ಮನೆಗೆ ಸಲ್ಲದವನು ಕಚೇರಿಗೆ ಸಲ್ಲುವನೆ? ಉತ್ತಮ ಕೆಲಸಕ್ಕಾಗಿ ಸಿಕ್ಕಿತು ಪ್ರಶಸ್ತಿ! ಬಿಡ್ತಾಳಾ ಪೂಜಾ?

By Suvarna News  |  First Published Apr 21, 2024, 1:02 PM IST

ಕಚೇರಿಯಲ್ಲಿ ಮಾಡಿರುವ ಸಾಧನೆಗೆ ತಾಂಡವ್​ಗೆ ಪ್ರಶಸ್ತಿ ಸಿಗುತ್ತಿದೆ. ಮನೆಯಲ್ಲಿ ದೌರ್ಜನ್ಯ ಎಸಗುವವನಿಗೆ ಅವಮಾನ ಮಾಡಲು ಪೂಜಾ ಫಂಕ್ಷನ್​ಗೆ ಹೋಗಿದ್ದಾಳೆ. ಮುಂದೆ?
 


ನಿಜ ಜೀವನದಲ್ಲಿಯೂ ಹಾಗೆ ಅಲ್ವಾ? ಮನೆಯಲ್ಲಿ ಎಲ್ಲರ ಮೇಲೆ ದೌರ್ಜನ್ಯ ಎಸಗುತ್ತಾ, ಕಟ್ಟಿಕೊಂಡ ಹೆಂಡತಿಯನ್ನೋ, ಗಂಡನನ್ನೋ ಬೀದಿಗೆ ತಳ್ಳುವ ಪ್ರಯತ್ನ ಮಾಡುವ ಕೆಲವರು ಕಚೇರಿಗಳಲ್ಲಿ ಹೀರೋ ಎನಿಸಿಕೊಳ್ಳುವುದು ಉಂಟು. ಹೊರಗಡೆ ಒಳ್ಳೆಯ ವ್ಯಕ್ತಿ ಎನಿಸಿಕೊಂಡು ಶಹಬ್ಬಾಸ್​ಗಿರಿ ಪಡೆಯುವುದು ಉಂಟು. ಆಹಾ! ಇವರೆಷ್ಟು ಒಳ್ಳೆಯವರು, ಇಂಥವರನ್ನು ಪಡೆಯಲು ಅದೆಷ್ಟು ಪುಣ್ಯ ಮಾಡಿರಬೇಕು ಎಂದು  ಹೊರಗಡೆ ಹಲವರು ಮನಸ್ಸಿನಲ್ಲಿ ಅಂದುಕೊಂಡರೆ, ಅಂಥವರ ನಿಜವಾದ ಮುಖದ ಪರಿಚಯ ಮನೆಯವರಿಗೆ ಮಾತ್ರ ತಿಳಿದಿರುತ್ತದೆ. ಒಟ್ಟಾರೆ ಜಗತ್ತಿನಲ್ಲಿ ಹೊರಗೆ ಹೇಗೆ ಕಾಣಿಸುತ್ತಾರೋ ಅವರ ನಿಜವಾದ ಮುಖ ಬೇರೆಯದ್ದೇ ಇರುತ್ತದೆ. ಅಂಥವರಲ್ಲಿ ಒಬ್ಬ ಭಾಗ್ಯಲಕ್ಷ್ಮಿಯ ತಾಂಡವ್​. ಇದು ಸೀರಿಯಲ್​ ವ್ಯಕ್ತಿಯ ಕಥೆಯಾದರೂ, ನಿಜ ಜೀವನದಲ್ಲಿಯೂ ಇಂಥ ವ್ಯಕ್ತಿಗಳನ್ನು ಅದೆಷ್ಟೋ ನೋಡಬಹುದು.

