ಅಪ್ಪ-ಮಕ್ಕಳ ಪ್ರೀತಿಯ ಬಾಂಧವ್ಯಕ್ಕೆ ಕಳಂಕ ತಂದಿದ್ದಾನೆ ಭಾಗ್ಯಲಕ್ಷ್ಮಿ ತಾಂಡವ್. ಮಗಳು ತನ್ವಿಗೆ ಅಪ್ಪನ ಮೇಲಿನ ವಿಶ್ವಾಸ ಹೋಗಿದೆ. ನೆಟ್ಟಿಗರು ಹೇಳ್ತಿರೋದೇನು?
ಮಕ್ಕಳಿಗೆ ಅಪ್ಪ-ಅಮ್ಮನೇ ಸರ್ವಸ್ವ. ಅದರಲ್ಲಿಯೂ ಹೆಣ್ಣು ಮಕ್ಕಳಿಗೆ ಹೆಚ್ಚಾಗಿ ಅಪ್ಪನ ಮೇಲೆ ಪ್ರೀತಿ ಜಾಸ್ತಿ ಇದ್ದರೆ, ಗಂಡು ಮಕ್ಕಳಿಗೆ ಅಮ್ಮನ ಮೇಲೆ ಎನ್ನುತ್ತಾರೆ. ಅಪ್ಪನೇ ಮೊದಲ ಹೀರೋ ಎನ್ನುವ ಮಕ್ಕಳು ಅದೆಷ್ಟೋ ಮಂದಿ ಇದ್ದಾರೆ. ಆದರೆ ಅಂಥ ಪವಿತ್ರ ಸಂಬಂಧಕ್ಕೇ ಕಳಂಕ ತಂದುಬಿಟ್ಟರೆ? ಅದೂ ಇನ್ನೋರ್ವ ಹೆಣ್ಣಿಗಾಗಿ ಸ್ವಂತ ಮಕ್ಕಳನ್ನೇ ದೂರ ಮಾಡಿದರೆ? ಇದು ಬಹುಶಃ ಯಾರಿಂದಲೂ ಊಹಿಸಲಾಗದ ನೋವಿನ ಸಂಗತಿಯೇ. ಅಪ್ಪನಾದವ ತನ್ನ ಕರ್ತವ್ಯದಿಂದ ನುಣುಚಿಕೊಂಡು ಮಕ್ಕಳಿಗೆ ಪ್ರೀತಿ ನೀಡದಿದ್ದರೆ ಆತ ಅಪ್ಪ ಎನಿಸಿಕೊಂಡು ಏನು ಪ್ರಯೋಜನ? ಮಕ್ಕಳ ವಿಶ್ವಾಸವೇ ಇಲ್ಲದ ಅಪ್ಪನಿಗೆ ಬೆಲೆಯಾದರೂ ಎಲ್ಲಿ?
ಈ ಒಂದು ಪ್ರಶ್ನೆಯನ್ನು ಹುಟ್ಟು ಹಾಕಿರುವುದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗ್ತಿರೋ ಭಾಗ್ಯಲಕ್ಷ್ಮಿ ಸೀರಿಯಲ್. ಹೌದು. ಭಾಗ್ಯಲಕ್ಷ್ಮಿಯ ಗಂಡ ತಾಂಡವ್ ಮತ್ತು ಪ್ರೇಯಸಿ ಶ್ರೇಷ್ಠಾ ಮದುವೆಗೆ ಸನ್ನದ್ಧರಾಗಿದ್ದಾರೆ. ಎಂಗೇಜ್ಮೆಂಟ್ ಶಾಸ್ತ್ರವೂ ಮುಗಿದು ಹೋಗಿದೆ. ಎಂಗೇಜ್ಮೆಂಟ್ ಆಗುವ ಹೊತ್ತಿಗೆ, ಕಾವ್ಯಾ ಬಂದು ತಾಂಡವ್ಗೆ ಇದಾಗಲೇ ಮದುವೆಯಾಗಿರುವ ಸುದ್ದಿ ಶ್ರೇಷ್ಠಾಳ ಅಪ್ಪ-ಅಮ್ಮನಿಗೆ ಹೇಳಿದಾಗ ಮದುವೆ ಮುರಿದು ಹೋಗುತ್ತದೆ ಎನ್ನಲಾಗಿತ್ತು. ಆದರೆ ಎಂಗೇಜ್ಮೆಂಟ್ ನಡೆದೇ ಹೋಗಿದೆ.
