ಪತಿ ಎದುರು ಲಕ್ಷ್ಮೀನಿವಾಸ ಚಿನ್ನುಮರಿ ನವರಸ ಪ್ರದರ್ಶನ! ಪತ್ನಿಯ ಅಭಿನಯಕ್ಕೆ ಮನಸೋತ ಪ್ರತ್ಯಕ್ಷ್

By Suchethana D  |  First Published Jan 7, 2025, 5:25 PM IST

ಲಕ್ಷ್ಮೀನಿವಾಸ ಸೀರಿಯಲ್​ ಚಿನ್ನುಮರಿ ಅರ್ಥಾತ್​ ನಟಿ ಚಂದನಾ ಅನಂತಕೃಷ್ಣ ಅವರು ಪತಿ ಪ್ರತ್ಯಕ್ಷ್​ ಜೊತೆ ಸಂದರ್ಶನದಲ್ಲಿ ಕಾಣಿಸಿಕೊಂಡಾಗಿನ ವಿಶೇಷತೆ ಏನು?
 


ನಟಿ ಚಂದನಾ ಅನಂತಕೃಷ್ಣ ಎಂದರೆ ಕಿರುತೆರೆ ವೀಕ್ಷಕರಿಗೆ ಯಾರು ಎಂದು ನೆನಪಿಗೆ ಬರದೇ ಇರಬಹುದು. ಆದರೆ ಚಿನ್ನುಮರಿ ಎಂದಾಕ್ಷಣ, ಒನ್​ ಆ್ಯಂಡ್​ ಓನ್ಲಿ ಒನ್​ ಲಕ್ಷ್ಮೀ ನಿವಾಸದ ಜಾನು ನೆನಪಾಗ್ತಾಳೆ. ಅತ್ತ ಗಂಡನ ವಿಚಿತ್ರ ನಡವಳಿಕೆಯಿಂದ ತೊಳಲಾಡುತ್ತಿರೋ ಚಿನ್ನುಮರಿ, ರಿಯಲ್​ ಆಗಿ ಮದುವೆಯಾಗಿ ಒಂದು ತಿಂಗಳಾಗಿದೆಯಷ್ಟೇ. ಸೀರಿಯಲ್​ನಲ್ಲಿ  ಗಂಡ ತನ್ನನ್ನು ಜೀವಕ್ಕಿಂತ ಹೆಚ್ಚಾಗಿ ಹುಚ್ಚನಂತೆ ಪ್ರೀತಿಸುತ್ತಾನೆ ಎಂದು ತಿಳಿದುಕೊಂಡಿರೋ ಜಾಹ್ನವಿಗೆ ಈಗ ತಾನೇ ತನ್ನ ಗಂಡನ ನಿಜವಾದ ಮುಖ ಗೊತ್ತಾಗುತ್ತಿದೆ. ತನ್ನನ್ನು ಪ್ರೀತಿಸಲು ಆತ ಯಾವ ಮಟ್ಟಿಗೆ ಇಳಿಯುತ್ತಿದ್ದಾನೆ ಎನ್ನುವ ವಿಷಯ ಈಗಷ್ಟೇ ಈ ಪೆದ್ದು ಪತ್ನಿಗೆ ಗೊತ್ತಾಗುತ್ತಿದೆ. ತಾನು ಊಟ ಕೊಟ್ಟೆ ಎನ್ನುವ ಕಾರಣಕ್ಕೆ ಸೆಕ್ಯುರಿಟಿ ಗಾರ್ಡ್​ ಅನ್ನು ಥಳಿಸಿರುವುದರಿಂದ ಹಿಡಿದು, ತನ್ನ ಪ್ರೀತಿಯ ಮೊಲವನ್ನು ಬಿಟ್ಟು ಬಂದಿದ್ದು ಅಷ್ಟೇ ಅಲ್ಲದೇ ತಮ್ಮ ಸ್ವಂತ ಮನೆಯವರ ಮೇಲೂ ಕಾಳಜಿ ಮಾಡಿದರೆ ಗಂಡನಿಗೆ ವಿಪರೀತ ಕೋಪ ಬರುತ್ತದೆ ಎಂಬೆಲ್ಲಾ ವಿಷಯ ಈಗ ಅರಿವಿಗೆ ಬರುತ್ತಿದೆ. 

ಸೀರಿಯಲ್​ ಟ್ವಿಸ್ಟ್​ ಪಡೆದುಕೊಳ್ಳುತ್ತಿರುವ ನಡುವೆಯೇ ನಿಜ ಜೀವನದಲ್ಲಿಯೂ ಹಸೆಮಣೆ ಏರಿದ್ದಾಳೆ ಚಿನ್ನುಮರಿ.  ಉದ್ಯಮಿ ಆಗಿರುವ ಪ್ರತ್ಯಕ್ಷ್ ಅವರ ಜೊತೆ ಚಂದನಾ ಮದುವೆ ನಡೆದಿದೆ. ಇದೇ ಮೊದಲ ಬಾರಿಗೆ ಸಂದರ್ಶನವೊಂದರಲ್ಲಿ ಈ ಜೋಡಿ ಕಾಣಿಸಿಕೊಂಡಿದೆ. ಕೀರ್ತಿ ಎಂಟರ್​ಟೇನ್​ಮೆಂಟ್​ ಕ್ಲಿನಿಕ್​ ಯೂಟ್ಯೂಬ್ ಚಾನೆಲ್​ಗೆ ಜೋಡಿ ಸಂದರ್ಶನ ಕೊಟ್ಟಿದೆ. ಇಬ್ಬರೂ ಸಕತ್​ ತಮಾಷೆ ಮಾಡಿಕೊಂಡು ಈ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅಷ್ಟಕ್ಕೂ ಚಂದನಾ ಅವರು ಕೇವಲ ಕಿರುತೆರೆ ಕಲಾವಿದೆಯಷ್ಟೇ ಅಲ್ಲದೇ,  ರಂಗಭೂಮಿ ಕಲಾವಿದೆಯೂ ಹೌದು. ಜೊತೆಗೆ ಅದ್ಭುತ ಗಾಯಕಿ ಹಾಗೂ ಭರತನಾಟ್ಯ ಕಲಾವಿದೆಯಾಗಿ ಕಾಣಿಸಿಕೊಂಡಿದ್ದಾರೆ. 

