ಯಾರೂ ಕೂಡ ಮೋಸ ಹೋಗಬೇಡಿ ಕಳಕಳಿಯ ಮನವಿ ಮಾಡಿದ್ರು ಗಿಚ್ಚಿಗಿಲಿಗಿಲಿ ತುಕಾಲಿ ಸಂತು ಪತ್ನಿ ಮಾನಸ

By Gowthami K  |  First Published May 27, 2024, 1:09 PM IST

ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ತುಕಾಲಿ ಸಂತೋಷ್‌ ದಂಪತಿ ಈಗ ವಿಡಿಯೋ ಮಾಡಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.ಯಾರೂ ಕೂಡ ಮೋಸ ಹೋಗಬೇಡಿ ಎಂದಿದ್ದಾರೆ.


ಬೆಂಗಳೂರು (ಮೇ.27): ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿ ತುಕಾಲಿ ಸಂತೋಷ್‌ ದಂಪತಿ ಈಗ ವಿಡಿಯೋ ಮಾಡಿ ಮನವಿಯೊಂದನ್ನು ಮಾಡಿಕೊಂಡಿದ್ದಾರೆ. ಸದ್ಯ ಗಿಚ್ಚಿಗಿಲಿ ಶೋ ನಲ್ಲಿ ಸ್ಪರ್ಧಿಯಾಗಿರುವ ತುಕಾಲಿ ಸಂತೋಷ್‌ ಅವರ ಪತ್ನಿ ಮಾನಸ ಅವರ ಇನ್ಸ್ಟಾಗ್ರಾಂ ಖಾತೆ ಹ್ಯಾಕ್‌ ಆಗಿದೆ. ಈ ಬಗ್ಗೆ ವಿಡಿಯೋ ಮಾಡಿರುವ ತುಕಾಲಿ ಸಂತೋಷ್‌ ಮತ್ತು ಅವರ ಪತ್ನಿ ವಿಶೇಷ ವಿಡಿಯೋ ಮಾಡಿ ಪ್ರಕಟಿಸಿದ್ದು, ಮಾನ ಸ ಅವರ ಅಕೌಂಟ್‌ ಹ್ಯಾಕ್‌ ಆಗಿದೆ ಯಾರೂ ಕೂಡ ಆ ಅಕೌಂಟ್‌ ಅನ್ನು ಫಾಲೋ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ಅಂದು ಬಿಕಿನಿ ತೊಟ್ಟು ಪಡ್ಡೆ ಹುಡುಗರ ನಿದ್ದೆ ಕದ್ದ ಕನ್ನಡದ ಹಾಟ್ ನಟಿಯರು ಈಗ ಹೇಗಿದ್ದಾರೆ ನೋಡಿ!

ಹ್ಯಾಕ್  ಮಾಡಿದ ಬಳಿಕ ಕೆಲವರಿಗೆ ಮೆಸೆಜ್ ಗಳನ್ನು ಮಾಡಿ ಹಣವನ್ನು ಕೇಳಲಾಗುತ್ತಿದೆ. ದಯವಿಟ್ಟು ಯಾರೂ ಕೂಡ ಈ ಮೆಸೇಜ್‌ ಗೆ ಪ್ರತಿಕ್ರಿಯೆ ನೀಡಬೇಡಿ. ಅವರು ಕಳಿಹಿಸುವ ಲಿಂಕ್ ಓಪನ್ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 45 ಸಾವಿರಕ್ಕೂ ಅಧಿಕ ಹಿಂಬಾಲಕರು ಇದ್ದ ಅಕೌಂಟ್‌ ಈಗ ಹ್ಯಾಕ್ ಆಗಿದೆ.

Seetha Raama serial ಇವರೇ ನೋಡಿ ಸೀತಾರಾಮ ಸಿಹಿಯ ನಿಜವಾದ ಅಮ್ಮ!

Tap to resize

Latest Videos

undefined

ಮಾನಸಾ ಸಂತೋಷ್ ಅಧಿಕೃತ ಇನ್ಸ್ಟಾಗ್ರಾಂ ಖಾತೆ ಹ್ಯಾಕ್ ಆಗಿದ್ದು, ನೀವು 40 ಸಾವಿರ ರೂ. ಹೂಡಿಕೆ ಮಾಡಿದ್ರೆ 4.90 ಲಕ್ಷ ರೂ. ವಾಪಸ್ ಕೊಡ್ತೀವಿ ಅಂತೆಲ್ಲ ಮೆಸೇಜ್‌ ಬರುತ್ತಿದೆ. ದಯವಿಟ್ಟು ಯಾರೂ ಕೂಡಾ ಅದನ್ನ ನಂಬಬಾರದು. ನಂಬಿ, ದುಡ್ಡು ಹಾಕಿ ಕಳೆದುಕೊಳ್ಳಬೇಡಿ. ನನ್ನ ಅಕೌಂಟ್ ಹ್ಯಾಕ್ ಆಗಿರೋದ್ರಿಂದ ಬೇರೆ ಯಾರೋ ರೀತಿ ಮೇಸೆಜ್ ಹಾಕುತ್ತಿದ್ದಾರೆ ಎಂದು ಮಾನಸ ಸ್ಪಷ್ಟನೆ ನೀಡಿದ್ದಾರೆ.

ಬಿಗ್‌ ಬಾಸ್‌ ನಿಂದ ಬಂದ ನಂತರ ತುಕಾಲಿ ಸಂತೋಷ್ ಅವರ ಅಕೌಂಟ್‌ ಕೂಡ ಹ್ಯಾಕ್ ಆಗಿತ್ತು. ಬಳಿಕ ಅವರು ಹೊಸದಾಗಿ ಅಕೌಂಟ್ ಓಪನ್ ಮಾಡಿದ್ದರು. ಸದ್ಯ ಇಬ್ಬರೂ ಕೂಡ ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಗಿಚ್ಟಿಗಿಲಿಗಿಲಿ ಕಾಮಿಡಿ ಶೋ ನಲ್ಲಿ ಸ್ಪರ್ಧಿಗಳಾಗಿದ್ದಾರೆ.

click me!