ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 3 ಮುಕ್ತಾಯಗೊಂಡಿದೆ. ಹುಬ್ಬಳ್ಳಿ ಕೆ.ಎಸ್.ಸಿ.ಎ ಮೈದಾನದಲ್ಲಿ ಫೆಬ್ರವರಿ 28 ರಿಂದ ಟಿಪಿಎಲ್ ಪಂದ್ಯ ಪ್ರಾರಂಭವಾಗಿತ್ತು. ಮಾರ್ಚ್ 3 ರಂದು ನಡೆದ ಅಂತಿಮ ಪಂದ್ಯಾವಳಿಯಲ್ಲಿ ದೀಕ್ಷಿತ್ ಶೆಟ್ಟಿ ನಾಯಕತ್ವದ ರಾಸು ವಾರಿಯರ್ಸ್ ಟ್ರೋಫಿಗೆ ಮುತ್ತಿಟ್ಟಿದೆ.
ಟೆಲಿವಿಷನ್ ಪ್ರೀಮಿಯರ್ ಲೀಗ್ ಸೀಸನ್ 3 ಮುಕ್ತಾಯಗೊಂಡಿದೆ. ಹುಬ್ಬಳ್ಳಿ ಕೆ.ಎಸ್.ಸಿ.ಎ ಮೈದಾನದಲ್ಲಿ ಫೆಬ್ರವರಿ 28 ರಿಂದ ಟಿಪಿಎಲ್ ಪಂದ್ಯ ಪ್ರಾರಂಭವಾಗಿತ್ತು. ಮಾರ್ಚ್ 3 ರಂದು ನಡೆದ ಅಂತಿಮ ಪಂದ್ಯಾವಳಿಯಲ್ಲಿ ದೀಕ್ಷಿತ್ ಶೆಟ್ಟಿ ನಾಯಕತ್ವದ ರಾಸು ವಾರಿಯರ್ಸ್ ಟ್ರೋಫಿಗೆ ಮುತ್ತಿಟ್ಟಿದೆ. ಅಲಕಾ ನಂದ ಶ್ರೀನಿವಾಸ್ ನೇತೃತ್ವದ ಬಯೋಟಾಪ್ ಲೈಫ್ ಸೇವಿಯರ್ಸ್ ರನ್ನರ್ ಅಪ್ ಆಗಿ ಹೊರಹೊಮ್ಮಿದೆ.
ಎನ್ 1 ಕ್ರಿಕೆಟ್ ಅಕಾಡೆಮಿ ವತಿಯಿಂದ ಸುನಿಲ್ ಕುಮಾರ್ ನೇತೃತ್ವದಲ್ಲಿ ನಡೆದುಕೊಂಡು ಬರ್ತಿರುವ ಟಿಪಿಎಲ್ ಪಂದ್ಯದಲ್ಲಿ ಅಶ್ವಸೂರ್ಯ ರೈಡರ್ಸ್, ಗೋಲ್ಡನ್ ಈಗಲ್ಸ್, ಕೆಕೆಆರ್ ಮೀಡಿಯಾ ಹೌಸ್, ಬಯೋಟಾಪ್ ಲೈಫ್ ಸೇವಿಯರ್ಸ್, AVR ಟಸ್ಕರ್ಸ್, ರಾಸು ವಾರಿಯರ್ಸ್, ಭಜರಂಗಿ ಬಾಯ್ಸ್, ದಿ ಬುಲ್ ಸ್ಕ್ವಾಡ್, ಇನ್ಸೇನ್ ಕ್ರಿಕೆಟ್ ಟೀಂ, ಜಿಎಲ್ಆರ್ ವಾರಿಯರ್ಸ್ ಸೇರಿದಂತೆ ಒಟ್ಟು 10 ಟೀಮ್ ಗಳು ಭಾಗವಹಿಸಿದ್ದು, 170 ಸೆಲೆಬ್ರಿಟಿಗಳು ಈ ಕಾರ್ಯಕ್ರಮಕ್ಕೆ ಸಾಥ್ ಕೊಟ್ಟಿದ್ದರು.
ಪುಷ್ಪಾ ಹೀರೋ ನಟನೆ ಬಗ್ಗೆ ಅಭಿಪ್ರಾಯ ಹೇಳಿದ ರಶ್ಮಿಕಾ; ಅಲ್ಲು ಅರ್ಜುನ್ ರಿಯಾಕ್ಷನ್ ಏನು?
