ಕಾಮಿಡಿ ಕಿಲಾಡಿಗಳು ಹೊಸ ಕಾನ್ಸೆಪ್ಟ್ ಜೊತೆ ಜೀಕನ್ನಡ ವಾಹಿನಿಯಲ್ಲಿ ಬರುತ್ತಿದೆ. ಈ ಬಾರಿಯ ಕಾನ್ಸೆಪ್ಟ್ ಏನು? ನಟ ಜಗ್ಗೇಶ್ ಹೇಳಿರುವುದೇನು?
ಜೀ ಕನ್ನಡ ವಾಹಿನಿಯಲ್ಲಿ ಇದಾಗಲೇ ಕಾಮಿಡಿ ಕಿಲಾಡಿಗಳು ಸಾಕಷ್ಟು ಹೆಸರು ಮಾಡಿವೆ. ಈ ಷೋ ನೋಡಿ ನಕ್ಕೂ ನಕ್ಕೂ ಸುಸ್ತಾಗಿದ್ದಾರೆ ಹಲವರು. ಆದರೆ ಇದೀಗ ಹೊಸ ಪ್ರೀಮಿಯರ್ ಲೀಗ್ ಶುರುವಾಗ್ತಿದೆ. ಇದರಲ್ಲಿ ನಗೋ ಹಾಗೆ ಇಲ್ವಂತೆ. ನಕ್ಕರೆ ಲಾಸು, ನಗಿಸೋರಿಗೆ ಕೈತುಂಬಾ ಕಾಸು ಎನ್ನುತ್ತಲೇ ನವರಸ ನಾಯಕ ಜಗ್ಗೇಶ್ ವೀಕ್ಷಕರಿಗೆ ಕುತೂಹಲ ಕೆರಳಿಸಿದ್ದಾರೆ. ಇದರ ಪ್ರೊಮೋ ಅನ್ನು ಜೀ ಕನ್ನಡ ವಾಹಿನಿ ಶೇರ್ ಮಾಡಿಕೊಂಡಿದ್ದಾರೆ. ಇನ್ಮುಂದೆ ನೀವು ನಗೋ ಹಾಗಿಲ್ಲ. ಕಾಮಿಡಿ ಶೋದಲ್ಲಿ ನಗಲೇ ಬಾರದು ಎಂದು ಜಗ್ಗೇಶ್ ಹೇಳಿದಾದೆ. ಕಾಮಿಡಿ ಕಿಲಾಡಿಗಳು ಮುಂದಿನ ಸೀಸನ್ ಬರುವುದು ಸ್ಪಷ್ಟವಾಗಿದ್ದರೂ, ಈ ಬಾರಿ ಏನೋ ಹೊಸ ಕಾನ್ಸೆಪ್ಟ್ ಇಟ್ಟುಕೊಂಡು ಬಂದಿರುವುದು ಸ್ಪಷ್ಟವಾಗಿದೆ. ದುಡ್ಡು-ಕಾಸು ಅಂತ ಹೇಳ್ತವ್ರೆ. ಗನ್ ಹಿಡಿದು ಇವರ ಹಿಂದೆ ನಿಂತವ್ರು ಸೀರಿಯೆಸ್ ಆಗಿದ್ದಾರೆ. ಜಗ್ಗಣ್ಣ ನಕ್ಕು ಬಿಡಿ ಅಂದಾಗ, ಇವರೆಲ್ಲ ಗುಂಡು ಹಾರಿಸಿ ಇಡೀ ವಾತಾವರಣ ರಣರಂಗ ಮಾಡಿ ಬಿಡ್ತಾರೆ ಎನ್ನುವ ಡೈಲಾಗ್ ಅನ್ನೂ ಈ ಪ್ರೊಮೋದಲ್ಲಿ ನೋಡಬಹುದು. ಕಾಮಿಡಿ ಶೋ ಇರೋದೇ ನಗೋಕೆ ಮತ್ತು ನಗಿಸೋಕೆ. ಆದರೆ ಈ ಸಲ ನಗೋ ಹಾಗಿಲ್ಲ ಅನ್ನೋದೇ ಕಾನ್ಸೆಪ್ಟ್ ಅನಿಸುತ್ತದೆ. ಹಾಗಾಗಿಯೇ ಈ ಶೋದ ಮೊದಲ ಫ್ರೋಮೋ ಇದೀಗ ವಿಶೇಷವಾಗಿಯೇ ಕಾಣಿಸುತ್ತಿದೆ.
ಸ್ಪರ್ಧಿಗಳು ನಗೋ ಹಾಗಿಲ್ಲ. ಅದರಲ್ಲೂ ಶೋದಲ್ಲಿ ಇರೋರು ಯಾರು ನಗೋ ಹಾಗಿಲ್ಲ. ನಕ್ಕರೆ ದುಡ್ಡು ಲಾಸು ಎನ್ನುವ ಅರ್ಥದಲ್ಲಿ ಜಗ್ಗೇಶ್ ಅವರು ಹೇಳಿದ್ದು, ಇದರ ಪ್ರೀಮಿಯರ್ ಷೋ ಶೀಘ್ರದಲ್ಲಿ ಎಂದು ಹಂಚಿಕೊಳ್ಳಲಾಗಿದೆ. ಆದರೆ ಇದನ್ನ ನೋಡೋ ಪ್ರೇಕ್ಷಕರು ಮತ್ತು ನಿರ್ಣಾಯಕರು ನಗಬಹುದು ಅನ್ನೋದನ್ನೂ ಕೂಡ ಇಂಟ್ರಸ್ಟಿಂಗ್ ಆಗಿಯೇ ಜಗ್ಗೇಶ್ ಅವರು ಹೇಳಿದ್ದಾರೆ.