ಇನ್ನು ಭಾಗ್ಯಲಕ್ಷ್ಮಿಯ ಸೀರಿಯಲ್​ಗೆ ಬರುವುದಾದರೆ, ಹೇಗಾದರೂ ಮಾಡಿ ಭಾಗ್ಯಳನ್ನು ಮನೆಯಿಂದ ಓಡಿಸಲು ತಾಂಡವ್​ ಪ್ರಯತ್ನಿಸುತ್ತಿದ್ದಾನೆ. ಅವನಿಗೆ ಏನಿದ್ದರೂ ಬೇಕಿರುವುದು ಶ್ರೇಷ್ಠಾ ಮಾತ್ರ. ಆದರೆ ಭಾಗ್ಯ ಈಗ ಸುಲಭದಲ್ಲಿ ಜಗ್ಗುತ್ತಿಲ್ಲ.  ಇದೇ  ಕಾರಣಕ್ಕೆ ತಾಂಡವ್​ ಕನಸಿನಲ್ಲಿಯೂ ಭಾಗ್ಯ ಕಾಡುತ್ತಿದ್ದಾಳೆ. ತಾಂಡವ್​ಗೆ ಪತ್ನಿ ಎದುರು ಸೋಲನ್ನು ಅನುಭವಿಸಿದ ಹಾಗಾಗುತ್ತಿದೆ. ಗಂಡಸಾಗಿ ತಾನು ಸೋತೆ ಎನ್ನುವ ಅಹಂ ಅಡ್ಡ ಬರುತ್ತಿದೆ. ಏನೂ ಅರಿಯದ ಪೆದ್ದು ಪತ್ನಿಯನ್ನು ಸುಲಭದಲ್ಲಿ ಮನೆಯಿಂದ ಹೊರಕ್ಕೆ ಹಾಕಬಹುದು ಎಂದುಕೊಂಡಿದ್ದ ತಾಂಡವ್​ಗೆ ಅದು ಸಾಧ್ಯವೇ  ಆಗದ ಸ್ಥಿತಿ. ಪತ್ನಿಗೆ ಎಷ್ಟು ಟಾರ್ಚರ್​ ಕೊಡಬೇಕೋ ಅಷ್ಟನ್ನೆಲ್ಲಾ ಕೊಟ್ಟಾಯ್ತು. ಈತನ ಟಾರ್ಚರ್​ ತಾಳದೇ ಖುದ್ದು ಭಾಗ್ಯಳ ಮಾವನೇ ತನ್ನ ಮಗನಿಗೆ ಡಿವೋರ್ಸ್​ ಕೊಟ್ಟುಬಿಡಮ್ಮಾ, ನಿನ್ನ ಈ ಕಷ್ಟ ನೋಡಲು ಆಗ್ತಿಲ್ಲ ಎಂದೂ ಹೇಳಿ ಆಯ್ತು. ಆದರೆ ಈಕೆ ಭಾಗ್ಯ. ಪತ್ನಿಗಿಂತ ಹೆಚ್ಚಾಗಿ ಇಬ್ಬರು ಮಕ್ಕಳ ಅಮ್ಮ ಈಕೆ. ಸುಲಭದಲ್ಲಿ ಸೋಲನ್ನು ಒಪ್ಪಿಕೊಳ್ತಾಳಾ? ಸಾಧ್ಯವೇ ಇಲ್ಲ. ಇದೀಗ ತಾಂಡವ್​ಗೆ ಕನಸಿನಲ್ಲಿಯೂ ಭಾಗ್ಯ ಕಾಡುತ್ತಿದ್ದಾಳೆ.

Tap to resize

Latest Videos

ಯೋಗರಾಜ ಭಟ್ಟರ ಎಲ್ಲಾ ಸೀಕ್ರೇಟ್​ಗಳನ್ನು ಓಪನ್ನಾಗೇ ಹೇಳ್ಬಿಟ್ಟ ಪತ್ನಿ ರೇಣುಕಾ!