ಅಶ್ವಸೂರ್ಯ ರೈಡರ್ಸ್ ತಂಡಕ್ಕೆ ಹರ್ಷ ಸಿಎಂ ಗೌಡ ನಾಯಕ. ರಂಜಿತ್ ಕುಮಾರ್ ಎಸ್ ಓನರ್, ಜಿಎಲ್ಆರ್ ವಾರಿಯರ್ಸ್ ಟೀಂಗೆ ಲೂಸ್ ಮಾದ ಯೋಗಿ ನಾಯಕನಾದರೆ ರಾಜೇಶ್ ಎಲ್ ಓನರ್, ಇನ್ಸೇನ್ ಕ್ರಿಕೆಟ್ ಟೀಂಗೆ ರವಿಶಂಕರ್ ಗೌಡ ನಾಯಕ-ಫೈಜಾನ್ ಖಾನ್ ಓನರ್, ದಿ ಬುಲ್ ಸ್ಕ್ವಾಡ್ ತಂಡಕ್ಕೆ ಶರತ್ ಪದ್ಮನಾಭ್ ನಾಯಕ-ಮೋನಿಶ್ ಓನರ್, ಭಜರಂಗಿ ಬಾಯ್ಸ್ ಟೀಂಗೆ ಸಾಗರ್ ಬಿಳಿಗೌಡ ನಾಯಕ- ಸ್ವಸ್ತಿಕ್ ಆರ್ಯ ಓನರ್, ರಾಸು ವಾರಿಯರ್ಸ್ ಟೀಂಗೆ ದೀಕ್ಷಿತ್ ಶೆಟ್ಟಿ ನಾಯಕ-ರಘು ಭಟ್ ಹಾಗೂ ಸುಗುಣ ಓನರ್.
ನಟನಾಗುವುದು ಹಾಗಿರಲಿ, ಡಾನ್ಸ್ ಮಾಡಲೂ ಅಸಾಧ್ಯ ಅಂದಿದ್ರು ಡಾಕ್ಟರ್; ಇಂದು ಸೂಪರ್ ಸ್ಟಾರ್!
ಎವಿಆರ್ ಟಸ್ಕರ್ಸ್ಗೆ ಚೇತನ್ ಸೂರ್ಯ ನಾಯಕ - ಅರವಿಂದ್ ವೆಂಕಟ್ ರೆಡ್ಡಿ ಓನರ್, ಬಯೋಟಾಪ್ ಲೈಫ್ ಸೇವಿಯರ್ಸ್ ಅಲಕಾ ನಂದ ಶ್ರೀನಿವಾಸ್ ನಾಯಕ-ವಿಶ್ವನಾಥ್, ಪ್ರಸನ್ನ ಓನರ್, ಕೆಕೆಆರ್ ಮೀಡಿಯಾ ಹೌಸ್ ಗೆ ಅರುಣ್ ರಾಮ್ ಗೌಡ ನಾಯಕ-ಲಕ್ಷ್ಮೀ ಕಾಂತ್ ರೆಡ್ಡಿ ಓನರ್, ಗೋಲ್ಡನ್ ಈಗಲ್ಸ್ ವಿಹಾನ್ ನಾಯಕ-ಕುಶಾಲ್ ಗೌಡ ಒಡೆತನದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಟಿಪಿಎಲ್ ರಾಯಭಾರಿಯಾಗಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇದ್ದು, ಪ್ರಮುಖ ನಟರಾದ ಲೂಸ್ ಮಾದ ಯೋಗಿ, ರವಿಶಂಕರ್ ಗೌಡ ಟಿಪಿಎಲ್ 3 ನಲ್ಲಿ ಆಟವಾಡಿದ್ದು ವಿಶೇಷವಾಗಿತ್ತು.
ಮಿಲ್ಕಿ ಬ್ಯೂಟಿ ತಮನ್ನಾ ಜೊತೆ 'ರೇಲ್ವೇ ಸ್ಟೇಷನ್'ನಲ್ಲಿ ಕಂಡ ಕನ್ನಡದ ನಟ ವಸಿಷ್ಠ ಸಿಂಹ