ನನ್​ ಸನಿಹ ಬಂದ್ರೆ ನಿಮ್ಗೆ ಏನೂ ಅನಿಸಲ್ವಾ..? ಭೂಮಿಯ ಮೆಲ್ಲುಸುರಿಗೆ ಡುಮ್ಮ ಸರ್​ ಫ್ಲ್ಯಾಟ್​- ಮುಂದೆ?

By Suchethana D  |  First Published Jun 5, 2024, 12:48 PM IST

ಗೌತಮ್​ ಮತ್ತು ಭೂಮಿಕಾ ಫಸ್ಟ್​ ನೈಟ್​ಗೆ ಸಿದ್ಧತೆ ನಡೆಸಿದ್ದಾರೆ. ಬೆವರುತ್ತಿರುವ ಗೌತಮ್​ಗೆ ಭೂಮಿಕಾಳೇ ಸಮಾಧಾನ ಹೇಳಿದ್ದಾಳೆ. ಮುಂದೆ?
 


ಸಾವಿರ ಸುಳ್ಳು ಹೇಳಿ ಮದ್ವೆ ಮಾಡಿಸು ಅಂತಾರೆ. ಆದರೆ ಅಜ್ಜಿ ಹೇಳಿದ ಒಂದೇ ಒಂದು ಸುಳ್ಳಿನಿಂದ ಭೂಮಿಕಾ ಮತ್ತು ಗೌತಮ್​ ಮಾನಸಿಕವಾಗಿ ಮಾತ್ರವಲ್ಲದೇ ದಂಪತಿಯ ಹಾಗೆ ಬಾಳುವ ಕಾಲ ಬಂದೇ ಬಿಟ್ಟಿದೆ. ಭೂಮಿಕಾ  ಮತ್ತು ಗೌತಮ್​ ಈ ಜನ್ಮದಲ್ಲಿ ಒಂದಾಗಲ್ಲ ಎನ್ನುವುದು ಕಿಲಾಡಿ ಅಜ್ಜಿಗೆ ಗೊತ್ತಿದೆ. ಇಬ್ಬರೂ ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತಿದ್ದರೂ ದಂಪತಿಯಂತೆ ಬಾಳಲ್ಲ, ಇಬ್ಬರೂ ನಾಚಿಕೆಯಲ್ಲಿ ಒಬ್ಬರನ್ನು ಒಬ್ಬರು ಮೀರಿಸುತ್ತಿದ್ದಾರೆ ಎಂದು ತಿಳಿದಿದೆ. ಇದೇ ಕಾರಣಕ್ಕೆ ಅಜ್ಜಿ ಇಬ್ಬರನ್ನೂ ಹನಿಮೂನ್​ಗೆ ಕಳಿಸಿದ್ದಳು. ಆದರೆ ಅಲ್ಲಿ ಆಗಿದ್ದೇ ಬೇರೆ. ಭೂಮಿಕಾಳ ಕೊಲೆ ಮಾಡಲು ಶಕುಂತಲಾ ದೇವಿ ಸಂಚು ಹೂಡಿದ್ದಳು. ನಂತರ ಭೂಮಿಕಾ ಅಪಹರಣವಾಗಿತ್ತು. ಅವಳನ್ನು ಹುಡುಕಿ, ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಪತ್ನಿಯನ್ನು ಹರಸಾಹಸ ಪಟ್ಟು ಗೌತಮ್​ ಉಳಿಸಿಕೊಂಡದ್ದು ಆಯಿತು. ಇನ್ನೆಲ್ಲಿಯ ಹನಿಮೂನ್​? ಇದ್ಯಾವುದೂ ಅಜ್ಜಿಗೆ ಗೊತ್ತಿಲ್ಲದಿದ್ದರೂ ಇವರಿಬ್ಬರೂ ದೈಹಿಕವಾಗಿ ಒಂದಾಗಲಿಲ್ಲ ಎನ್ನುವ ಸತ್ಯದ ಅರಿವಾಗಿ ಹೇಗಾದರೂ ಮಾಡಿ ಇಬ್ಬರನ್ನೂ ಒಂದು ಮಾಡಲು ಪ್ಲ್ಯಾನ್​ ಮಾಡಿದಳು.

