
ನಿರೂಪಕಿ, ನಟಿ ಅನುಶ್ರೀ ಶೂಟಿಂಗ್ ಬಿಡುವಿನ ವೇಳೆಯಲ್ಲಿಯೂ ಸಖತ್ ಎಂಜಾಯ್ ಮಾಡುತ್ತಾರೆ. ಎಲ್ಲರೊಂದಿಗೂ ಬೆರೆತು ಕಲೆತು ಖುಷಿಖುಷಿಯಾಗಿ ಒಡನಾಡುವ ಅನುಶ್ರೀ ಶೂಟಿಂಗ್ ಸ್ಥಳದಲ್ಲಿ ಇದ್ದು ಪುಟ್ಟ ಹೆಣ್ಣು ಮಗುವನ್ನು ಮಡಿಲಲ್ಲಿ ಕುಳ್ಳಿರಿಸಿಕೊಂಡು ಹಾಡಿಗೆ ತಲೆದೂಗುತ್ತ ಕುಳಿತಲ್ಲೇ ಡಾನ್ಸ್ ಮಾಡುತ್ತಿದ್ದಾರೆ. ಅನುಶ್ರೀ ಮಡಿಲಲ್ಲಿ ಕುಳಿತಿರುವ ಮಗು ಕೂಡ ಸಖತ್ ಎಂಜಾಯ್ ಮಾಡುತ್ತಿದೆ. ಈ ವಿಡಿಯೋವನ್ನು ಅನುಶ್ರೀ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡು ಸಂಭ್ರಮಿಸಿದ್ದಾರೆ.
ಅನುಶ್ರೀ ಖಾಸಗಿ ಚಾನೆಲ್ಲುಗಳಲ್ಲಿ ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡುವುದು ಎಲ್ಲರಿಗೂ ಗೊತ್ತೇ ಇದೆ. ಸರಿಗಮಪ ಸೀಸನ್‌ಗಳನ್ನು ಅಚ್ಚುಕಟ್ಟಾಗಿ ಮನಮುಟ್ಟುವ ರೀತಿಯಲ್ಲಿ ನಡೆಸಿಕೊಡುತ್ತಿರುವ ಅನುಶ್ರೀ, ಸರಿಗಮಪದ ಎಲ್ಲಾ ಸೀಸನ್‌ಗಳನ್ನೂ ನಡೆಸಿಕೊಟ್ಟಿದ್ದಾರೆ. ಸ್ಪಷ್ಟ ಉಚ್ಛಾರಣೆ ಹಾಗೂ ಪದಗಳೊಂದಿಗೆ ಆಟವಾಡುತ್ತ ಅನುಶ್ರೀ ನಿರೂಪಣೆ ಮಾಡುತ್ತಿದ್ದರೆ ಟಿವಿ ವೀಕ್ಷಕರು ಅಲ್ಲಾಡದೇ ಕುಳಿತಿರುತ್ತಾರೆ, ನಿದ್ದೆಗೆಟ್ಟು ನೋಡುತ್ತಲೇ ಇರುತ್ತಾರೆ. ಅನುಶ್ರೀಗೆ ಬಹಳಷ್ಟು ಫ್ಯಾನ್ಸ್ ಇದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಕೂಡ ಅನುಶ್ರೀ ಸಿಕ್ಕಾಪಟ್ಟೆ ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ.
ನಟಿ ಅನುಶ್ರೀ ಹಲವಾರು ಈವೆಂಟ್‌ಗಳನ್ನು ನಡೆಸಿಕೊಡುತ್ತಾರೆ. ಅವರು ಪ್ರೀ ಲ್ಯಾನ್ಸರ್ ನಿರೂಪಕಿ ಆಗಿರುವುದರಿಂದ ಹಲವಾರು ದೊಡ್ಡ ದೊಡ್ಡ ರಾಜಕೀಯ ಕ್ರಾರ್ಯಕ್ರಮಗಳ ನಿರೂಪಣೆಯನ್ನು ಸಹ ಮಾಡುತ್ತಾರೆ. ಅಂಥ ಅನುಶ್ರೀ ಈ ಮೊದಲು 'ಬೆಂಕಿ ಪೊಟ್ಣ' ಎಂಬ ಸಿನಿಮಾದಲ್ಲಿ ನಾಯಕಿಯಾಗಿ ಸಹ ನಟಿಸಿದ್ದಾರೆ. ಈ ಮೂಲಕ ನಟಿ ಎಂಬ ಪಟ್ಟಕ್ಕೂ ಸೈ ಎನಿಸಿಕೊಂಡಿರುವ ಅನುಶ್ರೀ ಇಂದು ಕನ್ನಡ ನಾಡಿನ ಖ್ಯಾತ ನಿರೂಪಕಿ ಎಂಬ ಖ್ಯಾತಿ ಹೊಂದಿದ್ದಾರೆ. ಯಾವುದೇ ದೊಡ್ಡ ಪ್ರೋಗ್ರಾಂ ಇರಲಿ, ಅಲ್ಲಿ ಅನುಶ್ರೀ ಹಾಜರಿ ಇದ್ದೇ ಇರುತ್ತದೆ ಎಂಬಷ್ಟರ ಮಟ್ಟಿಗೆ ಅವರು ಖ್ಯಾತಿ ಪಡೆದಿದ್ದಾರೆ.
ಅನುಶ್ರೀ ಕೆಲವು ದಿನಗಳ ಹಿಂದೆ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ಅಲ್ಲಿ ಸಾಕಷ್ಟು ಫೇಮಸ್ ಸ್ಥಳಗಳನ್ನು ನೋಡಿ, ವಿದೇಶದ ಹಲವು ಕಡೆ ಸಖತ್ಎಂಜಾಯ್ ಮಾಡಿಕೊಂಡು ಬಂದಿದ್ದಾರೆ ಎನ್ನಲಾಗಿದೆ. ಸದ್ಯ ಅನುಶ್ರೀ ರಿಯಾಲಿಟಿ ಶೋಗಳಲ್ಲಿ ಬ್ಯುಸಿ ಆಗಿದ್ದಾರೆ..
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.