Latest Videos

ಜೈಲಿನಲ್ಲಿರೋ ಕ್ರಿಮಿನಲ್​ನನ್ನು ಬಿಡಿಸೋದು ಬೇಕಿತ್ತಾ ಇವಳಿಗೆ? ತಗ್ಲಾಕ್ಕೊಂಡ ಭಾರ್ಗವಿ!

By Suchethana DFirst Published Jun 25, 2024, 4:26 PM IST
Highlights

ಸೀತಾ  ಮತ್ತು ರಾಮ್​ರನ್ನು ಬೇರೆ ಮಾಡಲು ಜೈಲಿನಲ್ಲಿರುವ ಕ್ರಿಮಿನಲ್​ ರುದ್ರಪ್ರತಾಪ್​ನನ್ನು ಬಿಡಿಸಿಕೊಂಡು ಬಂದಿರೋ ಭಾರ್ಗವಿ ಈಗ ತಗ್ಲಾಕ್ಕೊಂಡಿದ್ದಾಳೆ. ಮುಂದೇನು?
 

ಸೀತಾ ಮತ್ತು ರಾಮ್​ ಮದ್ವೆಯ ಕಾರ್ಯ ಅದ್ಧೂರಿಯಾಗಿಯೇ ನಡೆಯುತ್ತಿದೆ. ಇದರ ನಡುವೆಯೇ ರುದ್ರಪ್ರತಾಪ ಅಶೋಕ್​ ಮತ್ತು ರಾಮ್​ನ ಕೈಯಲ್ಲಿ ಸಿಕ್ಕಿಬಿದ್ದಿದ್ದಾನೆ. ಅಂಜಲಿಯನ್ನು ಬುಟ್ಟಿಗೆ ಹಾಕಿಕೊಂಡಿದ್ದ ರುದ್ರಪ್ರತಾಪ್​ ಆಕೆಗೆ ಫೋನ್​ ಮಾಡಿದ್ದ. ಆದರೆ ಆ ಫೋನ್​ ಅನ್ನು ಸಿಹಿ ರಿಸೀವ್​ ಮಾಡಿದಾಗಲೇ ರುದ್ರಪ್ರತಾಪ್​ ಅಲ್ಲೇ ಎಲ್ಲೋ ಇರುವುದು ಗೊತ್ತಾಗಿತ್ತು. ಸಿಹಿಗೆ ರುದ್ರಪ್ರತಾಪ್​ನನ್ನು ಕಂಡರೆ ಭಯ. ಏಕೆಂದರೆ ಇದಾಗಲೇ ಅವಳ ಮೇಲೆ ಹಲ್ಲೆ ಮಾಡಿದ್ದ ಆತ. ಆದ್ದರಿಂದ ಈ ವಿಷಯವನ್ನು ರಾಮ್​ಗೆ ತಿಳಿಸಿದ್ದಳು. ಅದೇ  ಇನ್ನೊಂದೆಡೆ ಅಂಜಲಿ ರುದ್ರಪ್ರತಾಪನನ್ನು ಪ್ರೀತಿಸಲು ಶುರು ಮಾಡಿದ್ದಾಳೆ. ಆ ವಿಷಯವಿನ್ನೂ ಅಣ್ಣ ಅಶೋಕ್​ಗೆ ಗೊತ್ತಿಲ್ಲ. ಆದರೆ ಇದೀಗ ಸೀರಿಯಲ್​ಗೆ ಭಾರಿ ಟ್ವಿಸ್ಟ್​  ಬಂದಿದೆ.