ಫಸ್ಟ್​ ನೈಟ್​ ಏರ್ಪಾಟೇನೋ ಆಗಿತ್ತು. ಅದನ್ನು ಗೌತಮ್​ ಗೆಳೆಯ ಆನಂದ್​ ಸಕತ್ತಾಗೇ ಮಾಡಿದ್ದಾನೆ. ಆದರೆ ಫಸ್ಟ್​ನೈಟ್​ ಎಂದಾಕ್ಷಣ ಹರಳೆಣ್ಣೆ ಕುಡಿದವರ ಥರ ಆಡ್ತಿದ್ದ ಗೌತಮ್​ ಮತ್ತು ಭೂಮಿಕಾ ಒಂದಾಗುವರೋ ಇಲ್ಲವೋ ಎಂಬ ಚಿಂತೆ ಅಭಿಮಾನಿಗಳಿಗೆ ಇತ್ತು. ಆದರೆ ಅವರ ಆಸೆ ಕೊನೆಗೂ ಈಡೇರಿದಂತಿದೆ. ಆದರೆ ಹಾಗಂತ ಇಬ್ಬರೂ ಅಷ್ಟು ಸುಲಭದಲ್ಲಿ ಒಂದಾಗುವಂತೆ ಕಾಣುತ್ತಿಲ್ಲ. ಗೌತಮ್​ಗೆ ಇದನ್ನು ಹೇಗೆ ನಿಭಾಯಿಸಬೇಕು ಎನ್ನುವುದೇ ತಿಳಿಯುತ್ತಿಲ್ಲ. ಅಷ್ಟಕ್ಕೂ ಇದೀಗ ಜೀ ಕನ್ನಡ ರಿಲೀಸ್​ ಮಾಡಿರುವ ಪ್ರೊಮೋದಲ್ಲಿ .     ಭೂಮಿಕಾ ಕೈಯಲ್ಲಿ ಹಾಲು ಹಿಡಿದು ಪ್ರವೇಶಿಸುತ್ತಾಳೆ.  ಆದರೆ ಗೌತಮ್​ಗೆ ತುಂಬಾ ಭಯ.    ಇಷ್ಟು ಬೇಗ ಒಂದಾಗಲು ಅವನಿಗೆ ಅದೇನೋ ಅವ್ಯಕ್ತ ಸಂಕಟ.

Tap to resize

Latest Videos

ಹನಿಮೂನ್​ಗೆ ಹೋಗಲು ಆಗಿಲ್ವಾ? ಇಲ್ಲಿಂದ್ಲೇ ನೋಡಿ ಮನಾಲಿ ಸಿಸ್ಸು ವಾಟರ್​ಫಾಲ್ಸ್​ ಅಂತಿದೆ ಈ ತಾರಾ ಜೋಡಿ!

