ಅರುಂಧತಿ ಪ್ಲಾನ್ ಉಲ್ಟಾ ಆಯ್ತು, ಕರ್ಣನ ಬದಲು ಬುಲೆಟ್ ಬಿದ್ದಿದ್ದು ಯಾರಿಗೆ?

Published : May 15, 2025, 02:02 PM ISTUpdated : May 15, 2025, 02:22 PM IST
 ಅರುಂಧತಿ ಪ್ಲಾನ್ ಉಲ್ಟಾ ಆಯ್ತು, ಕರ್ಣನ ಬದಲು ಬುಲೆಟ್ ಬಿದ್ದಿದ್ದು ಯಾರಿಗೆ?

ಸಾರಾಂಶ

ಕರಿಮಣಿ ಧಾರಾವಾಹಿಯಲ್ಲಿ ಭರತನಿಗೆ ಗುಂಡು ತಗುಲಿ, ಅರುಂಧತಿಯ ಯೋಜನೆ ವಿಫಲವಾಗಿದೆ. ಕರ್ಣ ಸುರಕ್ಷಿತವಾಗಿ ಮನೆಗೆ ಮರಳಿದ್ದಾನೆ. ರಾಧಾ, ಅರುಂಧತಿಗೆ ಭರತನಿಗೆ ಗುಂಡು ತಗುಲಿರುವ ವಿಷಯ ತಿಳಿಸಿದ್ದಾಳೆ. ಬ್ಲಾಕ್ ರೋಸ್ ಅರುಂಧತಿ ಎಂಬುದು ಬಯಲಾಗಿದ್ದು, ವೀಕ್ಷಕರು ಆಕೆಯ ಕೃತ್ಯಕ್ಕೆ ತಕ್ಕ ಶಾಸ್ತಿಯಾಗಿದೆ ಎಂದಿದ್ದಾರೆ.

ಕಲರ್ಸ್ ಕನ್ನಡ (Colors  Kannada )ದಲ್ಲಿ ಪ್ರಸಾರವಾಗ್ತಿರುವ  ಕರಿಮಣಿ  ಸೀರಿಯಲ್ (Karimani serial) ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ತನ್ನ ಸ್ವಾರ್ಥಕ್ಕೆ ಸವತಿ ಮಗನ ಹತ್ಯೆಗೆ ಮುಂದಾಗಿದ್ದ ಅರುಂಧತಿ ಟೈಂ ಸರಿ ಇದ್ದಂತೆ ಇಲ್ಲ. ಆಕೆ ಪ್ಲಾನ್ ಉಲ್ಟಾ ಹೊಡೆದಿದೆ. ಇಂದು ಕರ್ಣನ ಕಥೆ ಮುಗೀತು, ಅಧಿಕಾರ ಎಲ್ಲ ತನ್ನ ಮಗ ಭರತ್ ಪಾಲಾಗುತ್ತೆ ಅಂದ್ಕೊಂಡಿದ್ದವಳಿಗೆ ಶಾಕ್ ಆಗಿದೆ. ಆರೋಗ್ಯವಾಗಿ ಕರ್ಣ ಮನೆಗೆ ಬಂದಿದ್ದಾನೆ. ಗುಂಡಿನ ಶಬ್ಧ ಕೇಳಿದ್ದ ಅರುಂಧತಿಗೆ ಸತ್ತವ್ರು ಯಾರು ಅನ್ನೋದು ಗೊತ್ತಾಗ್ಲಿಲ್ಲ.

