ಒಂಟಿ ಸಲಗ ವಿನಯ್ ಗೌಡ ಯಾವ್ ಪಾಟಿ ಡಯೆಟ್ ಮಾಡ್ತಾರೆ ನೋಡಿ!

Published : Feb 13, 2024, 01:05 PM IST
ಒಂಟಿ ಸಲಗ ವಿನಯ್ ಗೌಡ ಯಾವ್ ಪಾಟಿ ಡಯೆಟ್ ಮಾಡ್ತಾರೆ ನೋಡಿ!

ಸಾರಾಂಶ

ವಿನಯ್ ಗೌಡ ಬಿಗ್‌ಬಾಸ್ ಗೆ ಹೋಗಿ ಬಂದ ಮೇಲೆ ಖದರೇ ಚೇಂಜ್ ಆಗಿದೆ. ಇನ್ನು ಈ ಒಂಟಿ ಸಲಗ ಡಯೆಟ್ ಹೇಗಿರುತ್ತೆ ಅಂತ ಕೇಳಿದ್ರೆ ನೀವು ಖಂಡಿತಾ ಶಾಕ್ ಆಗ್ತೀರ..

ವಿನಯ್ ಗೌಡ ಅಂದಕೂಡಲೇ ಬಿಗ್‌ಬಾಸ್ ಮನೆಯಲ್ಲಿ ಗೂಳಿ ಥರ ಬಿಹೇವ್ ಮಾಡ್ತಿದ್ದ ಒಂಟಿ ಸಲಗದ ಗತ್ತು ಗೈರತ್ತಿನಲ್ಲಿರುತ್ತಿದ್ದ ವ್ಯಕ್ತಿಯ ನೆನಪಾಗುತ್ತೆ. ವಿನಯ್ ಗೌಡ ಬಾಡಿ ಫಿಟ್‌ನೆಸ್ ನೋಡಿದ ಯಾರಾದರೂ ಅವರ ವಯಸ್ಸು ಹೆಚ್ಚೆಂದರೆ ಮೂವತ್ತು ಮೂವತ್ತೈದರ ಆಸುಪಾಸು ಎನ್ನಬಹುದು. ಜೊತೆಗೆ ಎದೆ ಎತ್ತರ ಬೆಳೆದ ಮಗನನ್ನು ನೋಡಿ ಓಹ್ ಇವರ ವಯಸ್ಸು ಸ್ವಲ್ಪ ಹೆಚ್ಚಿರಬಹುದೇನೋ ಎಂಬ ಅನುಮಾನ ಬರಬಹುದು. ಆದರೆ ವಿನಯ್ ಗೌಡ ಅವರ ನಿಜವಾದ ವಯಸ್ಸು ನಲವತ್ತೈದು ವರ್ಷ ಅಂದರೆ ನೀವು ನಂಬಲೇ ಬೇಕು. ನಲವತ್ತೈದು ವಯಸ್ಸಿನ ಬೇರೆ ವ್ಯಕ್ತಿಗಳನ್ನು ಒಮ್ಮೆ ಊಹಿಸಿಕೊಳ್ಳಿ, ವಿನಯ್ ಅವರನ್ನು ನೋಡಿ ಅಗಾಧವಾದ ವ್ಯತ್ಯಾಸ ಕಣ್ಣಿಗೆ ರಾಚುತ್ತದೆ. ಅಷ್ಟಕ್ಕೂ ವಿನಯ್ ಗೌಡ ಅವರ ಈ ಲೆವೆಲ್‌ನ ಫಿಟ್‌ನೆಸ್, ಯಂಗ್‌ಲುಕ್ ಗೆ ಕಾರಣ ಏನು ಗೊತ್ತಾ? ಮತ್ತೇನಲ್ಲ, ಅವರ ಡಯೆಟ್. ತಾನು ಯಾವ ರೀತಿ ಡಯೆಟ್ ಮಾಡ್ತೀನಿ ಅನ್ನೋದನ್ನು ಅವ್ರು ಹೇಳಿರೋದು ಈಗ ವೈರಲ್ ಆಗಿದೆ.