ಭೂಮಿಕಾ ನಿಮಗೆ ಇದೆಲ್ಲ ಇಷ್ಟವಾಗದು. ಇಬ್ಬರ ನಡುವೆ ಬಾಂಡ್‌ ಬೆಳೆಯಬೇಕು. ಮೊಗ್ಗು ಹೂವಾಗಬೇಕು ಎನ್ನುತ್ತಾನೆ. ಒಬ್ಬರನೊಬ್ಬರನ್ನು ಅರ್ಥ ಮಾಡಿಕೊಂಡು ಮೊಗ್ಗು ಹೂವಾಗಲು ಸಾಕಷ್ಟು ಸಮಯ ಬೇಕಾಗಬಹುದು. ನೀವು ಹಾಸಿಗೆ ಮೇಲೆ ಮಲಗಿ. ನಾನು ಕೆಳಗೆ ಚಾಪೆ ಮೇಲೆ ಮಲಗ್ತಿನಿ ಎನ್ನುತ್ತಾನೆ ಗೌತಮ್‌. ಆಗ ಭೂಮಿಕಾ ಗೌತಮ್‌ರ ಕೈ ಹಿಡಿದು, ನಿಮಗೆ ನಾನು ಇಷ್ಟ ಇಲ್ವ, ನನ್ನನ್ನು ಪತ್ನಿಯಾಗಿ ಸ್ವೀಕರಿಸಿಲ್ವ ಎಂದು ಕೇಳುತ್ತಾಳೆ. ನನ್ನನ್ನು ನೋಡಿದ್ರೆ ನಿಮಗೆ ಏನೂ ಅನಿಸಲ್ವಾ? ನಾನು ಹತ್ತಿರ ಬಂದರೆ ನಿಮಗೆ ಏನೂ ಆಗೋದಿಲ್ವಾ ಎಂದೆಲ್ಲಾ ಪ್ರಶ್ನಿಸಿದಾಗ, ಅವಳ ಸ್ಪರ್ಷ ಆಗುತ್ತಿದ್ದಂತೆಯೇ ಗೌತಮ್​ಗೆ ರೋಮಾಂಚನವಾಗುತ್ತದೆ. ಇಬ್ಬರೂ ತಬ್ಬಿಕೊಳ್ಳುತ್ತಾರೆ. ಮುಂದೆ ಏನಾಗುವುದೋ ಸದ್ಯ ಗೊತ್ತಿಲ್ಲ! ಇದರ ಪ್ರೊಮೋ ನೋಡಿದ ವೀಕ್ಷಕರು, ಅಬ್ಬಾ ಲೇಡೀಸ್​ ಫಸ್ಟ್​ ಅಂತಾರೆ. ಫಸ್ಟ್​ ನೈಟ್​ನಲ್ಲೂ ಇದೇ ಆಗೋಯ್ತಾ? ಭೂಮಿಕಾನೇ ಗೌತಮ್​ಗೆ ಇದೆಲ್ಲಾ ಹೇಳಬೇಕಾಗಿ ಬಂದಲ್ಲಪ್ಪಾ ಎನ್ನುತ್ತಿದ್ದಾರೆ. ಯಾರು ಫಸ್ಟ್​ ಆದ್ರೇನು ಒಟ್ಟಿನಲ್ಲಿ ಇಬ್ಬರ ಸೋಬಾನ ಆಗಲಿ ಸಾಕು, ಏಕೆಂದರೆ ಇದು ಬಿಟ್ಟರೆ ಇನ್ನು ಎರಡು ತಿಂಗಳು ಮುಹೂರ್ತ ಇಲ್ಲ ಎಂದಾಗಿದೆ. ಅತ್ತ ಶಕುಂತಲಾ ದೇವಿ ಆಸ್ಪತ್ರೆಗೆ ದಾಖಲಾಗಿದ್ದಾಳೆ. ಅವಳ ನಾಟಕ ಸದ್ಯ ನಡೆಯುತ್ತಿಲ್ಲ. ಆದರೆ ಇವರು ಒಂದಾಗುವ ಹೊತ್ತಲ್ಲಿ ಇನ್ನೇನು ಕುತಂತ್ರ ಮಾಡುತ್ತಾಳೋ ಗೊತ್ತಿಲ್ಲ ಎನ್ನುವ ಭಯವೂ ವೀಕ್ಷಕರಿಗೆ ಇದೆ.