ಕಲರ್ಸ್ ಕನ್ನಡ ಸೋಶಿಯಲ್ ಮೀಡಿಯಾದಲ್ಲಿ ಪ್ರೋಮೋ (promo) ಪೋಸ್ಟ್ ಮಾಡಿದೆ. ಇದ್ರಲ್ಲಿ ಕರ್ಣನ ಕಥೆ ಮುಗಿತು, ಇದೆಲ್ಲ ಮಾಡಿದ್ದು ನಿನಗಾಗಿ ಅಂತ ಭರತ್ ಫೋಟೋ ಹಿಡಿದು ಅರುಂಧತಿ ಹೇಳ್ತಿದ್ದರೆ, ಕರ್ಣ ಆರಾಮವಾಗಿ ಮನೆಗೆ ಬರ್ತಾನೆ. ಇದನ್ನು ನೋಡಿದ ಅರುಂಧತಿ ದಂಗಾಗ್ತಾಳೆ. ಹಾಗಿದ್ರೆ ಶೂಟರ್ ಯಾರನ್ನು ಶೂಟ್ ಮಾಡಿದ್ದು ಎನ್ನುವ ಆಕೆ ಹಾಗೂ ವೀಕ್ಷಕರ ಪ್ರಶ್ನೆಗೆ ಪ್ರೋಮೋದಲ್ಲೇ ಉತ್ತರ ಸಿಕ್ಕಿದೆ. ಶೂಟರ್ ಬುಲೆಟ್ ಗೆ ರಸ್ತೆ ಮೇಲೆ ಉಲ್ಟಾ ಬಿದ್ದದ್ದವನನ್ನು ರಕ್ಷಿಸೋಕೆ ಬಂದ ರಾಧಾ ಮೇಡಂ, ಅರುಂಧತಿಗೆ ವಿಷ್ಯ ತಿಳಿಸಿದ್ದಾಳೆ. ಬುಲೆಟ್ ಬಿದ್ದಿದ್ದು ಕರ್ಣನಿಗಲ್ಲ, ಭರತ್ ಗೆ ಎನ್ನುವ ವಿಷ್ಯ ಗೊತ್ತಾದ್ಮೇಲೆ ಅರುಂಧತಿ ಏನು ಮಾಡ್ತಾಳೆ ಅನ್ನೋದೇ ಸದ್ಯಕ್ಕಿರುವ ಕುತೂಹಲ.

ಅಹಂಕಾರದಿಂದ ಮೆರೆಯುತ್ತಿದ್ದ ಅರುಂಧತಿಗೆ ಸಾಹಿತ್ಯ ಅಡ್ಡಿಯಾಗಿದ್ದಾಳೆ. ಸಾಹಿತ್ಯ ಮನೆಯವರೆಲ್ಲರ ಮೆಚ್ಚುಗೆ ಗಳಿಸ್ತಿರೋದನ್ನು ಅರುಂಧತಿಗೆ ಸಹಿಸೋಕೆ ಆಗ್ತಿಲ್ಲ. ಸಾಹಿತ್ಯಾಳನ್ನು ಮನೆಯಿಂದ ಹೊರ ಹಾಕಿ, ನೆಮ್ಮದಿ ಉಸಿರು ಬಿಡೋ ಮೊದಲೇ ಸಾಹಿತ್ಯಾಳ ರೀ ಎಂಟ್ರಿ ಆಗಿತ್ತು. ಇದಕ್ಕೆ ರಾಧಾ ಕಾರಣ ಅನ್ನೋದು ಗೊತ್ತಾಗ್ತಿದ್ದಂತೆ, ಸೇಡು ತೀರಿಕೊಳ್ಳೋಕೆ ಕರ್ಣನನ್ನು ಬಲಿ ಪಡೆಯೋ ಪ್ಲಾನ್ ಮಾಡಿದ್ಲು ಅರುಂಧತಿ. ಕರ್ಣನ ಹತ್ಯೆ ಮಾಡ್ತೇನೆ ಎಂದು ರಾಧಾಗೆ ಎಚ್ಚರಿಕೆ ಕೂಡ ನೀಡಿದ್ದಳು. ಕರ್ಣನನ್ನು ತಡೆಯೋಕೆ ಸಾಹಿತ್ಯ ಪ್ರಯತ್ನ ಕೂಡ ವ್ಯರ್ಥವಾಗಿತ್ತು. ಮೊದಲೇ ಜ್ವರದಿಂದ ಬಳಸ್ತಿದ್ದ ಕರ್ಣ, ಕಾರ್ ನಲ್ಲಿ ಹೊರಟಿದ್ದ. ಆತನಿಗೆ ಗುರಿಯಾಗಿಸಿಕೊಂಡು ಗುಂಡು ಬಿದ್ದಿತ್ತು.  ಹೇಗಾದ್ರೂ ಸರಿ ಮಗನನ್ನು ರಕ್ಷಿಸಿಕೊಳ್ಬೇಕು ಅಂತ ಓಡಿದ್ದ ರಾಧಾ ಕಣ್ಣಿಗೆ ಕಂಡಿದ್ದು ಕರ್ಣನಲ್ಲ ಭರತ್. ಹೆತ್ತ ಮಗನನ್ನೂ ಅರುಂಧತಿ ಬಿಡ್ಲಿಲ್ಲ ಎನ್ನುವ ನೋವಾ ರಾಧಾಗಿದೆ. 

