ಹರಳೆಣ್ಣೆ ಸುಂದ್ರಿ ಭಾಗ್ಯಾ ಈಗ ಬ್ಯೂಟಿ ಕ್ವೀನ್! ಚೆಂದ ನೋಡಿ ಥಂಡಾ ಆಗ್ಬಿಟ್ಟ ತಾಂಡವ

Published : Mar 06, 2024, 12:50 PM ISTUpdated : Mar 06, 2024, 03:54 PM IST
ಹರಳೆಣ್ಣೆ ಸುಂದ್ರಿ ಭಾಗ್ಯಾ ಈಗ ಬ್ಯೂಟಿ ಕ್ವೀನ್! ಚೆಂದ ನೋಡಿ ಥಂಡಾ ಆಗ್ಬಿಟ್ಟ ತಾಂಡವ

ಸಾರಾಂಶ

ಅತ್ತೆಯ ಆಜ್ಞೆಯನ್ನು ಶಿರಸಾ ಪಾಲಿಸುವ ಸುಶೀಲೆ ಭಾಗ್ಯಾ ಇದೀಗ ಅದೇ ಅತ್ತೆಯ ಮಾತಿಗೆ ತಲೆಬಾಗಿ ಬ್ಯೂಟಿ ಕ್ವೀನ್ ಆಗಿಬಿಟ್ಟಿದ್ದಾಳೆ. ತನ್ನ ಹೆಂಡ್ತಿ ಕಂಡು ಕಣ್ಣನ್ನೇ ನಂಬಲಿಕ್ಕಾಗದೇ ಹೋಗಿದ್ದಾನೆ ತಾಂಡವ ಮೂರ್ತಿ.  

ಇಷ್ಟು ದಿನ ಹೆಂಡತಿಯನ್ನು ಪೆದ್ದಿ, ಗುಗ್ಗು, ಸೌಂದರ್ಯ ಪ್ರಜ್ಞೆಯೇ ಇಲ್ಲದ ಹೆಣ್ಣು ಎಂದೆಲ್ಲ ಹೇಳುತ್ತಿದ್ದ ತಾಂಡವ ಇದೀಗ ಮಾತೇ ಮರೆತುಬಿಟ್ಟಿದ್ದಾನೆ. ಅದಕ್ಕೆ ಕಾರಣ ಮತ್ಯಾರೂ ಅಲ್ಲ, ಸಾಕ್ಷಾತ್ ಅವನ ಹೆಂಡತಿ ಭಾಗ್ಯಳೇ. ಮತ್ತೊಂದು ವಿಷ್ಯ ಅಂದರೆ ಅವಳು ಅಷ್ಟು ಚೆಂದ ಕಾಣೋದಕ್ಕೆ ಇಂಡೈರೆಕ್ಟ್ ಆಗಿ ವಿಲನ್ ಶ್ರೇಷ್ಠನೂ ಕಾರಣವಾಗಿದ್ದಾಳೆ. ಅದು ಹೇಗೆ ಅನ್ನೋ ಪ್ರಶ್ನೆಗೆ ಸೀರಿಯಲ್‌ನಲ್ಲೇ ಉತ್ತರ ಇದೆ.