ಯೋಗರಾಜ ಭಟ್ಟರ ಎಲ್ಲಾ ಸೀಕ್ರೇಟ್ಗಳನ್ನು ಓಪನ್ನಾಗೇ ಹೇಳ್ಬಿಟ್ಟ ಪತ್ನಿ ರೇಣುಕಾ!
ಅಂದಹಾಗೆ, ವಿಭಿನ್ನತೆಗೆ ಹೆಸರಾದ ಜೀ ಕನ್ನಡ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಲ್ಲಿ ಕಾಮಿಡಿ ಕಿಲಾಡಿಗಳು ಕೂಡಾ ಒಂದು. ನಿತ್ಯದ ಜಂಜಾಟದಲ್ಲಿ ಒದ್ದಾಡುವ ಅದೆಷ್ಟೋ ಮನಸ್ಸುಗಳಿಗೆ ಹಾಸ್ಯದ ಮೂಲಕ ಸಾಂತ್ವನದ ಕಚಗುಳಿ ಇಡುವ ಉದ್ದೇಶದಿಂದ ಆರಂಭವಾದ ಮಹಾ ವೇದಿಕೆಯೇ ಕಾಮಿಡಿ ಕಿಲಾಡಿಗಳು. "ಸೈಡ್ಗಿಡ್ರಿ ನಿಮ್ ಟೆನ್ಶನ್‌ಗಳು, ಮತ್ತೆ ಬಂದಿದ್ದಾರೆ ಕಾಮಿಡಿ ಕಿಲಾಡಿಗಳು" ಎಂಬ ಸ್ಲೋಗನ್ ಮೂಲಕ ವಾರಾಂತ್ಯದಲ್ಲಿ ಕರುನಾಡನ್ನೇ ನಗೆಗಡಲಲ್ಲಿ ತೇಲಿಸಿ, ಕನ್ನಡಿಗರ ಹೃದಯದಲ್ಲಿ ಪ್ರೀತಿಯ ಸ್ಥಾನ ಗಳಿಸಿಕೊಂಡ ಕೀರ್ತಿ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮಕ್ಕೆ ಸಲ್ಲುತ್ತದೆ.
ಇದಾಗಲೇ ಸೀಸನ್ 4 ಮುಕ್ತಾಯಗೊಂಡಿದೆ. ನಗುವೇ ನಮ್ಮ ಸಿದ್ಧಾತ, ನಗ್ಸೋದಷ್ಟೇ ನಮ್ಮ ವೇದಾಂತ ಎಂಬ ಸೂತ್ರಕ್ಕೆ ಬದ್ಧರಾದ ರಾಜ್ಯದ ಕೆಲವು ಕಿಲಾಡಿಗಳು, ರಂಗಭೂಮಿಯ ನುರಿತ ನಿರ್ದೇಶಕರ ಸಾರಥ್ಯದೊಂದಿಗೆ ಪ್ರತಿದಿನ ರಂಗ ತಾಲೀಮಿನಲ್ಲಿ ತೊಡಗಿಸಿಕೊಂಡು, ನಟನೆಯ ವೈಖರಿ, ಭಾಷೆಯ ಮೇಲಿನ ಹಿಡಿತ , ಆಂಗಿಕ ಅಭಿನಯದ ಆಯಾಮಗಳನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಅಭಿನಯದ ಮೂಲಕ ಹಾಸ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತಾರೆ. ಸೀಸನ್ 4ರ ವಿಜೇತರಾಗಿ ಹರೀಶ್ ಹಿರಿಯೂರು, ಮೊದಲನೇ ರನ್ನರ್ ಆಫ್ ಆಗಿ ಮಂಡ್ಯದ ಗಿಲ್ಲಿ ನಟ ಮತ್ತು ಎರಡನೇ ರನ್ನರ್ ಆಫ್ ಆಗಿ ಶುಭಾ ಸ್ಥಾನ ಪಡೆದಿದ್ದರು. ಒಟ್ಟು 12 ಜನ ಟಾಪ್ ಫೈನಲಿಸ್ಟ್‌ಗಳ ನಡುವೆ ಈ ಮೂವರು ವಿಶೇಷ ಸ್ಥಾನ ಪಡೆದಿದ್ದಾರೆ.
ಹೆಣ್ಮಕ್ಳೇ ಹುಷಾರ್! ದುಡುಕು ಬುದ್ಧಿಯಿಂದ ಮನೆ ಸರ್ವನಾಶವಾದೀತು: ಈಗ್ಲಾದ್ರೂ ಕಲೀರಿ ಎಂದ ನೆಟ್ಟಿಗರು