ನಿಜವಾಗ್ಲೂ ಈ ಭೂಮಿ ಮೇಲೆ ಇಂಥ ಹೆಂಡ್ತಿ ಇರೋಕೆ ಸಾಧ್ಯನಾ ಅಂತಿರೋದ್ಯಾಕೆ ಭಾಗ್ಯಲಕ್ಷ್ಮಿ ಫ್ಯಾನ್ಸ್​!

By Suchethana D  |  First Published Sep 26, 2024, 4:07 PM IST

ಖುದ್ದು ಮದುವೆ ಮಂಟಪಕ್ಕೆ ಹೋಗಿ ವಿಷಯ ತಿಳಿದುಕೊಂಡ ಮೇಲೂ ಅಲ್ಲಿ ಮದುವೆಗೆ ಸಿದ್ಧನಾಗಿದ್ದು ತನ್ನ ಗಂಡ ತಾಂಡವ್​ ಎನ್ನುವ ಸತ್ಯ ಭಾಗ್ಯಳಿಗೆ ತಿಳಿದಿಲ್ಲ. ಇದನ್ನು ನೋಡಿ ವೀಕ್ಷಕರು ಹೇಳ್ತಿರೋದೇನು?
 


 ದಾಂಪತ್ಯ ನಡೆಯುವುದೇ ಪರಸ್ಪರ ನಂಬಿಕೆ ಮೇಲೆ ಅನ್ನೋದು ನಿಜವೇ. ನಂಬಿಕೆಯ ಕೊಂಡಿ ಸ್ವಲ್ಪ ತಪ್ಪಿದರೂ ದಾಂಪತ್ಯವೆಂಬ ಹಳಿ ತಪ್ಪುತ್ತದೆ ಎನ್ನುವುದೂ ಅಷ್ಟೇ ನಿಜ. ಪತಿ ಮತ್ತು ಪತ್ನಿಗೆ ಪರಸ್ಪರ ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸ, ಪ್ರೀತಿ, ನಂಬಿಕೆ ಎಲ್ಲವೂ ಇದ್ದರೇನೇ ದಾಂಪತ್ಯ ಚೆಂದ, ದಾಂಪತ್ಯದ ಸೊಗಡು ಇರುವುದೂ ಅದರಲ್ಲಿಯೇ. ಹಾಗೆಂದು ಭಾಗ್ಯಳಂಥ ಪತ್ನಿ ಈ ಭೂಮಿ ಮೇಲೆ ಇರೋಕೆ ಸಾಧ್ಯನಾ? ಸಾಧ್ಯನೇ ಇಲ್ಲ, ಸ್ವಲ್ಪನಾದ್ರೂ ರಿಯಾಲಿಟಿ ಬೇಡ್ವಾ ಎನ್ನುವುದು ಭಾಗ್ಯಲಕ್ಷ್ಮಿ ಸೀರಿಯಲ್​ ವೀಕ್ಷಕರ ಪ್ರಶ್ನೆ. ಅದಕ್ಕೆ ಕಾರಣವೂ ಇದೆ. ಅದೇನೆಂದರೆ, ಶ್ರೇಷ್ಠಾ ಯಾವುದೋ ಇಬ್ಬರು ಮಕ್ಕಳ ಅಪ್ಪನನ್ನು ಮದ್ವೆಯಾಗ್ತಿದ್ದಾಳೆ ಎನ್ನೋ ಸತ್ಯ ಭಾಗ್ಯಂಗೆ ಗೊತ್ತು. ಹೋಗಲಿ, ಎಷ್ಟೋ ಮಂದಿ ಇಂಥವರು ಇದ್ದಿರಬಹುದು. ಆದರೆ ಇದೀಗ ಶ್ರೇಷ್ಠಾಳ ಮದುವೆಗಾಗಿ ತಾಂಡವ್​ ಕಿಟಕಿ ಮುರಿದು ಹೋಗಿದ್ದಾನೆ. ಅದೂ ಹೋಗಲಿ... ಪೂಜಾ ಶ್ರೇಷ್ಠಾಳ ಮದುವೆ ನಿಲ್ಲಿಸಲು ಹೋದವರು ಗಂಡಿನ ಕಡೆಯವರು ಬಂದು ಮದುವೆ ನಿಲ್ಲಿಸಿದ್ದಾರೆ ಎಂದಿದ್ದಾರೆ. ಸಾಲದು ಎನ್ನುವುದಕ್ಕೆ ಮೈಮೇಲೆ ಬಂದಂತೆ ವರ್ತಿಸುತ್ತಿದ್ದ ಶ್ರೇಷ್ಠಾ ಪೂಜಾ ಮತ್ತು ಕುಸುಮಾ ಆಂಟಿ ಬಂದು ಮದುವೆ ನಿಲ್ಲಿಸಿದರು ಎಂದಿದ್ದಾರೆ....

