ಲಾಂಗ್ ಹಿಡಿದು ರೀಲ್ಸ್ ಮಾಡಿ ಕಾನೂನು ಸಂಕಷ್ಟಕ್ಕೆ ಸಿಲುಕಿದ ರಜತ್ ಕಿಶನ್ ಹಾಗೂ ವಿನಯ್ ಗೌಡ. ಸಾಕ್ಷ್ಯ ನಾಶಕ್ಕೆ ಯತ್ನಿಸಿದ ಕಾರಣಕ್ಕೆ ಮತ್ತೆ ಬಂಧನ. ಪೊಲೀಸರ ಎದುರೇ ಬೇಜವಾಬ್ದಾರಿ ಉತ್ತರ ನೀಡಿದ್ದಕ್ಕೆ ಸಂಕಷ್ಟ.
ಬೆಂಗಳೂರು (ಮಾ.25): ಮಾಡಿರೋದೇ ತಪ್ಪು, ಅದಕ್ಕೊಂದು ಕ್ಷಮೆ ಕೇಳಿ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಡಿಲೀಟ್ ಮಾಡಿದ್ದರೆ ಮುಗಿದು ಹೋಗಬಹುದಾಗಿದ್ದ ಕೇಸ್‌ನಲ್ಲಿ ರಜತ್ ಕಿಶನ್ ಹಾಗೂ ವಿನಯ್ ಗೌಡ ಒಂದಾದ ಮೇಲೆ ಒಂದರಂತೆ ಕಾನೂನು ಸಂಕಷ್ಟ ಎದುರಿಸುತ್ತಿದ್ದಾರೆ. ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಲ್ಲದೆ, ಎಫ್‌ಐಆರ್ ಬಿದ್ದಾಗ ಕನಿಷ್ಠ ಪಕ್ಷ ಪೊಲೀಸ್ ಠಾಣೆಗೆ ಬಂದು ಕ್ಷಮೆ ಕೇಳಿ ವಿಡಿಯೋ ಡಿಲೀಟ್ ಮಾಡಿದ್ದರೆ ಮುಗಿದು ಹೋಗುತ್ತಿತ್ತು. ಆದರೆ, ಪೊಲೀಸರ ಎದುರೇ ಬೇಜವಾಬ್ದಾರಿ ಉತ್ತರ, ಅಸಡ್ಡೆಯ ಮಾತು ಆಡಿದ್ದಲ್ಲದೆ, ರೀಲ್ಸ್‌ನಲ್ಲಿ ಬಳಕೆ ಮಾಡಿದ್ದ ಕಾಟೇರ ಮಚ್ಚಿನ ಬದಲು ಫೈಬರ್ ಮಚ್ಚನ್ನು ಪೊಲೀಸರಿಗೆ ನೀಡಿ ಸಾಕ್ಷ್ಯ ನಾಶ ಮಾಡುವ ಪ್ರಯತ್ನವನ್ನೂ ಮಾಡಿದ್ದರು. ಈ ಕಾರಣಕ್ಕೆ ಇಂದು ಮತ್ತೆ ಬಿಗ್‌ಬಾಸ್ ಬ್ಯಾಡ್ ಬಾಯ್ಸ್ ಬಂಧನವಾಗಿದೆ.
ಇಂದು ಬಸವೇಶ್ವರ ನಗರ ಪೊಲೀಸ್ ಠಾಣೆಯ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಇಬ್ಬರನ್ನೂ ವಿಚಾರಣೆಗೆ ಕರೆದಿದ್ದರು. ಇದಕ್ಕೂ ಮುನ್ನ ಸೋಶಿಯಲ್ ಮೀಡಿಯಾದಲ್ಲಿ ರಜತ್ ಕಿಶನ್ ವಿಡಿಯೋ ಕೂಡ ಮಾಡಿದ್ದರು.
