ಮದುಮಗಳ ನಿರ್ಧಾರ ಮಾಡ್ತಿದ್ದಾರೆ ತಾತ, ಚಿಕ್ಕಮ್ಮ: ಅಡಕತ್ತರಿಯಲ್ಲಿ ಸಿಲುಕಿದ ಸೀತಾ-ರಾಮ್‌!

By Suvarna News  |  First Published Apr 15, 2024, 2:13 PM IST

ರಾಮ್‌ಗೆ ನಾವು ಮದುಮಗಳನ್ನು ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ ಚಿಕ್ಕಮ್ಮ ಮತ್ತು ತಾತ. ಸೀತಾ- ರಾಮ್‌ ಶಾಕ್‌ ಆಗಿದ್ದಾರೆ. ಮುಂದೇನು?
 


ಪ್ರಿಯಾ ಮತ್ತು ಅಶೋಕ್‌ ಮದ್ವೆ ಅತ್ತ ಭರ್ಜರಿಯಾಗಿ ನಡೆಯುತ್ತಿರುವ ನಡುವೆಯೇ ಇತ್ತ ರಾಮ್‌ನ ಮದುವೆಯನ್ನೂ ನಿರ್ಧಾರ ಮಾಡುವೆ ಎಂದಿದ್ದಾಳೆ ಚಿಕ್ಕಮ್ಮ. ಇದನ್ನು ಕೇಳಿ ಚಾಂದನಿಗೆ ಖುಷಿಯೋ ಖುಷಿ. ಅದೇ ವೇಳೆ ತಾತ ಕೂಡ ನಾನು ರಾಮ್‌ನ ಮದುಮಗಳನ್ನು ನಿರ್ಧಾರ ಮಾಡಿರುವುದಾಗಿ ಹೇಳಿದ್ದಾನೆ. ರಾಮ್‌ ಮತ್ತು ಸೀತಾ ಇಬ್ಬರೂ ಶಾಕ್‌ ಆಗಿದ್ದಾರೆ. ಸೀತಾಳನ್ನು ಪ್ರೀತಿ ಮಾಡುವುದಾಗಿ ರಾಮ್‌ ತಾತನ ಎದುರು ಎಂದಿಗೂ ಬಾಯಿ ಬಿಟ್ಟಿಲ್ಲ. ಇನ್ನು ಚಿಕ್ಕಮ್ಮನೋ ತಾತನ ತಲೆಯನ್ನು ಚಾಂದನಿ ವಿಷಯದಲ್ಲಿ ತುಂಬಿದ್ದಾಳೆ. ಅವಳಿಗೆ ಚಾಂದನಿ ಇಷ್ಟವಿಲ್ಲದಿದ್ದರೂ ಸೀತಾ ಮತ್ತು ರಾಮ್‌ರನ್ನು ದೂರ ಮಾಡುವುದು ಮಾತ್ರ ಬೇಕಿದೆ. ಹಾಗಿದ್ದರೆ ರಾಮ್‌ನ ಮದುಮಗಳ ಹೆಸರು ಯಾರದ್ದು ಹೇಳಲಾಗುತ್ತದೆ? ಸದ್ಯ ಸೀತಾ ಮತ್ತು ರಾಮ್‌ ಅಡಕತ್ತರಿಯಲ್ಲಿ ಸಿಲುಕಿದ ಅನುಭವ ಪಡುತ್ತಿದ್ದಾರೆ.