ಇಷ್ಟೆಲ್ಲಾ ಇದ್ದರೂ, ಭಾಗ್ಯಳಿಗೆ ಅಲ್ಲಿರೋ ಮದುವೆ ಗಂಡು ತನ್ನ ಗಂಡನೇ ಎಂದು ತಿಳಿಯದಷ್ಟು ಪೆದ್ದಿನಾ? ಇದು ಮುಗ್ಧತೆಯ ಪರಮಾವಧಿಯೋ, ಮೂರ್ಖತನದ ಪರಮಾವಧಿಯೋ ಒಂದೂ ಗೊತ್ತಾಗ್ತಿಲ್ಲ ಎನ್ನುವುದು ನೆಟ್ಟಿಗರ ಮಾತು. ಇದೀಗ ಭಾಗ್ಯಳಿಗೆ ಗಂಡನ ಮೇಲೆ ಡೌಟ್​ ಬಂದಿದೆ. ಅಷ್ಟು ಮಾತ್ರಕ್ಕೆ ಅವಳಿಗೆ ತಲೆ ಇದೆ ಎನ್ನುವುದನ್ನು ತೋರಿಸಿದ್ದಾರೆ. ಗಂಡಿನ ಕಡೆಯವರು ಮದುವೆ ನಿಲ್ಲಿಸಿದ್ದು ಹಾಗೂ ಕುಸುಮಾ ಮತ್ತು ಪೂಜಾ ಬಂದು ಮದುವೆ ನಿಲ್ಲಿಸಿದ್ದು ಎನ್ನುವ ಮಾತಿಗೆ ತಾಳೆ ಹಾಕಿರುವ ಭಾಗ್ಯಳಿಗೆ ತಾಂಡವ್​ ಮೇಲೆ ಸಂದೇಹ ಬಂದಿದೆ ಅಷ್ಟೇ. ಆದರೆ ಇದುವರೆಗೂ ಅದು ಗಂಡನೇ ಎನ್ನುವುದು ಮಾತ್ರ ಗೊತ್ತಾಗಲಿಲ್ಲ! ಇದಕ್ಕೆ ಏನೆನ್ನಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಮದುವೆ ಗಂಡು ಯಾರು ಎಂದು ಅತ್ತೆ ಮತ್ತು ತಂಗಿಯನ್ನು ಪೂಜಾ ಪ್ರಶ್ನಿಸುತ್ತಿದ್ದಾಳೆ. ಅತ್ತ ಅತ್ತೆ ಕೂಡ ಭಾಗ್ಯಳಿಗೆ ವಿಷಯ ಗೊತ್ತಾಗಬಾರದು ಎಂದು ಏನೇನೋ ಕಸರತ್ತು ಮಾಡುತ್ತಿದ್ದಾಳೆ.

Tap to resize

Latest Videos

undefined

ಅಮೃತಧಾರೆಗೆ 400ರ ಸಂಭ್ರಮ: ಜೈದೇವನ ಕುತಂತ್ರಕ್ಕೆ ಮಲ್ಲಿ ಸಾಯ್ತಾಳಾ? ಫೋಟೋ ನೋಡಿ ಫ್ಯಾನ್ಸ್​ ಶಾಕ್​!

ಇಷ್ಟೆಲ್ಲಾ ಆದ ಮೇಲೆ ಭಾಗ್ಯಳಿಗೆ ವಿಷಯ ಗೊತ್ತಾಗತ್ತೋ, ಇಲ್ಲವೋ ಎನ್ನುವುದು ಮುಂದಿನ ಪ್ರಶ್ನೆ. ಆದರೆ ಸದ್ಯದ ಸ್ಥಿತಿ ನೋಡಿದಾಗ ನಿಜವಾಗ್ಲೂ ಈ ಭೂಮಿ ಮೇಲೆ ಇಂಥ ಹೆಂಡ್ತಿ ಇರೋಕೆ ಸಾಧ್ಯನಾ ಅಂತಿದ್ದಾರೆ ನೆಟ್ಟಿಗರು. ಇಂಥ ಪೆದ್ದು ಹೆಂಡತಿ ಇದ್ದರೆ ತಾಂಡವ್​ ತಾನೇ ಏನು ಮಾಡ್ತಾನೆ ಎನ್ನುವುದು ಅವರ ಪ್ರಶ್ನೆ. ಹೌದು. ಅಷ್ಟಕ್ಕೂ ಆಗಿದ್ದೇನೆಂದರೆ,ಮ  ತಾಂಡವ್​ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಕುಸುಮಾ ಮತ್ತು ಪೂಜಾ ಎಂಟ್ರಿಯಾಗಿದೆ. ಎಲ್ಲರ ಎದುರೇ ಮಗನಿಗೆ ಕಪಾಳಮೋಕ್ಷ  ಮಾಡಿದ್ದಾಳೆ ಕುಸುಮಾ. ನನ್ನ ಸೊಸೆಗೆ ಎಂದಿಗೂ ಅನ್ಯಾಯ ಆಗಲು ಬಿಡುವುದಿಲ್ಲ ಎಂದಿದ್ದಾಳೆ. ಕುತ್ತಿಗೆಯಲ್ಲಿ ಹಾಕಿರೋ ಹೂವಿನ ಹಾರವನ್ನು ಕಿತ್ತೆಸೆದಿದ್ದಾಳೆ. ಶಲ್ಯವನ್ನೂ ಮಗನ ಕುತ್ತಿಗೆಗೆ ಕಟ್ಟಿ ದರದರ ಎಳೆದುಕೊಂಡು ಬಂದಿದ್ದಾಳೆ.    

