ಹುಲಿ ಉಗುರು ಕೇಸ್‌ನಲ್ಲಿ ತಲೆ ತಗ್ಗಿಸದ ವರ್ತೂರ್‌, ವಿನಯ್‌ ಜೊತೆ ಸೇರಿ ಮೋಸದ ಆಟವಾಡಿ ತಲೆ ತಗ್ಗಿಸಿದ್ರು!

By Santosh Naik  |  First Published Dec 9, 2023, 8:09 PM IST

ಬಿಗ್‌ ಬಾಸ್‌ನ ಈ ವಾರ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಮೋಸದ ಆಟವಾಡಿ ಗೆಲುವು ಸಾಧಿಸಿದ್ದ ವರ್ತೂರ್‌ ಸಂತೋಷ್‌ ಅವರಿಂದ ಕ್ಯಾಪ್ಟನ್ಸಿ ಕಿತ್ತುಕೊಳ್ಳಲಾಗಿದೆ. ಇದರ ಬೆನ್ನಲ್ಲಿಯೇ ನೆಟ್ಟಿಗರು ವರ್ತೂರ್‌ ಸಂತೋಷ್‌, ಚಮಚಾ ಗ್ಯಾಂಗ್‌ ಸೇರಿದ್ದೇ ಇದಕ್ಕೆ ಕಾರಣ ಎಂದು ದೂಷಣೆ ಮಾಡುತ್ತಿದ್ದಾರೆ.


ಬೆಂಗಳೂರು (ಡಿ.9): ಈ ವಾರದ ಕಿಚ್ಚನ ಪಂಚಾಯ್ತಿ ಇನ್ನೊಂದು ಗಂಟೆಯಲ್ಲಿ ಆರಂಭವಾಗುತ್ತದೆ. ಅದಕ್ಕೂ ಮುನ್ನವೇ ಪ್ರೋಮೋದಲ್ಲಿ ಬಿಗ್‌ ಬ್ರೇಕಿಂಗ್‌ ಹೊರಬಿದ್ದಿದ್ದು, ಮುಂದಿನ ವಾರ ಬಿಗ್‌ ಬಾಸ್‌ ಮನೆಯ ನಾಯಕನಾಗಿ ಇಮ್ಯುನಿಟಿ ಹಾಗೂ ದುಪ್ಪಟ್ಟು ಅಧಿಕಾರದ ಆಸೆ ಕಾಣುತ್ತಿದ್ದ ವರ್ತೂರ್‌ ಸಂತೋಷ್‌ಗೆ ನಿರಾಸೆಯಾಗಿದೆ. ವಿನಯ್‌ ಜೊತೆ ಸೇರಿಕೊಂಡು ಮೋಸದ ಆಟವಾಡಿ ಕ್ಯಾಪ್ಟನ್‌ಶಿಪ್‌ ಟಾಸ್ಕ್‌ ಗೆದ್ದ ಕಾರಣಕ್ಕೆ, ವರ್ತೂರ್‌ ಸಂತೋಷ್‌ ಅವರನ್ನು ನಾಯಕ ಸ್ಥಾನದಿಂದ ವಜಾ ಮಾಡಲಾಗಿದೆ. ಅದರೊಂದಿಗೆ ಅವರಿಗೆ ಸಿಗಬೇಕಾಗಿದ್ದ ಇಮ್ಯೂನಿಟಿಯನ್ನೂ ಹಿಂತೆಗೆದುಕೊಳ್ಳಲಾಗಿದೆ. ಇದರ ಪ್ರೋಮೋ ಕಲರ್ಸ್‌ ಕನ್ನಡ ಚಾನೆಲ್‌ ತಮ್ಮ ಸೋಶಿಯಲ್‌ ಮೀಡಿಯಾ ಪುಟದಲ್ಲಿ ಹಾಕಿದ್ದೇ ತಡ, ಇದೆಲ್ಲವೂ ವಿನಯ್‌ ಅವರ ಗ್ಯಾಂಗ್‌ನ ಸಹವಾಸ ಎಂದು ವರ್ತೂರ್‌ ಸಂತೋಷ್‌ ಅವರಿಗೆ ದೂಷಣೆ ಮಾಡುತ್ತಿದ್ದಾರೆ. 'ನ್ಯಾಯದ ಮಾರ್ಗದಲ್ಲಿ ನಡೆದರೆ ದಕ್ಕೋದು ದಕ್ಕುತ್ತದೆ. ಅನ್ಯಾಯದ ಹಾದಿಯಲ್ಲಿ ಹೋದರೆ ಬರೀ ನಿರಾಸೆ..' ಎಂದು ವರ್ತೂರ್‌ ಸಂತೋಷ್‌ ಪರಿಸ್ಥಿತಿ ನೆನೆದು ಕಾಮೆಂಟ್‌ ಮಾಡಿದ್ದಾರೆ. ಹೆಚ್ಚಿನವರು ಇಡೀ ವಾರದ ಗಲಾಟೆಯಲ್ಲಿ ಇಂಥದ್ದೊಂದು ಪ್ರಕರಣ ಆಗಿತ್ತು ಅನ್ನೋದೇ ನೆನಪಿಲ್ಲ. ವರ್ತೂರ್‌ಗೆ ಸರಿಯಾದ ಶಿಕ್ಷೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