ಸಕತ್ ಸುದ್ದಿಯಲ್ಲಿರೋ ಲಕ್ಷದ್ವೀಪ ಹೇಗಿದೆ? ರೋಚಕ ಮಾಹಿತಿ ನೀಡುತ್ತಲೇ ಸಂಪೂರ್ಣ ದರ್ಶನ ಮಾಡಿಸಿದ ಡಾ.ಬ್ರೋ...
ಈ ನಡುವೆಯೇ, ಮನೆ ಬಿಟ್ಟು ಹೋಗಿದ್ದ ಅಪ್ಪನನ್ನು ಹುಡುಕಿ ತನ್ವಿ ಹೋದಾಗ ತಾಂಡವ್ ಬಯ್ದು ಕಳಿಸಿದ್ದ. ಇದೇ ನೋವಲ್ಲಿ ಬಂದ ತನ್ವಿಗೆ ಅಪಘಾತವಾಗಿತ್ತು. ಮಗಳು ತನ್ವಿ ಸಾವು-ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು, ತಾಂಡವ್ನಿಂದ ಮಾತ್ರ ಆಕೆಯನ್ನು ಬದುಕಿಸಲು ಸಾಧ್ಯ ಎಂದು ಭಾಗ್ಯಲಕ್ಷ್ಮಿ ಹೇಳಿದ್ದಳು. ಒಂದು ವೇಳೆ ಈ ವಿಷಯವೇನಾದರೂ ತಾಂಡವ್ಗೆ ತಿಳಿದರೆ ಮದುವೆ ಕ್ಯಾನ್ಸಲ್ ಮಾಡಿ ಮಗಳನ್ನು ಬದುಕಿಸಲು ಹೋಗುತ್ತಾನೆ ಎಂದು ಅರಿತ ಶ್ರೇಷ್ಠಾ ಸಿಗ್ನಲ್ ಸಿಗದೇ ಭಾಗ್ಯಳ ಮಾತು ಕೇಳಿದವರ ಹಾಗೆ ಆ್ಯಕ್ಟಿಂಗ್ ಮಾಡಿದ್ದು, ಕರೆ ಕಟ್ ಮಾಡಿದ್ದಳು. ಇತ್ತ ರಕ್ತ ಸಿಗದೇ ಹೋದರೆ ತನ್ವಿಯ ಜೀವಕ್ಕೆ ಅಪಾಯ ಅಂದಿದ್ದರು.
ಕೊನೆಗೂ ರಕ್ತ ಸಿಕ್ಕು ತನ್ವಿ ಜೀವಾಪಾಯದಿಂದ ಪಾರಾಗಿದ್ದಾಳೆ. ಆದರೆ ಎಚ್ಚರವಾಗುತ್ತಲೇ ಅಪ್ಪ ಬೈದು ಮನೆಯಿಂದ ಓಡಿಸಿದ್ದು ನೆನಪಾಗಿ ಮತ್ತೆ ಎಚ್ಚರ ತಪ್ಪಿದ್ದಾಳೆ. ಇಂಥ ಅಪ್ಪ ಇದ್ದರೆಷ್ಟು ಬಿಟ್ಟರೆಷ್ಟು ಅಂತಿದ್ದಾರೆ ನೆಟ್ಟಿಗರು.
ಮಹಾಲಕ್ಷ್ಮಿ ಪತಿ ರವೀಂದರ್ ಐಸಿಯುಗೆ ದಾಖಲು! ಏಕಾಏಕಿ ಆಗಿದ್ದೇನು? ಕಣ್ಣೀರಿಟ್ಟ ನಟಿ...