ವಿನಯ್ ಗೌಡ ಬಿಗ್‌ಬಾಸ್‌ಗೆ ಬರೋದಕ್ಕಿಂತ ಮೊದಲೇ ಕಿರುತೆರೆಯಲ್ಲಿ (Small Screen) ನಟನೆ ಮೂಲಕ ಗಮನಸೆಳೆದಿದ್ದರು. ಆದರೆ ಅವರ ಬಾಹುಬಲ ಪರಾಕ್ರಮಕ್ಕೆ ಕನ್ನಡಿ ಹಿಡಿದದ್ದು ಬಿಗ್‌ಬಾಸ್ ಶೋ. ಕನ್ನಡ ಕಿರುತೆರೆಯಲ್ಲಿ 'ಶಿವ' ಅಂತಲೇ ಖ್ಯಾತಿ ಪಡೆದಿದ್ದ ವಿನಯ್ ಗೌಡ, ಬಿಗ್‌ಬಾಸ್‌ ಸೀಸನ್ ೧೦ರ ಪ್ರಬಲ ಸ್ಪರ್ಧಿಯಾಗಿ ಗುರುತಿಸಿಕೊಂಡಿದ್ದರು. ದೊಡ್ಮನೆಯಲ್ಲಿ ಅಗ್ರೆಸ್ಸಿವ್ ಆಟದಿಂದ ಆನೆ ಅಂತಲೂ ಕರೆಸಿಕೊಂಡಿಕೊಂಡಿದ್ದು ಇವರ ಹೆಗ್ಗಳಿಕೆ. ಕನ್ನಡ ಮಾತ್ರವಲ್ಲದೇ ತೆಲುಗು ಧಾರವಾಹಿಯಲ್ಲೂ ವಿನಯ್ ಬಣ್ಣ ಹಚ್ಚಿದ್ದರು. ಆದರೆ ಇವರಿಗೆ ಯಾಕೋ ವಿಲನ್ ಪಾತ್ರಗಳಲ್ಲಿ ನಟಿಸಬೇಕು ಎಂಬ ಆಸೆ. ತೀರಾ ಇತ್ತೀಚಿನ ನಮ್ಮ ಲಚ್ಚಿ ಸೀರಿಯಲ್‌ನಲ್ಲಿ ಇವರೊಂದು ನೆಗೆಟಿವ್ ಪಾತ್ರ ಮಾಡಿದ್ದರು ಅನ್ನೋದು ಬಿಟ್ಟರೆ ಕಿರುತೆರೆಯಲ್ಲಿ ಇವರು ಶಿವನ ಪಾತ್ರದಿಂದಲೇ ಫೇಮಸ್. ಹರಹರ ಮಹಾದೇವ ಧಾರವಾಹಿಯಲ್ಲಿ ವಿನಯ್ ಗೌಡ ಅವರುವ 'ಶಿವನ' ಪಾತ್ರ ಮಾಡುವ ಮೂಲಕ ಕರ್ನಾಟಕದಾದ್ಯಂತ ಜನಪ್ರಿಯರಾದರು. ಜೊತೆಗೆ ಕನ್ನಡ ಕಿರುತೆರೆಯಲ್ಲಿ 'ಶಿವ' ಅಂತಲೇ ಖ್ಯಾತಿ ಪಡೆದರು. ಸಂಗೀತಾ ಶೃಂಗೇರಿ ಅವರು ಈ ಧಾರಾವಾಹಿಯಲ್ಲಿ ಸತಿಯ ಪಾತ್ರ ನಿರ್ವಹಿಸಿದ್ದರು.

ಕೊನೆಗೂ ಸಿಕ್ಕ ಒರಿಜಿನಲ್​ ರಾವುಲ್ಲಾ! ಬೆಳ್ಳುಳ್ಳಿ ಕಬಾಬ್​ ಓನರ್​ ಜೊತೆ ಕರಿಮಣಿ ಮಾಲೀಕನ ಎಂಟ್ರಿ!

ವಿನಯ್ ಗೌಡ ಅಭಿನಯದ ಮೊದಲ ಧಾರವಾಹಿ 'ಚಿಟ್ಟೆ ಹೆಜ್ಜೆ'. 2010ರಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯಲ್ಲಿ ಈಟಿವಿ ಕನ್ನಡದಲ್ಲಿ ಪ್ರಸಾರವಾಗಿತ್ತು. ಖ್ಯಾತ ಪತ್ರಕರ್ತ, ಲೇಖಕ ಗಿರೀಶ್ ರಾವ್ (ಜೋಗಿ) ಅವರ ಕಾದಂಬರಿ 'ಚಿಟ್ಟೆ ಹೆಜ್ಜೆ ದಾರಿ' ಆಧಾರವಾಗಿಟ್ಟುಕೊಂಡು ವಿನು ಬಳಂಜ ಈ ಧಾರಾವಾಹಿ ಮಾಡಿದ್ದರು. ಆ ಬಳಿಕ 'ಸಿಐಡಿ ಕರ್ನಾಟಕ', 'ಅಂಬಾರಿ' ಮೊದಲಾದ ಸೀರಿಯಲ್‌ಗಳಲ್ಲಿ ನಟಿಸಿದ್ದರು.