'ವಾರವಿಡೀ ಮಾಡೋದನ್ನೆಲ್ಲ ಮಾಡಿ ಶನಿವಾರ ಮಾತ್ರ ಗೋಮುಖದ ಮುಖವಾಡ ಹಾಕೊಂಡು ಇರ್ತಾರೆ ಕೆಲವರು !!! ಸೋಮವಾರದಿಂದ ಮತ್ತೆ ಶುರು ಹಳೆ ಚಾಳಿ ಅಷ್ಟೇ' ಎಂದು ಒಬ್ಬರು ವಿನಯ್‌ ಅವರ ಟೀಮ್‌ ಕುರಿತಾಗಿ ಕಾಮೆಂಟ್‌ ಮಾಡಿದ್ದಾರೆ. 'ವರ್ತೂರು ಬ್ರೋ ಮೇಲೆ ಇದ್ದಗೌರವ ಹೋಯಿತು... ವಿನಯ್ ಜೊತೆ ಸೇರ್ಕೊಂಡು ಈ ವ್ಯಕ್ತಿ  ಮನುಷ್ಯತ್ವವನ್ನೇ ಕಳಕೊಂಡ್ರು..' ಎಂದು ಇನ್ನೊಬ್ಬರು ಪೋಸ್ಟ್‌ ಮಾಡಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ವಿನಯ್‌, ವರ್ತೂರ್‌ ಸಂತೋಷ್‌ ಹಾಗೂ ಮೈಕೆಲ್‌ ಅಜಯ್‌ ಅವರಿಗೆ ಸಹಾಯ ಮಾಡಿದ್ದರು. ಅವರ ಪರವಾಗಿ ಟೈಮಿಂಗ್‌ ಲೆಕ್ಕಾಚಾರ ಇರಿಸಿಕೊಳ್ಳುತ್ತಿದ್ದ ವಿನಯ್‌, ಸರಿಯಾದ ಸಮಯಕ್ಕೆ ಈ ಬಗ್ಗೆ ಸೂಚನೆ ನೀಡಿ ಅವರ ವರ್ತೂರ್‌ ಸಂತೋಷ್‌ ಅವರ ಗೆಲುವಿಗೆ ಕಾರಣರಾಗಿದ್ದರು. ಈ ಬಗ್ಗೆ ಬಿಗ್‌ ಬಾಸ್‌ಗೆ ಮಾಹಿತಿ ಇದ್ದರೂ, ಏನೂ ಹೇಳಲು ಹೋಗಿರಲಿಲ್ಲ. ಆದರೆ, ಕಿಚ್ಚನ ಪಂಚಾಯ್ತಿಯಲ್ಲಿ ಸುದೀಪ್‌ ಈ ವಿಚಾರ ತೆಗೆದಿದ್ದು, ಮಾತ್ರವಲ್ಲದೆ ಅಲ್ಲಾಗಿದ್ದು ಏನು ಅನ್ನೋದರ ಬಗ್ಗೆ ನಮ್ರತಾ ಅವರಿಂದಲೇ ವಿವರಣೆ ಪಡೆದುಕೊಂಡರು. ಅದರ ಬೆನ್ನಲ್ಲಿಯೇ ನಾಯಕ ಸ್ಥಾನಕ್ಕೆ ಗೌರವ ಸಿಗುವವರೆಗೂ ಮನೆಯಲ್ಲಿ ಯಾರೂ ನಾಯಕರು ಇರೋದಿಲ್ಲ ಎಂದು ಕ್ಯಾಪ್ಟನ್‌ ಕೋಣೆಗೆ ಬೀಗ ಜಡಿದಿದ್ದಾರೆ.

Tap to resize

Latest Videos

'ವರ್ತೂರ್ ಸರ್‌ ಇನ್ನಾದರೂ ಆ ಚಮಚ ಗ್ಯಾಂಗ್‌ ಬಿಟ್ಟು ನಿಮ್ಮ ಮೊದಲಿನ ಆಟ ಶುರು ಮಾಡಿ... ' ಎಂದು ಸಿಂಧೂ ಗೌಡ ಎನ್ನುವವರು ಕಾಮೆಂಟ್‌ ಮಾಡಿದ್ದಾರೆ. ಇಷ್ಟೆಲ್ಲಾ ಆದರೂ ಅಲ್ಲಿನ ಒಂದು ಚಮಚಾ ನಗಾಡುತ್ತಲೇ ಇತ್ತು. ಇನ್ನೂ ಕ್ಲಾಸ್‌ ತೆಗೆದುಕೊಂಡಿಲ್ವಾ..' ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.

ಇನ್ನೂ ಕೆಲವರು ವರ್ತೂರ್‌ ಕ್ಯಾಪ್ಟನ್ಸಿ ಟಾಸ್ಕ್‌ ಗೆದ್ದ ಬಳಿಕ ಸ್ನೇಹಿತ್‌ ಹಾಗೂ ವಿನಯ್‌ಗೆ ಆಡಿದ ಮಾತನನ್ನು ನೆನಪಿಸಿಕೊಂಡಿದ್ದಾರೆ. ಟಾಸ್ಕ್‌ ಗೆದ್ದ ಬಳಿಕ ವರ್ತೂರ್‌, ಸ್ನೇಹಿತ್‌ ಹಾಗೂ ವಿನಯ್‌ಗೆ 'ಥ್ಯಾಂಕ್ಸ್‌ ಅಣ್ಣಾ, ಥ್ಯಾಂಕ್‌ ಯು ನಿಮಗೂ, ನನ್‌ ಕಡೆಯಿಂದ ಹೆಲ್ಪ್‌ ಅಥವಾ ಏನಾದ್ರೂ ಇದ್ದೆ ಇರುತ್ತೆ ಮುಂದಿನ ವಾರದಲ್ಲಿ..' ಎಂದು ಹೇಳಿದ್ದರು. ಈ ಬಾರಿಯ ಬಿಗ್‌ ಬಾಸ್‌ ಟೀಮ್‌ ಅತ್ಯಂತ ಕೆಟ್ಟದು. ನಿನ್ನನೇ ಅವರಿಗೆ ಇದು ಗೊತ್ತಾಗಿತ್ತು. ಈ ಬಗ್ಗೆ ಅಲ್ಲಿಯೇ ಹೇಳಬೇಕಿತ್ತು. ಫೋಟೋ ಎಲ್ಲಾ ಕಳಿಸಿಕೊಟ್ಟಿದ್ದರು. ಈಗ ಅವರೂ ಇನ್ನೂ ಕೆಟ್ಟದಾಗಿ ಕಾಣುತ್ತಾರೆ. ಎಲ್ಲಾ ಸುದೀಪ್‌ ಅವರೇ ಬಂದು ಪರಿಹಾರ ಮಾಡ್ಬೇಕಾ. ಇದರಿಂದ ಸುದೀಪ್ ಅವರಿಗೂ ಕೆಟ್ಟ ಹೆಸರು ಎಂದು ದೂರಿದ್ದಾರೆ.

ಮೋಸದಿಂದ ಕ್ಯಾಪ್ಟನ್‌ ಆದ ವರ್ತೂರ್‌ ಸಂತೋಷ್‌, ಕ್ಯಾಪ್ಟನ್‌ ರೂಮ್‌ಗೆ ಬಿತ್ತು ಬೀಗ!

'ಈ ಎಲ್ಲದರ ಮಧ್ಯದಲ್ಲಿ ಆ ಮೈಕೆಲ್‌ ಜಾರ್ಕೊಳಕ್ಕೆ ಬಿಡಬಾರ್ದು. ಸಂಗೀತ ಮತ್ತೆ ಪ್ರತಾಪ್ ಕಂಡ್ರೆ ಅವನಿಗೆ ಮೊದಲಿಂದಾನು ಆಗ್ತಿರ್ಲಿಲ್ಲ. ಸೋ ಆ ಸೇಡು ತೀರಿಸ್ಕೊಳಕ್ಕೆ ಎಷ್ಟು ಫೋರ್ಸ್‌ ಇಂದ ಒಂದು ಸ್ವಲ್ಪನೂ ಅನುಕಂಪ ಇಲ್ದಿರ ನೀರು ಎರಚಿದ. ಇದರ ಬಗ್ಗೆಯೂ ಚರ್ಚೆಯಾಗಬೇಕು ಎಂದು ಶಶಿಕುಮಾರ್‌ ಎನ್ನುವವರು ಬರೆದಿದ್ದಾರೆ. 'ಈ ಚಮಚ ನಮ್ರತಾಗೆ ವಿನಯ್ ಮಾಡಿರೋ ತಪ್ಪು ಶನಿವಾರ ಕಿಚ್ಚನ ಪಂಚಾಯಿತಿಯಲ್ಲಿ ಬಂದಾಗ ಮಾತ್ರ ಅರಿವಾಗುತ್ತೆ..' ಎಂದು ಇನ್ನೊಬ್ಬರು ನಮ್ರತಾ ಬಗ್ಗೆ ಕಾಮೆಂಟ್‌ ಮಾಡಿದ್ದಾರೆ.

ಅಂದು ಶಿಲ್ಪಾ ಶೆಟ್ಟಿ, ಇಂದು ಸಂಗೀತಾ: ಹೆಣ್ಣು ಟಾರ್ಗೆಟ್ ಆದಾಗ ಯಾಕೆ ಬರೊಲ್ಲ ಬಿಗ್‌ಬಾಸ್!

click me!