ಸಿಹಿ ರುದ್ರಪ್ರತಾಪ್​ ಅಂಜಲಿಗೆ ಫೋನ್​ ಮಾಡಿರುವ ವಿಷಯ ತಿಳಿಯುತ್ತಲೇ ರಾಮ್​  ಮತ್ತು ಅಶೋಕ್​ ಅವನನ್ನು ಹುಡುಕಿ ಹೊರಟಿದ್ದಾರೆ. ರುದ್ರಪ್ರತಾಪ್​ ಸಿಕ್ಕಿಬಿದ್ದಿದ್ದಾನೆ. ಇಬ್ಬರೂ ಸೇರಿ ಅವನನ್ನು ಚೆನ್ನಾಗಿ ಥಳಿಸಿದ್ದಾರೆ. ಆಗ ರುದ್ರಪ್ರತಾಪ್​ ನಿಮ್ಮ ಮನೆಯಲ್ಲಿ ಇರುವ ಶತ್ರುವನ್ನೇ ಗುರುತಿಸಿಕೊಳ್ಳಿ ಮೊದಲು ಎಂದುಬಿಟ್ಟಿದ್ದಾನೆ.  ಆ ಶತ್ರು ಯಾರು ಎನ್ನುವುದು ಅಶೋಕ್​ಗೆ ಚೆನ್ನಾಗಿ ಗೊತ್ತು. ಅವಳೇ ಭಾರ್ಗವಿ. ಆದರೆ ಚಿಕ್ಕಮ್ಮ ಭಾರ್ಗವಿಯ ಮೇಲೆ ರಾಮ್​ಗೆ ಯಾವುದೇ ಸಂದೇಹವಿಲ್ಲ. ಸೀತಾ  ಮತ್ತು ರಾಮ್​ನನ್ನುದೂರ ಮಾಡಲು ಅವಳು ಪಟ್ಟ ಪ್ರಯತ್ನ ಎಲ್ಲವೂ ಠುಸ್​ ಆಗಿರುವ ನಡುವೆಯೇ ಅವಳು ರುದ್ರಪ್ರತಾಪ್​ನನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದಳು. ಸಿಹಿಯನ್ನು ಕಿಡ್ನ್ಯಾಪ್​ ಮಾಡಿದ್ದರಿಂದ  ಜೈಲುಪಾಲಾಗಿದ್ದ ಅವರನನ್ನು ಭಾರ್ಗವಿ ಬಿಡಿಸಿಕೊಂಡು ಬಂದಿದ್ದಳು.

ಸ್ಟಾರ್​ ನಟನ ಅಡುಗೆಯವನಿಗೆ ದಿನಕ್ಕೆ 2 ಲಕ್ಷ ರೂ. ಸಂಬಳ! ಹಕ್ಕಿ ತಿನ್ನುವ ಆಹಾರ ಇದಂತೆ...