ಒಂದು ಕಡೆ ತಾಂಡವ್‌ ಹಾಗೂ ಭಾಗ್ಯಾರನ್ನು ದೂರ ಮಾಡಿ ಭಾಗ್ಯಾ ಜಾಗವನ್ನು ಆಕ್ರಮಿಸಲು ಶ್ರೇಷ್ಠಾ ಪ್ರಯತ್ನಿಸುತ್ತಿದ್ದಾಳೆ. ಇನ್ನೊಂದು ಕಡೆ ಇಬ್ಬರನ್ನೂ ಒಂದು ಮಾಡಲು ಪೂಜಾ ಹಾಗೂ ಕುಸುಮಾ ಶತಾಯ ಗತಾಯ ಪ್ರಯತ್ನಿಸುತ್ತಿದ್ದಾರೆ. ಗುಂಡಣ್ಣ, ತನ್ವಿ, ಸುನಂದಾ ಕೂಡಾ ಸಾಥ್‌ ನೀಡುತ್ತಿದ್ದಾರೆ. ಅಮ್ಮನನ್ನು ಪಾರ್ಟಿಗೆ ಕರೆಸಲು ಗುಂಡಣ್ಣ ತಲೆ ಸುತ್ತಿ ಬಿದ್ದ ನಾಟಕವನ್ನೂ ಆಡಿದ್ದಾನೆ. ಕುಸುಮಾಗೆ ಗೊತ್ತಾದರೂ ಇದೆಲ್ಲಾ ಮಾಡಿದ್ದು ಇಬ್ಬರನ್ನೂ ಒಂದು ಮಾಡಲು ತಾನೇ ಎಂದುಕೊಂಡು ಸುಮ್ಮನಾಗುತ್ತಾಳೆ.

ನೈಟ್‌ ಪಾರ್ಟಿಗೆ ಭಾಗ್ಯಾಗೆ ಮೇಕಪ್‌ ಮಾಡಿ ಸುಂದರವಾಗಿ ಕಾಣುವಂತೆ ಮಾಡೆಂದು ಕುಸುಮಾ ಶ್ರೇಷ್ಠಾಗೆ ಹೇಳುತ್ತಾಳೆ. ಶ್ರೇಷ್ಠಾ, ಒಲ್ಲದ ಮನಸ್ಸಿನಿಂದಲೇ ಒಪ್ಪಿಕೊಳ್ಳುತ್ತಾಳೆ. ಪಾರ್ಟಿ ಹಾಳು ಮಾಡಲು ಶ್ರೇಷ್ಠಾ ಮನಸ್ಸಿನಲ್ಲೇ ಪ್ಲಾನ್‌ ಮಾಡುತ್ತಾಳೆ. ಪೂಜಾ ಹಾಗೂ ಶ್ರೇಷ್ಠಾ, ಭಾಗ್ಯಾ ರೂಮ್‌ಗೆ ಬರುವಷ್ಟರಲ್ಲಿ ಭಾಗ್ಯಾ ಸೀರೆ ಉಟ್ಟು ರೆಡಿ ಆಗಿರುತ್ತಾಳೆ. ಆದರೆ ಪೂಜಾ ಇದಕ್ಕೆ ಒಪ್ಪುವುದಿಲ್ಲ. ಪ್ರತಿದಿನವೂ ನೀನು ಇದೇ ರೀತಿ ತಯಾರಾಗುತ್ತಿದ್ದೀಯ. ಆದರೆ ಇವತ್ತು ಪಾರ್ಟಿ ಇದೆ, ವಿಭಿನ್ನವಾಗಿ ರೆಡಿ ಆಗಬೇಕು ಎಂದು ಅಕ್ಕನ ಬಳಿ ಮನಸ್ಸಿನ ಆಸೆ ವ್ಯಕ್ತಪಡಿಸುತ್ತಾಳೆ. ಸಮಯ ಸಿಕ್ಕಾಗಲೆಲ್ಲಾ ಶ್ರೇಷ್ಠಾಳ ಕಾಲು ಎಳೆಯುವ ಪೂಜಾ, ಅಕ್ಕ ಈ ದಿನ ಚೆನ್ನಾಗಿ ಕಾಣಬೇಕು. ಅಕ್ಕನನ್ನು ನೋಡುತ್ತಿದ್ದಂತೆ ಭಾವ ಕಳೆದುಹೋಗಬೇಕು ಎನ್ನುತ್ತಾಳೆ. ಪೂಜಾ ಪ್ರತಿ ಮಾತಿಗೂ ಶ್ರೇಷ್ಠಾ ಮನಸಿನಲ್ಲೇ ಬೆಂದು ಹೋಗುತ್ತಿದ್ದಾಳೆ.

