ಬಿಗ್‌ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಹಳ್ಳಿಕಾರ್ ಒಡೆಯ ಎಂತಲೇ ಪ್ರಸಿದ್ಧಿ ಆಗಿದ್ದಾರೆ. ಆದರೆ, ಈಗ ತಾನು ಪ್ರಸಿದ್ಧಿ ಪಡೆದ ಹಳ್ಳಿಕಾರ್ ಎತ್ತುಗಳಿಂದಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು (ಜೂ.25): ಬಿಗ್‌ಬಾಸ್ ಖ್ಯಾತಿಯ ವರ್ತೂರು ಸಂತೋಷ್ ಹಳ್ಳಿಕಾರ್ ಒಡೆಯ ಎಂತಲೇ ಪ್ರಸಿದ್ಧಿ ಆಗಿದ್ದಾರೆ. ಆದರೆ, ಈಗ ತಾನು ಪ್ರಸಿದ್ಧಿ ಪಡೆದ ಹಳ್ಳಿಕಾರ್ ಎತ್ತುಗಳಿಂದಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು, 'ಹಳ್ಳಿಕಾರ್ ಒಡೆಯ' ಎಂದು ಪ್ರಸಿದ್ಧಿಯಾಗಿರುವ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್‌ಗೆ ಹಳ್ಳಿಕಾರ್ ಎತ್ತುಗಳಿಂದಲೇ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಬಿಗ್‌ಬಾಸ್ ಮನೆಯಲ್ಲಿದ್ದಾಗಲೇ ಹುಲಿಯ ಉಗುರಿನ ಪೆಂಡೆಂಟ್ ಧರಿಸಿಕೊಂಡು ಹೋಗಿದ್ದರಿಂದ ಅರಣ್ಯ ಇಲಾಖೆ ಅಧಿಕಾರಿಗಳು ರಾತ್ರೋ ರಾತ್ರಿ ಬಿಗ್‌ಬಾಸ್ ಮನೆಗೆ ನುಗ್ಗಿ ಬಂಧಿಸಿದ್ದರು. ಇದಾದ ನಂತರ ಒಂದು ವಾರ ಕಾಲ ಅರಣ್ಯ ಇಲಾಖೆ ಕಸ್ಟಡಿಯಲ್ಲಿಯೇ ಇದ್ದ ವರ್ತೂರು ಸಂತೋಷ್ ನಂತರ ಜಾಮೀನಿನ ಮೇಲೆ ಹೊರಬಂದರು. ವಿವಾದದ ನಂತರವೂ ವರ್ತೂರು ಸಂತೊಷ್ ಬಿಗ್‌ಬಾಸ್ ಮನೆಗೆ ಹೋಗಿ ಬಿಗ್‌ಬಾಸ್-10 ಸೀಸನ್‌ನ ಟಾಪ್-5 ಫೈನಲಿಸ್ಟ್‌ನಲ್ಲಿಯೂ ಸ್ಥಾನ ಪಡೆದುಕೊಂಡು ಬಂದಿದ್ದರು. ಈ ಮೂಲಕ ರೈತರು ಹಾಗೂ ಹಳ್ಳಿಕಾರ್ ಎತ್ತುಗಳ ಪ್ರತಿನಿಧಿಯಾಗಿ ಯಶಸ್ಸು ಗಳಿಸಿದ್ದರು.
ಕೊಲೆ ಆರೋಪಿ ಪವಿತ್ರಾ ಗೌಡಗೆ ಮೇಕಪ್ ಮಾಡಿಕೊಳ್ಳಲು ಅವಕಾಶ ಕೊಟ್ಟ ಎಸ್‌ಐ ನೇತ್ರಾವತಿಗೆ ನೋಟಿಸ್
ಆದರೆ, ಈಗ ಹಳ್ಳಿಕಾರ್ ಎತ್ತುಗಳಿಂದಲೇ ಸಂಕಷ್ಟಕ್ಕೆ ಸಿಲುಕಿದ್ದಾರೆ. ವರ್ತೂರು ಸಂತೋಷ್ ವಿರುದ್ಧ ಸಾಮಾಜಿಕವಾಗಿ ಪ್ರಾಣಿಗಳ ಮೇಲಿನ ಕ್ರೌರ್ಯವನ್ನು ತಡೆಗಟ್ಟುವಿಕೆ (SPCA) ಹಾಗೂ ಪಿಎಫ್‌ಎ ಪ್ರಾಣಿ ಹಿಂಸೆ ವಿರೋಧಿ ಅಧಿಕಾರಿ ಹರೀಶ್ ಅವರು ನೀಡಿದ ದೂರಿನ ಆಧಾರದಲ್ಲಿ ವರ್ತೂರು ಪೊಲೀಸ್ ಠಾಣೆಯಲ್ಲಿ ಎನ್‌ಸಿಆರ್ ದಾಖಲಾಗಿದೆ. ಈ ಸಂಬಂಧ ಪೊಲೀಸರು ಕೂಡ ಒಂದು ಸುತ್ತಿನ ವಿಚಾರಣೆ ಮುಗಿಸಿದ್ದಾರೆ. ಆದರೆ, ಪೊಲೀಸರು ಎಫ್‌ಐಆರ್ ಮಾಡಿಲ್ಲವೆಂದು SPCA ಆಫೀಸರ್ ಹರೀಶ್ ಕೋರ್ಟ್ ಮೆಟ್ಟಿಲೇರಲು ಮುಂದಾಗಿದ್ದಾರೆ. ಒಂದು ವೇಳೆ ಎಫ್ ಐ ಆರ್ ದಾಖಲಾದ್ರೆ ವರ್ತೂರು ಸಂತೋಷ್‌ಗೆ ಜೈಲು ಫಿಕ್ಸ್ ಎಂದು ಹೇಳಲಾಗುತ್ತಿದೆ.