ಸದ್ಯಕ್ಕೀಗ ವಿನಯ್ ಗೌಡ ತಮ್ಮ ಫಿಟ್‌ನೆಸ್ (fitness) ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಜಿಮ್ (Gym) ಜೊತೆಗೆ ಹೆಲ್ದಿ ಡಯೆಟ್ (Healthy Diet) ತನ್ನ ಈ ಯಂಗ್ ಲುಕ್‌ನ (young look)  ರಹಸ್ಯ ಎಂದು ವಿನಯ್ ಗೌಡ ಹೇಳಿದ್ದಾರೆ. ಸಲಗದಂತೆ ಉತ್ತಮ ಬಾಡಿ ಬಿಲ್ಡಿಂಗ್ ಇರುವ ಈ ನಟ ತಿನ್ನೋದು ಬಹು ಕಡಿಮೆ ಅಂದರೆ ನೀವು ನಂಬುತ್ತೀರಾ? ಹೌದು. ಬೆಳಗ್ಗೆ ವಿನಯ್ ಅವರು ಆರೇಳು ಸೀಡ್ ಅಂದರೆ ಬೀಜಗಳ ಪುಡಿ, ಪ್ರೊಟೀನ್ ಮಿಲ್ಕ್ ಶೇಕ್ (milk shake) ಅಷ್ಟೇ ಕುಡಿಯೋದು. ಇದಾದ ಮೇಲೆ ಸಂಜೆ ಏಳು ಗಂಟೆಗೆ ಎರಡು ಚಪಾತಿ, 250 ಗ್ರಾಂಗಳಷ್ಟು ಚಿಕನ್ ಜೊತೆಗೆ ಹಸಿ ತರಕಾರಿ ಇಷ್ಟು ತಿಂದರೆ ಇವರ ಡಯೆಟ್ ಮುಗೀತು. ಇಷ್ಟು ಕಡಿಮೆ ತಿಂದೂ ಈ ಲೆವೆಲ್‌ಗೆ ಬಾಡಿ ಮೈಂಟೇನ್ (maitain) ಮಾಡಬಹುದು. ಜಾಸ್ತಿ ತಿಂದಷ್ಟು ಮೈಯಲ್ಲಿ ಬೊಜ್ಜು ತುಂಬಿಕೊಳ್ಳುತ್ತೆ. ಇದು ದೇಹ ಬೆಳೆಸೋದರ ಜೊತೆಗೆ ವಯಸ್ಸಾದಂತೆ ಕಾಣೋ ಹಾಗೂ ಮಾಡುತ್ತೆ ಅನ್ನೋದು ಇವರ ಅನುಭವದ ಮಾತು.

ನೆತ್ತಿಗೇರಿತಾ ಬಿಗ್​ಬಾಸ್​ ಖ್ಯಾತಿ? ಆಗ ಕಳ್ಳಹಾವು ಸಾಗಾಣಿಕೆ- ಈಗ ವ್ಯಕ್ತಿಯೊಬ್ಬನಿಗೆ ಹಿಗ್ಗಾಮುಗ್ಗ ಥಳಿತ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Bigg Boss ಗಿಲ್ಲಿ ಬಗ್ಗೆ ನಿಮ್ಗೆ ಗೊತ್ತಿಲ್ಲ, ರಘು ಚಪಾತಿ ಕೊಡದ ಕಾರಣ ನಾನ್​ ಹೇಳ್ತೀನಿ ಕೇಳಿ' ಎಂದ ಅಭಿಷೇಕ್
ಹೆಂಡ್ತಿಯನ್ನು ಹೇಗೆ ನೋಡಿಕೊಳ್ಳಬೇಕು? ಬೆಸ್ಟ್​ ಪತಿಯಾಗಲು ಮಾಳುಗೆ Bigg Boss ರಕ್ಷಿತಾ ಶೆಟ್ಟಿ ಏನೆಲ್ಲಾ ಟಿಪ್ಸ್​ ಕೊಟ್ರು ನೋಡಿ!