ನಾನು ಹೀಗೆ ಆಡ್ತಿರೋದಕ್ಕೆ ನೀನೇ ಕಾರಣ ಎಂದು ಹೇಳಿದ್ದಾನೆ ತಾಂಡವ್​. ಇಷ್ಟವಿಲ್ಲದ ಮದ್ವೆ ಮಾಡಿರುವುದಕ್ಕೆ ಹೀಗೆ ಆಗಿದ್ದು ಎನ್ನುವುದು ಅವನ ಮಾತಿನ ಅರ್ಥ. ನಿನ್ನ ದರ್ಬಾರಿನಿಂದಾಗಿ ನನಗೆ ಹೀಗೆ ಆಗಿದ್ದು ಅಂದಿದ್ದಾನೆ ತಾಂಡವ್​. ಅದಕ್ಕೆ ಕುಸುಮಾ,  ತಾಂಡವ್​ಗೆ ಭಾಗ್ಯ ನಿನಗೆ ಹೇಗೆ ಬೇಕೋ ಹಾಗೆ ಇರ್ತಾಳೆ. ಇವಳೇ ನನ್ನ ಹೆಂಡತಿ ಅನ್ನೋ ರೀತಿಯಲ್ಲಿ ಭಾಗ್ಯ ಬದಲಾಗ್ತಾಳೆ. ಭಾಗ್ಯಳನ್ನು ಬಿಟ್ಟು ಯಾರನ್ನೂ ನೀನು ನೋಡಲ್ಲ ಹಾಗೆ ಇರ್ತಾಳೆ ಎಂದೆಲ್ಲಾ ಹೇಳಿದ್ದಾಳೆ. ಅಷ್ಟಕ್ಕೂ ತಾಂಡವ್​ಗೆ ಭಾಗ್ಯಳ ಮೇಲಿರೋ ಬಹುದೊಡ್ಡ ಸಿಟ್ಟು ಎಂದರೆ ಆಕೆ ಹಳೆ ಕಾಲದ ಹೆಂಗಸಿನ ರೀತಿ ಇದ್ದಾಳೆ, ಶ್ರೇಷ್ಠಾಳಂತೆ ಮಾಡರ್ನ್​ ಆಗಿಲ್ಲ, ಪೆದ್ದಿ ಎನ್ನೋದು. ಆದ್ರೆ ಇದಾಗಲೇ ಭಾಗ್ಯ ಇಂಗ್ಲಿಷ್​ ಕಲಿತು, ಎಸ್​ಎಸ್​ಎಲ್​ಸಿ ಬರೆದು, ಲಕ್ಷಗಟ್ಟಲೆ ದುಡಿಯೋ ಕೆಲಸನೂ ಗಿಟ್ಟಿಸಿಕೊಂಡಾಯ್ತು. ಈಗ ಏನಿದ್ದರೂ ಆಕೆಯನ್ನು ಮಾಡರ್ನ್​ ಮಾಡುವುದು ಅಷ್ಟೇ. ಅದಕ್ಕಾಗಿಯೇ ಗಂಡನಿಗಾಗಿ  ಭಾಗ್ಯಳನ್ನು ಮಾಡರ್ನ್​ ಹೆಣ್ಣಾಗಿ ಮಾಡುತ್ತಾಳೆಯೆ ಕುಸುಮಾ? ಅಲ್ಲಿ ಮದುಮಗ ಆಗಿರೋದು ನಿನ್ನ ಗಂಡನೇ ಎನ್ನುವುದನ್ನು ಹೇಳ್ತಾಳಾ ನೋಡಬೇಕಿದೆ.  
 

ಬಿಗ್​ಬಾಸ್​ಗೆ ಕ್ಷಣಗಣನೆ... ಸೀಸನ್​ 11ರ ಕುರಿತು ನಟ ವಿಜಯ ರಾಘವೇಂದ್ರ ಮನದಾಳದ ಮಾತೇನು?

click me!