
ದಕ್ಷಿಣ ಭಾರತ ಕಿರುತೆರೆ ನಟಿ ಆಲೀಸ್ ಕ್ರಿಸ್ಟಿ ವಿಡಿಯೋ ಭಾರೀ ವೈರಲ್ ಆಗಿದೆ. ವಿಡಿಯೋ ವೈರಲ್ ಬೆನ್ನಲ್ಲಿಯೇ ನೆಟ್ಟಿಗರ ಭಾರೀ ಪ್ರಶ್ನೆಗಳಿಗೆ ನಟಿ ಸ್ಪಷ್ಟನೆಯನ್ನು ನೀಡಿದ್ದಾರೆ.
ಟೆಲಿವಿಷನ್ ಪ್ರೇಕ್ಷಕರಿಗೆ ಸುಪರಿಚಿತ ನಟಿ ಆಲೀಸ್ ಕ್ರಿಸ್ಟಿ. ಜನಪ್ರಿಯ ಧಾರಾವಾಹಿಗಳು ಮತ್ತು ಸ್ಟಾರ್ ಮ್ಯಾಜಿಕ್ ಶೋ ಮೂಲಕ ಆಲೀಸ್ ಗಮನ ಸೆಳೆದಿದ್ದಾರೆ. ಯೂಟ್ಯೂಬ್ ಚಾನೆಲ್‌ನಲ್ಲೂ ಸಕ್ರಿಯರಾಗಿರುವ ಆಲೀಸ್ ಸಾಮಾಜಿಕ ಮಾಧ್ಯಮದಲ್ಲೂ ತಮ್ಮ ವಿಶೇಷಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ. ಮದುವೆಗೂ ಮುನ್ನ ಆಲೀಸ್ ಆರಂಭಿಸಿದ ಯೂಟ್ಯೂಬ್ ಚಾನೆಲ್‌ಗೆ ಉತ್ತಮ ಪ್ರತಿಕ್ರಿಯೆ ದೊರೆತಿತ್ತು. ಮುಖಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದೀರಾ ಎಂಬ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸುವುದಕ್ಕೆಂದೇ ಅವರು ಯೂಟೂಬ್ ವ್ಲಾಗ್ ಅನ್ನು ಆರಂಭಿದಿದ್ದರು. ಇದೀಗ ನೆಟ್ಟಿಗರ ಪ್ರಶ್ನೆಗೆ ಸ್ಪಷ್ಟವಾಗಿ ಉತ್ತರ ಕೊಟ್ಟಿದ್ದಾರೆ.
ಎಲ್ಲ ನೆಟ್ಟಿಗರು ನಟಿ ಆಲೀಸ್ ಅವರಿಗೆ ನಿಮ್ಮ ಮುಖದ ಆಕಾರ ಹೇಗೆ ಬದಲಾಗಿದೆ ಎಂಬ ಪ್ರಶ್ನೆಯನ್ನು ಬಹಳ ದಿನಗಳಿಂದ ಕೇಳುತ್ತಲೇ ಬಂದಿದ್ದಾರೆ. ಇದೀಗ ವಿಡಿಯೋ ಮೂಲಕ ಉತ್ತರ ಕೊಟ್ಟಿರುವ ನಟಿ ಆಲೀಸ್ ಕ್ರಿಸ್ಟಿ ಅವರು ಈ ಬದಲಾವಣೆಗೆ ಕೆಲವು ಕಾರಣಗಳಿವೆ ಎಂದು ಹೇಳಿದ್ದಾರೆ. ಮೊದಲು ನಾನು ತುಂಬಾ ಸಿಹಿ ಪದಾರ್ಥಗಳನ್ನು ತಿನ್ನುತ್ತಿದ್ದೆ. ನನಗೆ ಕ್ರೀಮ್ ಕೇಕ್ ಮತ್ತು ಐಸ್‌ಕ್ರೀಮ್ ತಿನ್ನುವುದೆಂದರೆ ಭಾರೀ ಅಚ್ಚುಮೆಚ್ಚು ಆಗಿತ್ತು. ಆದರೆ, ನನ್ನ ದೇಹದ ತೂಕ ಮತ್ತು ಸೌಂದರ್ಯಕ್ಕೆ ಕೇಕ್ ಮತ್ತು ಐಸ್‌ಕ್ರೀಮ್ ತಿನ್ನುವುದೇ ದೌರ್ಬಲ್ಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ನಾನು ಮದುವೆಯಾಗಿ ಕೊಚ್ಚಿಗೆ ಬಂದಾಗಲೂ ಗಂಡನೊಂದಿಗೆ ಹೋಗಿ ತುಂಬಾ ಕೇಕ್ ತಿನ್ನುತ್ತಿದ್ದೆ. ಸಕ್ಕರೆ ಇಲ್ಲದೆ ಚಹಾ ಮತ್ತು ಜ್ಯೂಸ್ ಕುಡಿಯಬಹುದು. ಆದರೆ, ಸಕ್ಕರೆ ರಹಿತವಾದ ಐಸ್‌ಕ್ರೀಮ್ ಮತ್ತು ಕೇಕ್ ತಿನ್ನದುವುದು ಬಹಳ ಕಷ್ಟವಾಗಿತ್ತು. ಜೊತೆಗೆ, ಈ ಎರಡೂ ತಿಂಡಿಗಳ ಸೇವನೆ ಬಿಡುವುದು ಕಷ್ಟವಾಗಿತ್ತು. ಆದರೆ, ನನಗೆ ಕಷ್ಟವಾದರೂ ಸರಿ ಎಂದು ಭಾವಿಸಿ ದೃಢ ನಿರ್ಧಾರದೊಂದಿಗೆ ಕೇಕ್ ಹಾಗೂ ಐಸ್ ಕ್ರೀಮ್ ತಿನ್ನುವುದನ್ನು ಕಡಿಮೆ ಮಾಡಿದೆ. ಒಂದು ಅವಧಿಯಲ್ಲಿ ಒಂದು ತಿಂಗಳ ಕಾಲ ಸಂಪೂರ್ಣವಾಗಿ ನಿಲ್ಲಿಸಿದೆ. ಇದೀಗ ಸ್ವಲ್ಪ ಸ್ವಲ್ಪ ತಿನ್ನಲು ಪ್ರಾರಂಭಿಸಿದೆ ಎಂದಿದ್ದಾರೆ.
ಇನ್ನು ನನ್ನ ಮುಖದ ಆಕಾರ ಬದಲಾಗಲು ನಾನು ಯಾವುದೇ ಶಸ್ತ್ರಚಿಕಿತ್ಸೆಯನ್ನೂ ಮಾಡಿಸಿಕೊಂಡಿಲ್ಲ. ನಾನು ನಿಯಮಿತವಾಗಿ ಮುಖದ ವ್ಯಾಯಾಮಗಳನ್ನು ಮಾಡುತ್ತಿದ್ದೆ. ಅದರಿಂದ ಉತ್ತಮ ಫಲಿತಾಂಶ ದೊರೆತಿದೆ. ಕುತ್ತಿಗೆ ಮತ್ತು ಕೈಯಲ್ಲಿ ಸ್ವಲ್ಪ ಕೊಬ್ಬು ಹೆಚ್ಚಾಗಿತ್ತು ಎಂದು ವೈದ್ಯರು ತಿಳಿಸಿದರು. ಜೊತೆಗೆ, ನನ್ನ ಕುತ್ತಿಗೆ ಸಾಮಾನ್ಯಕ್ಕಿಂತ ಸ್ವಲ್ಪ ಉದ್ದವಾಗಿದೆ. ನಾನು ನಿರಂತರವಾಗಿ ಜಿಮ್‌ಗೆ ಹೋಗಲು ಆರಂಭಿಸಿದಾಗ ಮತ್ತು ಸಿಹಿತಿಂಡಿ ಕಡಿಮೆ ಮಾಡಿದಾಗ ನನ್ನ ಮುಖದ ಆಕಾರದಲ್ಲಿ ಉತ್ತಮ ಬದಲಾವಣೆಗಳಾಗಿವೆ ಎಂದು ತಿಳಿಸಿದ್ದಾರೆ.
ಈ ಎಲ್ಲ ಬೆಳವಣಿಗೆಯ ನಂತರ ನೀವು ಮುಖಕ್ಕೆ ಶಸ್ತ್ರಚಿಕಿತ್ಸೆ ಮಾಡಿದ್ದೀರಾ ಎಂದು ಕೇಳುವವರ ಸಂಖ್ಯೆಯೂ ಹೆಚ್ಚಾಗಿದೆ. ಆದರೆ, ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಧೈರ್ಯ ನನಗಿಲ್ಲ. ಇಂಜೆಕ್ಷನ್ ತೆಗೆದುಕೊಳ್ಳುವಾಗಲೇ ಕೈಕಾಲು ನಡುಗುವವಳು ನಾನು. ನಾನು ಹೇಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲಿ? ಆ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಅರಿವಳಿಕೆ ನೀಡಿದ ನಂತರ ಎಚ್ಚರವಾಗದಿದ್ದರೆ ಏನು ಎಂಬ ಭಯ ನನಗೆ, ಎಂದು ಆಲೀಸ್ ಕ್ರಿಸ್ಟಿ ಹೇಳಿಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.