ಭಾಗ್ಯಳನ್ನು ಸೋಲಿಸಲೇಬೇಕು ಎನ್ನುವ ಕಾರಣಕ್ಕೆ ಮನೆ ಹೇಗೋ ಎರಡು ಭಾಗವಾಗಿದೆಯಲ್ಲ, ಇಎಂಐ ನಾನೊಬ್ಬನೇ ಹೇಗೆ ಕಟ್ಟುವುದು ಎಂದು ಕೇಳುತ್ತಿದ್ದಾನೆ ತಾಂಡವ್​. ಅದಕ್ಕೆ ಭಾಗ್ಯ ಹೆದರಬೇಡಿ. ಅರ್ಧ ಇಎಂಐ ನಾನು ಕಟ್ಟುತ್ತೇನೆ ಎನ್ನುವ ಮೂಲಕ ತಾಂಡವ್​ಗೆ ಶಾಕ್​  ಕೊಟ್ಟಿದ್ದಾಳೆ. ಈಗ ಕಚೇರಿಯಲ್ಲಿ ಅವಾರ್ಡ್​ ಫಂಕ್ಷನ್​ ಇರುವಾಗಲೂ ಭಾಗ್ಯಳೇ ಕಾಡುತ್ತಿದ್ದಾಳೆ. ಎಲ್ಲರನ್ನೂ ಸಾಕಲು ಏನಿಲ್ಲವೆಂದರೂ ಅವಳಿಗೆ ಕನಿಷ್ಠ 35 ಸಾವಿರ ರೂಪಾಯಿಯಾದ್ರೂ ಬೇಕು. ಹೇಗೆ ತರ್ತಾಳೆ. ಅದು ಸಾಧ್ಯವೇ ಇಲ್ಲ ಎಂದುಕೊಂಡರೂ ಏನಾದರೂ ಮಾಡಿ ಅವಳು ತಂದುಬಿಟ್ಟರೆ ಎನ್ನುವ ಭಯವೂ ಕಾಡುತ್ತಿದೆ. 

ಅದೇ ಇನ್ನೊಂದೆಡೆ ಅವಾರ್ಡ್​ ಫಂಕ್ಷನ್​ ಶುರುವಾಗಿದ್ದು, ಈ ಬಾರಿ ಬೆಸ್ಟ್​ ಪರ್ಫಾಮೆನ್ಸ್​ ಅವಾರ್ಡ್​ ತಾಂಡವ್​ಗೆ ಸಿಕ್ಕಿದೆ. ಅವರು ಕಚೇರಿಯಲ್ಲಿ ತಮ್ಮ ಕೆಲಸಗಾರರನ್ನು ನಡೆಸಿಕೊಳ್ಳುವ ರೀತಿ, ಕಂಪೆನಿಯನ್ನು ಮುನ್ನಡೆಸಿಕೊಂಡು ಹೋಗಿರುವ ರೀತಿ ಎಲ್ಲವನ್ನೂ ನೋಡಿ ಈ ಅವಾರ್ಡ್​ ಕೊಡಲಾಗುತ್ತಿದೆ ಎಂದು ಅನೌನ್ಸ್​ ಆಗಿದೆ. ಇದು ಪೂಜಾಳ ಕಿವಿಗೆ ಬಿದ್ದಿದೆ. ಮನೆಗೆ ಆಗದವನು ಕಚೇರಿಗೆ ಹೇಗೆ ಸಲ್ಲುತ್ತಾನೆ ಎನ್ನುವುದು ಅವಳ ಪ್ರಶ್ನೆ. ನೋಡ್ತಾ ಇರಿ, ಏನು ಮಾಡುತ್ತೇನೆ, ಹೇಗೆ  ಮುಖಭಂಗ ಮಾಡುತ್ತೇನೆ ಎಂದು ಅವಾರ್ಡ್​ ನಡೆಯುವ ಜಾಗಕ್ಕೆ ಹೋಗಿದ್ದಾಳೆ ಪೂಜಾ. ಮುಂದೇನಾಗುತ್ತದೋ ನೋಡಬೇಕು. 

ರಾವಣನ ಅಪಾಯಕಾರಿ ಗುಹೆಯೊಳಗೆ ಡಾ. ಬ್ರೋ: ರಿಸ್ಕ್​ ತಗೋಬೇಡಪ್ಪಾ... ಭಯ ಆಗ್ತಿದೆ ಎಂದ ಫ್ಯಾನ್ಸ್...


click me!