ಬಿಗ್‌ಬಾಸ್ 10 ಸ್ಪರ್ಧಿ ವರ್ತೂರು ಸಂತೋಷ್ ಅವರು, ದೊಡ್ಮನೆಯಲ್ಲಿ ನಡೆಯುವುದು ಸ್ಕ್ರಿಪ್ಟೆಡ್ ಎಂಬ ಗುಟ್ಟು ರಟ್ಟು ಮಾಡಿಬಿಟ್ರಾ? ವೈರಲ್ ವಿಡಿಯೋದಲ್ಲಿ ಏನಿದೆ?
ಭಾಷೆ ಯಾವುದೇ ಇರಲಿ, ಬಿಗ್‌ಬಾಸ್‌ನಲ್ಲಿ ನಡೆಯುವುದೆಲ್ಲವೂ ಸ್ಕ್ರಿಪ್ಟೆಡ್. ಇಲ್ಲಿರುವ ಸ್ಪರ್ಧಿಗಳು ಬಿಗ್‌ಬಾಸ್ ಕೈಗೊಂಬೆಗಳು ಅಷ್ಟೇ... ಆದರೆ ನೋಡುಗರಿಗೆ ಎಲ್ಲವೂ ಅಚಾನಕ್ ಆಗಿ ಆಗಿದ್ದು ಎನ್ನಿಸುತ್ತದೆ ಎನ್ನುವ ಮಾತು ಮೊದಲಿನಿಂದಲೂ ಕೇಳಿ ಬರುತ್ತಲೇ ಇದೆ. ಇದಾಗಲೇ ಬೇರೆ ಬೇರೆ ಭಾಷೆಗಳ ಬಿಗ್‌ಬಾಸ್‌ಗೆ ಹೋಗಿ ಬಂದವರೂ ಇಲ್ಲಿರುವುದೆಲ್ಲವೂ ಸ್ಕ್ರಿಪ್ಟೆಡ್, ಜನರನ್ನು ಮರಳು ಮಾಡುವ ತಂತ್ರವಷ್ಟೇ. ಇದನ್ನು ಅರಿಯದ ಪ್ರೇಕ್ಷಕರು ತಮ್ಮ-ತಮ್ಮ ನಡುವೆ ಸುಖಾ ಸುಮ್ಮನೆ ಕಿತ್ತಾಡಿಕೊಳ್ತಾರೆ ಅಷ್ಟೇ ಎಂದು ಹೇಳಿದ್ದು ಇದೆ. ಆದರೆ ಈ ಗುಟ್ಟನ್ನು ಎಲ್ಲಿಯೂ ರಟ್ಟು ಮಾಡಬಾರದು ಎಂದು ಸ್ಪರ್ಧಿಗಳಿಗೆ ಮೊದಲೇ ಷರತ್ತು ಹಾಕಿರಲಾಗುತ್ತದೆ ಎನ್ನುವ ಮಾತೂ ಇದೆ. ಬಿಗ್‌ಬಾಸ್ ಮಾತ್ರವಲ್ಲದೇ ಡಾನ್ಸ್ ಷೋ ಸೇರಿದಂತೆ ಎಲ್ಲ ರೀತಿಯ ರಿಯಾಲಿಟಿ ಷೋಗಳದ್ದೂ ಇದೇ ಕಥೆ. ವೇದಿಕೆ ಮೇಲೆ ಅಳುವುದು, ಚಿಕ್ಕ ಮಕ್ಕಳು ದೊಡ್ಡವರಂತೆ ಡೈಲಾಗ್ ಹೇಳುವುದು ಇದ್ಯಾವುದೂ ಅಚಾನಕ್ ಅಲ್ಲ ಎನ್ನುವ ಮಾತಿದೆ.
ಅದೇನೇ ಇರಲಿ. ಬಿಗ್‌ಬಾಸ್‌ಗೆ ಹೋಗಿ ಬಂದವರು ಕೆಲವರು ಇಲ್ಲಿ ನಡೆಯುವುದು ಸ್ಕ್ರಿಪ್ಟೆಡ್ ಎಂದು ಹೇಳಿದ್ದಾರೆ. ಇಲ್ಲಿ ನಡೆಯುವ ಅತಿ ಅಶ್ಲೀಲ ಎನ್ನುವ ಖುಲ್ಲಂ ಖುಲ್ಲಾ ರೊಮಾನ್ಸ್‌ನಿಂದ ಹಿಡಿದು, ಕಿತ್ತಾಟ, ಜಗಳ, ಕಾದಾಟ, ಡೈಲಾಗ್ ಎಲ್ಲವನ್ನೂ ಮೊದಲೇ ಹೇಳಿಕೊಡಲಾಗುತ್ತದೆ, ಟಿಆರ್‌ಪಿ ಕಡಿಮೆ ಆಗುತ್ತಿದ್ದಂತೆಯೇ ಜಗಳ, ರೊಮಾನ್ಸ್ ಹೆಚ್ಚು ಮಾಡಲು ಹೇಳಲಾಗುತ್ತದೆ ಎಂದೆಲ್ಲಾ ಹೇಳಿದವರೂ ಇದ್ದಾರೆ. ಆದರೆ ಅದೇ ಇನ್ನೊಂದೆಡೆ, ಹೊರಗೆ ಬಂದಿರೋ ಸ್ಪರ್ಧಿಗಳು ಇಲ್ಲ, ಇಲ್ಲ ಹಾಗೇನೂ ಇಲ್ಲ. ಇವೆಲ್ಲಾ ಸುಳ್ಳು, ಅಲ್ಲಿ ಹೇಗೆ ಇರಬೇಕು, ಏನು ಮಾತಾಡಬೇಕು ಎನ್ನೋದೆಲ್ಲಾ ಅಚಾನಕ್ ಆಗಿಯೇ ನಡೆಯುವಂಥದ್ದು ಎಂದು ಹೇಳಿದ್ದೂ ಇದೆ. ಸತ್ಯ ಮಾತ್ರ ಅಲ್ಲಿ ಹೋಗಿ ಬಂದವರಿಗೆ ಗೊತ್ತಷ್ಟೇ.