ಅಜ್ಜಿ ಹೇಳಿದ ಒಂದು ಸುಳ್ಳಿನಿಂದ ಇಬ್ಬರೂ ಒಂದಾಗಲಿ ಎನ್ನುವುದು ಸೀರಿಯಲ್​ ಪ್ರೇಮಿಗಳ ಆಸೆ. ಏಕೆಂದರೆ ಅಜ್ಜಿ, ಫಸ್ಟ್​ ನೈಟ್​ಗೆ  ಮುಹೂರ್ತನೂ ಫಿಕ್ಸ್​ ಮಾಡಿಬಿಟ್ಟಿದ್ದಳು. ಈ ಮುಹೂರ್ತ ಯಾಕೆ ಎಂದು ಗೌತಮ್​ ಪ್ರಶ್ನಿಸಿದಾಗ ಅಜ್ಜಿ ನಿಮ್ಮಿಬ್ಬರ ಸೋಬಾನಕ್ಕೆ ಅಂದಿದ್ದಾಳೆ. ಗೌತಮ್​ಗೆ ಶಾಕ್​ ಆಗಿದೆ. ಇದೆಲ್ಲಾ ಯಾಕೆ ಎಂದಿದ್ದಾನೆ. ಆದರೆ ಅಜ್ಜಿ ಇದು ನಿಮಗಲ್ಲ, ನಿಮ್ಮಮ್ಮ ಶಕುಂತಲಾಗಾಗಿ. ಅವಳಿಗೋಸ್ಕರ ನೀವಿಬ್ಬರೂ ಒಂದಾಗಬೇಕು, ಇಲ್ಲದಿದ್ರೆ ಸತ್ತೇ ಹೋಗ್ತಾಳೆ ಅಂದಿದ್ದಾಳೆ. ಪಾಪ ಅವಳಿಗೇನು ಗೊತ್ತು, ಇವರಿಬ್ಬರು ಒಂದಾದರೆ ಅವಳು ಶಾಕ್​ನಿಂದ ಸಾಯಬಹುದು ಎಂದು. ಆದರೆ ಗೌತಮ್​ ಫಸ್ಟ್​ ನೈಟ್​ ಹಾಂ ಹೂಂ ಏನೂ ಹೇಳದೇ ಹೋಗಿದ್ದ. ಕಿಲಾಡಿ ಅಜ್ಜಿ ಸುಮ್ಮನಾಗಲಿಲ್ಲ. ಭೂಮಿಕಾಳನ್ನು ಕರೆದಿದ್ದಾಳೆ.  ಆದರೆ ಗೌತಮ್​ ಇದಕ್ಕೆ ಒಪ್ಪಲ್ಲ ಎನ್ನುವುದು ಭೂಮಿಕಾಗೆ  ಗೊತ್ತು. ಕೊನೆಗೆ ಅಜ್ಜಿ ಸುಳ್ಳಿ ಹೇಳಿ, ಗೌತಮ್​ ಇದಕ್ಕೆ ಓಕೆ ಅಂದಿದ್ದಾನೆ ಎಂದ ಮೇಲೆ ಅವರು ಓಕೆ ಅಂದ್ರೆ ನನಗೂ ಓಕೆ ಎಂದಿದ್ದಾಳೆ. ಒಟ್ಟಿನಲ್ಲಿ ಇವರಿಬ್ಬರೂ ಸೋಬಾನ ಫಿಕ್ಸ್ ಆಗಿದೆ.  ಪ್ರೀತಿಯ ನಿವೇದನೆ ಮಾಡಿಕೊಳ್ಳಲಿಕ್ಕೇ ವರ್ಷವಾಗುತ್ತಾ ಬಂತು. ಇನ್ನು ಪತಿ-ಪತ್ನಿಯಂತೆ ಬಾಳಲು ಇನ್ನೆಷ್ಟು ಕಾಲ ಬೇಕೋ ಎನ್ನುವ ಬೇಸರದಲ್ಲಿ ಅಭಿಮಾನಿಗಳು ಇದ್ದರು. ಒಟ್ಟಿನಲ್ಲಿ ಫಸ್ಟ್​ನೈಟ್​ ಫಿಕ್ಸೇ  ಆಗೋಗಿದೆ.   

ಮೈ ಕಪ್​ ಕೇಕ್​, ಬೇಬಿ ಡಾಲ್​ ನೀನು ಬೇಕು ಎಂಬ ಬಾಯ್​ಫ್ರೆಂಡ್​! ರಾ...ರಾ.. ರಕ್ಕಮ್ಮ ಬೆಡಗಿಗೆ ಬೇಕಿತ್ತಾ ಇವೆಲ್ಲಾ?


click me!