ಆರೋಪಿ ವಿನಯ್ ಗೌಡ, ರಜತ್ ಕಿಶನ್ ಅವರನ್ನು ಮಂಗಳವಾರ ವಶಕ್ಕೆ ಪಡೆದು ಹೇಳಿಕೆಯನ್ನು ದಾಖಲು ಮಾಡಲಾಗಿತ್ತು. ರೀಲ್ಸ್ ವೇಳೆ ಬಳಸಿದ್ದು ಫೈಬರ್ ಮಚ್ಚು ಎಂದಿದ್ದರು. ಅದನ್ನು ಠಾಣೆಗೆ ತಂದು ನೀಡಿದ ಬಳಿಕ ಇಬ್ಬರನ್ನೂ ಬಿಡುಗಡೆ ಮಾಡಲಾಗಿತ್ತು. ಆದರೆ, ಅವರು ನೀಡಿದ್ದು ರೀಲ್ಸ್‌ನಲ್ಲಿ ಬಳಕೆ ಮಾಡಿದ್ದ ಮಚ್ಚು ಅಲ್ಲ, ಎರಡೂ ಬೇರೆ ಬೇರೆ ಎಂದು ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಪೊಲೀಸರು ಮತ್ತೆ ಇಬ್ಬರನ್ನೂ ಗ್ರಿಲ್ ಮಾಡಿದ್ದಾರೆ.
ಅಲ್ಲದೆ, ಪ್ರಾಥಮಿಕ ತನಿಖೆ ವೇಳೆಯಲ್ಲೂ ಅವರು ನೀಡಿದ್ದಯ ನಕಲಿ ಲಾಂಗ್ ಎನ್ನುವುದು ಗೊತ್ತಾಗಿದ್ದು, ಅಸಲಿ ಲಾಂಗ್ ಅಕ್ಷಯ್ ಸ್ಟುಡಿಯೋಸ್‌ನಲ್ಲಿ ಇದೆ ಎಂದಿದ್ದಾರೆ. ಇದರಿಂದಾಗಿ ಪೊಲೀಸರು ನಾಗರಬಾವಿಯ ಅಕ್ಷಯ್ ಸ್ಟುಡಿಯೋಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಿದ್ದಾರೆ. ತನಿಖೆಯಲ್ಲಿ ಸಾಕ್ಷ್ಯ ನಾಶ ಮಾಡುವ ಪ್ರಯತ್ನದ ಹಿನ್ನೆಲೆಯಲ್ಲಿ ರಜತ್, ವಿನಯ್ ಇಬ್ಬರನ್ನು ಪೊಲೀಸರು ಬಂಧನ ಮಾಡಿದ್ದಾರೆ.
ಡೆವಿಲ್ ಸಿನಿಮಾದ ನಾಯಕ ದರ್ಶನ್, ಖಳನಾಯಕ ವಿನಯ್ ಗೌಡಗೆ ರಿಯಲ್ ಡೆವಿಲ್ ಆದ ಎಸಿಪಿ ಚಂದನ್!
ಶರ್ಟ್ ಬಟನ್ ಹಾಕೋ ಎಂದ್ರಾ ಪೊಲೀಸರು: ವಿಚಾರಣೆಗೆ ಬರಲು ಹೇಳಿದ್ದ ಹಿನ್ನಲೆಯಲ್ಲಿ ವಿನಯ್ ಹಾಗೂ ರಜತ್ ಇಬ್ಬರೂ ಪೊಲೀಸ್ ಠಾಣೆಗೆ ಬಂದಿದ್ದರು. ಠಾಣೆಯ ಒಳಹೊಕ್ಕುವ ವೇಳೆ ಶರ್ಟ್‌ನ ಮೊದಲ ಗುಂಡಿಯನ್ನು ತೆಗೆದು, ಖಡಕ್ ಆಗಿದ್ದ ರಜತ್ ಕಿಶನ್ ಹೊರಬರುವ ವೇಳೆ ಶರ್ಟ್ ಬಡನ್ ಹಾಕಿಕೊಂಡು ಸುಮ್ಮನೆ ಹೊರಬಂದಿದ್ದರು. ಪೊಲೀಸ್ ಜೀಪ್‌ನಲ್ಲಿ ತೆರಳುವಾಗ ಖಿನ್ನರಾಗಿದ್ದ ರಜತ್ ಕಿಶನ್, ಸ್ಥಳ ಮಹಜರು ಮಾಡುವ ವೇಳೆ ರಜತ್ ಕಿಶನ್ ಕೈಕಟ್ಟಿ ನಿಂತಿರುವ ಫೋಟೋ ವೈರಲ್ ಆಗಿದೆ.
ರಜತ್ ಮತ್ತು ವಿನಯ್‌ಗೌಡ ಬಳಸಿದ ಕಾಟೇರ ಮಚ್ಚು ತಾಳೆಯಾಗುತ್ತಿಲ್ಲ; ಸಾಕ್ಷ್ಯನಾಶದ ಕೇಸಲ್ಲಿ ಬಂಧನಕ್ಕೆ ಹೆದರಿ ಪರಾರಿ!