undefined
ಪುಟ್ಟಕ್ಕನ ಮಕ್ಕಳು ತಂಡಕ್ಕೆ ಬಿಗ್‌ಬಾಸ್ ಹಂಸಾ ಮೋಸ! ದೂರು ಕೊಟ್ಟ ನಿರ್ದೇಶಕ ಹೇಳಿದ್ದೇನು?
ಆದರೆ ಇದೀಗ ಬಿಗ್‌ಬಾಸ್ 10 ರಲ್ಲಿ ಸಾಕಷ್ಟು ಫೇಮಸ್ ಆಗಿರೋ ವರ್ತೂರು ಸಂತೋಷ್ ಅವರು ಬಾಯಿ ತಪ್ಪಿಯೋ ಅಥವಾ ತಾವು ಏನು ಹೇಳುತ್ತಿದ್ದೆವೆ ಎಂದು ಅರಿವಿಗೆ ಬಾರದೆಯೇ, ಬಿಗ್‌ಬಾಸ್‌ನಲ್ಲಿ ನಡೆಯುವುದು ಸ್ಕ್ರಿಪ್ಟೆಡ್ ಎಂದು ಹೇಳಿಬಿಟ್ಟಿದ್ದಾರೆ. ಇದರ ವಿಡಿಯೋ ಅನ್ನು ನ್ಯೂಸ್‌ಬೀಟ್ ಕನ್ನಡದಲ್ಲಿ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ವರ್ತೂರು ಸಂತೋಷ್ ಅವರು ತಾವು ಈ ಹಿಂದೆ ಬಿಗ್‌ಬಾಸ್ ಮನೆಗೆ ಹೋಗಿದ್ದನ್ನು ಮರೆತು ಈ ಬಾರಿಯ ಬಿಗ್‌ಬಾಸ್ ಬಗ್ಗೆ ಮಾತನಾಡುವ ಭರದಲ್ಲಿ ಈ ಸತ್ಯವನ್ನು ಒಪ್ಪಿಕೊಂಡಿದ್ದಾರೆ!
ಈ ಬಾರಿಯ ಬಿಗ್‌ಬಾಸ್‌ನಲ್ಲಿ ನೋಡಿ ಈ ಸಲ ಐದು ನಿಮಿಷಕ್ಕೆ ಕಿತ್ತಾಡ್ತಾರೆ, ಮತ್ತೆ ಐದು ನಿಮಿಷಕ್ಕೆ ಒಂದಾಗ್ತಾರೆ, ಮತ್ತೆ ಇನ್ನೇನೋ ಮಾಡ್ತಾರೆ. ಇದೇ ಕಾರಣಕ್ಕೆ ಇದು ಸ್ಕ್ರಿಪ್ಟೆಡ್ ಆಗಿ ಮಾಡೋದು ಎವಿಡೆಂಟ್ ಆಗಿ ಕಾಣಿಸುತ್ತೆ ಎಂದುಬಿಟ್ಟಿದ್ದಾರೆ. ಕೆಲವರು ವಿಚಿತ್ರ ಆಡ್ತಾರೆ. ಅವರಿಗೆ ನಾನು ಹೇಳುವುದು ಏನೆಂದರೆ ನುಗ್ಗೆ ಮರ ಬೇಗ ಬೆಳೆದು ಬೇಗ ಹೋಗತ್ತೆ. ಅದಕ್ಕೇ ಆಲದ ಮರ ಆಗಿ ಅನ್ನುತ್ತೇನೆ ಎಂದಿದ್ದಾರೆ. ಅವರ ಸಲಹೆ ಬಗ್ಗೆ ತಲೆಕೆಡಿಸಿಕೊಳ್ಳದ ನೆಟ್ಟಿಗರು, ಸ್ಕ್ರಿಪ್ಟೆಡ್ ಎಂದು ಅವರ ಬಾಯಲ್ಲಿ ಬಂದಿರುವುದಕ್ಕೆ ಸಾಕಷ್ಟು ಕಮೆಂಟ್ ಮಾಡಿದ್ದಾರೆ. ಬಿಗ್‌ಬಾಸ್ ಎಲ್ಲವೂ ಹೀಗೆ, ನೀವೂ ಹಿಂದೆ ಹೋದಾಗಲೂ ಹೀಗೆ ಇತ್ತಲ್ವಾ? ಅಲ್ಲಿ ನಡೆಯುವುದೆಲ್ಲವೂ ಸ್ಕ್ರಿಪ್ಟೆಡ್ ಎನ್ನೋದನ್ನು ಕೊನೆಗೂ ಒಪ್ಪಿಕೊಂಡ್ರಲ್ವಾ ಎಂದು ಪ್ರಶ್ನಿಸುತ್ತಿದ್ದಾರೆ.