ಇದರ ನಡುವೆಯೇ, ಚಾಂದನಿ ಸೀತಾಗೆ ಷರತ್ತು ಕೂಡ ಹಾಕಿದ್ದಾಳೆ. ಸೀತಾ-ರಾಮ ಒಂದಾಗುವುದನ್ನು ಚಾಂದನಿಗೆ ನೋಡಲು ಆಗುತ್ತಿಲ್ಲ. ಸೀತಾ ಸಿಕ್ಕಾಗಲೆಲ್ಲಾ ಪದೇ ಪದೇ ಹಂಗಿಸುತ್ತಲೇ ಇರುತ್ತಾಳೆ. ರಾಮ್​ ತನಗೆ ಸಿಗುವುದಿಲ್ಲ ಎಂದು ತಿಳಿದರೂ ಸೀತಾಳನ್ನು ಹೇಗಾದರೂ ಮಾಡಿ ರಾಮ್​ನಿಂದ ದೂರ ಮಾಡುವ ಯೋಚನೆ ಅವಳದ್ದು. ಅದಕ್ಕೆ ತಕ್ಕಂತೆ ಚಿಕ್ಕಮ್ಮ ಭಾರ್ಗವಿ ಕುತಂತ್ರ ಬೇರೆ. ಪ್ರಿಯಾ ಮತ್ತು ಅಶೋಕ್​ ಮದುವೆ ಮುಗಿಯುವುದರೊಳಗೆ ಅವರಿಬ್ಬರನ್ನೂ ಬೇರೆ ಮಾಡುತ್ತೇನೆ ಎಂದಿದ್ದಾಳೆ ಭಾರ್ಗವಿ. ಇದನದ್ನೇ ನಂಬಿಕೊಂಡಿದ್ದಾಳೆ ಚಾಂದನಿ. ಈ ಮಧ್ಯೆಯೇ ಸೀತಾಳಿಗೆ ರಾಮ್​ ಕೊಡಿಸಿರೋ ಸೀರೆ ಮೇಲೆ ಚಾಂದನಿ ಕಣ್ಣು ಬಿದ್ದಿದೆ. ಅದನ್ನು ತನ್ನದು ಮಾಡಿಕೊಳ್ಳಬೇಕು ಎಂದುಕೊಂಡಿದ್ದಳು. ಅದು ಸಾಧ್ಯವಾಗಿರಲಿಲ್ಲ. ಅದಕ್ಕೆ ರಾಮ್​ ಕೊಡಿಸಿದ ಸೀರೆ ನಿನಗೆ ಸಿಕ್ಕಿದೆ, ಆದರೆ ರಾಮ್​ ಸಿಗಲ್ಲ ಎಂದಿದ್ದಾಳೆ.

Tap to resize

Latest Videos

ಬಿಂಕದ ಸಿಂಗಾರಿ... ಡಾ.ರಾಜ್​ ಹಾಡಿಗೆ ಸೀತಾ-ರಾಮ ಮಾಡರ್ನ್​ ಸ್ಟೆಪ್​: ಮನಸೋತ ಅಭಿಮಾನಿಗಳು

ಅದೇ ಇನ್ನೊಂದೆಡೆ ರಾಮ್​ ಸೀತಾ ಹೆಸರಿನ ಎಸ್​ ಅನ್ನು ಕೈ ಮೇಲೆ ಬರೆಸಿಕೊಂಡಿದ್ದಾನೆ. ಅದನ್ನು ಸೀತಾಳಿಗೆ ತೋರಿಸಿದ್ದಾನೆ. ಸೀತಾ ನಾಚಿಕೊಂಡಿದ್ದಾಳೆ. ಇದನ್ನು ನೋಡಿ ಚಿಕ್ಕಮ್ಮ ಉರಿದುಕೊಂಡಿದ್ದಾಳೆ. ಸೀತಾ ಮತ್ತು ರಾಮ್​ ಕಣ್ಣಿನಲ್ಲಿಯೇ ಮಾತನಾಡುವುದನ್ನು ಚಿಕ್ಕಮ್ಮ ಮತ್ತು ಚಾಂದನಿಗೆ ಸಹಿಸಲು ಸಾಧ್ಯವಾಗ್ತಿಲ್ಲ. ಹಾಗೆನೇ ಇನ್ನೊಂದೆಡೆ, ತಾತನ ಎದುರು ಸತ್ಯಜೀತ್​, ರಾಮ್​ ಯಾರನ್ನು ಇಷ್ಟಪಡುತ್ತಾನೋ ಅವಳನ್ನೇ ಮದುವೆಯಾಗಬೇಕು ಎನ್ನುತ್ತಿದ್ದಾನೆ. ಚಿಕ್ಕಮ್ಮ ಅಂತೂ ಚಾಂದನಿ ಫಿಕ್ಸ್‌ ಮಾಡಿದ್ದಾಳೆ, ತಾತ ಹೇಳೋದು ಯಾರ ಹೆಸರನ್ನು? 

ಬಿಗ್​ಬಾಸ್​​ನಲ್ಲಿ ಶುರುವಾಯ್ತು ಪ್ರೇಮ: ಮದುವೆ ಸುದ್ದಿ ಬೆನ್ನಲ್ಲೇ ಭಿಕ್ಷುಕಿಯಾಗಿ ರಸ್ತೆಯಲ್ಲಿ ಕಾಣಿಸಿಕೊಂಡ ಪ್ರಿಯಾಂಕಾ!


click me!