Tap to resize

Latest Videos

ಈಕೆ ಫೋಟೋ ನೋಡಿದಾಗ ಮದ್ವೆಯಾಗಲ್ಲ ಅಂದೆ: ಗುಟ್ಟೊಂದು ರಟ್ಟು ಮಾಡಿದ 'ಚಿನ್ನುಮರಿ' ರಿಯಲ್​ ಪತಿ!

ಈ ಶೋನಲ್ಲಿ, ಭರತನಾಟ್ಯದ ನವರಸಗಳಾದ  ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ ಮತ್ತು ಶಾಂತ ರಸಗಳನ್ನು ಪ್ರದರ್ಶಿಸಿದ್ದಾರೆ. ಆ್ಯಂಕರ್​ ಕೀರ್ತಿ ಅವರು ಒಂದೊಂದಾಗಿ ಹೇಳುತ್ತಿದ್ದಂತೆಯೇ ಈ ನವರಸಗಳನ್ನು ಅದ್ಭುತವಾಗಿ ಕುಳಿತಲ್ಲಿಯೇ ತೋರಿಸಿದ್ದಾರೆ ಈ ಭರತನಾಟ್ಯ ಕಲಾವಿದೆ. ಅದರ ವಿಡಿಯೋ ವೈರಲ್​ ಆಗಿದೆ. ಅದರ ಜೊತೆಯಲ್ಲಿಯೇ ತಾವು ಅತ್ಯಂತ ಸುಂದರವಾಗಿ ಹಾಡಬಲ್ಲೆ ಎನ್ನುವುದನ್ನೂ ಇದರಲ್ಲಿ ತೋರಿಸಿಕೊಟ್ಟಿದ್ದಾರೆ. ಗಾಯನವೊಂದಕ್ಕೆ ದನಿಯಾಗಿದ್ದಾರೆ. ಸೀರಿಯಲ್​ಗಳಲ್ಲಿ ನಟಿಸುವ ಚಂದನಾ ಅವರ ಇತರ ಕಲಾನೈಪುಣ್ಯಕ್ಕೆ ಅಭಿಮಾನಿಗಳು ಹಾರ್ಟ್​ ಇಮೋಜಿಗಳಿಂದ ಕಮೆಂಟ್​ ಬಾಕ್ಸ್​ ತುಂಬಿಸಿದ್ದಾರೆ. 

ಇನ್ನು ಇವರ ಮದುವೆಯ ಕುರಿತು ಹೇಳುವುದಾದರೆ, ಕಳೆದ ತಿಂಗಳು ಮದುವೆಯಾಗಿದೆ. ಇವರದ್ದು ಅರೆಂಜ್ಡ್​ ಮ್ಯಾರೇಜ್.  ಇವರದ್ದು ಹಿರಿಯರು ನೋಡಿ ಆಗಿರುವ ಮದುವೆಯಾಗಿರುವ ಕಾರಣ, ಮದುವೆಯ ಬಗ್ಗೆ ಕೀರ್ತಿ ಅವರು ಕೇಳಿದಾಗ, ಈ ಜೋಡಿ ಸಕತ್​ ತಮಾಷೆಯಾಗಿ ಉತ್ತರ ಕೊಟ್ಟಿದೆ. ಪ್ರತ್ಯಕ್ಷ್​ ಅವರು ಹೇಳಿದ್ದೇನೆಂದರೆ, ಹೀಗೆ ಒಂದು ದಿನ ಆಫೀಸ್​ನಲ್ಲಿ ಕೆಲಸ ಮಾಡುತ್ತಿರುವಾಗ, ಅಮ್ಮ ಮದುವೆಯ ಬಗ್ಗೆ ಹೇಳಿದ್ರು. ಅದು ಇದು ಮಾತೆಲ್ಲಾ ಆದ ಬಳಿಕ ಫೋಟೋ ನೋಡಿದೆ. ಫೋಟೋ ನೋಡಿದ ತಕ್ಷಣ ಈಕೆಯನ್ನು ನಾನು ಮದುವೆಯಾಗುವುದಿಲ್ಲ ಎಂದು ಹೇಳಿದೆ. ಆ ಫೋಟೋದಲ್ಲಿ ಇವಳು ಒಳ್ಳೆ ಮಗು ಥರ ಕಾಣಿಸ್ತಾ ಇದ್ಲು. ಬಾಲ್ಯ ವಿವಾಹ ಆಗತ್ತೆ, ಬೇಡಪ್ಪಾ ಇವಳು ನನಗೆ ಎಂದೆ ಎಂದು ತಮಾಷೆ ಮಾಡಿದ್ದಾರೆ.  
 

ರಿಯಲ್‌ ಮದ್ವೆ ಮುಗಿಸಿದ ಚಿನ್ನುಮರಿ ಶೂಟಿಂಗ್‌ ಸೆಟ್‌ನಲ್ಲಿ ರೀಲ್‌ ಪತಿ ಜೊತೆ ಹೇಗಿದ್ಲು? ವಿಡಿಯೋ ವೈರಲ್‌

 
 
 
 
 
 
 
 
 
 
 
 
 
 
 

A post shared by @keerthientclinic

click me!