ಪ್ರೋಮೋ ನೋಡಿದ ವೀಕ್ಷಕರು, ಅರುಂಧತಿಗೆ ತಕ್ಕ ಶಿಕ್ಷೆಯಾಯ್ತು ಎನ್ನುತ್ತಿದ್ದಾರೆ. ಅರುಂಧತಿ ಮಾಡಿದ ಕರ್ಮವನ್ನು ಪಾಪದ ಭರತ್ ಅನುಭವಿಸ್ತಿದ್ದಾನೆ. ಭರತ್ ತಪ್ಪು ಇಲ್ಲಿ ಏನೂ ಇಲ್ಲ. ಭರತ್ ನನ್ನು ರಕ್ಷಿಸೋದೇ ಕರ್ಣ, ಬ್ಲಾಕ್ ರೋಸ್ ಆಗಿ ಮಿಂಚಿದ್ದ ಅರುಂಧತಿ ನೋಡಿ ಈಗ ವೀಕ್ಷಕರು ನಗ್ತಾರೆ ಎನ್ನುವ ಕಮೆಂಟ್ ಗಳು ಬಂದಿವೆ. 

ಕರಿಮಣಿ ಸೀರಿಯಲ್ ನಲ್ಲಿ ಬಿಗ್ ಟ್ವಿಸ್ಟ್ ಸಿಕ್ಕಿದ್ದೇ ಬ್ಲಾಕ್ ರೋಸ್ ನಿಂದ. ಅನೇಕ ದಿನ ಬ್ಲಾಕ್ ರೋಸ್ ಹೆಸರಿನಲ್ಲಿ ಕರ್ಣನಿಗೆ ತೊಂದ್ರೆ ಆಗ್ತಾನೇ ಇತ್ತು. ವೀಕ್ಷಕರಿಗೆ ಕೂಡ ಬ್ಲಾಕ್ ರೋಸ್ ಯಾರು ಅನ್ನೋದೇ ಗೊತ್ತಾಗಿರಲಿಲ್ಲ. ಕರ್ಣನನ್ನು ಅತಿಯಾಗಿ ಪ್ರೀತಿಸ್ತಿದ್ದ, ಇಡೀ ಮನೆ ಜವಾಬ್ದಾರಿ ಹೊತ್ತಿದ್ದ ಅರುಂಧತಿಯೇ ಬ್ಲಾಕ್ ರೋಸ್ ಅನ್ನೋದು ಗೊತ್ತಾಗ್ತಿದ್ದಂತೆ ವೀಕ್ಷಕರು ಶಾಕ್ ಆಗಿದ್ದರು. ಈಗ ಅರುಂಧತಿ ಬಣ್ಣ ವೀಕ್ಷಕರಿಗೆ ತಿಳಿದಿದೆ. ಆಕೆ ಕೆಟ್ಟವಳು, ಆಕೆಗೂ ಕೆಟ್ಟದ್ದಾಗ್ಬೇಕು, ಸಾಹಿತ್ಯ ಇವಳಿಗೆ ಬುದ್ದಿ ಕಲಿಸ್ತಾಳೆ ಎನ್ನುವ ಭರವಸೆಯಲ್ಲಿದ್ದಾರೆ. ಕರ್ಣ ಹಾಗೂ ಸಾಹಿತ್ಯ ಜೋಡಿಯನ್ನು ಮೆಚ್ಚಿಕೊಂಡಿರುವ ವೀಕ್ಷಕರು, ಸೀರಿಯಲ್ ಟೈಂ ಬದಲಿಸುವಂತೆ ರಿಕ್ವೆಸ್ಟ್ ಮಾಡಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕಡಲು,ಸೂರ್ಯ ಹಾಗೂ ನನ್ನ ಕಿರಣಾ… ಪತಿ ಜೊತೆ ಶ್ವೇತಾ ಚೆಂಗಪ್ಪ ಸ್ಪೆಷಲ್ ಡೇಟ್
ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್