ಟಾರ್' ಎಂದು ಕಾರ್ತಿಕ್‌ ಹೇಳುತ್ತಿದ್ದಂತೆ ತಾಯಿ ಮುತ್ತು ಕೊಟ್ಟಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಗಳಗಳನೆ ಅತ್ತ ಕಾವ್ಯಾ; ಟಾಸ್ಕ್‌ ಗೆದ್ದ ಗಿಲ್ಲಿ, ಸ್ನೇಹದಲ್ಲಿ ಸೋತ!
Bigg Boss ಬಗ್ಗೆ ನಂಬಲಸಾಧ್ಯ, ಯಾರೂ ಹೇಳದ ಗುಟ್ಟುಗಳನ್ನು ರಿವೀಲ್​ ಮಾಡಿದ ಅಭಿಷೇಕ್​ ಶ್ರೀಕಾಂತ್​