ದೇವ್ರೆ ನನಗೆ ಜನ್ಮದಲ್ಲಿ ಮದ್ವೆನೇ ಬೇಡ ಅನ್ನಿಸ್ತಿದೆ ಅಂತಿದ್ದಾರೆ ಸೀರಿಯಲ್‌ ಫ್ಯಾನ್ಸ್‌!

ಮತ್ತೊಂದೆಡೆ ಪಾರ್ಟಿ ಶುರುವಾಗಿದೆ. ಬಹಳ ದಿನಗಳ ನಂತರ ಎಲ್ಲರೂ ಒಟ್ಟಿಗೆ ಸಮಯ ಕಳೆಯುತ್ತಿರುವುದಕ್ಕೆ ಗುಂಡಣ್ಣ ಬಹಳ ಖುಷಿ ಪಡುತ್ತಾನೆ. ಗುಂಡಣ್ಣನ ಖುಷಿ ನೋಡಿ ತಾಂಡವ್‌, ಕುಸುಮಾ, ಧರ್ಮರಾಜ್‌ ಕೂಡಾ ಸಂತೋಷಗೊಳ್ಳುತ್ತಾರೆ. ಪಾರ್ಟಿ ಶುರು ಆದರೂ ಇನ್ನೂ ಭಾಗ್ಯಾ ಬಂದಿಲ್ಲವಲ್ಲ ಎಂದು ಕುಸುಮಾ ಹೇಳುತ್ತಿದ್ದಂತೆ ಪೂಜಾ, ಭಾಗ್ಯಾಳನ್ನು ಕರೆತರುತ್ತಾಳೆ. ಭಾಗ್ಯಾಳನ್ನು ನೋಡುತ್ತಿದ್ದಂತೆ ಎಲ್ಲರೂ ಕಳೆದುಹೋಗುತ್ತಾರೆ. ಆಕೆಯನ್ನು ಕಂಡರೆ ಆಗದ, ಸದಾ ಬೈಯ್ಯುತ್ತಿದ್ದ ತಾಂಡವ್‌ ಕೂಡಾ ಭಾಗ್ಯಾ ಸೌಂದರ್ಯ ನೋಡಿ ಒಂದು ಕ್ಷಣ ಅವಾಕ್ಕಾಗಿ ನಿಂತುಬಿಡುತ್ತಾನೆ. ಮಗ ಭಾಗ್ಯಾಳನ್ನು ನೋಡುತ್ತಿರುವುದನ್ನು ಗಮನಿಸುವ ಕುಸುಮಾ ಹಾಗೂ ಸುನಂದಾ ಕೂಡಾ ಖುಷಿಯಾಗುತ್ತಾರೆ.