ಅಷ್ಟಕ್ಕೂ ಸಂತೋಷ್ ಮೇಲೆ ದೂರು ಕೊಡಲು ಕಾರಣವೇನು ಗೊತ್ತಾ?
ಬೆಂಗಳೂರಿನ ಹೊರ ವಲಯದಲ್ಲಿ ಹಳ್ಳಿಕಾರ್ ಎತ್ತುಗಳ ರೇಸ್ ನಡೆಸಲು ವರ್ತೂರು ಸಂತೋಷ್ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಆದರೆ, ಈ ಹಳ್ಳಿಕಾರ್ ಎತ್ತುಗಳ ಓಟದ ಸ್ಪರ್ಧೆಗೆ ರಾಸುಗಳ ಸಾಗಾಣಿಕೆ ವೇಳೆ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂಬ ಆರೋಪ ಕೇಳಬಂದಿದೆ. ಒಂದು ಟ್ರಕ್‌ನಲ್ಲಿ ಬರೋಬ್ಬರಿ 9 ಬೃಹತ್ ಹೋರಿಗಳನ್ನು ತುಂಬಿಕೊಂಡು ಸಾಗಾಟ ಮಾಡಲಾಗಿದೆ. ಈ ಟ್ರಕ್‌ನಲ್ಲಿ 9 ಹೋರಿಗಳಿಗೆ ಉಸಿರುಗಟ್ಟಿಸುವ ವಾತಾವರಣ ಇದ್ದರೂ, ಇದರೊಂದಿಗೆ ಅದಕ್ಕೆ ಹಾಕುವ ಮೇವು ಹಾಗೂ ರೈತರ ಲಗೇಜ್‌ಗಳನ್ನು ಕೂಡ ತುಂಬಿಕೊಂಡು ಬರಲಾಗಿದೆ. ಈ ಮೂಲಕ ಪ್ರಾಣಿ ಹಿಂಸೆ ತಡೆ ಅಧಿನಿಯಮ ಹಾಗೂ ಪ್ರಾಣಿಗಳ ಸಾಗಾಟ ನಿಯಮಗಳನ್ನು ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಅಶ್ಲೀಲ ವಿಡಿಯೋ ಸರೆ ಮತ್ತು ವೈರಲ್ ಮಾಡಿದ್ದಕ್ಕೆ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಎಫ್‌ಐಆರ್
ಎಸ್‌ಪಿಸಿಎ ಹಾಗೂ ಪಿಎಫ್‌ಎ ಪ್ರಾಣಿ ಹಿಂಸೆ ವಿರೋಧಿ ಅಧಿಕಾರಿ ಹರೀಶ್ ಅವರು ವರ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದರೂ ಎನ್‌ಸಿಆರ್ ದಾಖಲು ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ವರ್ತೂರು ಸಂತೋಷ್ ವಿಚಾರಣೆಗೆ ಹಾಜಾರಾಗಿ ಈಗಾಗಲೇ ಮಾಹಿತಿ ಕೊಟ್ಟಿದ್ದಾರೆ. ಆದರೆ, ಎನ್‌ಸಿಆರ್ ಮಾಡಿ ಪ್ರಕರಣ ಮುಚ್ಚೋದು ಬೇಡ, ಈ ಬಗ್ಗೆ ಎಫ್‌ಐಆರ್ ದಾಖಲಿಸಬೇಕು ಎಂದು ಪ್ರಾಣಿ ಹಿಂಸೆ ವಿರೋಧಿ ಅಧಿಕಾರಿ ಹರೀಶ್ ಒತ್ತಾಯಿಸಿದ್ದಾರೆ. ಒಂದು ವೇಳೆ ಎಫ್‌ಐಆರ್ ದಾಖಲಿಸಿದ್ದರೆ ಕೋರ್ಟ್ ಮೆಟ್ಟಿಲೇರಲು ಸಿದ್ಧತೆಯನ್ನೂ ಮಾಡಿಕೊಂಡಿದ್ದಾರೆ.