ಇವೆಲ್ಲಾ ವಿಷಯ ಅಶೋಕ್​ಗೆ ಗೊತ್ತು. ಅವನು ಇದನ್ನು ರಾಮ್​ಗೆ ಹೇಳಲು ಪ್ರಯತ್ನ ಮಾಡಿದ್ದರೂ ರಾಮ್​ ಅದನ್ನು ಒಪ್ಪಿರಲಿಲ್ಲ. ಇದೀಗ ರುದ್ರಪ್ರತಾಪನ ಮಾತು ರಾಮ್​ಗೂ ಅಚ್ಚರಿ ತಂದಿದೆ. ಇಬ್ಬರೂ ಸೇರಿ ರುದ್ರಪ್ರತಾಪ್​  ಮೇಲೆ ಕೇಸು ಹಾಕಿದ್ದಾರೆ. ಪೊಲೀಸ್​ ಠಾಣೆಗೆ ಹೋಗಲು ರೆಡಿಯಾದವರನ್ನು ಭಾರ್ಗವಿ ತಡೆದು ನಿಲ್ಲಿಸಿದ್ದಾಳೆ. ಅವಳಿಗೆ ಎಲ್ಲಿ ತಾನು ಸಿಕ್ಕಿಹಾಕಿಕೊಳ್ಳುತ್ತೇನೋ ಎನ್ನುವ ಭಯ. ಅದಕ್ಕಾಗಿಯೇ ಮದುವೆಯ ಸಂದರ್ಭದಲ್ಲಿ ಹೀಗೆಲ್ಲಾ ಹೋಗಬೇಡ ಎಂದಿದ್ದಾಳೆ.  ಆದರೆ ಅಶೋಕ್​ಗೆ ಈ ಕುತಂತ್ರ ಎಲ್ಲಾ ಗೊತ್ತಿರುವ ಕಾರಣ, ಇನ್ಸ್​ಪೆಕ್ಟರ್​ ಅವರೇ ಮನೆಗೆ ಬರ್ತಾ ಇದ್ದಾರೆ ಬಿಡಿ, ಎಲ್ಲಾ ಗೊತ್ತಾಗತ್ತೆ ಎಂದಿದ್ದಾರೆ. ಭಾರ್ಗವಿಗೆ ಶಾಕ್​  ಆಗಿದೆ. ಇಷ್ಟಕ್ಕೇ ಸುಮ್ಮನಾಗದ ಅಶೋಕ್​ ರುದ್ರಪ್ರತಾಪ್​ನಂಥ ಕ್ರಿಮಿನಲ್​ನನ್ನು ಜೈಲಿನಿಂದ ಬಿಡಿಸಿಕೊಂಡು ಬಂದಿದ್ದು ಯಾರು ಅಂತ ಗೊತ್ತಾಗತ್ತೆ ಎಂದಿದ್ದಾನೆ.

ಇದೀಗ ಸೀರಿಯಲ್​ ಕುತೂಹಲದ ಘಟ್ಟ ತಲುಪಿದೆ. ರಾಮ್​ಗೂ ಮದುವೆ ಸಮಯದಲ್ಲಿಯೇ ಚಿಕ್ಕಮ್ಮನ ಕುತಂತ್ರ ಗೊತ್ತಾಗತ್ತೋ ಇಲ್ಲವೋ ಎನ್ನುವುದು ಪ್ರಶ್ನೆ. ಒಂದು ವೇಳೆ ಗೊತ್ತಾಗಿಬಿಟ್ಟರೆ ಸೀರಿಯಲ್​ ಮುಗಿದು ಹೋಗುತ್ತೆ. ಹಾಗೆ ಆಗಲ್ಲ ಎನ್ನುವ ತರ್ಕ ಕೆಲವರದ್ದು. ಅದೇ ಇನ್ನೊಂದೆಡೆ ಭಾರ್ಗವಿಯ ವಿಷಯ ಗೊತ್ತಾಗತ್ತೆ. ಆದರೆ ಸೀತಾಳ ಇತಿಹಾಸ ಇನ್ನೂ ಸೀಕ್ರೇಟ್​ ಆಗಿರುವ ಕಾರಣ, ಅವರ ನಡುವೆಯೇ ಬಿರುಕು ಬರುವ ಸಾಧ್ಯತೆ ಇದೆ. ಇವರಿಬ್ಬರ ಮದುವೆ ಆಗುವುದೇ ಡೌಟು ಎನ್ನುತ್ತಿದ್ದಾರೆ. ಒಟ್ಟಿನಲ್ಲಿ ಸದ್ಯ ಕ್ರಿಮಿನಲ್​ನನ್ನು ಜೈಲಿನಿಂದ ಬಿಡಿಸಿದ ಭಾರ್ಗವಿಗೆ ಕಂಟಕ ಎದುರಾಗಿದೆ.  

ಮಾಡಿದ್ದುಣ್ಣೋ ಮಹಾರಾಯ ಎನ್ನೋದು ಇದಕ್ಕೆನಾ? ಲಿಂಬೆ ಹಣ್ಣು ಹಿಡಿದು ಮಾಟ ಮಾಡಿಸಿದ್ದ ರಾಜಿಗೆ ಆತ್ಮದ ಕಾಟ!

click me!