ಅಮ್ಮ ಬಹಳ ಚೆನ್ನಾಗಿ ಕಾಣುತ್ತಿದ್ದಾಳೆ ಅಲ್ವಾಪ್ಪಾ ಎಂದು ತನ್ಮಯ್‌ ಕೇಳಿದಾಗ ತಾಂಡವ್‌ ಹೌದು ಎನ್ನುತ್ತಾನೆ. ಇದು ಎಲ್ಲರಿಗೂ ಖುಷಿ ಆದರೂ ಶ್ರೇಷ್ಠಾಗೆ ಬೇಸರವಾಗುತ್ತದೆ. ಎಚ್ಚೆತ್ತುಕೊಂಡ ತಾಂಡವ್‌ ಮಕ್ಕಳಿಗೆ ಐಸ್‌ಕ್ರೀಮ್‌ ಕೊಡಿಸಲು ಹೋಗುತ್ತಾನೆ. ಪಾರ್ಟಿಯಲಿ ಜೋಡಿಗಳು, ವೇದಿಕೆ ಮೇಲೆ ಬಂದು ಡ್ಯಾನ್ಸ್‌ ಮಾಡುವಂತೆ ಅನೌನ್ಸ್‌ ಮಾಡುತ್ತಿದ್ದಂತೆ ಅಮ್ಮನ ಕೈ ಹಿಡಿದು ಡ್ಯಾನ್ಸ್‌ ಮಾಡುವಂತೆ ಗುಂಡಣ್ಣ ತಾಂಡವ್‌ಗೆ ಒತ್ತಾಯಿಸುತ್ತಾನೆ. ಇಷ್ಟವಿಲ್ಲದಿದ್ದರೂ ಮಗನ ಮಾತಿಗೆ ಇಲ್ಲ ಎನ್ನಲಾಗದೆ ಭಾಗ್ಯಾ ಬಳಿ ಬರುವ ತಾಂಡವ್‌, ಕೈ ಚಾಚುತ್ತಾನೆ. ಏನು ಮಾಡುವುದು ತಿಳಿಯದೆ ಶಾಕ್‌ನಲ್ಲಿ ನಿಂತಿದ್ದ ಭಾಗ್ಯಾಳನ್ನು ನೋಡಿ ಸುನಂದಾ, ನಿನ್ನ ಗಂಡ ಡ್ಯಾನ್ಸ್‌ ಮಾಡಲು ಕರೆಯುತ್ತಿದ್ದಾನೆ ಹೋಗು ಎಂದು ತಾಂಡವ್‌ ಕೈಗೆ ಭಾಗ್ಯಾ ಕೈ ಇಡುತ್ತಾಳೆ. ಭಾಗ್ಯಾ ಕೂಡಾ ನಾಚುತ್ತಲೇ ಗಂಡನ ಜೊತೆ ವೇದಿಕೆಗೆ ಹೋಗಿ ನಿಲ್ಲುತ್ತಾಳೆ.

ಫ್ರೆಂಡ್‌ ರಾಮ್‌ನ ನೋಡಲು ಯಾರಿಗೂ ಹೇಳದೇ ಹೊರಟೇಬಿಟ್ಟಿದ್ದಾಳೆ ಸಿಹಿ! ಏನು ಅಪಾಯ ಕಾದಿದ್ಯೋ.

ಇದನೆಲ್ಲ ನೋಡಿದ ಮೇಲೆ ಭಾಗ್ಯಾ ಮೇಲೆ ತಾಂಡವ್‌ಗೆ ನಿಜಕ್ಕೂ ಮನಸ್ಸಾಗಿದೆಯಾ ಅಥವಾ ಇದು ಅವನ ಇನ್ನೊಂದು ಗೇಮ್ ಪ್ಲಾನಿಂಗಾ ಅನ್ನೋ ಡೌಟ್ ಬರುತ್ತೆ. ಆದರೆ ಈ ಎಪಿಸೋಡ್ ಮಾತ್ರ ಸೀರಿಯಲ್ ವೀಕ್ಷಕರಲ್ಲಿ ಕುತೂಹಲ ಮೂಡಿಸಿರೋದು ಸುಳ್ಳಲ್ಲ. ಭಾಗ್ಯಾ ಪಾತ್ರದಲ್ಲಿ ಸುಷ್ಮಾ ರಾವ್, ತಾಂಡವ್ ಪಾತ್ರದಲ್ಲಿ ಸುದರ್ಶನ್, ಅತ್ತೆ ಕುಸುಮಾ ಪಾತ್ರದಲ್ಲಿ ಪದ್ಮಜಾ ರಾವ್ ನಟಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Bigg Boss 13: 'ಭಾಗ್ಯಲಕ್ಷ್ಮಿ' ತಾಂಡವ್​ಗಾಗಿ ರಿಯಲ್​ ಮತ್ತು ರೀಲ್​ ಹೆಂಡ್ತೀರ ನಡುವೆ ಶುರುವಾಗೇ ಬಿಟ್ಟಿತು ಸಮರ
ಲವ್​ ಬ್ರೇಕಪ್​, ಮದುವೆ, ಡಿಪ್ರೆಷನ್​, ಮೋಸ: Lakshmi Nivasa ನಟಿ ಅನಿಕಾ ಸಿಂಧ್ಯಾ ಓಪನ್​ ಮಾತು